ಶ್ರೀ ಕ್ಷೇತ್ರ ಎಲ್ಲೂರು

  • Home
  • India
  • Udupi
  • ಶ್ರೀ ಕ್ಷೇತ್ರ ಎಲ್ಲೂರು

ಶ್ರೀ ಕ್ಷೇತ್ರ ಎಲ್ಲೂರು ಶ್ರೀ ಕ್ಷೇತ್ರ ಎಲ್ಲೂರು This village houses a temple which is believed to be over 1000 years. Accordingly he makes Yellur one of his abodes.

ಎಲ್ಲೂರು ಎಂಬ ಪುಟ್ಟ ಗ್ರಾಮ ರಾಷ್ಟೀಯ ಹೆದ್ದಾರಿ -17- ಉಚ್ಚಿಲ ದಿಂದ ಸುಮಾರು 4-5 ಕಿಲೋಮಿಟೆರ್ ಗಳಷ್ಟು ಪೂರ್ವಕ್ಕೆ ಚಲಿಸಿದರೆ ಸಿಗುತ್ತೆ , ಎಲ್ಲೂರು ನಲ್ಲಿರುವ "ವಿಶ್ವೇಶ್ವರ ಕ್ಷೇತ್ರ "ತುಂಬ ಪ್ರಸಿದ್ದಿಯಾದದ್ದು, ತುಳುವಿನಲ್ಲಿ ."ಉಂಡಾಯಿ ಉಲ್ಲಾಯೇ " ಅಂತ ಹೇಳುತ್ತೇವೆ , ಈ ದೇವಳಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ , ಕುಂದ ಹೆಗ್ಗಡೆ ಎಂಬ ಪ್ರಾಂತ್ಯ ಅರಸ ರಿಂದ ಪೂಜಿಸಲ್ಪಡುತ್ತಿದ್ದ ಒಂಬತ್ತು ಮಾಗಣೆಗಳ (ಕುತ್ಯಾರು ,ನಂದಿಕೂರು , ಅಡ್ವೆ,ಉಳ್ಳೂರು ,ಕೊಳಚೂರು ,ಕುಂಜೂರು,ಕಳತ

್ತೂರು , ಪಾದೂರು ,ಬೆಳಪು ,) ಈ ಒಡೆಯ ,ಮೂಲತಃ ಒಲಿದದ್ದು ಪರಿಶಿಷ್ಟ ಗುಂಪಿಗೆ ಸೇರಿದ ಮಹಿಳೆಗೆ ,(ಇತಿಹಾಸ ಕುರಿತ ಪುಸ್ತಕ ದೇವಳದಲ್ಲಿ ಲಭ್ಯ

ಕಳೆದೆರೆಡು ವರ್ಷದ ಹಿಂದೆ ಪೂರ್ಣ ಜಿರ್ಣೋದ್ದಾರ ವಾದ ದೇವಳದ ಸೌಂದರ್ಯ ಹೇಗೆ ಅಂದರೆ ಯಾವೂದೇ ಪುರಾತನ ದೇವಳಕ್ಕೆ ಕಡಿಮೆಯಿಲ್ಲ ,ಇಲ್ಲಿಯ ಗೋಪುರ ,ಮಂಟಪ ,ಗರ್ಭಗುಡಿ ಯಲ್ಲಿ .ಬೇಳೂರು ಹಳೆಬೀಡಿನಂತಹ ಶಿಲ್ಪ ಕಲೆಗಳು ಮೂಡಿವೆ , ಗರ್ಭಗುಡಿಯ ಸುತ್ತ ಹಿಂದಿನ ಇತಿಹಾಸ ಮರುಕಳಿಸುವಂತಹ .ಶಿಲೆಯ ಕೆತ್ತನೆಗಳು , ಮರದ ಒಂದೊಂದು ಕೆತ್ತನೆಗಳು ,ನೈಜ ಚಿತ್ರಣ ದಂತೆ ಇದೆ . ಒಂದು ಬಾರಿ ದೇವಳಕ್ಕೆ ಹೊಕ್ಕರೆ ಸಂತೋಷ ಬಿಡಿ ,ನಿಮಗೆ ಹೊರಗೆ ಬರಲಿಕ್ಕೆ ಮನಸಾಗಲ್ಲ ,ಅಷ್ಟೊಂದು ನಯನ ಮನೋಹರ ದೇವಳಕ್ಕೆ ಒಮ್ಮೆ ಭೇಟಿ ನೀಡಿ ನಿಮಗೆ ಅನ್ನಿಸುತ್ತೆ ಅಬ್ಬಾಬ್ಬಾ !!! ಇಷ್ಟೊಂದು ಸೌಂದರ್ಯವೇ ಅಂತ .
ಇಲ್ಲಿಗೆ ಭೇಟಿ ನೀಡುವಾಗ ನೀವು ಬೇರೇನೂ ಕೊಂಡೊಯ್ಯುದು ಬೇಡ ..ಕೇವಲ ಒಂದು
ಸಿಯಾಳಗಳು (ಎಳೆನೀರು ) ಮತ್ತು ಒಂದು ಕೊಂಡೆ ದೀಪದ ಎಣ್ಣೆ ಕೊಂಡೊಯ್ದೆರೆ ಸಾಕು ,
ಸಾಕು ..ಅದೇ ಎಲ್ಲೂರು ಒಡೆಯನ ಬಯಕೆ ,
ಇಲ್ಲಿಯ ದೇವಳದ ಇನ್ನ್ದೊಂದು ವಿಶೇಷ ಅಂದರೆ ದೇವಳ ಅಸುಪಾಸುವಿನ ಅಂಗಡಿಗಳಲ್ಲಿ ಸಿಯಾಳ ವನ್ನು (ಎಳೆನೀರು ) ಕುಡಿಯಲೆಂದು ಕೊಡುವುದಿಲ್ಲ ,ಅದು ಕೇವಲ ಶಿವನ ಅಭಿಷೆಕಕ್ಕಾಗಿ , ಹಗಲಿರಲಿ ,ಇರುಳಿರಲಿ ,ಅಂಗಡಿಯ ಹೊರಗೆ ಉಪ್ಪಿವಿನ ಚೀಲ ಹೇಗೆ ಹೊರ ಇರುತ್ತೋ ಹಾಗೆ ..ಸಾವಿರಾರು ಸಿಯಾಳ(ಎಳೆನೀರು ) ಗಳು ಹೊರಗೆ ಇರುತ್ತೆ .
ಇದೇ ಎಲ್ಲೂರಿನ ವಿಶೇಷ ...........ಜೀವನದಲ್ಲಿ ಒಂದು ಬಾರಿ ಭೇಟಿ ನೀಡಿ ಕಾಶಿನಾಥನ (ಎಲ್ಲೂರು ಉಂಡಾಯಿ ಉಲ್ಲಾಯನ )ಸನ್ನಿಧಿಗೆ .............
“ಓಂ ನಮಃ ಶಿವಾಯ”
ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ತಾನ
ಎಲ್ಲೂರು ಅಂಚೆ ,ಎಲ್ಲೂರು ಗ್ರಾಮ
ಉಡುಪಿ ತಾಲೂಕು ಮತ್ತು ಜಿಲ್ಲೆ
ದೂರವಾಣಿ :.0820 2550365



Yellur is a small village in Udupi district located at a distance of 25 Kms from Udupi and 4 kms from Uchchila on the national highway between Udupi and Mangalore. The temple here is of Lord Shiva called Mahatobhara Yellur Vishwanatha. According to puranic legends K***a Raja an honest shoodra King once requests Bhargava Muni to stay in his kingdom and he tells there are no temples or Brahmins and even a sacred river or tulsi and refuses his invitation. The disappointed king hands over the charge of his kingdom to his deputy and sets out to the banks of river Ganga and performs great penance to please Lord Shiva, seeing the kings devotions Lord Shiva appears and asks him to make a wish. An elated K***a Raja requests the Lord to stay in his kingdom and the Lord readily agrees and says he will make his appearance at a spot where enmity and hatred are unheard of. In the mean while a poor hungry woman who had just lost her son was hunting for food in the forest and by chance lands upon a plump tuber. In an a effort to remove the tuber from the ground she removes the knife and tries to cut the tuber to her shock she sees blood oozing out of it and she thinks it is the blood of her son "Yello" and beings to scream. Hearing her scream Lord shiva appears in the form of Linga and the place got its name as Yellur. It is also belived that the blood that oozed out of the tuber stopped only when the King K***a Raja and his people poured tender coconut water on it. Hence, devotes visiting the temple at any given time offer tender coconut to please the God. Besides tender coconut oil is also offered to God. According to the temple authorities this constant offering of oil ensures that the lamps in the temple will never go dry.

ಇಂದು ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಸೀಮೆಯ ರಾಶಿ ಪೂಜಾ ಮಹೋತ್ಸವ ಸಂಪನ್ನಗೊಂಡಿತು. ಕೃಪೆ : ಶ್ರೀಯುತ ರಾಕೇಶ್ ಕುಂಜೂರು
06/02/2017

ಇಂದು ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಸೀಮೆಯ ರಾಶಿ ಪೂಜಾ ಮಹೋತ್ಸವ ಸಂಪನ್ನಗೊಂಡಿತು.
ಕೃಪೆ : ಶ್ರೀಯುತ ರಾಕೇಶ್ ಕುಂಜೂರು

ಶರನ್ನವರಾತ್ರಿಯ ಪರ್ವ ಕಾಲದಲ್ಲಿ ನೋಡ ಬನ್ನಿ ಕುಂಜೂರಮ್ಮನ ಸೊಬಗನು. ದಾರಿ : ಉಡುಪಿ - ಮಂಗಳೂರು ನಡುವೆ ಉಚ್ಚಿಲದಿಂದ (ರಾ. ಹೆ. 66ರ ಉಡುಪಿಯಿಂದ ...
15/10/2015

ಶರನ್ನವರಾತ್ರಿಯ ಪರ್ವ ಕಾಲದಲ್ಲಿ ನೋಡ ಬನ್ನಿ ಕುಂಜೂರಮ್ಮನ ಸೊಬಗನು.
ದಾರಿ : ಉಡುಪಿ - ಮಂಗಳೂರು ನಡುವೆ ಉಚ್ಚಿಲದಿಂದ (ರಾ. ಹೆ. 66ರ ಉಡುಪಿಯಿಂದ ಬರುವಾಗ ಎಡಗಡೆ, ಮಂಗಳೂರಿನಿಂದ ಬರುವವರು ಮೂಳೂರು ಡೈವರ್ಷನ್ ಬಳಿ ಬಲಕ್ಕೆ ಪ್ರವೇಶಿಸಿ) ಪಣಿಯೂರು-ಎಲ್ಲೂರು ರಸ್ತೆಗೆ ಬಂದು ಅಲ್ಲಿಂದ ಮುಂದೆ ಸಾಗುವಾಗ ಸಿಗುವ ಮೊದಲ ಸೇತುವೆ ಕುಂಜೂರು ರೈಲ್ವೇ ಸೇತುವೆಯಿಂದ ಬಲಕ್ಕೆಇರುವ ದ್ವಾರದ ಒಳಗೆ ಪ್ರವೇಶಿಸಿ, ಮುಂದೆ ಸಾಗುವ ಅದಮಾರು ರಸ್ತೆಯಲ್ಲಿ ತೆರಳುವಾಗ ಎಡಕ್ಕೆ ಕಾಣಿಸುತ್ತಿದೆ ಶ್ರೀ ಕುಂಜೂರು ದುರ್ಗಾ ದೇವಸ್ಥಾನ. ನಂತರ ಸಿಗುವುದು ನಮ್ಮೆಲ್ಲರನ್ನೂ ಹರಸುತ್ತಿರುವ ಕುಂಜೂರಮ್ಮನ ದರ್ಶನ ಭಾಗ್ಯ. ಇಲ್ಲಿ ಶರನ್ನವರಾತ್ರಿ ಪ್ರಯುಕ್ತ ಪ್ರತೀ ದಿನ ಉಷಾ ಕಾಲ ಪೂಜೆ, ಪ್ರತೀ ನಿತ್ಯ ಚಂಡಿಕಾ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಭಜನೆ, ಹೂವಿನ ಪೂಜೆ ಮತ್ತು ನವರಾತ್ರಿ ಪೂಜೆ ನಡೆಯುತ್ತದೆ. ಮೂರು ಹೊತ್ತು ಕೂಡಾ ಶ್ರೀ ದುರ್ಗೆಗೆ ಪ್ರತ್ಯೇಕ ಅಲಂಕಾರವಿರುತ್ತದೆ.
ಬನ್ನಿ ಕುಂಜೂರಿಗೆ...
ಕುಂಜೂರಮ್ಮನ ದರ್ಶನ ಭಾಗ್ಯದಿಂದ ಪಾವನರಾಗಿ.
ರಾಕೇಶ್ ಕುಂಜೂರು

