Kanta Naik

Kanta Naik ಅಧ್ಯಕ್ಷರು ,ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರ chairman KSDC GOK

ಕರ್ನಾಟಕದ ನೂತನ ಸಚಿವರಾದ ನಮ್ಮ ವಿಜಾಪುರದ ಸಮರ್ಥ ನಾಯಕ ಶ್ರೀ ಎಂ ಬಿ ಪಾಟೀಲ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.ನಿಮ್ಮ ನೇತೃತ್ವದಲ್ಲಿ ನಮ್ಮ ಜ...
03/06/2026

ಕರ್ನಾಟಕದ ನೂತನ ಸಚಿವರಾದ ನಮ್ಮ ವಿಜಾಪುರದ ಸಮರ್ಥ ನಾಯಕ ಶ್ರೀ ಎಂ ಬಿ ಪಾಟೀಲ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ನಿಮ್ಮ ನೇತೃತ್ವದಲ್ಲಿ ನಮ್ಮ ಜಿಲ್ಲೆ ಹಾಗೂ ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಮತ್ತಷ್ಟು ಮುನ್ನಡೆಯಲಿ ಎಂದು ಆಶಿಸುತ್ತೇನೆ.

ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಹಾಗೂ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ...
03/06/2026

ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಹಾಗೂ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ದಶಕಗಳ ರಾಜಕೀಯ ಅನುಭವ, ಅದ್ಭುತ ಸಂಘಟನಾ ಚತುರತೆ ಮತ್ತು ಜನಪರ ಕಾಳಜಿಗಳು ರಾಜ್ಯವನ್ನು ಪ್ರಗತಿಯ ಹೊಸ ಪಥದತ್ತ ಮುನ್ನಡೆಸಲಿ ಎಂದು ಆಶಿಸುತ್ತೇನೆ.

ನಿಮ್ಮ ಸಮರ್ಥ ನಾಯಕತ್ವದಲ್ಲಿ ಕರ್ನಾಟಕವು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಿ, ದೇಶದಲ್ಲೇ ಮಾದರಿ ರಾಜ್ಯವಾಗಿ ಹೊರಹೊಮ್ಮಲಿ. ನಿಮ್ಮ ಈ ನೂತನ ಆಡಳಿತಾವಧಿಯಲ್ಲಿ ನಾಡಿನ ಜನತೆಯ ಆಶೋತ್ತರಗಳು ಈಡೇರಲಿ ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಸಮೃದ್ಧಿ ಮತ್ತು ಶಾಂತಿ ಸಿಗುವಂತಾಗಲಿ. ಕೃಷಿ, ಉದ್ಯೋಗ, ಶಿಕ್ಷಣ, ಕೌಶಲ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಮಗ್ರ ಕರ್ನಾಟಕದ ಕಲ್ಯಾಣಕ್ಕಾಗಿ ನೀವು ಕೈಗೊಳ್ಳುವ ಪ್ರತಿ ಹೆಜ್ಜೆಗೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ತಮಗೆ ಮತ್ತೊಮ್ಮೆ ಯಶಸ್ವಿ ಆಡಳಿತಾವಧಿಯ ಶುಭ ಹಾರೈಕೆಗಳು.



03/06/2026
03/06/2026

ಪಕ್ಷಕ್ಕಾಗಿ ದಶಕಗಳ ಕಾಲನಿರಂತರವಾಗಿ ದುಡಿದು, ಇಂದು ಕರ್ನಾಟಕದ ರಾಜಕಾರಣದಲ್ಲಿ ಧ್ರುವತಾರೆಯಂತೆ ಮಿನುಗುತ್ತಿರುವ ಜನನಾಯಕ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ ಕೋಟಿ ಕೋಟಿ ಅಭಿನಂದನೆಗಳು.

ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನದ ಮೊದಲ ಹೆಜ್ಜೆಯಿಟ್ಟು, ಸಂಘಟನಾ ಚತುರತೆಯ ಮೂಲಕ ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದವರು ನೀವು. ಎಂತಹದ್ದೇ ಸವಾಲುಗಳು ಎದುರಾದರೂ ಧೃತಿಗೆಡದೆ, ಬಂಡೆಯಂತೆ ನಿಂತು ಇಡೀ ಪಕ್ಷಕ್ಕೆ ಆನೆಯ ಬಲ ತಂದಿತ್ತ ಧೀಮಂತ ನಾಯಕತ್ವ ನಿಮ್ಮದು. ಸಣ್ಣ ಸಣ್ಣ ಕಾರ್ಯಕರ್ತರನ್ನು ಪ್ರೀತಿಯಿಂದ ಕೈಹಿಡಿದು ನಡೆಸಿ, ಇಂದು ಇಡೀ ಕರ್ನಾಟಕವೇ ಹೆಮ್ಮೆಯಿಂದ ನೋಡುವಂತೆ ಬೃಹತ್ ಹೆಮ್ಮರವಾಗಿ ಬೆಳೆದು ನಿಂತಿರುವುದು ನಿಮ್ಮ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ನಾಡಿನ ಉನ್ನತ ಜವಾಬ್ದಾರಿಯ ಅಧಿಕಾರವನ್ನು ಸ್ವೀಕರಿಸಲಿರುವ ತಮಗೆ ಶುಭವಾಗಲಿ. ನಿಮ್ಮ ನೇತೃತ್ವದಲ್ಲಿ ಕರ್ನಾಟಕವು ಪ್ರಗತಿಯ ಪಥದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ, ಜನಸಾಮಾನ್ಯರ ಬದುಕಿನಲ್ಲಿ ಹೊಸ ಭರವಸೆ ಮೂಡಲಿ ಎಂದು ಹಾರೈಸುತ್ತೇನೆ.


