Hariprasad Rai Udupi

Hariprasad Rai Udupi Lions Clubs International Foundation
President Udupi District Athletics Association
Chairman,HPR G of Institutions | Udupi District Congress

ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದ ದಿನಾಂಕದಿಂದ ಅಕ್ಟೋಬರ್- ನವೆಂಬರ್ ವರೆಗೆ ನಮ್ಮ ಸರ್ಕಾರ 106076 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿ...
19/12/2025

ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದ ದಿನಾಂಕದಿಂದ ಅಕ್ಟೋಬರ್- ನವೆಂಬರ್ ವರೆಗೆ ನಮ್ಮ ಸರ್ಕಾರ 106076 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಇದರಲ್ಲಿ 46277 ಕೋಟಿ ರೂಪಾಯಿಗಳನ್ನು ಉತ್ತರ ಕರ್ನಾಟಕದ ಜಿಲ್ಲೆಗಳ ಜನರಿಗಾಗಿ ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಲಾಗಿದೆ. ಒಟ್ಟು ವೆಚ್ಚದಲ್ಲಿ ಶೇ. 43.63 ರಷ್ಟು ಅನುದಾನಗಳು ಈ ಭಾಗದ ಜನರಿಗಾಗಿ ವೆಚ್ಚ ಮಾಡಲಾಗಿದೆ.

ಗ್ರಾಮ ಸಭೆ ಇನ್ನು ಮುಂದೆ ಕೇವಲ 'ಟೀ-ಬಿಸ್ಕೆಟ್' ಸಭೆಯಲ್ಲ! ಹೊಸ ನಿಯಮಗಳು ಬಿಡುಗಡೆ.​ನಮ್ಮ ಊರಿನ ಅಭಿವೃದ್ಧಿಯ ಕೀಲಿ ಕೈ ಇರುವುದು 'ಗ್ರಾಮ ಸಭೆ'ಯ...
18/12/2025

ಗ್ರಾಮ ಸಭೆ ಇನ್ನು ಮುಂದೆ ಕೇವಲ 'ಟೀ-ಬಿಸ್ಕೆಟ್' ಸಭೆಯಲ್ಲ! ಹೊಸ ನಿಯಮಗಳು ಬಿಡುಗಡೆ.

​ನಮ್ಮ ಊರಿನ ಅಭಿವೃದ್ಧಿಯ ಕೀಲಿ ಕೈ ಇರುವುದು 'ಗ್ರಾಮ ಸಭೆ'ಯಲ್ಲಿ. ಆದರೆ ಎಷ್ಟೋ ಕಡೆ ಗ್ರಾಮ ಸಭೆಗಳು ಕೇವಲ ಹೆಸರಿಗೆ ಮಾತ್ರ ನಡೆಯುತ್ತವೆ, ಇಲ್ಲವೇ ಜನರಿಗೇ ತಿಳಿಯದಂತೆ ಮುಗಿದು ಹೋಗುತ್ತವೆ. ಇದನ್ನು ತಡೆಯಲು ಕರ್ನಾಟಕ ಸರ್ಕಾರ "ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು, 2024"ರ ಕರಡು ಪ್ರಕಟಿಸಿದೆ.

​ಈ ಹೊಸ ನಿಯಮಗಳಲ್ಲಿರುವ ಪ್ರಮುಖ ಬದಲಾವಣೆಗಳು ಇಲ್ಲಿವೆ, ಪ್ರತಿಯೊಬ್ಬ ಗ್ರಾಮಸ್ಥರು ತಿಳಿಯಲೇಬೇಕಾದ ಸಂಗತಿಗಳಿವು:

​೧. ವರ್ಷಕ್ಕೆ ೪ ಬಾರಿ ಸಭೆ ಕಡ್ಡಾಯ: ಪ್ರತಿ ಕಂದಾಯ ಗ್ರಾಮದಲ್ಲಿ ಏಡಿಗೆ ಕನಿಷ್ಠ ೪ ಬಾರಿ ಗ್ರಾಮ ಸಭೆ ಕರೆಯಲೇಬೇಕು. ​ಏಪ್ರಿಲ್ 24 ಮತ್ತು ಅಕ್ಟೋಬರ್ 2 ರ ನಂತರದ 7 ದಿನಗಳಲ್ಲಿ 'ಸಾಮಾನ್ಯ ಗ್ರಾಮ ಸಭೆ'. ​ಆಗಸ್ಟ್ 15 ಮತ್ತು ಜನವರಿ 26 ರ ನಂತರದ 7 ದಿನಗಳಲ್ಲಿ 'ವಿಶೇಷ ಗ್ರಾಮ ಸಭೆ'.