30/10/2014
ಇಂದು ಎಲ್ಲೂರು ಮಹತೋಭಾರ ಶ್ರೀ ವಿಶ್ವನಾಥ ದೇವಳದಲ್ಲಿ  ಮಹಾರಥೋತ್ಸವ ನಡೆಯಲಿದೆ. ಎಲ್ಲೂರು ಉಲ್ಲಾಯನ ಭಕ್ತಾಧಿಗಳಿಗೆ ಆದರದ ಸ್ವಾಗತ ಬಯಸುವ,ಶ್ರೀ ಕ...
19/04/2014

ಇಂದು ಎಲ್ಲೂರು ಮಹತೋಭಾರ ಶ್ರೀ ವಿಶ್ವನಾಥ ದೇವಳದಲ್ಲಿ ಮಹಾರಥೋತ್ಸವ ನಡೆಯಲಿದೆ. ಎಲ್ಲೂರು ಉಲ್ಲಾಯನ ಭಕ್ತಾಧಿಗಳಿಗೆ ಆದರದ ಸ್ವಾಗತ ಬಯಸುವ,

ಶ್ರೀ ಕ್ಷೇತ್ರ ಎಲ್ಲೂರು

"ತ್ವಾಂ ಗಂಧಪುಷ್ಪಧೂಪಾದ್ಯೈಃ ಅನಭ್ಯರ್ಚ ಜಗತ್ತ್ರಯೇ |ದೆವೈರಪಿ ತಥಾನ್ಯೈಶ್ಚ ಲಬ್ಧವ್ಯಂ ನಾಸ್ತಿ ಕುತ್ರಚಿತ್ ||" (ಲಿಂಗ ಪುರಾಣ 105-25)ದೇವತೆಗಳ...
12/06/2013

"ತ್ವಾಂ ಗಂಧಪುಷ್ಪಧೂಪಾದ್ಯೈಃ ಅನಭ್ಯರ್ಚ ಜಗತ್ತ್ರಯೇ |
ದೆವೈರಪಿ ತಥಾನ್ಯೈಶ್ಚ ಲಬ್ಧವ್ಯಂ ನಾಸ್ತಿ ಕುತ್ರಚಿತ್ ||" (ಲಿಂಗ ಪುರಾಣ 105-25)

ದೇವತೆಗಳೇ ಆಗಲಿ, ಅನ್ಯರೇ ಆಗಲಿ, ಯಾರು ಗಣಪತಿಯನ್ನು ಗಂಧ, ಪುಷ್ಪ, ಧೂಪಾದಿಗಳಿಂದ ಅರ್ಚಿಸುವುದಿಲ್ಲವೋ ಅವರಿಗೆ ಮೂರೂ ಲೋಕದಲ್ಲಿ ಏನೂ ಲಭಿಸುವದಿಲ್ಲ.
- ಯಾರು ವಿನಾಯಕನ ಪೂಜೆಯನ್ನು ಮಾಡುತ್ತಾರೋ ಅವರು ದೇವತೆಗಳಿಂದಲೂ ನಿಸಂಶಯವಾಗಿ ಅನುಗ್ರಹೀತರಾಗುತ್ತಾರೆ. ಯಾವುದೇ ದೇವತೆಯ ಪೂಜೆಯ ಮೊದಲು ಗಣಪತಿಯ ಸ್ಮರಣೆ ಪೂಜೆ ಮಾಡಲೇಬೇಕು.

ಮೇಲಿನ ಸಾಲುಗಳನ್ನು ಕೆಳಗಿನ ಬ್ಲಾಗ್ ನಿಂದ ಕಾಪಿ ಮಾಡಿದ್ದು
http://phalajyotish.wordpress.com/

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?-------------------------------------------------- ಶಿವನಿಗೆ ಹಾಕುವ ಪ್ರದಕ್ಷಿ...
08/06/2013

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
--------------------------------------------------
ಶಿವನಿಗೆ ಹಾಕುವ ಪ್ರದಕ್ಷಿಣೆಯು ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿರುತ್ತದೆ. ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ (ಸೋಮನ ದಿಕ್ಕಿನ ಕಡೆಗೆ) ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ. ಪ್ರದಕ್ಷಿಣೆಗಳನ್ನು ಹಾಕುವಾಗ ಎಡಬದಿಯಿಂದ ಹರಿನಾಳದವರೆಗೆ ಹೋಗಿ ಅದನ್ನು ದಾಟದೇ ಹಿಂತಿರುಗಿ ಮತ್ತೆ ವಿರುದ್ಧ ದಿಕ್ಕಿನಲ್ಲಿ ಬಲಬದಿಗೆ ಹರಿನಾಳದವರೆಗೆ ಹೋಗಿ ಪ್ರದಕ್ಷಿಣೆಯನ್ನು ಮುಗಿಸಬೇಕು. ಈ ನಿಯಮವು ಶಿವಲಿಂಗವು ಮಾನವಸ್ಥಾಪಿತ ಅಥವಾ ಮಾನವನಿರ್ಮಿತವಾಗಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ನಿಯಮವು ಸ್ವಯಂಭೂ ಲಿಂಗಕ್ಕೆ ಮತ್ತು ಚಲಲಿಂಗಕ್ಕೆ (ಮನೆಯಲ್ಲಿರುವ ಲಿಂಗಕ್ಕೆ) ಅನ್ವಯಿಸುವುದಿಲ್ಲ. ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ದೇವದತ್ತ ಮತ್ತು ಧನಂಜಯ ವಾಯುಗಳು ಕುಗ್ಗುತ್ತವೆ. ಆದರೆ ಅದನ್ನು ದಾಟುವಾಗ ವ್ಯಕ್ತಿಯು ತನ್ನನ್ನು ತಾನು ಬಿಗಿಹಿಡಿದುಕೊಂಡರೆ ನರಗಳು ಬಿಗಿಯಾಗಿ ಅದರ ಪರಿಣಾಮವಾಗುವುದಿಲ್ಲ
-----------------------------------------------------------------------
ಇನ್ನಷ್ಟೂ ಶಿವ ದೇವರ ಬಗ್ಗೆಯ ಮಾಹಿತಿಗಾಗಿ ಕೆಳಗಿನ ಲಿಂಕ್ ಒತ್ತಿರಿ
Original Post from: http://dharmagranth.blogspot.in/2012/12/shiva-pradakshina.html
© Sanatan Sanstha - All Rights Reserved

https://www.facebook.com/dharma.granth

ಸೌರಾಷ್ಟ್ರ ದ  ಪ್ರಭಾಸ್ ಪಟಾನ್ ನಲ್ಲಿರುವ ಸೋಮನಾಥ ಮಂದಿರವು ನಮಗೆ ಅತೀ ಪವಿತ್ರವಾದದ್ದು  ಮತ್ತು ನಮ್ಮ ಪರಂಪರೆಯನ್ನು ಜಗತ್ತಿಗೆ ಸಾರುವಂತದ್ದು ....
05/11/2012

ಸೌರಾಷ್ಟ್ರ ದ ಪ್ರಭಾಸ್ ಪಟಾನ್ ನಲ್ಲಿರುವ ಸೋಮನಾಥ ಮಂದಿರವು ನಮಗೆ ಅತೀ ಪವಿತ್ರವಾದದ್ದು ಮತ್ತು ನಮ್ಮ ಪರಂಪರೆಯನ್ನು ಜಗತ್ತಿಗೆ ಸಾರುವಂತದ್ದು .ಶಿವ ಭಕ್ತರು ಪವಿತ್ರ ತೀರ್ಥಯಾತ್ರೆ ಗೊಳ್ಳಬೇಕಾದ ಹನ್ನೆರೆಡು ಜ್ಯೋತಿರ್ ಲಿಂಗಗಳಲ್ಲಿ ಈ ಸೊಮನಾಥ ಮಂದಿರವು ಪ್ರಪ್ರಥಮವಾಗಿ ಸಂದರ್ಶಿಸುವ ಜ್ಯೋತಿರ್ ಲಿಂಗ .ಶಿವ ಭಕ್ತರ ಅತ್ಯಂತ ಪುಣ್ಯಸ್ಥಳವಾದ ಇದು ಶಿವನ ಪ್ರಧಾನ ಮಂದಿರವೂ ಹೌದು . ಪರದೇಶದ ವೈರಿಗಳ ಆಕ್ರಮಣಕ್ಕೆ ಹದಿನಾರು ಸಲ ತುತ್ತಾದರೂ ,ಮೊದಲಿನಂತೆಯೇ ಪುನರ್ ನಿರ್ಮಾಣಗೊಂಡ,ಗುಜಾರತಿನ ಈ ಸೋಮನಾಥ ಮಂದಿರ ಭಾರತದ ಇತಿಹಾಸದ ,ಸಂಪ್ರದಾಯ ,ಐಶ್ವರ್ಯಗಳನ್ನು ,ಹಿಂದೂ ಸಂಪ್ರದಾಯವನ್ನು ,ಜಗತ್ತಿನ ಮೂಲೇ ಮೂಲೆಗೂ ಹರಿಸಿದಂತಹ ದೇವಳವೂ ಇದಾಗಿದೆ
ಓಂ ನಮ ಶಿವಾಯ

ನುಡಿಗಟ್ಟಿನ ನೆಲೆ -02; 21ಅಕ್ಟೋಬರ್2012==================ಶ್ರೀ ವತ್ಸ  ಜೋಶಿಯವರ  ವಿಶೇಷ ಲೇಖನ https://www.facebook.com/srivathsa.j...
21/10/2012

ನುಡಿಗಟ್ಟಿನ ನೆಲೆ -02; 21ಅಕ್ಟೋಬರ್2012
==================
ಶ್ರೀ ವತ್ಸ ಜೋಶಿಯವರ ವಿಶೇಷ ಲೇಖನ
https://www.facebook.com/srivathsa.joshi
--------------------------------------
"ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಂತೆ" ಅಂತೊಂದು ನುಡಿಗಟ್ಟು. ಒಂದು ಕೆಲಸಕ್ಕೆ ಬೇಕಾಗುವ ಮುಖ್ಯ ಪರಿಕರವನ್ನೇ ಮರೆತುಹೋದ ಸಂದರ್ಭದಲ್ಲಿ ಬಳಕೆ. ಪ್ರಕೃತಿಯ ಸುಂದರ ದೃಶ್ಯಗಳನ್ನು ಸೆರೆಹಿಡಿಯಲು ಹೊರಟ ಫೊಟೊಗ್ರಾಫರ್ ಒಂದುವೇಳೆ ಕ್ಯಾಮೆರಾ ಮರೆತುಹೋದರೆ ಹೇಗೋ ಹಾಗೆ. ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿ hall ticket ಮರೆತುಹೋದರೆ ಹೇಗೋ ಹಾಗೆ.

