04/08/2026
ದಿನಾಂಕ: 04-08-2026
ಸ್ಥಳ: ಮಾರ್ಕಬ್ಬಿನಹಳ್ಳಿ ಗ್ರಾಮ – ಸಾತಿಹಾಳಕ್ಕೆ ಹೋಗುವ ರಸ್ತೆ
ಇಂದು ಮಾರ್ಕಬ್ಬಿನಹಳ್ಳಿ ಗ್ರಾಮದ ಸಾತಿಹಾಳಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಚರಂಡಿಯ ನೀರು ರೈತರ ಹೊಲಗಳಿಗೆ ಹರಿದು ಬೆಳೆ ಹಾನಿಯಾಗುತ್ತಿರುವ ಕುರಿತು ರೈತರು ಹಾಗೂ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಸ್ಥಳ ಪರಿಶೀಲನೆ ವೇಳೆ ರೈತರು, ಗ್ರಾಮಸ್ಥರೊಂದಿಗೆ ಸಮಸ್ಯೆಯ ಕುರಿತು ಸಮಾಲೋಚನೆ ನಡೆಸಲಾಯಿತು. ಚರ್ಚೆಯ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಿಂದ ಅಗತ್ಯ ಕ್ರಮ ಕೈಗೊಂಡು ಸೂಕ್ತ ಚರಂಡಿ ವ್ಯವಸ್ಥೆ ನಿರ್ಮಿಸಿ, ಚರಂಡಿ ನೀರನ್ನು ಸರಿಯಾದ ದಿಕ್ಕಿನಲ್ಲಿ ನೈಸರ್ಗಿಕ ಡೋಣಿ ದಾರಿಗೆ ಹರಿಯುವಂತೆ, ಡೋಣಿ ದಾರಿಯಲ್ಲಿ ಬರುವ ರೈತರು ಹಾಗೂ ಊರಿನ ಮುಖಂಡರೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಸಲಾಯಿತು.
ಸದರಿ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.