​೨. 'ವಾಟ್ಸಾಪ್'ನಲ್ಲೂ ಮಾಹಿತಿ ನೀಡಬೇಕು!
ಸಭೆ ಯಾವಾಗ ಎಂದು ಯಾರಿಗೂ ಗೊತ್ತಾಗಲಿಲ್ಲ ಎಂದು ಇನ್ನು ಅಧಿಕಾರಿಗಳು ಹೇಳುವಂತಿಲ್ಲ. ಡಂಗೂರ (ಟಾಂ ಟಾಂ) ಸಾರುವುದರ ಜೊತೆಗೆ, ಗ್ರಾಮದ ಮತದಾರರಿರುವ 'ವಾಟ್ಸಾಪ್ ಗ್ರೂಪ್‌'ಗಳಲ್ಲಿ ಸಭೆಯ ನೋಟಿಸ್ ಅನ್ನು ಕಡ್ಡಾಯವಾಗಿ ಹಂಚಿಕೊಳ್ಳಬೇಕು.

​೩. ಸುಳ್ಳು ಸಹಿ ನಡೆಯಲ್ಲ - ಬಯೋಮೆಟ್ರಿಕ್ ಕಡ್ಡಾಯ: ಸಭೆಗೆ ಬಂದವರ ಹಾಜರಾತಿಯನ್ನು ಬಯೋಮೆಟ್ರಿಕ್ (ಬೆರಳಚ್ಚು) ಮೂಲಕವೇ ಪಡೆಯಬೇಕು. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಬಯೋಮೆಟ್ರಿಕ್ ಹಾಜರಾತಿ ಹಾಕಲೇಬೇಕು.

​೪. ಕೋರಂ (Quorum) ಇಲ್ಲದಿದ್ದರೆ ಸಭೆ ಇಲ್ಲ: ಸಭೆ ನಡೆಯಲು ಒಟ್ಟು ಮತದಾರರ ಶೇ. 10 ರಷ್ಟು ಇಲ್ಲವೇ 100 ಸದಸ್ಯರು (ಯಾವುದು ಕಡಿಮೆಯೋ ಅಷ್ಟು) ಹಾಜರಿರಲೇಬೇಕು. ಇಲ್ಲದಿದ್ದರೆ ಸಭೆಯನ್ನು ಮುಂದೂಡಲಾಗುತ್ತದೆ.

​೫. ಎಲ್ಲಾ ಇಲಾಖೆ ಅಧಿಕಾರಿಗಳು ಬರಲೇಬೇಕು: ಕೇವಲ ಪಿಡಿಒ (PDO) ಬಂದರೆ ಸಾಲದು. ಶಿಕ್ಷಣ, ಆರೋಗ್ಯ, ಬೆಸ್ಕಾಂ (ESCOM), ಕೃಷಿ, ತೋಟಗಾರಿಕೆ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಇಲಾಖೆಯ ಪ್ರತಿನಿಧಿಗಳು ಸಭೆಗೆ ಹಾಜರಾಗಿ ಉತ್ತರ ನೀಡಬೇಕು.

​೬. ಫಲಾನುಭವಿಗಳ ಆಯ್ಕೆ ಸಭೆಯಲ್ಲೇ ಆಗಬೇಕು: ವೈಯಕ್ತಿಕ ಕಾಮಗಾರಿಗಳಿಗೆ ಇಲ್ಲವೇ ಆಳಿಕೆ ಸವಲತ್ತುಗಳಿಗೆ ಫಲಾನುಭವಿಗಳನ್ನು (Beneficiaries) ಗ್ರಾಮ ಸಭೆಯಲ್ಲೇ ಗುರುತಿಸಿ ಆಯ್ಕೆ ಮಾಡಬೇಕು. ಕದ್ದು ಮುಚ್ಚಿ ಆಯ್ಕೆ ಮಾಡುವಂತಿಲ್ಲ.

​ಗೆಳೆಯರೇ, ಕಾನೂನುಗಳು ಎನಿತು ಬಂದರೂ, ನಾವು ಭಾಗವಹಿಸದಿದ್ದರೆ ಬದಲಾವಣೆ ಅಸಾಧ್ಯ. ಮುಂದಿನ ಗ್ರಾಮ ಸಭೆಗೆ ತಪ್ಪದೇ ಹೋಗಿ, ಪ್ರಶ್ನಿಸಿ!

​courtesy: Narekere Jagadish

14/12/2025
ಬಹರೈನ್ ದೇಶದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ, ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸ್ವಾಗತಿಸಿದರು.- Haripra...
28/11/2025

ಬಹರೈನ್ ದೇಶದ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ, ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸ್ವಾಗತಿಸಿದರು.
- Hariprasad Rai

ಉಡುಪಿ ಜಿಲ್ಲಾಡಳಿತ ಆಯೋಜಿಸಿದ ಸವಿಧಾನ ದಿವಸದ ಕುರಿತಾದ ಜಾಥಾದಲ್ಲಿ ಭಾಗವಹಿಸಿದೆ.- Hariprasad Rai
27/11/2025

ಉಡುಪಿ ಜಿಲ್ಲಾಡಳಿತ ಆಯೋಜಿಸಿದ ಸವಿಧಾನ ದಿವಸದ ಕುರಿತಾದ ಜಾಥಾದಲ್ಲಿ ಭಾಗವಹಿಸಿದೆ.
- Hariprasad Rai