ಈ ನುಡಿಗಟ್ಟಿನಲ್ಲಿರುವ ‘ಕರಡಿಗೆ’ ಪದವನ್ನು ಗಮನಿಸಬೇಕು. ಇದು ಕರಂಡಕ, ಕರಂಡ, ಕರಡಿ ಮುಂತಾದ ರೂಪಗಳಿರುವ ಪದ, container ಎಂಬ ಅರ್ಥ. ಶಿವಭಕ್ತರು ಪುಟ್ಟ ಕರಂಡಕದಲ್ಲಿ ಶಿವಲಿಂಗ ಇಟ್ಟುಕೊಳ್ಳುತ್ತಾರೆ. ಎಲ್ಲಿ ಬೇಕಾದರೂ ಯಾವ ವೇಳೆಯಲ್ಲಿ ಬೇಕಾದರೂ ಶಿವಪೂಜೆ ಮಾಡಲು ಅನುವಾಗುವಂತೆ. ಶಿವಪೂಜೆ ಮಾಡಬೇಕಾಗಿದೆ, ಆದರೆ ಶಿವಲಿಂಗವಿರುವ ಕರಡಿಗೆಯನ್ನೇ ಮರೆತು ಬಂದಿದ್ದರೆ ಪೂಜೆ ಸಾಧ್ಯವಿಲ್ಲವಲ್ಲ?

ಕಾಲಾನುಕ್ರಮದಲ್ಲಿ ಈ ನುಡಿಗಟ್ಟಿನ ‘ಕರಡಿಗೆ’ ಪದ ‘ಕರಡಿ’ ಎಂದೇ ಬಳಕೆಯಾಗಿ ಈಗ ಈ ನುಡಿಗಟ್ಟು ‘ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ’ ಎಂಬ ರೂಪದಲ್ಲಿ ಅರ್ಥ ಮತ್ತು ಸಂದರ್ಭವನ್ನು ಪಡೆದು ಜನಪ್ರಿಯವಾಗಿದೆ. ಅನಪೇಕ್ಷಿತ ಸಂಗತಿ ಮುಜುಗರ ತರುವಂಥದು ಏನಾದರೂ ನಡೆದರೆ ‘ಶಿವಪೂಜೆಯಲ್ಲಿ ಕರಡಿ...’ ಎನ್ನುವಂತಾಗಿದೆ.

ಭಾಷೆಯ ಬಳಕೆ, ಅದಕ್ಕೆ ಬಳುಕನ್ನೂ ಕೊಡುತ್ತದೆ ಎನ್ನುವುದಕ್ಕೆ ಈ ನುಡಿಗಟ್ಟಿನ ಮಾರ್ಪಾಡು ಒಂದು ಒಳ್ಳೆಯ ಉದಾಹರಣೆ!

* * * * * * * * * * ** * * * * * ** * * ** * * * ** * * *
[’ನುಡಿಗಟ್ಟಿನ ನೆಲೆ’ ಹೊಸ ಸರಣಿ, Facebookಗೋಸ್ಕರ ಆರಂಭಿಸಿದ್ದು. ವಾರಕ್ಕೊಂದು ನುಡಿಗಟ್ಟಿನ quick-and-brisk ವಿಶ್ಲೇಷಣೆ. ಉಪದೇಶ ಅಲ್ಲ. ಅರಿವಿನ ವಿಸ್ತರಣೆ. ಆಸಕ್ತಿಯುಳ್ಳವರು can stay tuned. - ಶ್ರೀವತ್ಸ ಜೋಶಿ.]

ಇಂದು ನವರಾತ್ರಿಯ ಮೊದಲನೇ ದಿನ . ಶರನ್ನವರಾತ್ರಿ, ದಸರಾ, ದುರ್ಗಾಪೂಜೆ ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಒಂಭತ್ತು ದಿನಗಳ ಹಬ್ಬ, ದೇ...
16/10/2012

ಇಂದು ನವರಾತ್ರಿಯ ಮೊದಲನೇ ದಿನ . ಶರನ್ನವರಾತ್ರಿ, ದಸರಾ, ದುರ್ಗಾಪೂಜೆ ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಒಂಭತ್ತು ದಿನಗಳ ಹಬ್ಬ, ದೇವಿಯ ಆರಾಧನೆಗೆಂದೇ ಮೀಸಲಾಗಿದೆ.
ಮಾತೆ ದೇವಿಯನ್ನು ನವ ರೂಪದಲ್ಲಿ ಒಂದೊಂದು ದಿನ ಒಂದೊಂದು ವಿಧದಲ್ಲಿ, ಪೂಜಿಸಲ್ಪಡುವುದೇ ಈ ಹಬ್ಬದ ವೈಶಿಷ್ಟ್ಯ... ದೇವಿ ಪಾರ್ವತಿ ಅಥವಾ ದುರ್ಗಾ ಅತ್ಯಂತ ಲೋಕಪ್ರಿಯಳು ಮತ್ತು ಶಕ್ತಿದೇವತೆ ಕೂಡ. ದೇವಿಯ ಶಕ್ತಿಯನ್ನೂ, ಸೌಂದರ್ಯವನ್ನೂ ವರ್ಣಿಸಲು, ಅವಳಿಗಾಗಿಯೇ ರಚಿಸಲ್ಪಟ್ಟಿರುವುದು "ದೇವಿ ಭಾಗವತಮ್".
ಇದಲ್ಲದೆ ದೇವಿಯನ್ನು ವರ್ಣಿಸುವ ಅನೇಕ ಸಣ್ಣ ಸಣ್ಣ ಕೃತಿಗಳು... ’ದೇವಿ ಮಹಾತ್ಮೆ’, ’ದುರ್ಗಾ ಸಪ್ತಶತೀ’ಮತ್ತು ಇನ್ನೂ ಹಲವು.ದೇವಿ ಮಹಾತ್ಮೆ ಎಂಬುದು ನಮ್ಮ ಪುರಾಣಗಳಲ್ಲಿ ಪ್ರಸಿದ್ಧವಾದ ’ಮಾರ್ಕಾಂಡೇಯ ಪುರಾಣ’ದ ಭಾಗವಾಗಿದೆ. ಇದು ಎಷ್ಟೊಂದು ಜನಪ್ರಿಯ ಹಾಗೂ ಪೂಜನೀಯವೆನಿಸಿದೆಯೆಂದರೆ, ಇದರ ಒಂದೊಂದು ಶ್ಲೋಕವೂ ’ಮಂತ್ರ’ವೆಂದೂ, ಇದರ ಪಾರಾಯಣೆ, ಜಪ ಮಾಡುವುದರಿಂದ, ನಮ್ಮ ಅಭೀಷ್ಟಗಳೆಲ್ಲಾ ನೆರವೇರುವುದೆಂದೂ ನಂಬಿಕೆಯಿದೆ.

ದುರ್ಗಾ ಎಂದರೆ ಹತ್ತಿರ ಸುಳಿಯಲೂ, ಅರ್ಥ ಮಾಡಿಕೊಳ್ಳಲೂ ಕಷ್ಟಸಾಧ್ಯಳು ಎಂದು ಅರ್ಥ. ಎಲ್ಲಾ ದೇವತೆಗಳ ಶಕ್ತಿಯನ್ನೂ ಪಡೆದ ನಾರೀರೂಪಳಾದ ದೇವಿ, ಲೋಕಮಾತೆ, ಭಕ್ತರ ಪರಮ ಭಕ್ತಿಗೆ ಕರಗುವವಳು, ಆರಾಧನೆಗೆ ಒಲಿಯುವವಳು, ಮಾತೃಸ್ವರೂಪಳು ಎಂದೇ ಅರ್ಥ. ದೇವಿಯೇ ಪರಮ ಶಕ್ತಿ, ಜಗತ್ತಿನ ಸೃಷ್ಟಿ ಮತ್ತು ಸ್ಥಿತಿಗೆ ಕಾರಣಳು, ಜ್ಞಾನದ ಸಂಕೇತಳು, ಮೋಹಕಳೂ, ಸೌಂದರ್ಯಸ್ವರೂಪಳು, ರೌದ್ರಳೂ, ಕೋಮಲೆಯೂ, ಭೀಕರಳೂ, ಮೃದು ಮನದವಳೂ ಎಂದು, ಒಟ್ಟಾರೆ ಸಕಲವೂ ಅವಳೇ ಎಂದು ಬಿಂಬಿಸುವ ಅನೇಕ ದೃಷ್ಟಾಂತಗಳನ್ನು ನಾವು ಪುರಾಣಗಳಲ್ಲಿ ಓದಬಹುದು.


ನಂಬಿದ ಭಕ್ತರಿಗೆಲ್ಲಾ ಜಗನ್ಮಾತೆಯೇ ಸಕಲ ಐಶ್ವರ್ಯ ಕೊಡುವವಳೂ, ಸುಖ ಸಮಾಧಾನಗಳನ್ನು ಕೊಡುವವಳೂ ಎಂದು ವರ್ಣಿಸುತ್ತಾ, ವಿಶೇಷವಾಗಿ ಈ ಒಂಭತ್ತು ದಿನಗಳಲ್ಲಿ, ನಾವು ದೇವಿಯನ್ನು ಆರಾಧಿಸುತ್ತೇವೆ.
ಮೊದಲನೆಯ ದಿನ ಶೈಲಪುತ್ರಿಯ ರೂಪದಲ್ಲಿ....

" ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ |"

ಪರ್ವತ ರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿ ಶೈಲಪುತ್ರೀ ಎಂದು ಕರೆಯಲ್ಪಡುತ್ತಾಳೆ. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಇವೆ. ಇವಳನ್ನು ಪಾರ್ವತೀ, ಹೈಮವತೀ ಎಂದೂ ಕರೆಯುತ್ತಾರೆ. ಈ ಮೊದಲನೆಯ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ’ಮೂಲಾಧಾರ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರ ಯೋಗ ಸಾಧನೆಯು ಪ್ರಾರಂಭವಾಗುತ್ತದೆ..

ಶೈಲಪುತ್ರಿಯನ್ನು ನಾವು.... ಶ್ಯಾಮಾಶಾಸ್ತ್ರಿಗಳ ಕಲ್ಯಾಣಿ ರಾಗದ ರಚನೆ ಹಿಮಾದ್ರಿ ಸುತೆ ಪಾಹಿಮಾಂ.. ಮತ್ತು ಸರೋಜದಳನೇತ್ರಿ ಹಿಮಗಿರಿ ಪುತ್ರೀ......ಎಂದೂ ಆರಾಧಿಸಬಹುದು. ಶ್ರೀ ಸ್ವಾತಿ ತಿರುನಾಳ್ ಮಹರಾಜರು ಸಹ ದೇವಿಯನ್ನು ಒಂಭತ್ತು ಅತ್ಯಮೂಲ್ಯ ಕೃತಿಗಳಿಂದ ವರ್ಣಿಸಿ ಹಾಡಿದ್ದಾರೆ. ಈ ಕೃತಿ ಗುಚ್ಛವನ್ನು ನವರಾತ್ರಿ ಕೃತಿಗಳು ಎಂದು ಕರೆಯಲ್ಪಡುತ್ತದೆ. ಮೊದಲನೆಯ ದಿನದ ಕೃತಿ, ಶಂಕರಾಭರಣ ರಾಗದಲ್ಲಿ ದೇವಿ ಜಗಜ್ಜನನೀ....

ಎರಡನೆಯ ದಿನ ಬ್ರಹ್ಮಚಾರಿಣೀ ರೂಪದಲ್ಲಿ........

"ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ |"

ಇಲ್ಲಿ ’ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದು. ಬ್ರಹ್ಮ ಚಾರಿಣಿ ಅರ್ಥಾತ್ ತಪಸ್ಸನ್ನು ಆಚರಿಸುವವಳು. ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲು ಇರುತ್ತದೆ. ಇವಳನ್ನು ’ಅಪರ್ಣಾ’ ’ಉಮಾ’ ಎಂದೂ ಕರೆಯುತ್ತಾರೆ. ಇವಳ ಆರಾಧನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಸಿದ್ಧಿಸುತ್ತದೆ. ಈ ಎರಡನೆಯ ದಿನ ಸಾಧಕರು ಮನಸ್ಸನ್ನು ’ಸ್ವಾಧಿಷ್ಠಾನ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.

ಬ್ರಹ್ಮಚಾರಿಣಿ, ಅಪರ್ಣಾ, ಉಮಾಳನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿಮಾಂ ಶ್ರೀ ವಾಗೀಶ್ವರಿ ಎಂದು ಕಲ್ಯಾಣಿ ರಾಗದಲ್ಲಿ ಸ್ತುತಿಸುತ್ತಾರೆ.

ಮೂರನೆಯ ದಿನ ಚಂದ್ರಘಂಟಾ ರೂಪದಲ್ಲಿ ........

"ಪಿಂಡಜಪ್ರವರಾರೂಢಾ ಚಂಡಕೊಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ" |

ಮೂರನೆಯ ದಿನವಾದ ಇಂದು ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾದ ದೇವಿ ಚಂದ್ರಘಂಟಾ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ದೇವಿಯ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನಾದ್ದರಿಂದ ಇವಳನ್ನು ಚಂದ್ರಘಂಟಾದೇವಿಯೆಂದು ಹೇಳಲಾಗುತ್ತದೆ. ಶರೀರವು ಚಿನ್ನದಂತೆ ಹೊಳೆಯುತ್ತಿದ್ದು, ಹತ್ತು ಕೈಗಳಲ್ಲಿ ಖಡ್ಗ ಹಾಗೂ ವಿವಿಧ ಆಯುಧಗಳಿವೆ. ಘಂಟೆಯಂತೆ ಭಯಾನಕ ಚಂಡಿ ಧ್ವನಿ ಹೊಂದಿದವಳು. ಈ ದಿನ ಸಾಧಕನ ಮನಸ್ಸು ’ಮಣಿಪೂರ’ ಚಕ್ರ ಪ್ರವೇಶ ಮಾಡುತ್ತದೆ.

ಚಂದ್ರಘಂಟಾದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು, ಮೂರನೆಯ ದಿನ ದೇವಿ ಪಾವನೆ... ಎಂದು ಸಾವೇರಿ ರಾಗದಲ್ಲಿ ಸ್ತುತಿಸುತ್ತಾರೆ.

ನಾಲ್ಕನೆಯ ದಿನ ಕೂಷ್ಮಾಂಡಾ ರೂಪದಲ್ಲಿ ........

"ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ " |

ದೇವಿ ತನ್ನ ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವಿ ಎಂದು ಕರೆಯುತ್ತಾರೆ. ದೇವಿಯು ತನ್ನ ’ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ರಚಿಸಿದ್ದಳು, ಅದಕ್ಕಿಂತ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ. ಇವಳಿಗೆ ಎಂಟು ಭುಜಗಳಿದ್ದು, ಅಷ್ಟಭುಜಾದೇವಿ ಎಂದು ಖ್ಯಾತಳು. ಸಿಂಹವಾಹಿನಿಯಾಗಿ, ಏಳು ಕೈಗಳಲ್ಲಿ ಕ್ರಮಶ: ಕಮಂಡಲ, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಹಿಡಿದಿದ್ದಾಳೆ. ಈ ದಿನ ಸಾಧಕನ ಮನಸ್ಸು ’ಅನಾಹತ’ ಚಕ್ರದಲ್ಲಿ ನೆಲೆಸುತ್ತದೆ.

ಕೂಷ್ಮಾಂಡಾದೇವಿಯನ್ನು, ಶ್ರೀ ಸ್ವಾತಿ ತಿರುನಾಳ್ ಮಹಾರಾಜರು, ನಾಲ್ಕನೆಯ ದಿನ ಭಾರತೀ ಮಾಮವ ಎಂದು ತೋಡಿ ರಾಗದಲ್ಲಿ ಸ್ತುತಿಸುತ್ತಾರೆ.

ಐದನೆಯ ದಿನ ಸ್ಕಂದಮಾತಾ ರೂಪದಲ್ಲಿ.......

"ಸಿಂಹಾಸನಗತಾ ನಿತ್ಯಂ ಪದ್ಮಾಶಿತಕರದ್ವಯಮ್ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಶಯಸ್ವಿನೀ "|

ಸ್ಕಂದ, ಕುಮಾರ ಕಾರ್ತಿಕೇಯನ ತಾಯಿಯಾದ್ದರಿಂದ ದೇವಿಯನ್ನು ಸ್ಕಂದ ಮಾತಾ ಎಂದು ಕರೆಯುತ್ತಾರೆ. ಈ ದಿನ ಸಾಧಕನ ಮನಸ್ಸು ’ವಿಶುದ್ಧ’ ಚಕ್ರದಲ್ಲಿ ನೆಲೆಸುತ್ತದೆ. ದೇವಿಯ ತೊಡೆಯಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಕುಳಿತಿರುತ್ತಾನೆ. ದೇವಿಯ ಎರಡು ಕೈಗಳಲ್ಲಿ ಕಮಲದ ಹೂವಿದ್ದು, ಶರೀರವು ಬಿಳಿಯ ಬಣ್ಣದ್ದಾಗಿದ್ದು, ಕಮಲದ ಮೇಲೇ ಆಸೀನಳಾಗಿರುತ್ತಾಳೆ.

ಸ್ಕಂದಮಾತಾ ರೂಪದ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಐದನೆಯ ದಿನ ಜನನೀ ಮಾಮವ ಎಂದು ಭೈರವಿ ರಾಗದಲ್ಲಿ ಸ್ತುತಿಸುತ್ತಾರೆ.

ಆರನೆಯ ದಿನ ಕಾತ್ಯಾಯಿನಿ ರೂಪದಲ್ಲಿ.......

"ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯಿನೀ ಶುಭಂ ದದ್ಯಾದ್ದೇವೀ ದಾನವಘಾತಿನೀ "|

ದಾನವ ಮಹಿಷಾಸುರನ ಅತ್ಯಾಚಾರವು ಮಿತಿಮೀರಿದಾಗ, ಬ್ರಹ್ಮಾ - ವಿಷ್ಣು - ಮಹೇಶ್ವರರು ಮತ್ತು ಎಲ್ಲಾ ದೇವತೆಗಳೂ ತಮ್ಮ ತಮ್ಮ ತೇಜದ ಅಂಶವನ್ನಿತ್ತು ಓರ್ವ ದೇವಿಯನ್ನು ಉತ್ಪನ್ನ ಮಾಡಿದರು. ಮಹರ್ಷಿ ಕಾತ್ಯಾಯನರು ಮೊಟ್ಟ ಮೊದಲು ಇವಳ ಪೂಜೆ ಮಾಡಿದ ಕಾರಣದಿಂದ, ಇವಳು ಕಾತ್ಯಾಯನೀ ಎಂದು ಕರೆಯಲ್ಪಟ್ಟಳು. ಭವ್ಯ ಹಾಗೂ ದಿವ್ಯ ಸ್ವರೂಪಳಾದ ಇವಳು ಬಂಗಾರದ ಬಣ್ಣದವಳೂ, ನಾಲ್ಕು ಭುಜದವಳೂ ಆಗಿದ್ದಾಳೆ. ಒಂದು ಕೈಯಲ್ಲಿ ಕಮಲ, ಇನ್ನೊಂದರಲ್ಲಿ ಖಡ್ಗ ಹಿಡಿದಿದ್ದಾಳೆ. ಈ ಆರನೆಯ ದಿನ ಸಾಧಕನು ಮನಸ್ಸನ್ನು ’ಆಜ್ಞಾ’ ಚಕ್ರದಲ್ಲಿ ನೆಲೆಸುತ್ತಾನೆ. ಇವಳು ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್ | ಪಾತು ನ: ಸರ್ವಭೀತಿಭ್ಯ: ಕಾತ್ಯಾಯನಿ ನಮೋಸ್ತುತೇ... ಎಂದು ಕೂಡ ಸ್ತುತಿಸಲ್ಪಡುತ್ತಾಳೆ.

ಕಾತ್ಯಾಯನೀ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಆರನೆಯ ದಿನ ಸರೋರುಹಾಸನ ಜಾಯೇ...ಎಂದು ಪಂತುವರಾಳಿ ರಾಗದಲ್ಲಿ ಸ್ತುತಿಸುತ್ತಾರೆ.

ಏಳನೆಯ ದಿನ ಕಾಲರಾತ್ರಿ ರೂಪದಲ್ಲಿ.......

"ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ರೈಲಾಬ್ಯಕ್ರಶರೀರಿಣೀ ||
ವಾಮಪಾದೋಲ್ಲಸಲ್ಲೋಹಲ್ತಾಕಂಟಕಭೂಷಣಾ |
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ" ||

ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವಳ ಶರೀರವು ದಟ್ಟ ಕಪ್ಪು, ಬಿಚ್ಚಿ ಹರಡಿದ ತಲೆ ಕೂದಲು, ಕತ್ತಲಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ, ಮೂರು ಕಣ್ಣುಗಳಿವೆ. ಇವಳ ಉಚ್ಛಾಸ-ನಿ:ಚ್ಛಾಸದಿಂದ ಅಗ್ನಿಯ ಭಯಂಕರ ಜ್ವಾಲೆಗಳು ಹೊರಡುತ್ತವೆ ಮತ್ತು ಇವಳ ವಾಹನ ಕತ್ತೆಯಾಗಿದೆ. ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಇವಳು ನೋಡಲು ಭಯಂಕರವಾದರೂ, ಯಾವಾಗಲೂ ಶುಭ ಫಲವನ್ನೇ ಕೊಡುವವಳಾದ್ದರಿಂದ ಶುಭಂಕರೀ ಎಂದೂ ಕರೆಯಲ್ಪಡುತ್ತಾಳೆ. ಈ ದಿನ ಸಾಧಕನ ಮನಸ್ಸು ’ಸಹಸ್ರಾರ’ ಚಕ್ರದಲ್ಲಿ ಲೀನವಾಗುತ್ತದೆ. ಇವಳನ್ನು ಕಾಲರಾತ್ರಿರ್ಮಹಾರಾತ್ರಿರ್ಮೋಹರಾತ್ರಿಶ್ಚ ದಾರುಣಾ | ತ್ವಂ ಶ್ರೀಸ್ತ್ವಮೀಶ್ವರೀ ತ್ವಂ ಹ್ರೀಸ್ತ್ವಂ ಬುದ್ದಿರ್ಬೋಧಲಕ್ಷಣಾ || ಎಂದೂ ಸ್ತುತಿಸಬಹುದು.

ಜಗನ್ಮಾತೆಯನ್ನು ಏಳನೆಯ ದಿನ ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಜನನೀ ಪಾಹಿ ಸದಾ... ಎಂದು ಶುದ್ಧಸಾವೇರಿ ರಾಗದಲ್ಲಿ ಸ್ತುತಿಸುತ್ತಾರೆ.

ಎಂಟನೆಯ ದಿನ ಮಹಾಗೌರೀ ರೂಪದಲ್ಲಿ......

"ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿ: |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ" ||

ದೇವಿಯು ಎಂಟನೆಯ ದಿನ ಮಹಾಗೌರಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಇವಳ ವಯಸ್ಸು ಕೇವಲ ೮ ವರ್ಷಗಳೆಂದೂ, ಶಂಖ-ಚಂದ್ರ-ಕುಂದ ಪುಷ್ಪದಷ್ಟು ಬೆಳ್ಳಗಿರುವಳೆಂದೂ ಹೇಳಲಾಗಿದೆ. ಇವಳು "ಅಷ್ಟವರ್ಷಾ ಭವೇದ್ ಗೌರೀ - ಎಂದರೆ ಎಲ್ಲ ವಸ್ತ್ರ ಹಾಗೂ ಆಭರಣಗಳು ಬೆಳ್ಳಗಿವೆ. ಇವಳು ಅತ್ಯಂತ ಶಾಂತ ಮುದ್ರೆಯವಳು. ಇವಳು ಶಿವನನ್ನು ವರಿಸುವುದಕ್ಕಾಗಿ ಕಠೋರ ತಪಸ್ಸು ಮಾಡಿದ ಕಾರಣ ಶರೀರವು ಪೂರ್ಣವಾಗಿ ಕಪ್ಪಾಗಿತ್ತು ಮತ್ತು ಸಂತುಷ್ಟನಾದ ಶಿವನು ಪವಿತ್ರ ಗಂಗೆಯ ಜಲದಿಂದ ತೊಳೆದಾಗ, ವಿದ್ಯುತ್ತಿನಂತೆ ಅತ್ಯಂತ ಪ್ರಕಾಶಮಾನವಾಗಿ ಬೆಳ್ಳಗಾಯಿತು ಮತ್ತು ಆಗಿನಿಂದ ಇವಳು ಗೌರಿ ಎಂದು ಕರೆಯಲ್ಪಟ್ಟಳು. ದೇವಿಯನ್ನು ನಾವು ಸರ್ವಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ...|| ಎಂದೂ ಸ್ತುತಿಸುತ್ತೇವೆ.

ಎಂಟನೆಯ ದಿನವಾದ ಈ ದಿನ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿ ಜನನೀ...ಎಂದು ನಾಟಕುರಂಜಿ ರಾಗದಲ್ಲಿ ಸ್ತುತಿಸುತ್ತಾರೆ.

ಒಂಭತ್ತನೆಯ ದಿನ ಸಿದ್ಧಿದಾತ್ರಿ ರೂಪದಲ್ಲಿ.......

"ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ" ||

ಜಗನ್ಮಾತೆ ದುರ್ಗಾದೇವಿಯ ಒಂಭತ್ತನೇ ಶಕ್ತಿಯ ಹೆಸರು ಸಿದ್ಧಿದಾತ್ರಿ. ಇವಳು ಎಲ್ಲಾ ಪ್ರಕಾರದ ಸಿದ್ಧಿಗಳನ್ನೂ ಅನುಗ್ರಹಿಸುವವಳು. ಬ್ರಹ್ಮವೈವರ್ತಪುರಾಣದ ಶ್ರೀ ಕೃಷ್ಣಜನ್ಮಖಂಡದಲ್ಲಿ ಬರುವ ೧೮ ಸಿದ್ಧಿಗಳಾದ : ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶಿತ್ವ-ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರ ಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ಧಿ... ಎಲ್ಲವನ್ನೂ ಕೊಡುವವಳು. ಇವಳ ಕೈಗಳಲ್ಲಿ ಚಕ್ರ, ಗದೆ, ಶಂಖ ಮತ್ತು ಕಮಲ ಪುಷ್ಪಗಳಿವೆ. ನಾಲ್ಕು ಭುಜಗಳನ್ನು ಹೊಂದಿದವಳಾಗಿದ್ದಾಳೆ. ಇವಳನ್ನು ಆರಾಧಿಸುವುದರಿಂದ ಸಾಧಕರಿಗೆ ಎಲ್ಲಾ ಸಿದ್ಧಿಗಳೂ ಲಭಿಸುತ್ತವೆ.

ಒಂಭತ್ತನೇ ದಿನದ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿ ಪರ್ವತ ನಂದಿನಿ... ಎಂದು ಆರಭಿ ರಾಗದಲ್ಲಿ ಸ್ತುತಿಸುತ್ತಾರೆ.

ನವದುರ್ಗೆಯರಲ್ಲಿ ಸಿದ್ಧಿದಾತ್ರೀ ಕೊನೆಯವಳಾಗಿದ್ದಾಳೆ. ಎಂಟು ದಿನಗಳು ಬೇರೆ ಬೇರೆ ರೂಪದಲ್ಲಿ ದೇವಿಯನ್ನು ಆರಾಧಿಸಿದ ಭಕ್ತರು ಒಂಭತ್ತನೆಯ ದಿನ ಸಿದ್ಧಿದಾತ್ರಿಯನ್ನು ಭಕ್ತಿಯಿಂದ ಆರಾಧಿಸಿ, ಮೋಕ್ಷವನ್ನು ಪಡೆಯುತ್ತಾರೆ.
ಕೃಪೆ:http://antharangadamaathugalu.blogspot.com/2009/09/http4.html
ವಿವರಣೆ ಆಧಾರ : "ನವದುರ್ಗಾ", ಗೀತಾ ಪ್ರೆಸ್, ಗೋರಖಪುರ
ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು.

ಭಕ್ತಾಧಿಗಳಿಗೆ ನಾಗರ ಪಂಚಮಿಯ ಶುಭಾಶಯಗಳು ,ನಾಗ ದೇವರು ಸರ್ವರಿಗೂ ಒಳ್ಳೆಯದನ್ನುಂಟು ಮಾಡಲಿ --------------------------------------------...
22/07/2012

ಭಕ್ತಾಧಿಗಳಿಗೆ ನಾಗರ ಪಂಚಮಿಯ ಶುಭಾಶಯಗಳು ,ನಾಗ ದೇವರು ಸರ್ವರಿಗೂ ಒಳ್ಳೆಯದನ್ನುಂಟು ಮಾಡಲಿ
----------------------------------------------
ನಾಗರ ಪಂಚಮಿ . ಶ್ರಾವಣದ ಹಬ್ಬಗಳ ಸಾಲಿಗೆ ಮುನ್ನುಡಿ. ಸಾಲು ಹಬ್ಬಗಳ ಪೈಕಿ ಮೊದಲನೆಯದು ನಾಗಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ ಅಥವಾ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ.

ನಾಗರ ಪಂಚಮಿ ಎರಡು ಆಚರಣೆಗಳಲ್ಲಿ ಒಂದು ನಾಗರಪೂಜೆ ಇನ್ನೊಂದು ಸಹೋದರ ಸಹೋದರಿಯರ ಭಾವ ಸಂಬಂಧಗಳು ಮುಖ್ಯವಾದವು. ಸಹೋದರಿಯರು ಸಹೋದರರ ಬೆನ್ನಿಗೆ ಹಾಲು, ನೀರು ಎರೆಯುವ ಮೂಲಕ ತವರು ತಂಪಾಗಿರಲಿ ಎಂದು ಹಾರೈಸಿದರೆ, ಸಹೋದರರು ಪ್ರೀತಿಯ ಅಕ್ಕ ತಂಗಿಯರಿಗೆ ಉಡುಗೊರೆ ಕೊಟ್ಟು ಸಂಭ್ರಮಿಸುತ್ತಾರೆ.

ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನ ಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ.

ನಾಗಾರಾಧನೆಗೆ ಪ್ರಸಿದ್ಧಿ ಪಡೆದ ಕರಾವಳಿಯಲ್ಲಿ ನಾಗರ ಪಂಚಮಿ ಆಚರಣೆ ಬಹಳ ವಿಶಿಷ್ಟ. ಇಲ್ಲಿ ಬೆಳಗ್ಗಿನಿಂದಲೇ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಹಾವಿನ ಹುತ್ತ ಹಾಗೂ ನಾಗರ ಕಲ್ಲುಗಳಿಗೆ ಹಾಲು ಮತ್ತು ನೀರಿನ ತನಿ ಎರೆಯುತ್ತಾರೆ. ಜತೆಗೆ ತಂಬಿಲ ನೈವೇದ್ಯ ಮಾಡುತ್ತಾರೆ. ಇದೇ ದಿನ ಆಶ್ಲೇಷಾ ಬಲಿ, ನಾಗ ಮಂಡಲ ಮುಂತಾದ ನಾಗ ಸಂಬಂಧೀ ಪೂಜೆಗಳನ್ನು ಮಾಡಲಾಗುತ್ತದೆ.

ನಾಗರಪಂಚಮಿಯಂದು ವಿಷ್ಣುವಿನ ವಾಹನ ಶೇಷನಾಗನಿಗೆ ಸಲ್ಲಿಸುವ ಪೂಜೆ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂಬ ನಂಬಿಕೆಯ ಮೂಲ ಈ ಹಬ್ಬ. ಈ ಸಲುವಾಗಿ ವಾಸುಕಿ, ತಕ್ಷಕ, ಕಾಲಿಯಾ, ಮಣಿಭದ್ರ, ಐರಾವತ, ದೃತರಾಷ್ಟ್ರ, ಕಾರ್ಕೋಟಕ, ಧನಂಜಯ ಮುಂತಾದ ಹಾವುಗಳನ್ನು ಸ್ಮರಿಸಿಕೊಂಡು ಹಾವುಗಳ ವಿಗ್ರಹಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸುವುದು ರೂಢಿ.

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ಹಿಂದೂಗಳಾದ ನಮ್ಮ ದೃಢ ನಂಬಿಕೆ.


ಕೃಪೆ :ನಮ್ಮ ಬೆದ್ರ

ಕರುಣೆಯ ಹರಸುವ ಕಲ್ಕುಡ-ಕಲ್ಲುರ್ಟಿಯ ಚರಿತ್ರೆ          ಕಲಿಯುಗಲ್ಲಿ ಧರ್ಮವು ಹೀನರಿಂದ ನಾಶವಾಗುತ್ತಾ, ಅಧರ್ಮವು ತಾಂಡವಾಡುತ್ತಾ, ಕೊಲೆ-ಸುಲಿಗೆ...
11/06/2012

ಕರುಣೆಯ ಹರಸುವ ಕಲ್ಕುಡ-ಕಲ್ಲುರ್ಟಿಯ ಚರಿತ್ರೆ

ಕಲಿಯುಗಲ್ಲಿ ಧರ್ಮವು ಹೀನರಿಂದ ನಾಶವಾಗುತ್ತಾ, ಅಧರ್ಮವು ತಾಂಡವಾಡುತ್ತಾ, ಕೊಲೆ-ಸುಲಿಗೆ, ಮೋಸ-ವಂಚನೆ ನಡೆಯುತ್ತಾ ಇರುವುದು ಕಲಿಯುಗದ ಸೂಚನೆಯೂ ಮತ್ತು ಮಾನವನ ಅತೀ ಅವಿವೇಕದ ಪರಮಾವಧಿಯೂ ಕೂಡಾ ಆಗಿದೆ. ಅಂತೆಯೇ ಈ ಅಧರ್ಮ –ಅಸತ್ಯ-ಮೋಸ ವಂಚನೆಗಳನ್ನು ಮಟ್ಟ ಹಾಕಲು ದೇವರು ಹಲವಾರು ರೂಪಗಳನ್ನು ತಾಳಿಬಂದು ಕಂಟಕರನ್ನು ವಧಿಸಿ ಲೋಕಕಲ್ಯಾಣಗೈದಿರುವ ಹಲವಾರು ಪುರಾಣ ಪುಣ್ಯ ಕಥೆಗಳು ನಮಗೆ ಕಾಣಸಿಗುತ್ತದೆ. ಈ ರೀತಿಯಲ್ಲೆ ಲೋಕೋದ್ದಾರಕ್ಕಾಗಿ ಮತ್ತು ಧರ್ಮ-ಸತ್ಯ ಸ್ಥಾಪನೆಗಾಗಿ ಹಲವಾರು ದೈವಗಳು ಕೂಡಾ ದೇವರ ಮೂಲಕ ಹುಟ್ಟಿ ಬಂದಿದ್ದಾರೆ. ಹೀಗೆ ಸತ್ಯ-ಧರ್ಮ –ನ್ಯಾಯ – ನೀತಿಯ ಮೌಲ್ಯಗಳನ್ನು ಸ್ಥಾಪಿಸಿ ಧರ್ಮ ಸ್ಥಾಪನೆಗಾಗಿ ಭೂಮಂಡಲದಲ್ಲಿ ದೈವಿಶಕ್ತಿಯಿಂದಾಗಿ ಭೂಷಿತರಾಗಿ ಭುವಿಯ ಒಡಲಲ್ಲಿ ಜನಿಸಿ ಇಂದು ಮಹಾನ್ ಕಾರಣೀಕ ದೈವವಾಗಿ ಈ ತುಳುನಾಡ ಸೀಮೆಯುದ್ದಕ್ಕೂ ತಮ್ಮ ಕಾರಣೀಕತೆಯನ್ನೂ ತೋರಿಸುತ್ತಿರುವಂತಹ ಕಲಿಯುಗದ ಕಾರಣೀಕ ಶಕ್ತಿಯೇ “ಶ್ರೀ ವೀರ ಕಲ್ಲುಕುಟಿಕ(Kallukuttiga) ಮತ್ತು ಕಲ್ಲುರ್ಟಿ(Kallurti)” ಎಂಬ ಅಣ್ಣ-ತಂಗಿಯರು.

