Kodagu Action Team

Kodagu Action Team Contact information, map and directions, contact form, opening hours, services, ratings, photos, videos and announcements from Kodagu Action Team, Social service, Virajpet.

14/07/2021

*ನಮಸ್ಕಾರ ಗೆಳೆಯರೇ*

ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದಿವೆ, ಆದರೆ ಕೆಲವು ದಿನಗಳಿಂದ ಮಳೆಯ ತೀವ್ರತೆ ಹೆಚ್ಚಿದೆ,

ಆದುದ್ದರಿಂದ ಕಳೆದ ವರ್ಷ ನೀವೆಲ್ಲರೂ ಒಟ್ಟು ಸೇರಿ, ಅನೇಕ ಪರಿಹಾರ ಕಾರ್ಯ ಮಾಡಿದ್ದೀರಿ, ಅದು ಅತ್ಯಂತ ಶ್ಲಾಘನೀಯ ವಿಷಯ 👍

ಈ ವರ್ಷದ ಮಳೆಗಾಲಕ್ಕೆ ನಾವು ಯಾವ ರೀತಿ ಕಾರ್ಯ ಪ್ರಾರಂಭಿಸಬೇಕು ಎಂದು ನಿಮ್ಮ ಅಭಿಪ್ರಾಯ ತಿಳಿಸಿ 👍

*ನಾವು ಈ ಸಂಘವನ್ನು ಕೇವಲ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಪ್ರಾರಂಭಿಸಿದು, ಮುಂದಿನ ದಿನಗಳಲ್ಲಿ ಯಾವ ರೀತಿ ಉದ್ದೇಶ ಬದಲಿಸಬೇಕು ಎಂದು ನಾವು ತೀರ್ಮಾನ ಕೈಗೊಳ್ಳಲಾಗುವುದು*

15/06/2021

ವಿರಾಜಪೇಟೆಯ ಕಾರ್ಯಪ್ಪ ನರ್ಸಿಂಗ್ ಹೋಂ ಗೆ A+ ರಕ್ತ ತುರ್ತಾಗಿ ಅಗತ್ಯವಿರುವ ಸಂದೇಶ ವೀಕ್ಷಿಸಿದ #ಕೊಡಗು_ಆಕ್ಷನ್_ಟೀಂ_ಬ್ಲಡ್_ಡಾನರ್ಸ್ ಸದಸ್ಯರಾದ #ವಿರಾಜಪೇಟೆಯ_ಗ್ರಾಮಂತರ_ಠಾಣೆಯ ಸಿಬ್ಬಂದಿಯಾದ #ಶ್ರೀಕಾಂತ್ ಅವರು ಕೊರೋನಾ ಸಮಯದಲ್ಲೂ ರಕ್ತದಾನ ಮಾಡುವ ಮೂಲಕ ಆರಕ್ಷಕರೂ ಸಹ ಮಾನವೀಯತೆ ಉಳ್ಳವರು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

31/03/2021

ಕೊಡಗು ಆಕ್ಷನ್ ಟೀಂ ನ ಸದಸ್ಯ ಮಡಿಕೇರಿ ಭಾಗದ ತಂಷೀರ್ ಅವರು ಹಾಡಿದ ಹಾಡು.

Congratulations Rahuf Coorg
01/02/2021

Congratulations Rahuf Coorg

#ತೆರೆಮರೆಯಲ್ಲಿ_ನೊಂದ_ಕುಟುಂಬಗಳ_ಕಣ್ಣೀರಲ್ಲಿ_ಭಾಗಿಯಾಗುವ_ಸಮಾಜ_ಸೇವಕ

#ವಿರಾಜಪೇಟೆಯ #ಎಫ್_ಎಂ_ಸಿ_ರಸ್ತೆಯಲ್ಲಿ ಸಣ್ಣದಾದ ಮಿಕ್ಸಿ ರಿಪೇರಿ ಅಂಗಡಿ ಮಾಡಿ ಜೀವನ ನಡೆಸುತ್ತಿರುವ #ರವೂಫ್ ಈ ವಾರದ #ಸ್ಟಾರ್_ಆಫ್_ಕೂರ್ಗ್_ದಿ_ಕಶ್ಮೀರ್_ಆಫ್_ಕರ್ನಾಟಕ.

