Hejamadi Grameena Congress Samithi

Hejamadi Grameena Congress Samithi Official social media page of Hejamadi Grameena Congress Samithi.

*ಹೆಜಮಾಡಿಯಲ್ಲಿ ಆಟಿಡೊಂಜಿ ದಿನಕ್ಕೆ ಸಕಲ ಸಿದ್ಧತೆ*ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ 19-07-2026 (ಭಾನುವಾರ) ಹೆಜಮಾಡಿಯ ಬಿಲ್ಲವ...
17/07/2026

*ಹೆಜಮಾಡಿಯಲ್ಲಿ ಆಟಿಡೊಂಜಿ ದಿನಕ್ಕೆ ಸಕಲ ಸಿದ್ಧತೆ*

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ 19-07-2026 (ಭಾನುವಾರ) ಹೆಜಮಾಡಿಯ ಬಿಲ್ಲವರ ಸಂಘದ ಸಭಾಂಗಣದಲ್ಲಿ ಸಾಂಪ್ರದಾಯಿಕ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ .

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ್ ಕತ್ತಲ್‌ಸರ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ತಮ್ಮ ಭಾಷಣದಲ್ಲಿ ತುಳುನಾಡಿನ ಆಟಿ ತಿಂಗಳ ಸಾಂಸ್ಕೃತಿಕ ಮಹತ್ವ, ನಮ್ಮ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳ ಸಂರಕ್ಷಣೆ ಹಾಗೂ ಯುವಪೀಳಿಗೆಯಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯತೆ ಕುರಿತು ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ SIZZLING GUYS MANGALURU ತಂಡದಿಂದ ತುಳುನಾಡಿನ ಜಾನಪದ ಸಾಂಸ್ಕೃತಿಕ ವೈಭವ ಮೂಡಿಬರಲಿದ್ದು, ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ. ಅಲ್ಲದೆ, ತುಳುನಾಡಿನ ಸಾಂಪ್ರದಾಯಿಕ ಆಟಿ ತಿಂಗಳ ವಿಶೇಷ ಆಹಾರಗಳ ಸವಿಯನ್ನೂ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ವೈ. ಸುಕುಮಾರ್, ಶಾಂತಲಾ ಶೆಟ್ಟಿ, ಗುಲಾಂ ಮೊಹಮ್ಮದ್, ಶಿವರಾಮ ಶೆಟ್ಟಿ, ಮೋಹನದಾಸ್ ಹೆಜಮಾಡಿ, ಹಾಜಿ ಶೇಕಬ್ಬ, ಅಬ್ದುಲ್ ಅಜೀಜ್ ಹೆಜಮಾಡಿ, ಸೌಜನ್ ಕುಮಾರ್ ಸಾಲಿಗ್ರಾಮ, ದಯಾನಂದ್ ಹೆಜಮಾಡಿ, ರೋಲ್ಫ್ ಡಿ’ಕೋಸ್ಟಾ ಹಾಗೂ ಜಯಶ್ರೀ ಶರತ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಸಂಯೋಜಕರಾದ ದೀಕ್ಷಾ ಕೆ ಹಾಗೂ ವಿಶಾಲ್ ವಿ. ಬಂಗೇರ ಅವರ ನೇತೃತ್ವದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪ್ರಬೋಧ್ ಚಂದ್ರ ಹೆಜಮಾಡಿ ಅವರು ಮನವಿ ಮಾಡಿದ್ದಾರೆ.

23/06/2026

*ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ*

📢 ಆತ್ಮೀಯ ಕಾಂಗ್ರೆಸ್ ಬಂಧುಗಳೇ,

ಇಂದು 23.06.2026 ರ ಸಂಜೆ ನಮ್ಮ ಜನಪ್ರಿಯ ನಾಯಕರು, ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ *ಶ್ರೀ ವಿನಯ್ ಕುಮಾರ್ ಸೊರಕೆ* ಅವರು ಹೆಜಮಾಡಿ ವಾರ್ಡ್‌ಗಳಿಗೆ ಭೇಟಿ ನೀಡಿ, ಚುನಾವಣಾ ಆಯೋಗದ ಎಸ್.ಐ.ಆರ್. (SIR) ಪ್ರಕ್ರಿಯೆ, ಮತದಾರರ ಪಟ್ಟಿಯ ಪರಿಷ್ಕರಣೆ, ಬೂತ್ ಮಟ್ಟದ ಜವಾಬ್ದಾರಿಗಳು ಹಾಗೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಕರ್ತರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.

ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಬಿ.ಎಲ್.ಎ.-2 ಸದಸ್ಯರು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಹಿಂದುಳಿದ ವರ್ಗಗಳ ಕಾಂಗ್ರೆಸ್, ಅಲ್ಪಸಂಖ್ಯಾತ ಘಟಕ SC ST ಘಟಕ ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

🕒 ಕಾರ್ಯಕ್ರಮದ ವೇಳಾಪಟ್ಟಿ (ಸಂಜೆ)

📍 *ಸಂಜೆ 3:00 ಗಂಟೆಗೆ – 1ನೇ ವಾರ್ಡ್, ಹೆಜಮಾಡಿ*
🏠 ಸ್ಥಳ : *ಗಜಾನನ ಮಂದಿರ, ಬೊರುಗುಡ್ಡೆ*
👥 ವಾರ್ಡ್ ಪ್ರತಿನಿಧಿಗಳು :
*ಶಿವರಾಮ ಶೆಟ್ಟಿ,*
*ವಿದ್ಯಾ,*
*ಮೊಹಮ್ಮದ್ ಷರೀಫ್*

📍 *ಸಂಜೆ 3:45 ಗಂಟೆಗೆ – 4ನೇ ವಾರ್ಡ್*
🏠 ಸ್ಥಳ : *ವಿಲ್ಸನ್ ಹಾಗೂ ಜೇಮ್ಸ್ ಡಿಸೋಜಾ ಅವರ ಮನೆ, ಬಲ್ಲಾಳ್ ಕನ್‌ಸ್ಟ್ರಕ್ಷನ್ ಸಮೀಪ, ಎನ್.ಎಚ್.-66, ಹೆಜಮಾಡಿ*
👥 ವಾರ್ಡ್ ಪ್ರತಿನಿಧಿಗಳು :
*ಲೀಡಿಯಾ ಪೋರ್ಟಾಡೋ,*
*ರೀನಾ ವಿನುತ ಡಿಸೋಜಾ,*
*ಸುದೀರ್ ಕರ್ಕೇರ,*
*ಧೋಂಬ ಪೂಜಾರಿ*

📍 *ಸಂಜೆ 4:30 ಗಂಟೆಗೆ – 5ನೇ ಹಾಗೂ 7ನೇ ವಾರ್ಡ್*
🏠 ಸ್ಥಳ : *ಅಬ್ದುಲ್ ರಝಾಕ್ ಅವರ ಮನೆ, ಎಸ್.ಎಸ್. ರಸ್ತೆ, ಹೆಜಮಾಡಿ*
👥 ವಾರ್ಡ್ ಪ್ರತಿನಿಧಿಗಳು :
*ಅಬ್ದುಲ್ ರಝಾಕ್,*
*ಸುಭಾಷ್ ಜಿ. ಸಾಲಿಯಾನ್,*
*ಮೊಹಮ್ಮದ್ ಕಬೀರ್*
ಸನಾ ಇಬ್ರಾಹಿಂ, ಶ್ರೀಮತಿ ಫರಿದ, ಜಯಶ್ರೀ, ಕೇಶವ ಸಾಲಿಯಾನ್
🙏🏻 ನಮ್ಮ ನಾಯಕರು *ಶ್ರೀ ವಿನಯ್ ಕುಮಾರ್ ಸೊರಕೆ* ಅವರ ಮಾರ್ಗದರ್ಶನದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿ, ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ.

ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ವಿವಿಧ ಘಟಕಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

*ಜೈ ಕಾಂಗ್ರೆಸ್*

*ಪ್ರಬೋಧ್ ಚಂದ್ರ ಹೆಜಮಾಡಿ*
*ಅಧ್ಯಕ್ಷರು*
*ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ*
ಕೇಶವ. ಸಿ ಸಾಲಿಯಾನ್
ಕಾರ್ಯದರ್ಶಿ
ಹಾಗೂ ಸರ್ವ ಸದಸ್ಯರು ಗ್ರಾಮೀಣ ಕಾಂಗ್ರೆಸ್ ಹೆಜಮಾಡಿ.

ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಿ.ಕೆ. ಹರಿಪ್ರಸಾದ್ ರವರನ್ನು ಇಂದು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ನಮ್ಮ ಜನಪ್ರಿಯ ನಾಯಕರಾ...
20/06/2026

ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಬಿ.ಕೆ. ಹರಿಪ್ರಸಾದ್ ರವರನ್ನು ಇಂದು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ನಮ್ಮ ಜನಪ್ರಿಯ ನಾಯಕರಾದ ಶ್ರೀ ವಿನಯ ಕುಮಾರ್ ಸೊರಕೆ ಅವರು ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು.

