S D P I ಮಂಗಳೂರು/ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿ

  • Home
  • India
  • Ullal
  • S D P I ಮಂಗಳೂರು/ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿ

S D P I ಮಂಗಳೂರು/ಉಳ್ಳಾಲ  ವಿಧಾನಸಭಾ ಕ್ಷೇತ್ರ ಸಮಿತಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ಸಮಿತಿ.

ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್....ಮಂಗಳೂರು K.C ರೋಡ್ ನ SDPi ನಾಯಕ ಶಕೀಲ್  ಇದೀಗ ಹ್ರದಯಾಘಾತ ದಿಂದ ನಮ್ಮಿಂದ ಅಗಲಿ ಇಹಲೋಕ ತ್ಯಜಿಸ...
29/10/2024

ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್....

ಮಂಗಳೂರು K.C ರೋಡ್ ನ SDPi ನಾಯಕ ಶಕೀಲ್ ಇದೀಗ ಹ್ರದಯಾಘಾತ ದಿಂದ ನಮ್ಮಿಂದ ಅಗಲಿ ಇಹಲೋಕ ತ್ಯಜಿಸಿದರು ಅವರ ಮಗ್ಫಿರತಿಗಾಗಿ ಎಲ್ಲರೂ ದುಆ ಮಾಡಬೇಕಾಗಿ ವಿನಂತಿ

ಅಲ್ಲಾಹು ಅವರಿಗೆ ಮಗ್ಫಿರತ್ ಮರ್ಹಮತ್ ನೀಡಿ ಅನುಗ್ರಹಿಸಲಿ ಆಮೀನ್🤲🤲........

ತಳಮಟ್ಟದಲ್ಲಿ ಪರಿಶ್ರಮ ಪಟ್ಟರೆ ‘ಇಸಾಕ್’ನಂತೆ ಸಾಧಿಸಬಹುದು📃ಹಂಝತ್ ಅಲಿ ಕೆಪಿಹೌದು…. ಇದು ಇಸಾಕ್ ಬೋಳಿಯಾರ್ ಎಂಬ ಯುವಕನ ಸಾಧನೆಯ ಮೆಟ್ಟಿಲುಗಳು…....
07/09/2024

ತಳಮಟ್ಟದಲ್ಲಿ ಪರಿಶ್ರಮ ಪಟ್ಟರೆ ‘ಇಸಾಕ್’ನಂತೆ ಸಾಧಿಸಬಹುದು

📃ಹಂಝತ್ ಅಲಿ ಕೆಪಿ

ಹೌದು…. ಇದು ಇಸಾಕ್ ಬೋಳಿಯಾರ್ ಎಂಬ ಯುವಕನ ಸಾಧನೆಯ ಮೆಟ್ಟಿಲುಗಳು….