ಈ ಅಣ್ಣ-ತಂಗಿಯರ ಕಾರಣೀಕವನ್ನು ನಮ್ಮೀ ತುಳುವನಾಡಿನುದ್ದಕ್ಕೂ ಅರಿಯದವರಿಲ್ಲ. ಈ ಅದ್ಭುತ ಕಾರಣೀಕ ಶಕ್ತಿಗಳಾಗಿ ನಮ್ಮ ಕಾಯ್ವ “ಶ್ರೀ ಕಲ್ಕುಡ(kalkuda) ಮತ್ತು ಕಲ್ಲುರ್ಟಿ(Kallurti)” ದೈವದ ಮಹಿಮೆಯು ಅಪಾರ, ಅನನ್ಯ, ಅನಂತವಾದುದು. ಈ ಸೋದರ-ಸೋದರೀಯರು ಹೇಗೆ ದೈವಗಳಾದರು? ಹೇಗೆ ಈ ಭೂಮಂಡಲದಲ್ಲಿ ಅಷ್ಟೋಂದು ಶಕ್ತಿಯನ್ನು ಪಡೆದರು? ಹೇಗೆ ಕಾರಣೀಕವಾದರು? ಅವರ ಹುಟ್ಟು, ಹಿನ್ನಲೆ, ಚರಿತ್ರೆ ಇವೆಲ್ಲವೂ ಹೇಗೆ? ಎಂದು ಅರಸುತ್ತಾ ಸಾಗಿದಾಗ ‘ಅಂತರಲೋಕದ ಅಂತರಜಾಲ’ದಲ್ಲಿ ಈ ಬಗ್ಗೆ ಕೆದಕಿದಾಗ ಸಿಕ್ಕ ಹಲವಾರು ಮಾಹಿತಿಯನ್ನು ಕಲೆಹಾಕಿ ಬಸಿದು ಸರ್ವರಿಗೂ ಈ ಕಾರಣೀಕದ ‘ಕಲ್ಕುಡ-ಕಲ್ಲುರ್ಟಿ’ಯ ಮಹಿಮೆಯು ತಿಳಿಯಬೇಕೆಂಬ ಮನೋವಾಂಛೆಯಿಂದ ಈ ದೈವರೂಪಿ ಶಕ್ತಿಯ ಬಗ್ಗೆ ‘ನಮ್ಮ-ನಾಡು’ ಬ್ಲಾಗ್ ನಲ್ಲಿ ಪ್ರಕಟಿಸುತ್ತಾ ಇದ್ದೇನೆ.

‘ಕಲ್ಕುಡ-ಕಲ್ಲುರ್ಟಿ’ ಎಂಬ ಕಾರಣಿಕ ಅಣ್ಣ-ತಂಗಿ ಭೂಮಿಯಲ್ಲಿ ಅವತರಿಸುವ ಮುನ್ನ ದೇವಲೋಕದಲ್ಲಿ ಇದ್ದಂತ ದೇವತಾ ಮನುಷ್ಯರು. ಇವರು ದೇವಲೋಕದಲ್ಲಿ ಮಾಡಿದ ಒಂದು ಪ್ರಮಾದವೆ ಇಂದು ಈ ಭೂಲೋಕದಲ್ಲಿ ದೈವಿಶಕ್ತಿಗಳಾಗಿ ನೆಲೆಯಾಗಲು ಕಾರಣವಾಯ್ತು.
ಒಮ್ಮೆ ದೇವಲೋಕದ ದೇವತೆಗಳ ಸಭೆಯಲ್ಲಿ ದೇವಗುರು ಬ್ರಹಸ್ಪತಿಯು ಕೆಲವು ಕಾರಣಗಳಿಂದ ಸಭೆಗೆ ಗೈರು ಹಾಜರಾಗಬೇಕಾಯಿತು. ಆ ಸಮಯದಲ್ಲಿ ಈ ಇರ್ವರು(ಕಲ್ಕುಡ-ಕಲ್ಲುರ್ಟಿ) ಸೇರಿ ವಿಶ್ವಕರ್ಮರನ್ನು ಸಭೆಗೆ ಕರೆದು ಸಭೆಯನ್ನು ಅಲಂಕರಿಸಲು ತಿಳಿಸಿ ಈ ಮೂಲಕವಾಗಿ ದೇವಗುರುವಿಗೆ ಅಗೌರವ ಮತ್ತು ಅಪಮಾನವನ್ನು ಮಾಡುತ್ತಾರೆ. ಹೀಗೆ ಅಗೌರವ ತೋರಿದ ಈ ದೇವಲೋಕದ ವಾಸಿಗಳಾದ ಈ ಸೋದರ-ಸೋದರೀಯರ ರುಂಡವನ್ನು ಕಡಿದು ಭೂಮಿಗೆ ಬಿಸುಡುತ್ತಾರೆ. ಈ ಮೂಲಕ ಭೂಮಿಯಲ್ಲಿ ಮಾನವರಾಗಿ ಹುಟ್ಟಿ ಕಷ್ಟ-ನಷ್ಟವನ್ನು ಅನುಭವಿಸಿ ಎಂಬ ಶಾಪವನ್ನು ನೀಡುತ್ತಾರೆ, ಹಾಗೇ ಮುಂದೆ ಭೂಲೋಕದಲ್ಲಿ ಮಾನವರಾಗಿ ಜನಿಸುತ್ತಾರೆ.
ಅಂತೆಯೇ ಶಾಪಗ್ರಸ್ತರಾಗಿ ಅಣ್ಣ-ತಂಗಿಯರು ಭೂಮಿಯ ದೈವಗಳ ನೆಲೆವೀಡಾದ ‘ತುಳುನಾಡಿ(Tulunadu)’ ನ ಕಾರ್ಕಳ(Karkala) ಸೀಮೆಯ ವಿಶ್ವಕರ್ಮ(Vishwakarma) ಸಮಾಜದ ಬಡ ಕುಟುಂಬದ ‘ಈರಮ್ಮ ಆಚಾರ್ತಿ ಮತ್ತು ಶಂಭು ನಾರಾಯಣ ಕಲ್ಕುಡ’ ಎಂಬ ದಂಪತಿಗಳ 6ನೇಯವನಾಗಿ ‘ಬೀರೆ(Beere-kalkuda)’ ಮತ್ತು 7ನೇಯವಳಾಗಿ ‘ಕಾಳಮ್ಮ(Kalamma-kallurti)’ ಜನಿಸುತ್ತಾರೆ. ಹುಟ್ಟುತ್ತಲೇ ತಮ್ಮ ದೈವಿಶಕ್ತಿಯನ್ನು ಅರಿಯದೇ, ಬೆಳೆದಂತೆ ತಂದೆಯನ್ನು ಕಳೆದುಕೊಂಡು ಕುಟುಂಬ ವಿಪರೀತವಾದ ಸಂಕಷ್ಟಕ್ಕೆ ಗುರಿಯಾಗುತ್ತದೆ. ತಂದೆ ಶಂಭು ನಾರಾಯಣರು ಅದ್ವೀತಿಯ ಶಿಲ್ಪಿಯಾಗಿದ್ದು ಮಗ ‘ಬೀರೆ(Beere-ಕಲ್ಕುಡ)’ ಕೂಡಾ ತನ್ನ ತಂದೆಯಿಂದ ಶಿಲ್ಪಕಲೆಯನ್ನು ಕರಗತ ಮಾಡಿಕೊಂಡಿದ್ದ. ತನ್ನ ತಂದೆಯ ಮರಣಾನಂತರ ತಾನೂ ತನ್ನ ಕುಲಕಸುಬನ್ನು ಮುಂದುವರಿಸಿಕೊಂಡು ಹೋಗುತ್ತಾನೆ. ಹಾಗೆ ತಂದೆಯ ಮುಖಾಂತರ ಶಿಲ್ಪಕಲೆಯನ್ನು ಕರಗತಮಾಡಿಕೊಂಡಿದ್ದ ‘ಬೀರೆ(ಕಲ್ಕುಡ)’ ಕಾರ್ಕಳದ ಅರಸನ ಮುಖಾಂತರ ಕಾರ್ಕಳದ ‘ಗೊಮ್ಮಟ(Gommata)’ ನನ್ನು ಮಾಡಲು ತೊಡಗುತ್ತಾನೆ. ಹೀಗೆ ತನ್ನ ಸೂಕ್ಷ್ಮತೆಯಿಂದ ಸುಂದರವಾದ ಗೊಮ್ಮಟನನ್ನು ನಿರ್ಮಿಸಿಯೇ ಬಿಡುತ್ತಾನೆ. ಮುಂದೆ ಈ ಗೊಮ್ಮಟನನ್ನು ಕಂಡು ಜನರು ಬಹಳವಾಗಿ ಆಕರ್ಷಿತರಾಗಿ, ಈ ಗೊಮ್ಮಟದ ಶಿಲ್ಪಕಲೆಯು ಅತೀ ಕಡಿಮೆ ಸಮಯದಲ್ಲೇ ಜನಜನಿತವಾಗಿ ಕಾರ್ಕಳದ ಸೀಮೆಯ ಹೆಸರು ಜನಜನಿತವಾಗಿ ಬಹಳ ಹೆಸರುವಾಸಿಯಾಗುತ್ತದೆ.