17/06/2026

ಹೃತ್ಪೂರ್ವಕ ಅಭಿನಂದನೆಗಳು

14/06/2026

🚨 ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ 🚨

✊ ಕೇಂದ್ರ ಸರ್ಕಾರದ ವೈಫಲ್ಯ, ಚುನಾವಣಾ ಆಯೋಗದ SIR ಪ್ರಕ್ರಿಯೆ ಹಾಗೂ ಗ್ಯಾಸ್, ಡೀಸೆಲ್ ಮತ್ತು ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಬೃಹತ್ ಪ್ರತಿಭಟನೆ ✊

👨‍💼 ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ
ವಿನಯ್ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ

📍 ಸ್ಥಳ: ಬೆಳಪು ಪೇಟೆ
📅 ದಿನಾಂಕ: 16-06-2026, ಮಂಗಳವಾರ
🕙 ಸಮಯ: ಬೆಳಿಗ್ಗೆ 10:00 ಗಂಟೆಗೆ

📢 ಕೇಂದ್ರ ಸರ್ಕಾರದ ವೈಫಲ್ಯಗಳು, ಜನವಿರೋಧಿ ನೀತಿಗಳು, ಚುನಾವಣಾ ಆಯೋಗದ SIR ಪ್ರಕ್ರಿಯೆ, ಅಡುಗೆ ಅನಿಲ, ಡೀಸೆಲ್ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ವಿರುದ್ಧ ಜನಜಾಗೃತಿ ಮೂಡಿಸಿ ಜನರ ಧ್ವನಿಯನ್ನು ಬಲವಾಗಿ ವ್ಯಕ್ತಪಡಿಸಲು ಈ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

🤝ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು,ವಿದ್ಯಾರ್ಥಿ ಕಾಂಗ್ರೆಸ್ ಹಾಗೂ ಮಾಜಿ ಗ್ರಾಮ‌ಪಂಚಾಯತ್ ಸದಸ್ಯರು, ಪುರಸಭೆ ಸದಸ್ಯರು, ಬಿ.ಎಲ್ ಎ 2 ಬೂತ್ ಅದ್ಯಕ್ಷರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

✊ "ಪ್ರಜಾಪ್ರಭುತ್ವ ಉಳಿಸೋಣ – ಜನರ ಹಕ್ಕುಗಳನ್ನು ರಕ್ಷಿಸೋಣ!"
✊ "ಬೆಲೆ ಏರಿಕೆ ತಡೆಗಟ್ಟಲಿ – ಜನರ ಬದುಕು ಸುಧಾರಿಸಲಿ!"

*ವೈ.ಸುಕುಮಾರ್*
*ಅಧ್ಯಕ್ಷರು*
🇮🇳 *ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ದಕ್ಷಿಣ*🇮🇳

*ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ*📝 ಸಭಾ ವರದಿದಿನಾಂಕ 08-06-2026 ರಂದು ಹೆಜಮಾಡಿ ಬಿಲ್ಲವ ಸಂಘದಲ್ಲಿ ನಡೆದ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್...
08/06/2026

*ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ*

📝 ಸಭಾ ವರದಿ

ದಿನಾಂಕ 08-06-2026 ರಂದು ಹೆಜಮಾಡಿ ಬಿಲ್ಲವ ಸಂಘದಲ್ಲಿ ನಡೆದ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಭೆಯು ಯಶಸ್ವಿಯಾಗಿ ನೆರವೇರಿತು.

ಸಭೆಗೆ ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ *ಶ್ರೀ ವಿನಯ್ ಕುಮಾರ್ ಸೊರಕೆ* ಅವರು ಆಗಮಿಸಿ ಪಕ್ಷ ಸಂಘಟನೆ, ಎಸ್.ಐ.ಆರ್. (SIR) ಪ್ರಕ್ರಿಯೆ, ಮತದಾರರ ಪಟ್ಟಿ ಪರಿಷ್ಕರಣೆ, ಬಿ.ಎಲ್.ಎ.-2 ಸದಸ್ಯರ ಜವಾಬ್ದಾರಿಗಳು, ಬೂತ್ ಮಟ್ಟದ ಸಿದ್ಧತೆಗಳು ಹಾಗೂ ಮುಂಬರುವ ಚುನಾವಣೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಗ್ರಾಮೀಣ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಹಿಂದುಳಿದ ವರ್ಗಗಳ ಘಟಕ, ಅಲ್ಪಸಂಖ್ಯಾತರ ಘಟಕ, ಬೂತ್ ಅಧ್ಯಕ್ಷರು ಹಾಗೂ ಎಲ್ಲಾ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿದರು.