ಸ್ವತಃ ಸಾಧನೆಯ ಮುಖಾಂತರ ತನ್ನದೇ ಶೈಲಿಯಲ್ಲಿ ಸೇವೆಯನ್ನು ಮಾಡುತ್ತಾ ಯಾವುದೇ ಆಸೆ ಆಕಾಂಕ್ಷೆ ಇಲ್ಲದೆ, ಪ್ರತಿಫಲಾಕ್ಷೆ ಇಲ್ಲದೆ ತನ್ನನ್ನು ತೊಡಗಿಸಿಕೊಂಡು ಆತ್ಮಾರ್ಥವಾಗಿ ಸೇವೆ ಗೈಯ್ಯುವ ಈ ಯುವ ಪ್ರತಿಭೆಯನ್ನು ಮೆಚ್ಚಲೇಬೇಕು. ಅನ್ಯಾಯದ ವಿರುದ್ಧ ಧ್ವನಿಯಾಗುತ್ತಾ, ನೊಂದವರ ಕಣ್ಣೀರಿಗೆ ಸ್ಪಂಧಿಸುತ್ತಾ, ಬಡವರಿಗೆ ಶ್ರೀಮಂತನಾಗಿ, ನಿರ್ಗತಿಕರಿಗೆ ನಿರರ್ಗಳ ವಾಗಿ ತನ್ನ ಶಕ್ತಿ ಮೀರಿ ಸೇವೆಯನ್ನು ಮಾಡುವ ಈ ಇಸಾಕ್ ಬೋಳಿಯಾರ್ ಎಂಬ ಸಹೋದರನ ಹುಮ್ಮಸ್ಸು, ಮಿಡಿತ ಎಲ್ಲರಿಗೂ ಮಾದರಿಯಾಗಲಿ. ಕಷ್ಟದಲ್ಲಿರುವವರಿಗೆ , ತನ್ನ ಸಂಕಷ್ಟವನ್ನು ಬದಿಗೊತ್ತಿ ಇನ್ನೊಬ್ಬರ ಕಣ್ಣೀರೊರೆಸುವ ಕಾರುಣ್ಯ ಸೇವೆಯನ್ನು ನಾವೆಲ್ಲರೂ ಶ್ಲಾಘಿಸಲೇಬೇಕಾಗಿದೆ. ಅತಂತ್ರ ಸ್ಥಿತಿಯಲ್ಲಿರುವ ರೋಗಿಯಾಗಿರಲಿ, ತುರ್ತು ಪರಿಸ್ಥಿತಿಯಲ್ಲಿ ರಕ್ತ ಬೇಕಾಗಿರಲಿ, ಆಸ್ಪತ್ರೆಗಳಲ್ಲಿ ರೋಗಿಯನ್ನು ಸಂದರ್ಶಿಸಿ ಸಾಂತ್ವನ ಹೇಳಿ ದೈರ್ಯತುಂಬುವ ಈ ಯುವಕ ಯಾವುದೇ ಪರಿಸ್ಥಿತಿಯಲ್ಲೂ ತನ್ನ ಕೆಲಸಕಾರ್ಯಗಳನ್ನು ಬದಿಗೊತ್ತಿ ಓಡೋಡಿ ಇನ್ನೊಬ್ಬರ ಸೇವೆಗಾಗಿ ಸಜ್ಜಾಗುವರು. ಯಾವುದೇ ಸಂಧರ್ಭದಲ್ಲೂ ಇಸಾಕ್ ರವರಿಗೆ ಕರೆಮಾಡಿ ಕ್ಷಣಮಾತ್ರದಲ್ಲಿ ಫೋನ್ ಎತ್ತಿ ಬಂದವರ ಕಷ್ಟವನ್ನಾಲಿಸಿ ಬೇಕಾದ ಸೌಲಭ್ಯವನ್ನು ಒದಗಿಸಿಕೊಡುವುದಲ್ಲದೆ ತನ್ನಲ್ಲಾಗುವ ಎಲ್ಲಾ ಸಹಕಾರವನ್ನು ಸಂಪೂರ್ಣವಾಗಿ ವ್ಯಯಿಸುತ್ತಾರೆ ಎಂಬುದೇ ಅಭಿನಂಧನಾರ್ಹ. ಅಲ್ಲದೆ ಅವರಲ್ಲಿ ಅಡಗಿರುವ ನಿಸ್ವಾರ್ಥ ಸೇವೆ, ನಾಯಕತ್ವ, ಸಾಧನೆ ಇವುಗಳನ್ನು ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಒಬ್ಬ ಸಮರ್ಥ ನಾಯಕನಾಗಲು ಅರ್ಹ ವ್ಯಕ್ತಿಯೆಂದೇ ಹೇಳಬುಹುದಾಗಿದೆ.

*”ಸೇವೆ* ಎಂಬುದನ್ನು ತನ್ನ ಹೃದಯದಲ್ಲಿ ಇಟ್ಟು ಮುಗುಳ್ನಗೆಯೊಂದಿಗೆ ಇನ್ನೊಬ್ಬರಿಗಾಗಿ ತನ್ನನ್ನು ಅರ್ಪಿಸುವಾಗ ಸಿಗುವ ಖುಷಿಯೇ ನನ್ನ ಜೀವನದ ಘಟ್ಟಗಳು” ಎಂದು ಹೇಳುವ ಇಸಾಕ್ ರವರ ಆ ಉದಯೋನ್ಮುಕ ಸಾಧನೆಗೆ ಸಲ್ಯೂಟ್ ಕೊಡಲೇಬೇಕು. ಸರ್ವಶಕ್ತನು ಇಸಾಕ್ ರವರ ಸೇವೆಗೆ ಬರ್ಕತ್ ನೀಡಲಿ, ಇಸಾಕ್ ರವರ ಎಲ್ಲಾ ಸಂಕಷ್ಟಗಳನ್ನು ಸೃಷ್ಟಿಕರ್ತನು ದೂರ ಮಾಡಲಿ… ಆಮೀನ್ ಯಾರಬ್ಬಲ್ ಆಲಮೀನ್.
———————————————✔️✔️✔️

01/09/2024

#ಏನಾದರೂ_ಆಗೂ_ಮೊದಲು_ಮಾನವನಾಗು.......