ಶ್ರೀ ವೀರ ಕಲ್ಕುಡ ಮತ್ತು ಅಮ್ಮ ಕಲ್ಲುರ್ಟಿ
Sri Kalkuda & Kallurti
ಈ ರೀತಿಯಲ್ಲಿ ಕಾರ್ಕಳ ಗೊಮ್ಮಟನ ಕೀರ್ತಿ ಹಬ್ಬುತ್ತಿದ್ದಂತೆ ಕಾರ್ಕಳದ ದೊರೆ ‘ಬೈಲಸುದ್ದರಸು’ ಗೆ ನಮ್ಮಿಲ್ಲಿನ ಈ ಸ್ಥಳದಲ್ಲಿ ಸ್ಥಾಪಿತವಾದ, ಕೆಲವೇ ಸಮಯದಲ್ಲಿ ಪ್ರಸಿದ್ದಿ ಪಡೆದ, ಈ ಶಿಲ್ಪಕಲೆಯು ಮುಂದೆ ಎಲ್ಲಿಯೂ ಆಗಕೂಡದೂ ಎಂದು ಆಲೋಚಿಸುತ್ತಾನೆ. ಹೀಗೆ ‘ಬೈಲಸುದ್ದರಸು’ ಒಂದು ಕುತಂತ್ರವನ್ನು ಹೂಡಿ ‘ಬೀರೆ ಕಲ್ಕುಡ’ನನ್ನು ಕರೆಸಿ ಅಪೂರ್ವ ಶಿಲ್ಪಕಲೆಯನ್ನ ಹೊಗಳಿ ನಮ್ಮ ಈ ನಾಡಿಗೆ ಕೀರ್ತಿ ತಂದುಕೊಟ್ಟ ನಿಮಗೆ ಸಮ್ಮಾನವನ್ನು ಮಾಡಲು ಬಯಸಿದ್ದೇನೆ, ಅಂತೆಯೇ ಒಂದು ದಿನವನ್ನು ಗೊತ್ತಪಡಿಸಿ ಅಂದು ಅರಮನೆಗೆ ಆಹ್ವಾನಿಸುತ್ತಾನೆ.
ಹೀಗೆ ರಾಜನ ಅಪ್ಪಣೆಯಂತೆ ‘ಬೀರೆ(ಕಲ್ಕುಡ)’ ಅರಮನೆಗೆ ಹೊಗುತ್ತಾನೆ. ಅಲ್ಲಿ ರಾಜನು ‘ಬೀರೆ(ಕಲ್ಕುಡ)’ನ ಒಂದು ಕೈ ಮತ್ತು ಒಂದು ಕಾಲನ್ನು ಕತ್ತರಿಸುತ್ತಾನೆ. ಇದಕ್ಕೆ ಕಾರಣ ಬೀರೆ ಈ ರೀತಿಯಾದ ಅಪೂರ್ವ ಮೂರ್ತಿಯನ್ನು ಬೇರೆಲ್ಲೂ ಮಾಡಕೂಡದು ಎಂಬ ಉದ್ದೇಶದಿಂದ.
ಹೀಗೆ ಅಂಗವಿಕಲನಾಗಿ ನೋವಿನಿಂದ ‘ಬೀರೆ ಕಲ್ಕುಡ’ ಮನೆಗೆ ತೆರಳಲಾಗದೆ ಮುಂದೆ ನೇರವಾಗಿ ‘ವೇಣೂರು(Venur)’ಗೆ ಹೋಗುತ್ತಾನೆ. ಅಲ್ಲಿಗೆ ತೆರಳಿ ತನ್ನ ಅಂಗವೈಕಲ್ಯದ ಮದ್ಯೆಯೇ ಪುನಃ ಮತ್ತೊಂದು ‘ಗೊಮ್ಮಟ’ನನ್ನು ಕೆತ್ತಲು ಪ್ರಾರಂಭಿಸುತ್ತಾನೆ. ಹಾಗೇ ದಿನಗಳು ಉರುಳಿದರು ತನ್ನ ಅಣ್ಣನ ಬರುವಿಕೆಯನ್ನು ಕಾಣದೆ ನೊಂದ ‘ಕಾಳಮ್ಮ(kallurti)’ ರಾತ್ರಿಯಲ್ಲಿ ಅಣ್ಣನ ಬಗ್ಗೆ ಒಂದು ದುಸ್ವಪ್ನವನ್ನು ಕಾಣುತ್ತಾಳೆ. ಹೀಗೆ ‘ಕಾಳಮ್ಮ’ ತನ್ನ ತಾಯಿಯನ್ನು ಬಿಟ್ಟು ಅಣ್ಣನನ್ನು ಅರಸುತ್ತಾ ಕಾರ್ಕಳದತ್ತ ಸಾಗುತ್ತಾಳೆ. ಮುಂದೆ ಸಾಗಿದಾಗ ಅಲ್ಲಿ ತನ್ನ ಅಣ್ಣ ಕಾರ್ಲದಲ್ಲಿ ಇಲ್ಲವೆಂಬುದನ್ನು ಪರರ ಮೂಲಕ ತಿಳಿಯುತ್ತಾಳೆ.
ಹೀಗೆ ‘ಕಾಳಮ್ಮ ಕಲ್ಲುರ್ಟಿ’ ತನ್ನ ಅಣ್ಣನನ್ನು ಹುಡುಕುತ್ತಾ ಮುಂದೆ ಸಾಗುತ್ತಾಳೆ, ಅದೇ ರೀತಿಯಲ್ಲಿ ವೇಣೂರಿನೆಡೆಗೆ ಸಾಗುವ ದಾರಿಯ ಮದ್ಯದಲ್ಲಿ ದಟ್ಟಡವಿಯ ಬಳಿ ಒಬ್ಬ ಕುಡುಕ ಯುವಕ ‘ಕಾಳಮ್ಮ’ನನ್ನು ತಡೆದು ಅಸಭ್ಯವಾಗಿ ವರ್ತಿಸುತ್ತಾನೆ. ಆಗ ಅವಳನ್ನು ನಾಗದೇವರು ಕಾಪಾಡುತ್ತಾರೆ. ಹೀಗೆ ಮುಂದೆ ಕಾಳಮ್ಮ ನಡೆದು ನಡೆದು ವೇಣೂರನ್ನು ತಲುಪುತ್ತಾಳೆ. ಅಲ್ಲಿ ತನ್ನ ಅಣ್ಣನನ್ನು ನೋಡುತ್ತಾಳೆ. ತನ್ನ ಅಣ್ಣ ಒಂದು ಕಾಲು- ಒಂದು ಕೈಯನ್ನು ಕಳೆದುಕೊಂಡು ಭಯಾನಕವಾಗಿ ಕಾಣಿಸುತ್ತಾನೆ. ಅಣ್ಣನ ಭೀಕರತೆಯನ್ನು ಕಂಡು ಮರುಗಿ, ಕಣ್ಣೀರಿಟ್ಟು ಅಣ್ಣನನ್ನು ಅಪ್ಪಿ ಅಳುತ್ತಾಳೆ. ಹಾಗೇ ಅಣ್ಣನಿಂದ ಎಲ್ಲಾ ವಿಚಾರವನ್ನು ತಿಳಿದು, ಅಣ್ಣನ ಈ ಭೀಕರ ಪರಿಸ್ಥಿತಿಗೆ ಕಾರಣರಾದ ‘ಬೈಲಸುದ್ದರಸು’ ವಿನ ವಿರುದ್ದ ಸೇಡು ತೀರಿಸಿಕೊಳ್ಳಲು ಅಣ್ಣ-ತಂಗಿಯರಿಬ್ಬರೂ ಶಪಥ ಮಾಡುತ್ತಾರೆ.