✨ *ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರ ಸಮ್ಮುಖದಲ್ಲಿ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಬೋಧ್ ಚಂದ್ರ ಹೆಜಮಾಡಿ, ಹೆಜಮಾಡಿ ಗ್ರಾಮೀಣ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ವಿಶಾಲ್ ವಿ. ಬಂಗೇರ ಹಾಗೂ ಹೆಜಮಾಡಿ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ದೀಕ್ಷಾ ಕೆ. ಅವರ ನೇತೃತ್ವದಲ್ಲಿ ಶ್ರೀಮತಿ ರೋಹಿಣಿ ಎ. ಮೆಂಡನ್, ಶ್ರೀ ರಿತೇಶ್ ಸುವರ್ಣ ಹಾಗೂ ಶ್ರೀಮತಿ ಸೌಮ್ಯಾ ರಿತೇಶ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.*

📱 *ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಡಿಜಿಟಲ್ ಮೀಡಿಯಾ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ ಅವರು ಅಧಿಕೃತವಾಗಿ ಅನಾವರಣಗೊಳಿಸಿದರು.*

ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ಕಾರ್ಯಕ್ರಮಗಳು, ಸರ್ಕಾರದ ಜನಪರ ಯೋಜನೆಗಳು, ಸಂಘಟನಾ ಚಟುವಟಿಕೆಗಳು ಹಾಗೂ ಕಾಂಗ್ರೆಸ್ ಪಕ್ಷದ ವಿಚಾರಧಾರೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಡಿಜಿಟಲ್ ವೇದಿಕೆಗಳನ್ನು ಆರಂಭಿಸಲಾಯಿತು.

ಸಭೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಾ, ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು, ಹೊಸ ಸದಸ್ಯತ್ವ ಅಭಿಯಾನವನ್ನು ಬಲಪಡಿಸುವುದು ಹಾಗೂ ಮುಂಬರುವ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗುವ ಕುರಿತು ಚರ್ಚೆ ನಡೆಸಲಾಯಿತು.

✳️ *ಈ ಸಂದರ್ಭದಲ್ಲಿ ಕಾಪು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷರಾದ ವೈ. ಸುಕುಮಾರ್, ಕೆಪಿಸಿಸಿ ಕೋ-ಆರ್ಡಿನೇಟರ್ ಅಬ್ದುಲ್ ಅಝೀಜ್ ಹೆಜಮಾಡಿ, ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಭಾಸ್ ಸಾಲಿಯಾನ್ ಹಾಗೂ ಕುಸುಮ ಸಾಲಿಯಾನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಜ್ವಲ್ ಎಸ್. ಸಾಲಿಯಾನ್, ಕಾರ್ಯದರ್ಶಿಗಳಾದ ಕೇಶವ್ ಸಿ. ಸಾಲಿಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಶ್ರೀ ಶರತ್, ತೇಜಪಾಲ್ ಸುವರ್ಣ, ವಿಕ್ರಮ್ ರಾಜ್ ಸುವರ್ಣ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಷರೀಫ್ ಹೆಜಮಾಡಿ, ಪಂಚಾಯತ್ ಮಾಜಿ ಸದಸ್ಯರಾದ ನಿರ್ಮಲ, ಫಾರಿಧ್, ರೋಷನ್ ಕೋಡಿ, ಪದ್ಮನಾಭ ಸುವರ್ಣ, ಕಬೀರ್, ಮಾಧವ ಸನಿಲ್, ಉಮೇಶ್ ಕೋಟ್ಯಾನ್ ನಡಿಕುದೂರು, ವಿದ್ಯಾ, ಹಸನ್ ಕೋಡಿ, ಅಬ್ದುಲ್ ರಝಾಕ್, ಅಬ್ದುಲ್ ಹಮೀದ್, ರೀನಾ ವಿನುತ ಡಿ’ಸೋಜಾ, ರಾಜು ಹೆಜಮಾಡಿ, ಎಸ್.ಸಿ./ಎಸ್.ಟಿ. ಘಟಕದ ಅಧ್ಯಕ್ಷರಾದ ಶೇಖರ್ ಕಿಟ್ಟ ಸುವರ್ಣ, ಇಂಟಕ್ ಘಟಕದ ಅಧ್ಯಕ್ಷರಾದ ರಮೇಶ್ ಸುವರ್ಣ, ಸನಾ ಇಬ್ರಾಹಿಂ, ಮೊಹಮ್ಮದ್ ಸಿರಾಜ್* ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು.*

ಎಲ್ಲಾ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

*“ಮನೆ ಮನೆ ಕಾಂಗ್ರೆಸ್ – ಜನ ಜನ ಕಾಂಗ್ರೆಸ್”*

*ಜೈ ಕಾಂಗ್ರೆಸ್*

*ಪ್ರಬೋಧ್ ಚಂದ್ರ ಹೆಜಮಾಡಿ*
ಅಧ್ಯಕ್ಷರು
ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ

ಅಭಿನಂದನೆಗಳು
06/06/2026

ಅಭಿನಂದನೆಗಳು

Address

Hejamadi
Udupi
574103

Website

Alerts

Be the first to know and let us send you an email when Hejamadi Grameena Congress Samithi posts news and promotions. Your email address will not be used for any other purpose, and you can unsubscribe at any time.

Share