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಎಸ್ ಡಿ ಪಿ ಐ SDPI ಪಕ್ಷದ ವತಿಯಿಂದ ಈ ದಿನ ಕುರುಬ ಜನಾಂಗದ #ನಾಗರಾಜ್ ಎಂಬುವರ ಅನಾಥ ಶವವನ್ನು ಅಂತಿಮ ಸಂಸ್ಕಾರ ಮಾಡಿ ಮಾನವೀಯತೆ ತೋರಿದ SDPI Karnataka ಪಕ್ಷದ ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರು. ಅಂತ್ಯಕ್ರಿಯೆ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ #ಖಾಜಾ_ದೇಶನೂರ #ಜಿಲಾನ್_ಬಾಷಾ #ಅಜ್ಮತ್_ಹುಸೇನ್ #ಭಾಷಾ #ಸಲೀಂ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

In Siruguppa city, Ballari district, the SDPI party Caders performed the final rites for an orphaned body from the Kuruba community, named Nagraj, demonstrating humanity. SDPI Karnataka party workers from Ballari district were present during the funeral. Taluk President Khaja Deshanur, Zilan Basha, Azmath Hussain, Basha, Saleem, and other party workers were in attendance.





2024-2027 ಅವಧಿಗೆ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಗೆ ಆಯ್ಕೆಯಾದ ನೂತನ ಸಾರಥಿಗಳು 💐💐💐💐💐💐💐💐💐💐💐💐💐💐💐
01/09/2024

2024-2027 ಅವಧಿಗೆ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಗೆ ಆಯ್ಕೆಯಾದ ನೂತನ ಸಾರಥಿಗಳು
💐💐💐💐💐💐💐💐💐💐💐💐💐💐💐

ಎಸ್ಡಿಪಿಐ ಉಳ್ಳಾಲ ವತಿಯಿಂದ ನಾಳೆ ಕ್ಷೇತ್ರ ಪ್ರತಿನಿಧಿ ಸಭೆ (ARC)ಉಳ್ಳಾಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು (ಉಳ್ಳಾಲ) ವ...
29/08/2024

ಎಸ್ಡಿಪಿಐ ಉಳ್ಳಾಲ ವತಿಯಿಂದ ನಾಳೆ ಕ್ಷೇತ್ರ ಪ್ರತಿನಿಧಿ ಸಭೆ (ARC)

ಉಳ್ಳಾಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು (ಉಳ್ಳಾಲ) ವಿಧಾನ ಸಭಾ ಸಮಿತಿಯ ಕ್ಷೇತ್ರ ಪ್ರತಿನಿಧಿ ಸಭೆ (ARC) ನಾಳೆ ಆಗಸ್ಟ್ 30 ಶುಕ್ರವಾರದಂದು ಕಲ್ಲಾಪು ಯುನಿಟಿ ಹಾಲ್ ಸಭಾಂಗಣದಲ್ಲಿ ಮಧ್ಯಾಹ್ನ 2:30 ಕ್ಕೆ ನಡೆಯಲಿದೆ.

ಪ್ರಸಕ್ತ ದೇಶದೆಲ್ಲೆಡೆ SDPI ಪಕ್ಷದ ಆಂತರಿಕ ಚುನಾವಣೆಯು ನಡೆಯುತ್ತಿದ್ದು, ಇದರ ಪ್ರಯುಕ್ತ ಕ್ಷೇತ್ರ ಪ್ರತಿನಿಧಿ ಸಭೆಯನ್ನು ಕಲ್ಲಾಪುವಿನ ಯುನಿಟಿ ಹಾಲ್ ನಲ್ಲಿ ಆಯೋಜಿಸಲಾಗಿದೆ.

ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಬಶೀರ್ ಎಸ್.ಎಂ.ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದು,
ಈ ಸಭೆಯಲ್ಲಿ ಕ್ಷೇತ್ರ ಸಮಿತಿಯ 2024 - 2027 ರ ಅವಧಿಗೆ ಹೊಸ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಪ್ರಸಕ್ತ ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಇಲ್ಯಾಸ್ ಮುಹಮ್ಮದ್ ತುಂಬೆ ಮತ್ತು ಮುಹಮ್ಮದ್ ಅಶ್ರಫ್ , ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೀದ್ ತುಂಬೆ , ರಾಜ್ಯ ಸಮಿತಿ ಸದಸ್ಯರಾಗಿರುವ ನವಾಝ್ ಉಳ್ಳಾಲ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು , ಮಂಗಳೂರು ಕ್ಷೇತ್ರ ಉಸ್ತುವಾರಿಯೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ , ಜಿಲ್ಲಾ ಕೋಶಾಧಿಕಾರಿ ಮೂಸಬ್ಬ ತುಂಬೆ , ಬಂಟ್ವಾಳ ಪುರಸಭೆಯ ನೂತನ ಉಪಾಧ್ಯಕ್ಷರಾದ ಮೂನಿಶ್ ಅಲಿ ಬಂಟ್ವಾಳ, ಜಿಲ್ಲಾ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ , ಅಶ್ರಫ್ ತಲಪಾಡಿ, ನಝೀರ್ ಪುದು , ಕ್ಷೇತ್ರ ಸಮಿತಿಯ ಉಪಾಧ್ಯಕ್ಷರುಗಳಾದ ರವಿ ಕುಟಿನ್ಹಾ , ಫಾರೂಕ್ ಝಲ್ ಝಲ್, ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷೆ ಸಬ್ರೀನಾ ಯು.ಬಿ, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಸ್ಮಾಯಿಲ್ ಟಿ., ಸಜಿಪನಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಕ್ಬಾಲ್ ಎಸ್.ಎನ್. , ಉಪಾಧ್ಯಕ್ಷೆ ಸಬಿತಾ ಡಿಸೋಝಾ , ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೆಹರುನ್ನೀಸಾ , ಹಾಗೂ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಅಲ್ಲದೇ ಕ್ಷೇತ್ರ ವ್ಯಾಪ್ತಿಯ SDPI ಪಕ್ಷದ ಚುನಾಯಿತ ಜನಪ್ರತಿನಿಧಿಗಳು , ಬ್ಲಾಕ್ ಸಮಿತಿಯ ನಾಯಕರುಗಳು, ವಿಶೇಷ ಆಹ್ವಾನಿತರು ಈ ಸಭೆಗೆ ಆಗಮಿಸಲಿದ್ದಾರೆ ಎಂದು ಎಸ್ಡಿಪಿಐ ಮಂಗಳೂರು ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ವಿಧಾನಭಾ ಕ್ಷೇತ್ರ ಸಮಿತಿಯ ಪ್ರತಿನಿಧಿ ಸಭೆ
25/08/2024

ಮಂಗಳೂರು ವಿಧಾನಭಾ ಕ್ಷೇತ್ರ ಸಮಿತಿಯ ಪ್ರತಿನಿಧಿ ಸಭೆ

14/03/2024

ತನ್ನ ಕಷ್ಟ ಯಾರೊಂದಿಗೂ ತೋರಿಸದೆ

ಅನ್ಯಾಯಕೊಳಪಟ್ಟ ಈ ಕೌಮ್ ಗೆ ಸ್ವಾಭಿಮಾನದಿಂದ ನಾಯಕತ್ವ ನೀಡುತ್ತಿರುವ ನನ್ನ ನಾಯಕರನ್ನು ನೀನು ರಕ್ಷಿಸು
يا الرحمن يا الله

*ಫೆ.23 : ತೊಕ್ಕೊಟ್ಟುವಿನಲ್ಲಿ ಎಸ್. ಡಿ. ಪಿ. ಐ. ಮಂಗಳೂರು  ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷದ ಸಮಾವೇಶ* ಸೋಶಿಯಲ್ ಡೆಮಾಕ್ರೆಟಿಕ್ ಪಾ...
21/02/2024

*ಫೆ.23 : ತೊಕ್ಕೊಟ್ಟುವಿನಲ್ಲಿ ಎಸ್. ಡಿ. ಪಿ. ಐ. ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷದ ಸಮಾವೇಶ*

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಪಕ್ಷದ ಸಮಾವೇಶವು ತೊಕ್ಕೊಟ್ಟು ವಿನ ಯೂನಿಟಿ ಹಾಲ್ ನಲ್ಲಿ ಫೆ.23 ರಂದು ನಡೆಯಲಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯಕಾರ್ಯದರ್ಶಿ ಉಬೈದ್ ಬೋಳಿಯಾರ್ ತಿಳಿಸಿದರು

ಈ ಸಮಾವೇಶಕ್ಕೆ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ , ವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಷ್ಟ್ರೀಯ ಸಮೀತಿ ಸದಸ್ಯರಾದ ಶಾಹಿದ ತಸ್ನಿಮ್ , ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯರಾದ ನವಾಝ್ ಉಳ್ಳಾಲ್ , ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷೆ ನೌರಿನ್ ಅಲಂಪಾಡಿ, ಎಸ್ ಡಿ ಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಮತ್ತು ಸ್ಥಳೀಯ ಚುನಾಯಿತ ಜನ ಪ್ರತನಿಧಿಗಳು ಹಾಗೂ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದ ನಾಯಕರು ಭಾಗವಹಿಸಲಿದ್ದಾರೆ

Address

Ullal

Alerts

Be the first to know and let us send you an email when S D P I ಮಂಗಳೂರು/ಉಳ್ಳಾಲ ವಿಧಾನಸಭಾ ಕ್ಷೇತ್ರ ಸಮಿತಿ posts news and promotions. Your email address will not be used for any other purpose, and you can unsubscribe at any time.

Share