ಕನಸು ನನಸಾದ ಕ್ಷಣ -ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ RCBಗೆ ಹಾರ್ದಿಕ ಶುಭಾಶಯಗಳು🏆ಈ ಸಲನು cup ನಮ್ದೇ !
31/05/2026

ಕನಸು ನನಸಾದ ಕ್ಷಣ -ಎರಡನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ RCBಗೆ ಹಾರ್ದಿಕ ಶುಭಾಶಯಗಳು🏆ಈ ಸಲನು cup ನಮ್ದೇ !

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ನ...
30/05/2026

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಸಮರ್ಥ ನಾಯಕತ್ವದಲ್ಲಿ ಪಕ್ಷ ಮತ್ತು ರಾಜ್ಯವು ಅಭಿವೃದ್ಧಿಯ ಹೊಸ ಪಥದಲ್ಲಿ ಮುನ್ನಡೆಯಲಿ.

ನಿಮ್ಮ ಜನಪರ ಯೋಚನೆ ಮತ್ತು ದಕ್ಷ ಆಡಳಿತದಿಂದ ನಾಡಿನ ಜನತೆಗೆ ಇನ್ನಷ್ಟು ಒಳಿತಾಗಲಿ ಎಂದು ಆಶಿಸುತ್ತೇನೆ.


ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು.
28/05/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು.

25/05/2026

ಕಚ್ಚಾತೈಲದ ಬೆಲೆ ಜಾಗತಿಕವಾಗಿ ಇಳಿದಾಗ ಜನರಿಗೆ ಲಾಭವಿಲ್ಲ, ಏರಿದಾಗ ಮಾತ್ರ ಜನರ ಮೇಲೆ ದಬ್ಬಾಳಿಕೆ!
ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಖಂಡನೀಯ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ ಎಂಬ ನೆಪವೊಡ್ಡಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ‘ಬೆಲೆ ಏರಿಕೆ’ ಧೋರಣೆ ಖಂಡನೀಯ!

ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕುಸಿದಿದ್ದಾಗ ಅದರ ಲಾಭದಲ್ಲಿ ನಯಾಪೈಸೆಯಷ್ಟೂ ಜನಸಾಮಾನ್ಯರಿಗೆ ನೀಡದ ಸರ್ಕಾರ, ಈಗ ಬೆಲೆ ಏರಿಕೆಯಾಗಿದೆ ಎಂದು ಜನರ ಮೇಲೆ ಗದಾಪ್ರಹಾರ ಮಾಡುತ್ತಿರುವುದು ಅನ್ಯಾಯ!

ಮೇ 15ರಿಂದ ಇಂದಿನವರೆಗೆ ₹8ರಷ್ಟು ಇಂಧನ ದರ ಹೆಚ್ಚಳವಾಗಿದೆ. ಕೇವಲ ಹತ್ತು ದಿನಗಳಲ್ಲಿ 4ನೇ ಬಾರಿ ದರ ಪರಿಷ್ಕರಣೆ ನಡೆಸಿ ಜನರನ್ನು ಲೂಟಿ ಮಾಡಲಾಗುತ್ತಿದೆ!

ಇದು ವಾಹನ ಸವಾರರ ಸಮಸ್ಯೆಯಷ್ಟೇ ಅಲ್ಲ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾದರೆ ಸಾರಿಗೆ ವೆಚ್ಚ ಹೆಚ್ಚಾಗಿ, ತರಕಾರಿ-ದಿನಸಿಯಿಂದ ಆರಂಭಿಸಿ ಪ್ರತಿಯೊಂದು ಅಗತ್ಯ ವಸ್ತುವಿನ ಬೆಲೆಯೂ ಗಗನಕ್ಕೇರುತ್ತದೆ!

ಚುನಾವಣೆ ಮುಗಿಯುವವರೆಗೂ ಸುಮ್ಮನಿದ್ದು, ಈಗ ಕೇಂದ್ರ ಸರ್ಕಾರ ಜನ ಸಾಮಾನ್ಯರ ಮೇಲೆ ದಾಳಿ ಮಾಡುತ್ತಿದೆ.

ಜನರ ದಿನನಿತ್ಯದ ಬದುಕನ್ನೇ ದುಸ್ತರಗೊಳಿಸುತ್ತಿರುವ ಈ ಜನವಿರೋಧಿ ಇಂಧನ ದರ ಏರಿಕೆಯನ್ನು ಕೇಂದ್ರ ಸರ್ಕಾರ ತಕ್ಷಣವೇ ಹಿಂಪಡೆಯಲೇಬೇಕು! ಬಡವರ ಹೊಟ್ಟೆಯ ಮೇಲೆ ಹೊಡೆಯುವುದನ್ನು ನಿಲ್ಲಿಸಬೇಕು.

Address

Vijayapura
586103

Website

Alerts

Be the first to know and let us send you an email when Kanta Naik posts news and promotions. Your email address will not be used for any other purpose, and you can unsubscribe at any time.

Share