ಮೂಲತ ವಿರಾಜಪೇಟೆಯ ಮೊಗರಗಲ್ಲಿ ನಿವಾಸಿಯಾಗಿರುವ ರವೂಫ್ ನಗರದಾದ್ಯಂತ ಚಿರಪರಿಚಿತರು. ಇತರರ ಕಣ್ಣೀರ ನೋಡಿ ಕಣ್ಣೀರು ಹಾಕುವ ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿರುವ ಇವರು ನಗರದಲ್ಲಿರುವ ಯಾರೇ ಬಂದು ಹೆಣ್ಣುಮಗಳ ಮದುವೆ, ಅಂಗಾಂಗ ವೈಪಲ್ಯದಿಂದ ಬಳಲುತ್ತಿರುವವರಿಗೆ ಹಾಗೆ ಬಡ ರೋಗಿಗಳಿಗೆ ಸಹಾಯ ಕೇಳಿದರೂ ಜಾತಿ ಮತ ಭೇದ ಮಾಡದೆ ಸದಾ ಮುಗುಳ್ನಗುತ್ತಾ #ಟೆನ್ಷನ್_ಮಾಡ್ಬೇಡಿ_ದೇವರಿದ್ದಾನೆ ಎನ್ನುತ್ತಾ ಮಾಹಿತಿ ಪಡೆದು ವಿರಾಜಪೇಟೆಯಾದ್ಯಂತ ಚಲಿಸಿ ಕಲೆಕ್ಷನ್ ಮಾಡಿ ಸಹಾಯ ಮಾಡುತ್ತಾರೆ.

ಇವರ ಈ ಕಾರ್ಯಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ.

19/01/2021
Happy birthday
18/12/2020

Happy birthday

ಯುವ ನಾಯಕ, ಸಾಮಾಜಿಕ ಕಾರ್ಯಕರ್ತ ಹಾಗೂ ನನ್ನ ಆತ್ಮೀಯ ಸ್ನೇಹಿತ ಪ್ರತೀಕ್ ಪೊನ್ನಣ್ಣನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಆಯುರಾರೋಗ್ಯ ನೀಡಿ ಕರುಣಿಸಲಿ.💐💐💐 Prathik Ponnanna

21/09/2020
ಕೊಡಗು ಆಕ್ಷನ್ ಟೀಂ ನ ಸದಸ್ಯರು ಇಂದು ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯಾಧಿಕಾರಿ ಡಾ || ವಿಶ್ವನಾಥ ಶಿಂಪಿ ಅವರನ್ನು ಭೇಟಿ ...
21/09/2020

ಕೊಡಗು ಆಕ್ಷನ್ ಟೀಂ ನ ಸದಸ್ಯರು ಇಂದು ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯಾಧಿಕಾರಿ ಡಾ || ವಿಶ್ವನಾಥ ಶಿಂಪಿ ಅವರನ್ನು ಭೇಟಿ ಮಾಡಿ, ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗೆ ಒಬ್ಬರು ಹಾರ್ಟ್ ಸ್ಪೆಷಲಿಸ್ಟ್ ವೈದ್ಯರನ್ನು ನಿಯೋಜನೆ ಮಾಡಲು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕೊಡಗು ಆಕ್ಷನ್ ಟೀಂ ನ, ಸಂಸ್ಥಾಪಕ ಸದಸ್ಯರಾದ ಪ್ರತೀಕ್ ಪೊನ್ನಣ್ಣ ಮತ್ತು ವಿರಾಜಪೇಟೆ ಪಟ್ಟಣ ಭಾಗದ ನಾಯಕರಾದ, ಯುವಕರು ಮೋಸಿನ್ ಅವರು ಕೂಡ ಪಾಲ್ಗೊಂಡಿದ್ದರು.

ಮುಂದಿನ ದಿನಗಳಲ್ಲಿ ಕೊಡಗು ಆಕ್ಷನ್ ಟೀಂ ನ ಸದಸ್ಯರು ಸರ್ಕಾರದ ಗಮನ ಸೆಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮ ಮಾಡುವುದಾಗಿ ತಿಳಿಸಿದರು.

