A.S.Ponnanna for Virajpete-Kodagu

A.S.Ponnanna for Virajpete-Kodagu Member of Legislative Assembly & Legal advisory to the cheif misnister of Karnataka

04/12/2025
02/12/2025

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟ-ಚೇತಂಬಾಡಿ-ಪೂಚಕಲ್ ಕಾಂಕ್ರೀಟ್ ರಸ್ತೆ ಪೂರ್ಣಗೊಂಡಿದೆ.

01/12/2025

*ಕರಿಕೆ-ಭಾಗಮಂಡಲ* ರಸ್ತೆಯಲ್ಲಿ ಡಾಂಬರೀಕರಣ ಮಾಡುವಾಗ ಹಾನಿ (damage) ಆದ ಸ್ಥಳದಲ್ಲಿ, ಡಾಂಬರೀಕರಣ ಕಿತ್ತು ತೆಗೆದು, ಹೊಸದಾಗಿ ಮರು ಡಾಂಬರೀಕರಣ ಮಾಡಲಾಗಿದೆ....2ನೇ ಹಂತದ ಡಾಂಬರೀಕರಣ ಮಾಡಲು ಬಾಕಿ ಇದೆ.

30/11/2025

With CM&DCM

27/11/2025

ಸಿದ್ದಾಪುರ-ಅಮ್ಮತಿ-ವಿರಾಜಪೇಟೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ

26/11/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ವಿವಿಧ ರಸ್ತೆ/ತಡೆಗೋಡೆ ಕಾಮಗಾರಿಗಳು ಪೂರ್ಣಗೊಂಡಿವೆ.

26/11/2025
ಕರ್ನಾಟಕ ರಾಜ್ಯ ಘನ ಸರಕಾರದ ಮಹತ್ವಾಕಾಂಕ್ಷೆಯ ಹಾಗೂ ಅತ್ಯಂತ ಯಶಸ್ಸಿನ ಪಂಚ ಗ್ಯಾರಂಟಿ ಯೋಜನೆಯ ಲಾಭ ಹಾಗೂ ಪ್ರಯೋಜನವನ್ನು ಜನರಿಗೆ ತಲುಪಿಸುವ ನಿಟ...
22/11/2025

ಕರ್ನಾಟಕ ರಾಜ್ಯ ಘನ ಸರಕಾರದ ಮಹತ್ವಾಕಾಂಕ್ಷೆಯ ಹಾಗೂ ಅತ್ಯಂತ ಯಶಸ್ಸಿನ ಪಂಚ ಗ್ಯಾರಂಟಿ ಯೋಜನೆಯ ಲಾಭ ಹಾಗೂ ಪ್ರಯೋಜನವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ, ಗ್ಯಾರೆಂಟಿ ಕಾರ್ಯಗಾರ ಹಾಗೂ ಗ್ಯಾರಂಟಿ ಉತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಇಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ಶ್ರೀ ಎಚ್.ಎಂ ರೇವಣ್ಣ, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಅಮರನಾಥ್, ಮಹರೋಜ್ ಖಾನ್, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ಸಣ್ಣ ನೀರಾವರಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್ ಬೋಸರಾಜ್, ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಜಿಲ್ಲಾ ಆಡಳಿತ ಹಾಗೂ ಮತ್ತಿತರ ಗಣ್ಯರು ಪಾಲ್ಗೊಂಡರು.
ಕಾರ್ಯಕ್ರಮದ ಉದ್ಘಾಟನೆ ಬಳಿಕ ಧರ್ಮಜ ಉತ್ತಪ್ಪ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಪೊನ್ನಣ್ಣ ರವರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ನುಡಿದಂತೆ ತಾವು ಘೋಷಿಸಿದ ಪಂಚ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಇಂದು ಪ್ರತಿ ಮನೆಯಲ್ಲಿ ಮನೆ ಮಾತಾಗಿದೆ. ಲಕ್ಷಾಂತರ ಕುಟುಂಬದ ಆರ್ಥಿಕ ಸುಧಾರಣೆಗೂ ಕಾರಣವಾಗಿರುವ ಈ ಪಂಚಾಯತಿ ಯೋಜನೆಯು ವಿಶ್ವದಲ್ಲೇ ಮಾನ್ಯತೆ ಪಡೆದ ಪ್ರಥಮ ಯಶಸ್ವಿ ಯೋಜನೆ ಆಗಿದೆ. ಟೀಕಾಕಾರರ ಎಲ್ಲಾ ಪ್ರಶ್ನೆಗಳಿಗೆ ಸರಕಾರ ತನ್ನ ಯಶಸ್ವಿ ಅನುಷ್ಠಾನದ ಕೆಲಸದ ಮೂಲಕ, ಈ ಕಾರ್ಯಕ್ರಮವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಿದ್ದು ದೊಡ್ಡ ಸಾಧನೆ ಎಂದು ಬಣ್ಣಿಸಿದರು.

Address

Virajpet

Alerts

Be the first to know and let us send you an email when A.S.Ponnanna for Virajpete-Kodagu posts news and promotions. Your email address will not be used for any other purpose, and you can unsubscribe at any time.

Share