ಉಡುಪಿಯ ಕಾಪು ಬೀಚ್‌ನಲ್ಲಿ 1.5 ಮೀಟರ್ ಸಮುದ್ರದ ಈಜು, 40 ಕಿ.ಮೀ ಸೈಕ್ಲಿಂಗ್ ಮತ್ತು 10 ಕಿ.ಮೀ ರನ್ನಿಂಗ್ ಈ ಮೂರು ಇವೆಂಟ್ ಒಳಗೊಂಡ ಟ್ರಯಾಥ್ಲಾನ...
27/11/2025

ಉಡುಪಿಯ ಕಾಪು ಬೀಚ್‌ನಲ್ಲಿ 1.5 ಮೀಟರ್ ಸಮುದ್ರದ ಈಜು, 40 ಕಿ.ಮೀ ಸೈಕ್ಲಿಂಗ್ ಮತ್ತು 10 ಕಿ.ಮೀ ರನ್ನಿಂಗ್ ಈ ಮೂರು ಇವೆಂಟ್ ಒಳಗೊಂಡ ಟ್ರಯಾಥ್ಲಾನ್ ಗೆ ಕಾಪು ಬೀಚಿನಲ್ಲಿ ಚಾಲನೆ ನೀಡಿ ಶುಭ ಹಾರೈಸಿದೆ.
- Hariprasad Rai

#ಟ್ರಯಾಥ್ಲಾನ್

ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸಿಕೊಟ್ಟು ಸಹೋದರತ್ವ ಮತ್ತು ಸ್ವತಂತ್ರವಾಗಿ ಬದುಕಬೇಕು ಎಂಬ ಆಶಯದೊ...
26/11/2025

ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸಿಕೊಟ್ಟು ಸಹೋದರತ್ವ ಮತ್ತು ಸ್ವತಂತ್ರವಾಗಿ ಬದುಕಬೇಕು ಎಂಬ ಆಶಯದೊಂದಿಗೆ ರೂಪುಗೊಂಡ,ವಿಶ್ವದ ಶ್ರೇಷ್ಠ ಸಂವಿಧಾನವಾದ 'ಭಾರತದ ಸಂವಿಧಾನ'ವು ಅಂಗೀಕಾರವಾದ ಈ ದಿನದಂದು ಎಲ್ಲರಿಗೂ 'ಸಂವಿಧಾನ ದಿನ'ದ ಶುಭಾಶಯಗಳು
- Hariprasad Rai

ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ವತಿಯಿಂದ ಭೂತಾನ್  ದೇಶದಲ್ಲಿ ನಡೆದ ಲಯನ್ಸ್ ಅಂತಾರಾಷ್ಟ್ರೀಯ ಸದಸ್ಯರುಗಳ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸ...
24/11/2025

ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ವತಿಯಿಂದ ಭೂತಾನ್ ದೇಶದಲ್ಲಿ ನಡೆದ ಲಯನ್ಸ್ ಅಂತಾರಾಷ್ಟ್ರೀಯ ಸದಸ್ಯರುಗಳ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆ.

ಈ ಸಂದರ್ಭದಲ್ಲಿ ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಸಂಬಂಧವು ಅತ್ಯಂತ ವಿಶೇಷವಾದದ್ದು ಮತ್ತು ಐತಿಹಾಸಿಕವಾದದ್ದು. ಈ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಮತ್ತು ಭೂತಾನ್ ಜನರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆಯುವಲ್ಲಿ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರ ಪಾತ್ರ ಬಹಳ ಹಿರಿದು ಭೂತಾನ್ ದೇಶದ ಪ್ರಜೆಗಳು ಇವರಿಬ್ಬರ ಮೇಲೆ ಹೊಂದಿರುವ ಗೌರವ ಮತ್ತು ಪ್ರೀತಿ ಮನಸಲಿತ್ತು.
- Hariprasad Rai Udupi

Hariprasad Rai

23/11/2025

ಉಡುಪಿಯ ನೂತನ ಮೀನು ಮಾರುಕಟ್ಟೆ ಉಡುಪಿಯ ಆರ್ಥಿಕ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಇದು ಇಂದಿನ ದೃಶ್ಯ….

ಇಂದು ಮತ ಕಳ್ಳತನದ ವಿರುದ್ಧ ಸಹಿ ಸಂಗ್ರಹಣ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮತದಾರರಿಂದ ಸಂಗ್ರಹಿಸಲಾದ 85000 ಸಹಿಗಳ ದಾಖಲೆಗಳನ್ನು...
22/11/2025

ಇಂದು ಮತ ಕಳ್ಳತನದ ವಿರುದ್ಧ ಸಹಿ ಸಂಗ್ರಹಣ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮತದಾರರಿಂದ ಸಂಗ್ರಹಿಸಲಾದ 85000 ಸಹಿಗಳ ದಾಖಲೆಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಭವನಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಶ್ರೀ Ashok Kumar Kodavoor ಸಲ್ಲಿಸಿದರು.
- Hariprasad Rai Udupi

Address

Udupi
576101

Website

Alerts

Be the first to know and let us send you an email when Hariprasad Rai Udupi posts news and promotions. Your email address will not be used for any other purpose, and you can unsubscribe at any time.

Share

Category