Basavaraj Mali

Basavaraj Mali Contact information, map and directions, contact form, opening hours, services, ratings, photos, videos and announcements from Basavaraj Mali, Chincholi.

ಇವನಾರವ ಎಂದೆನಿಸದೆ ಇವ ನಮ್ಮವ ಎಂದೆನಿಸಯ್ಯ ಕೂಡಲಸಂಗಮದೇವ 💐
23/04/2023

ಇವನಾರವ ಎಂದೆನಿಸದೆ ಇವ ನಮ್ಮವ ಎಂದೆನಿಸಯ್ಯ ಕೂಡಲಸಂಗಮದೇವ 💐

ಸಮಸ್ತ ನಾಡಿನ ಜನತೆಗೆ ಭಗವಾನ ಮಹಾವೀರ ಜಯಂತಿಯ ಶುಭಾಶಯಗಳು. ಸತ್ಯ, ಅಹಿಂಸೆ, ತ್ಯಾಗ ಮತ್ತು ತಪಸ್ಸಿನಿಂದ ಆಧಾರಿತವಾದ ಅವರ ಜೀವನ ಪ್ರತಿಯೊಬ್ಬರಿಗೂ...
04/04/2023

ಸಮಸ್ತ ನಾಡಿನ ಜನತೆಗೆ ಭಗವಾನ ಮಹಾವೀರ ಜಯಂತಿಯ ಶುಭಾಶಯಗಳು.

ಸತ್ಯ, ಅಹಿಂಸೆ, ತ್ಯಾಗ ಮತ್ತು ತಪಸ್ಸಿನಿಂದ ಆಧಾರಿತವಾದ ಅವರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಪ್ರತಿಯೊಬ್ಬರು ಅವರ ತತ್ವಾದರ್ಶಗಳನ್ನು ಪಾಲಿಸೋಣ.

ಖುಷಿ, ಸಡಗರ, ನೆಮ್ಮದಿ, ಪ್ರೀತಿಯ ಹೋಳಿ ನಿಮ್ಮದಾಗಲಿ. ಆನಂದದ ಬಣ್ಣ ಎಲ್ಲೆಲ್ಲೂ ತುಂಬಲಿ. ಅನುದಿನವೂ ಅನುಕ್ಷಣವೂ ನೆಮ್ಮದಿ ನೆಲೆಗೊಳಲಿ.ನಾಡಿನ ಸಮ...
07/03/2023

ಖುಷಿ, ಸಡಗರ, ನೆಮ್ಮದಿ, ಪ್ರೀತಿಯ ಹೋಳಿ ನಿಮ್ಮದಾಗಲಿ. ಆನಂದದ ಬಣ್ಣ ಎಲ್ಲೆಲ್ಲೂ ತುಂಬಲಿ. ಅನುದಿನವೂ ಅನುಕ್ಷಣವೂ ನೆಮ್ಮದಿ ನೆಲೆಗೊಳಲಿ.ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸಂಗೀತ ಸಾಮ್ರಾಟ್, ಕಾಯಕಯೋಗಿ, ಗ್ವಾಲಿಯರ್ ಘರಾನಾದ ಪ್ರತಿಪಾದಕರು, ಅಂಧ ಅನಾಥ ಮಕ್ಕಳ ಬಾಳಿಗೆ ಬೆಳಕಾದ ಮೇರು ಪುರುಷ ಪದ್ಮಭೂಷಣ ಪಂಡಿತ್ ಪುಟ್ಟರಾಜ...
03/03/2023