ಈ ವರ್ಷದ  #ಸ್ವಾತಂತ್ರ್ಯ_ದಿನಾಚರಣೆಯ  ಪ್ರಯುಕ್ತ ಪೆರುಂಬಾಡಿ ಗ್ರಾಮದ  #ಮೊರಾರ್ಜಿ_ಶಾಲೆಯಲ್ಲಿ   #ಕೊಡಗು_ಆಕ್ಷನ್_ಟೀಮ್ ನ ಸ್ವಯಂ ಸೇವಕರುಗಳಿಂದ...
14/08/2020

ಈ ವರ್ಷದ #ಸ್ವಾತಂತ್ರ್ಯ_ದಿನಾಚರಣೆಯ ಪ್ರಯುಕ್ತ ಪೆರುಂಬಾಡಿ ಗ್ರಾಮದ #ಮೊರಾರ್ಜಿ_ಶಾಲೆಯಲ್ಲಿ #ಕೊಡಗು_ಆಕ್ಷನ್_ಟೀಮ್ ನ ಸ್ವಯಂ ಸೇವಕರುಗಳಿಂದ ಶಾಲಾ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛತೆಗೊಳಿಸಲಾಯಿತು.

ಪ್ರತೀ ವರ್ಷ ಆಗಸ್ಟ್ 15 ಬಂತೆಂದರೆ ಇಲ್ಲಿನ ಮಕ್ಕಳೆಲ್ಲ ತುಂಬಾ ಖುಷಿಯಿಂದ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನೆರವೇರುಸುತ್ತಿದ್ದರು, ಆದರೆ ಈ ಬಾರಿ ಇಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಮಕ್ಕಳಿಲ್ಲದೆ ಶಾಲಾ ಆವರಣ ಖಾಲಿಯಾಗಿದ್ದು ಮಳೆಯಿಂದಾಗಿ ತುಂಬಾ ಗಿಡಗಂಟಿಗಳು ಬೆಳೆದು ನಿಂತಿದ್ದು ಅದನ್ನು ಈ ದಿನಾ ಟಿಂ ವತಿಯಿಂದ ಸ್ವಚ್ಛಗೊಳಿಸಲಾಯಿತು.

ತಂಡದ #ಪ್ರತೀಕ್_ಪೊನ್ನಣ್ಣ, #ಶಿಜೋಯ್ , #ರವೂಫ್, #ಮೋಹ್ಸಿನ್, #ಈಶ್ವರ, ಪೋಲಿಸ್ ಸಿಬ್ಬಂದಿ ಶ್ರೀ #ಚಂದ್ರಶೇಖರ್ ಅವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

 #ಕೊಡಗಿನ_ಪೋಲೀಸ್_ಅಧೀಕ್ಷಕಿಯಾಗಿರುವ_ಕ್ಷಮಾ_ಮಿಶ್ರಾ_ಅವರಿಗೆ_ಹುಟ್ಟು_ಹಬ್ಬದ_ಹಾರ್ದಿಕ_ಶುಭಾಶಯಗಳು  💐💐💐💐💐
12/08/2020

#ಕೊಡಗಿನ_ಪೋಲೀಸ್_ಅಧೀಕ್ಷಕಿಯಾಗಿರುವ_ಕ್ಷಮಾ_ಮಿಶ್ರಾ_ಅವರಿಗೆ_ಹುಟ್ಟು_ಹಬ್ಬದ_ಹಾರ್ದಿಕ_ಶುಭಾಶಯಗಳು

💐💐💐💐💐

06/08/2020

ಕೊಡಗು ಆಕ್ಷನ್ ಟೀಂ ನ ಸದಸ್ಯರು, ಮಡಿಕೇರಿ ಭಾಗದ, ಮೇಕೇರಿ ಗ್ರಾಮದ ಸಾಕಿಬ್ ಮತ್ತು ಅನ್ಸರ್ ಅಗತ್ಯ ವಸ್ತುಗಳ ಕಿಟ್ ಅನ್ನು ವಿತರಿಸಿದರು.

ವಂದನೆಗಳು 🙏

 #ಕೊಡಗು_ಆಕ್ಷನ್_ಟೀಂ ನ ಸದಸ್ಯರಾದ  #ನಾಗೇಶ್ ಅವರು  #ಜೋಡುಪಾಲದ ಬಳಿ ಕುಸಿದ ಬರೆಯನ್ನು ತೆರವುಗೊಳಿಸಿದರು.
06/08/2020

#ಕೊಡಗು_ಆಕ್ಷನ್_ಟೀಂ ನ ಸದಸ್ಯರಾದ #ನಾಗೇಶ್ ಅವರು #ಜೋಡುಪಾಲದ ಬಳಿ ಕುಸಿದ ಬರೆಯನ್ನು ತೆರವುಗೊಳಿಸಿದರು.

Address

Virajpet
571218

Website

Alerts

Be the first to know and let us send you an email when Kodagu Action Team posts news and promotions. Your email address will not be used for any other purpose, and you can unsubscribe at any time.

Share

Category