Kalkuda Kola, ಕಲ್ಲುಕುಟ್ಟಿಕ ಕೋಲದ ವೇಷದಾರಿ.
ಅದೇ ವೇಳೆಯಲ್ಲಿ ಆಕಾಶದಿಂದ ಒಂದು ಅಶರೀರವಾಣಿ ಮಾಯಾಶಕ್ತಿಯ ಮೂಲಕ ‘ಬೀರೆ ಮತ್ತು ಕಾಳಮ್ಮ’ ನ ಹಿಂದಿನ ಹಿನ್ನಲೆ ಮತ್ತು ಈಗಿನ ವಿಚಾರವನ್ನು ತಿಳಿಸಿ ಅದೃಶ್ಯವಾಗುತ್ತದೆ. ಹಾಗೇ ತಮ್ಮ ಹಿಂದಿನ ಶಾಪ ಮತ್ತು ತಮ್ಮ ದೈವಿಶಕ್ತಿಯನ್ನ ಅರಿತ ‘ಬೀರೆ ಕಲ್ಕುಡ ಮತ್ತು ಕಾಳಮ್ಮ ಕಲ್ಲುರ್ಟಿ’ ನೇರವಾಗಿ ವೇಣೂರಿನ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಗೆ ತೆರಳಿ ಅಲ್ಲಿ ಭೂತನಾಥನಾದ ಪರಶಿವನಿಗೆ ಹಲವಾರು ವಿಧದ ಸೇವೆಗಳನ್ನು ಮಾಡಿಸುತ್ತಾರೆ. ಅಂತೆಯೇ ಅಣ್ಣ-ತಂಗಿ ‘ಕಲ್ಕುಡ-ಕಲ್ಲುರ್ಟಿ’ ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿನ ಪವಿತ್ರ ಬಾವಿಗೆ ಧುಮುಕುತ್ತಾರೆ.
ಅಂತೆಯೇ ಬಾವಿಯಲ್ಲಿ ಧುಮುಕಿದ ‘ಬೀರೆ ಮತ್ತು ಕಾಳಮ್ಮ’ ಭಯಂಕರವಾದ ದೈವರೂಪದಿಂದ ಮೈದಾಳಿ ಮೇಲೆ ಬರುತ್ತಾರೆ. ಅಂದಿಗೆ ಅವರಿಬ್ಬರ ಶಾಪ ವಿಮೋಚನೆಯಾಗುತ್ತದೆ. ‘ಬೀರೆ’ ಯು ‘ಶ್ರೀ ವೀರ ಕಲ್ಕುಡ’ ನಾಗಿ ಕಪ್ಪು ವರ್ಣದ ಮುಖದ ಮೇಲೆ ಬಿಳಿಯ ಚುಕ್ಕೆ, ಒಂದು ಕೈ- ಒಂದು ಕಾಲು ಕಡಿದ ರೀತಿಯಲ್ಲಿ, ಒಂದು ಕೈಯಲ್ಲಿ ಬೆಂಕಿಯ ದೊಂದಿ ಹಿಡಿದು ಬರುತ್ತಾನೆ. ಅಂತೆಯೇ ಸೋದರಿ ‘ಕಾಳಮ್ಮ’ ಕಪ್ಪು ದೇಹದವಳಾಗಿ ಮಹಾಕಾಳಿಯಂತೆ ಗೋಚರಿಸುತ್ತಾ ಒಂದು ಕೈಯಲ್ಲಿ ಬೆಂಕಿಯ ದೊಂದಿ, ಮತ್ತೊಂದು ಕೈಯ್ಯಲ್ಲಿ ನಾಗರ ಬೆತ್ತವನ್ನು ಹಿಡಿದು ಮೇಲೆ ಬರುತ್ತಾಳೆ. ಹೀಗೆ ಅಣ್ಣ ತಂಗಿ ಭಯಂಕರವಾದ ಉಗ್ರರೂಪವನ್ನು ತಾಳಿ ಮೇಲೆ ಬಂದಾಗ ಲೋಕದ ತಾಯಿ-ತಂದೆಯರಾದ ಪರಶಿವ-ಪರಶಿವೆ ಇಬ್ಬರು ಅಣ್ಣ-ತಂಗಿಗೆ ಅನುಗ್ರಹಿಸುತ್ತಾರೆ.
ಹೀಗೆ ಮುಂದೆ ನಡೆದ ಅಣ್ಣ-ತಂಗಿ ಎಲ್ಲಾ ಪುಣ್ಯ ಕ್ಷೇತ್ರಕ್ಕೆ ತೆರಳಿ ಅಲ್ಲಿ ಪುಣ್ಯ ಸ್ನಾನಗೈದು ಬಹಳ ಶಕ್ತಿಶಾಲಿಗಳಾಗಿ ಪುನಃ ಕಾರ್ಲ ಸೀಮೆಗೆ ಬರುತ್ತಾರೆ. ಅಲ್ಲಿ ಮೊದಲಿಗೆ ‘ಉಬರ್(ubbar)’ ಎನ್ನುವ ಸ್ಥಳಕ್ಕೆ ಬರುತ್ತಾರೆ. ನಂತರ ಅಲ್ಲಿಂದ ‘ಬೈಲೂರಿಗೆ(Bailur)’ ತೆರಳುತ್ತಾರೆ. ಅಲ್ಲಿ ‘ಬೈಲಸುದ್ದರಸು’ ವಿಗೆ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡಲು ಪ್ರಾರಂಭಿಸುತ್ತಾರೆ. ಆದರೇ ಬೈಲಸುದ್ದರಸು ಈ ಬಗ್ಗೆ ಏನನ್ನೂ ತಿಳಿಯದಾದಾಗ ಜ್ಯೋತಿಷ್ಯರ ಮೊರೆ ಹೋಗುತ್ತಾನೆ. ಅರಸು ಪ್ರಶ್ನೆಯ ಮೂಲಕ ತಿಳಿದ ವಿಷಯವೆಂದರೆ ಈ ತುಳುವನಾಡಿಗೆ ಎರಡು ಹೊಸ ದೈವಗಳು ಬಂದಿವೆ. ಅವುಗಳ ಹೆಸರು ‘ಕಲ್ಕುಡ-ಕಲ್ಲುರ್ಟಿ’ ಎಂಬುದಾಗಿ. ನಿನ್ನ ಅರಮನೆಯಲ್ಲಿ ಕಾಲು-ಕೈ ಕಡಿಸಿಕೊಂಡವನೇ ಮತ್ತು ಅವನ ಸೋದರಿಯೇ ‘ಕಲ್ಕುಡ-ಕಲ್ಲುರ್ಟಿ’ಯರು. ಇವರು ದೇವಲೋಕದವರು ಹಾಗೂ ಇಲ್ಲಿ ತಮ್ಮ ಶಾಪದಿಂದ ಜನಿಸಿ ಕಾರಣೀಕ ಶಕ್ತಿಗಳಾಗಿ ಮುಂದೆ ಈ ತುಳುವನಾಡಿನಲ್ಲಿ ನೆಲೆಯಾಗುತ್ತಾರೆ. ಈ ದೈವಗಳಿಗೆ ನೀನು ದೈವಸ್ಥಾನವನ್ನು ನಿರ್ಮಿಸಿ, ಪ್ರತಿ ಸಂವತ್ಸರವು ಕೋಲವನ್ನು ನಡೆಸಿ ಸೇವೆಯನ್ನು ನೀಡಿ, ಪೂಜಾ-ಪುನಸ್ಕಾರಗಳನ್ನು ನಡೆಸಬೇಕು ಎಂಬುದಾಗಿ ತಿಳಿಸಿ, ಮುಂದೆ ಈ ದೈವಗಳನ್ನು ನೀನು ನಂಬಿಕೊಂಡು ಬರಬೇಕು ಎಂದು ಹೇಳುತ್ತಾರೆ.
ಮುಂದೆ ಈ ವಿಚಾರವನ್ನು ತಿಳಿದ ಬೈಲಸುದ್ದರಸು ಕಾರಣಿಕದ ‘ಕಲ್ಕುಡ-ಕಲ್ಲುರ್ಟಿ’ ಗೆ ದೈವಸ್ಥಾನವನ್ನು ಕಟ್ಟಿಸಿ ಕೋಲವನ್ನು ನಡೆಸುತ್ತಾನೆ. ಹಾಗೇ ದೈವದ ಶಕ್ತಿ ತಿಳಿಯಲು ಕೋಲದಲ್ಲಿ ಬಾಗಿಯಾಗುತ್ತಾನೆ. ಅಲ್ಲಿ ದೈವದ ಶಕ್ತಿಯನ್ನು ತಿಳಿದು ತಾನು ಮಾಡಿದ ತಪ್ಪುಗಳಿಗೆ ನೊಂದು ದೈವದಲ್ಲಿ ಕ್ಷಮೆ ಯಾಚಿಸಿ ದೈವವನ್ನ ನಂಬಿ ನಡೆಯುತ್ತಾನೆ. ಈ ಸ್ಥಳವೇ ಮುಂದೆ ಕಾರ್ಕಳದ ‘ಪಳ್ಳಿ ಮಂಗಾಳ್ದಿಮಠ(Palli magaldhimutt)’ ಎಂಬುದಾಗಿ ಆಗಿದೆ.
ಹೀಗೆ ಮುಂದೆ ಈ ಅಣ್ಣ-ತಂಗಿ ನೊಂದವರಿಗೆ ರಕ್ಷಕರಾಗಿ, ನೋಯಿಸಿದವರಿಗೆ ಶಿಕ್ಷಕರಾಗಿ, ತಪ್ಪು ಮಾಡುವವರಿಗೆ ಉಗ್ರರೂಪಿಗಳಾಗಿ ಸತ್ಯದೇವತೆಗಳಾಗಿ, ಧರ್ಮದೇವತೆಗಳಾಗಿ ತುಳುನಾಡಿನುದ್ದಕ್ಕೂ ಕಾರಣೀಕ ಶಕ್ತಿಗಳಾಗಿ ನೆಲೆಯಾಗುತ್ತಾರೆ. ಹೀಗೆ ‘ಬೀರೆ’ ಯು ‘ಶ್ರೀ ವೀರ ಕಲ್ಲುಕಟ್ಟಿಕ, ಕಲ್ಕುಡ, ಪಾಷಾಣಮೂರ್ತಿ’ ಯಾಗಿ ತುಳುವನಾಡಿನ ಉದ್ದಕ್ಕೂ ಹಾಗೂ ಕೆಲ ಬೇರೆ ಪ್ರದೆಶದಲ್ಲು ಪೂಜೆ-ಪುನಸ್ಕಾರಗಳನ್ನು ಪಡೆಯುತ್ತಾ, ಸೋದರಿ ‘ಕಾಳಮ್ಮ’ , ‘ಶ್ರೀ ಕಲ್ಲುರುಟ್ಟಿ, ಕಲ್ಲುರ್ಟಿ, ವರ್ತೆ, ಮಂತ್ರದೇವತೆ, ಸತ್ಯದೇವತೆ’ ಎಂಬೀ ಮುಂತಾದ ನಾಮದಿಂದ ಕರೆಸಿಕೊಳ್ಳುತ್ತಾ ನಾಡಿನೆಲ್ಲೆಡೆ ತನ್ನ ಮಕ್ಕಳನ್ನು ಪೊರೆದು ಕಾಯುವ ಭಾರವನ್ನು ಹೊತ್ತಿದ್ದಾಳೆ. ತುಳು ದೈವದ ನುಡಿಯ ಒಂದು ಸಾಲಿನಂತೆ ಅಮ್ಮ ‘ಕಲ್ಲುರ್ಟಿ’ ಯು “ಸತ್ಯೋಗು ಸತ್ಯದೇವತೆಯಾದ್, ಧರ್ಮಗು ಧರ್ಮದೇವತೆಯಾದ್, ಕೃತಿಮೋಗು ಕೃತಿಮದೇವತೆಯಾದ್, ಕಪಟೊಗು ಪಾಷಾಣಮೂರ್ತಿ ಕಲ್ಲುರ್ಟಿ ಅಪ್ಪೆಯಾದ್’ ಮಾತೆರ್ನಲಾ ಕಾಪೊಂದ್ ಉಲ್ಲೊಲ್” ಎಂಬುದಾಗಿ ಅಮ್ಮ ಕಲ್ಲುರ್ಟಿಯ ಮಹಿಮೆಯನ್ನು ಸಾರಲಾಗಿದೆ.
ಹೀಗೆ ‘ಕಲ್ಕುಡ-ಕಲ್ಲುರ್ಟಿ’ ಯರು ಕೆಲವೆಡೆ ಪ್ರದಾನ ದೈವವಾಗಿ, ಕೆಲವೆಡೆ ಪರಿವಾರ ಶಕ್ತಿಗಳಾಗಿ ನೆಲೆಯಾಗಿ ಭಕ್ತರ ಪೊರೆದು ಕಾಯುತ್ತಿದ್ದಾರೆ. ಕಲ್ಕುಡನು ಮಂದರ್ತಿ, ನೀಲಾವರ ಹಾಗೂ ಇನ್ನಿತರ ಕ್ಷೇತ್ರದಲ್ಲಿ ದುರ್ಗೆಯ ಮಗನಾಗಿ ನೆಲೆನಿಂತು ಕ್ಷೇತ್ರ ರಕ್ಷಣೆಯ ಭಾರವನ್ನ ಹೊತ್ತಿದ್ದಾನೆ. ಅಂತೆಯೇ ಶಂಕರನಾರಾಣ(Shankaranarayana)ದಲ್ಲಿ “ಶ್ರೀ ವೀರ ಕಲ್ಲುಕುಟಿಕ’ ನಾಗಿ ನೆಲೆಸಿ ಭಕ್ತರ ಸಕಲವಾದ ನೋವನ್ನು ನೀವಾರಣೆ ಮಾಡುತ್ತಾ ಭಕ್ತರ ಹುಯಿಲು(ದೂರು) ಸ್ವೀಕರಿಸಿ ಅದನ್ನು ಪರಿಹರಿಸಿ ಕೊಡುವ ಕಾರ್ಯವನ್ನು ಮಾಡುತ್ತಾ ಇದ್ದಾನೆ. ಅಂತೆಯೇ ಕಲ್ಲುರ್ಟಿಯು ತುಳುನಾಡಿನಿದ್ದಕ್ಕೂ ಮಂತ್ರದೇವತೆ, ಸತ್ಯದೇವತೆ, ವರ್ತೆ, ಪಾಷಾಣಮೂರ್ತಿ ಅಪ್ಪೆಯಾಗಿ ನೆಲೆಸಿ ಭಕ್ತರ ಪುರೆವ ಕಾಯಕದಲ್ಲಿ ತೊಡಗಿದ್ದಾಳೆ. ಅಂತೆಲೇ ಬಂಟ್ವಾಳ ತಾಲೂಕಿನ ‘ಪಣೋಲಿಬೈಲಿ(Panolibail)’ ನಲ್ಲಿ ನಲೆನಿಂತು ಕಾರಣೀಕ ಶಕ್ತಿಯಾಗಿ ನೆಲೆಸಿದ್ದಾಳೆ. ‘ಕಲ್ಕುಡ-ಕಲ್ಲುರ್ಟಿ’ ಗೆ ರಕ್ತಬಲಿಯನ್ನು ನೀಡುವ ಪದ್ದತಿಯಿದೆ. ಇರ್ವರೂ ರಕ್ತಪ್ರೀಯರಾಗಿದ್ದು ಇವರಿಗೆ ಕೋಳಿ, ಕುರಿಯನ್ನು ಬಲಿ ಕೊಡುತ್ತಾರೆ. ನಮ್ಮೇಲ್ಲರ ಕಾಯ್ವ ಕಾರಣೀಕದ ‘ಕಲ್ಕುಡ-ಕಲ್ಲುರ್ಟಿ’ ಗೆ ಇದೋ ಸಾವಿರ ನಮನಗಳು. ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.
ಲೇಖಕರು : ರಾಘವೇಂದ್ರ ಕೋಟೇಶ್ವರ
ಕೃಪೆ : ನಮ್ಮ ನಾಡು ಬ್ಲಾಗ್(http://namma-naadu.blogspot.com/2011/08/sri-karanikada-kulkuda-kallurti.html)

Address

Yellur Temple
Udupi

Website

Alerts

Be the first to know and let us send you an email when ಶ್ರೀ ಕ್ಷೇತ್ರ ಎಲ್ಲೂರು posts news and promotions. Your email address will not be used for any other purpose, and you can unsubscribe at any time.

Share