ಸಂಗೀತ ಸಾಮ್ರಾಟ್, ಕಾಯಕಯೋಗಿ, ಗ್ವಾಲಿಯರ್ ಘರಾನಾದ ಪ್ರತಿಪಾದಕರು, ಅಂಧ ಅನಾಥ ಮಕ್ಕಳ ಬಾಳಿಗೆ ಬೆಳಕಾದ ಮೇರು ಪುರುಷ ಪದ್ಮಭೂಷಣ ಪಂಡಿತ್ ಪುಟ್ಟರಾಜ ಗವಾಯಿ ಅವರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು.
ನಾಡಿನ ಅಂದರು, ಅನಾಥರು, ನಿರ್ಗತಿಕ ಬಡ ಮಕ್ಕಳ ಬದುಕಿಗೆ ಬೆಳಕಿನ ಹೊಂಗಿರಣವಾಗಿ, ನಡೆದಾಡುವ ದೇವರನಿಸಿದ ಯೋಗಿ ಇವರು. ಬಹುಭಾಷಾ ಪಂಡಿತರಾಗಿ, ವಾಗ್ಗೇಯಕಾರರಾಗಿ, ಕವಿಗಳಾಗಿ, ವಚನಕಾರರಾಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ಇವರು ಮಾಡಿದ ಸಾಧನೆ ಅಪಾರ.

ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ 72ನೇ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತ
01/03/2023

ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ 72ನೇ ಜಾತ್ರಾ ಮಹೋತ್ಸವಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತ

ಬೆಳಕಿನ ಚದುರುವಿಕೆಯ ತತ್ವವನ್ನು ನೀಡುವ ಮೂಲಕ ವಿಜ್ಞಾನ ಪ್ರಪಂಚಕ್ಕೆ ಹೊಸ ದಿಕ್ಕನ್ನು ನೀಡಿದ ವಿಶ್ವವಿಖ್ಯಾತ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು...
28/02/2023

ಬೆಳಕಿನ ಚದುರುವಿಕೆಯ ತತ್ವವನ್ನು ನೀಡುವ ಮೂಲಕ ವಿಜ್ಞಾನ ಪ್ರಪಂಚಕ್ಕೆ ಹೊಸ ದಿಕ್ಕನ್ನು ನೀಡಿದ ವಿಶ್ವವಿಖ್ಯಾತ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ವಿಶ್ವಪ್ರಸಿದ್ಧವಾದ ‘ರಾಮನ್ ಎಫೆಕ್ಟ್’ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ಬಹಿರಂಗಪಡಿಸಿ, ನೋಬಲ್ ಪಾರಿತೋಷಕ ಪಡೆದಿರುವ ಇವರ ಈ ಸಂಶೋಧನೆಯ ಗೌರವಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ದೇಶದ ಅಭಿವೃದ್ಧಿಗೆ ವಿಜ್ಞಾನಿಗಳ ಕೊಡುಗೆಗಳನ್ನು ಗುರುತಿಸಿ ಗೌರವಿಸೋಣ.

ಹರಕುಡಾ ಶೀ 🙏
25/02/2023

ಹರಕುಡಾ ಶೀ 🙏

ಜೀವನದ ಸಮಸ್ಯೆಗಳನ್ನು ನೇರ, ನಿಷ್ಠುರವಾಗಿ ತ್ರಿಪದಿಗಳ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದ ತ್ರಿಪದಿ ಬ್ರಹ್ಮ, ಅದ್ಬುತ ವಚನಕಾರರು, ಸಂತ ಕವಿ ಶ್ರೀ ...
20/02/2023

ಜೀವನದ ಸಮಸ್ಯೆಗಳನ್ನು ನೇರ, ನಿಷ್ಠುರವಾಗಿ ತ್ರಿಪದಿಗಳ ಮೂಲಕ ಸಮಾಜದಲ್ಲಿ ಸಮಾನತೆ ಸಾರಿದ ತ್ರಿಪದಿ ಬ್ರಹ್ಮ, ಅದ್ಬುತ ವಚನಕಾರರು, ಸಂತ ಕವಿ ಶ್ರೀ ಸರ್ವಜ್ಞ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಭಾವಕೋಶದಲ್ಲಿ ವಿಶಿಷ್ಟ ಗುರುತಾಗಿ ಉಳಿದುಬಂದಿರುವ ಇವರ ತ್ರಿಪದಿಗಳು ಸಾರ್ವಕಾಲಿಕ ಮಹತ್ವದಿಂದ ಗಮನ ಸೆಳೆಯುತ್ತವೆ. ಇವರ ಸಂದೇಶವು ಅನುಕರಣೀಯ.

ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅಮರರಾದ ಈ ದಿನವನ್ನು ರಾಷ್ಟ್ರೀಯ ಹುತಾತ್ಮರ ದಿನ ಅಥವಾ ಸರ್ವೋದಯ ದಿನ ಎಂದು ಆಚರಿಸಲಾಗುತ್ತಿದೆ. ನಮ್ಮ ರಾಷ್ಟ್ರಕ್...
30/01/2023

ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅಮರರಾದ ಈ ದಿನವನ್ನು ರಾಷ್ಟ್ರೀಯ ಹುತಾತ್ಮರ ದಿನ ಅಥವಾ ಸರ್ವೋದಯ ದಿನ ಎಂದು ಆಚರಿಸಲಾಗುತ್ತಿದೆ. ನಮ್ಮ ರಾಷ್ಟ್ರಕ್ಕಾಗಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರಿಗೆ, ಯೋಧರಿಗೆ ಗೌರವ ಸಲ್ಲಿಸೋಣ. ಅವರ ತ್ಯಾಗ-ಬಲಿದಾನವನ್ನು ಸ್ಮರಿಸೋಣ.

26/01/2023
ಕಾಯಕಯೋಗಿ ಶ್ರೀ  ಶಿವಯೋಗಿ ಸಿದ್ದರಾಮೇಶ್ವರರ ಜಯಂತೋತ್ಸವದ ಅಂಗವಾಗಿ  ಬ್ಲಾಕ್ ಕಾಂಗ್ರೆಸ್ ಸಮಿತಿ, ಚಿಂಚೋಳಿ ಕಾರ್ಯಾಲಯದಲ್ಲಿಂದು ಶ್ರೀ ಶಿವಯೋಗಿ ...
15/01/2023

ಕಾಯಕಯೋಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತೋತ್ಸವದ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿ, ಚಿಂಚೋಳಿ ಕಾರ್ಯಾಲಯದಲ್ಲಿಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಚಿಂಚೋಳಿ ಕಾಂಗ್ರೆಸ್ ಮುಖಂಡರಾದ ಸುಭಾಷ್ ವ್ಹಿ. ರಾಠೋಡ್ ಜೀ ರವರು ಪೂಜೆ, ಪುಷ್ಪ ನಮನ, ಗೌರವ ಸಮರ್ಪಣೆ ಸಲ್ಲಿಸುವ ಮೂಲಕ ಜಯಂತೋತ್ಸವವನ್ನು *ಆಚರಿಸಿ, ಮಾತನಾಡಿ* ಶಿವಯೋಗಿ ಸಿದ್ದರಾಮರು ಸಾಕ್ಷಾತ ಶಿವನನ್ನು ಒಲಿಸಿಕೊಂಡು ತಮ್ಮ ಇಡೀ ಜೀವನವನ್ನು ಲೋಕಲ್ಯಾಣಕ್ಕೆ ಮೂಡುಪಾಗಿಟ್ಟಂತಹ ಮಹನೀಯರಾಗಿದ್ದರು ಎಂದರು. ಭೋವಿ ವಡ್ಡರ ಸಮಾಜದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ, ಈ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆಯುವದರ ಮೂಲಕ ಸಮಾಜದ ಉನ್ನತ ಸ್ಥಾನಮಾನ ಹೊಂದುವಂತಾಗಬೇಕಿದೆ ಎಂದು ನುಡಿದರು, ಶಿವಯೋಗಿ ಸಿದ್ದರಾಮರು ಮಹಿಳೆಯರಿಗೆ ಗೌರವ ನೀಡಿರುವದನ್ನು ಅವರ ವಚನಗಳ ಮೂಲಕ ತಿಳಿಯಬಹುದಾಗಿದ್ದು, ಅವರು ರಚಿಸಿದಂತಹ ವಚನಗಳು ಎಲ್ಲರಿಗೂ ಆದರ್ಶಪ್ರಾಯವಾಗಿದ್ದು ಇವುಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಇತರರಿಗೂ ತಿಳಿಸುವದರ ಮೂಲಕ ಲೋಕಲ್ಯಾಣದ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕಾಗಿದೆ ಎಂದು ನುಡಿದರು.
*ಈ ಸಂದರ್ಭದಲ್ಲಿ* ಕಾಂಗ್ರೆಸ್ ಮುಖಂಡರುಗಳಾದ ಅಜೀತ್ ಪಾಟೀಲ್, ಜಗನಾಥ ಕಟ್ಟಿ, ಜಗನಾಥ ಗುತ್ತೇದಾರ, ಡಾ. ತುಕ್ಕರಾಮ್ ಪವಾರ, ಮಲ್ಲಿಕಾರ್ಜುನ ಕೊಟ್ಟಪಲ್ಲಿ, ನಾಗೇಶ್ ಗುಣಾಜಿ, ಸಂತೋಷ್ ಗುತ್ತೇದಾರ, ಮಲ್ಲಣ್ಣ ವಾಡಿ, ಬಸವರಾಜ ವಾಡಿ, ಖಲಿಲ್ ಪಟೇಲ್, ಬಸವರಾಜ ಕಡಬೂರ, ಮಸೂದ್ ಸೌದಾಗಾರ, ಶಿವರಾಜ ಪಾಟೀಲ್, ಶುಭಾಶ್ಚಂದ್ರ ಪಾಟೀಲ್, ಶಿವರಾಜ ಪಾಟೀಲ್ ಪೋಲಕಪಳ್ಳಿ, ಹಿರಾಸಿಂಗ್ ಜಾಧವ, ರಾಜು ನವಲೆ, ಶೇಕ್ ಫರೀದ, ಸುನೀಲ್ ದೊಡ್ಮನಿ, ಎಂ. ಕೆ. ಮಖದೂಮ್, ನಾಗಾರ್ಜುನ ಕಟ್ಟಿ, ನವೀನ್ ಕಿವಣೋರ, ಮಲ್ಲಿನಾಥ್ ಹಡಪದ ಹೂವಿನಬಾವಿ, ಗೋಪಾಲ ಕೊರಡಂಪಳ್ಳಿ, ಸುನೀಲ್ ರಾಠೋಡ, ಅನೀಲ್ ಭೋವಿ, ಬಸವರಾಜ ಐನಾಪೂರ, ಸೂರ್ಯಕಾಂತ್ ರಾಠೋಡ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ಬ್ರಹ್ಮಾಂಡದ ರಕ್ಷಕನಾದ ಶ್ರೀ ಮಹಾವಿಷ್ಣುವನ್ನು ವೈಕುಂಠ ಏಕಾದಶಿಯ ಈ ಶುಭದಿನದಂದು ಪ್ರಾರ್ಥಿಸೋಣ. ಎಲ್ಲರಿಗೂ ವೈಕುಂಠ ಏಕಾದಶಿಯ ಶುಭಾಶಯಗಳು.
02/01/2023

ಬ್ರಹ್ಮಾಂಡದ ರಕ್ಷಕನಾದ ಶ್ರೀ ಮಹಾವಿಷ್ಣುವನ್ನು ವೈಕುಂಠ ಏಕಾದಶಿಯ ಈ ಶುಭದಿನದಂದು ಪ್ರಾರ್ಥಿಸೋಣ. ಎಲ್ಲರಿಗೂ ವೈಕುಂಠ ಏಕಾದಶಿಯ ಶುಭಾಶಯಗಳು.

Address

Chincholi

Telephone

+919448652226

Website

Alerts

Be the first to know and let us send you an email when Basavaraj Mali posts news and promotions. Your email address will not be used for any other purpose, and you can unsubscribe at any time.

Contact The Organization

Send a message to Basavaraj Mali:

Share