14/02/2024
||ದುಮ್ಮಿಶಾಲ್ಯ ಶ್ರೀ ಕೃಷ್ಣಾಯ ನಮಃ ||
ನಾಡಿನ ಏಳು ಕಟ್ಟೆಮನೆ ಎಂಬತ್ತು ಗಡಿಗೆ ಸೇರಿದ ನೂರಾ ಒಂದು ಬೆಡಗಿನ ಹಳ್ಳಿಕಾರ ಬಂಧುಗಳೇ,
ತುಮಕೂರು ಜಿಲ್ಲೆ ತುರುವೇಕೆರೆ ತಾ ಮಾಯಸಂದ್ರ ಹೋಬಳಿ ಶೆಟ್ಟಿಗೊಂಡನಹಳ್ಳಿ ಗ್ರಾಮದ ದುಮ್ಮಿಶಾಲ್ಯ ಸುಕ್ಷೇತ್ರ ಶ್ರೀ ಹಳ್ಳಿಕಾರ ಬೃಹನ್ಮಠದ ಮೊದಲನೇ ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಲಿದೆ ಹಾಗೂ ಹಳ್ಳಿಕಾರ ಬೃಹನ್ಮಠದ ಪ್ರಥಮ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬಾಲಕೃಷ್ಣಾನಂದ ಶ್ರೀಗಳ ಪ್ರಥಮ ವರ್ಷದ ದೀಕ್ಷಾ ಮಹೋತ್ಸವ ಹಾಗೂ ಪ್ರಥಮ ವರ್ಷದ ಪಟ್ಟಾಭಿಷೇಕೋತ್ಸವ ನೆರವೇರಲಿದೆ..
ಈ ಕಾರ್ಯಕ್ರಮದ ದಿವ್ಯಸಾನಿಧ್ಯ ಹಾಗೂ ಆಶೀರ್ವಚನ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿಗಳು ಎಲೆರಾಂಪುರ ಕೊರಟಗೆರೆ ತಾ ಇವರು ವಹಿಸಲಿದ್ದಾರೆ.
ಹಳ್ಳಿಕಾರರ ಹೆಸರಿನಲ್ಲಿ ಪ್ರಪ್ರಥಮವಾಗಿ ಸ್ಥಾಪಿತವಾಗಿರುವ ಎಸ್ ಹೆಚ್ ಎಂ ಪಬ್ಲಿಕ್ ಸ್ಕೂಲ್ ಕಟ್ಟಡವನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಕೊಡುಗೈ ದಾನಿಗಳಾದ ಸನ್ಮಾನ್ಯ ಶ್ರೀ ವಿ ಸೋಮಣ್ಣ ನವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ..
ಶ್ರೀ ವಿ ಸೋಮಣ್ಣ ನವರ ಹೆಸರಿನಲ್ಲಿ ಕಟ್ಟಿಸಿರುವ ವಿ ಸೋಮಣ್ಣ ಸಭಾಂಗಣ ಲೋಕಾರ್ಪಣಾ ಕಾರ್ಯಕ್ರಮವನ್ನು ತುರುವೇಕೆರೆ ತಾ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎಂ ಟಿ ಕೃಷ್ಣಪ್ಪ ನವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳಳಿದೆ..
ಹಳ್ಳಿಕಾರ ಮಠ ಮಹಾದ್ವಾರ ಹೆಬ್ಬಾಗಿಲಿನ ಶಂಕುಸ್ಥಾಪನೆಯನ್ನು ಮಾಜಿ ಕೌಶಲ್ಯಾಭಿವೃದ್ಧಿ ನಿಗಮ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮುರಳೀಧರ ಹಾಲಪ್ಪ ನವರು ನೆರವೇರಿಸಲಿದ್ದಾರೆ.. ಈ ಮಹಾದ್ವಾರದ ದಾನಿಗಳು ಗುಬ್ಬಿ ಎಪಿಎಂಸಿ ಉಪಾಧ್ಯಕ್ಷರು, ಶ್ರೀ ಹಳ್ಳಿಕಾರ ಮಠದ ಉಪಾಧ್ಯಕ್ಷರಾದ ಜನ್ನೇನಹಳ್ಳಿ ಗ್ರಾಮದ ಶ್ರೀಮತಿ ತಿಮ್ಮಮ್ಮ ಮತ್ತು ಜಮೀನ್ದಾರ್ ಶ್ರೀ ತಿಮ್ಮೇಗೌಡ್ರರ ಪುತ್ರ ಶ್ರೀಮತಿ ಶೋಭಾ ಮತ್ತು ಜೆ ಟಿ ತಿಮ್ಮರಾಜು ರವರು ಮತ್ತು ಮಕ್ಕಳ ನೇತೃತ್ವದಲ್ಲಿ ನಡೆಯಲಿದೆ.
ಶ್ರೀ ಮಠದ ಡಿಜಿಟಲ್ ಲೈಬ್ರರಿಯನ್ನು ಮಾನ್ಯ ನಿಕಟಪೂರ್ವ ಶಾಸಕರಾದ ಶ್ರೀ ಮಸಾಲಾ ಜಯರಾಮ್ ರವರು ಉದ್ಘಾಟನೆ ಮಾಡಲಿದ್ದಾರೆ..
ಈ ಮಹತ್ಕಾರ್ಯಕ್ಕೆ ಹಾಗೂ ಪುಣ್ಯ ಕಾರ್ಯಕ್ರಮಕ್ಕೆ ಹಳ್ಳಿಕಾರ ಬಂಧುಗಳು ಕುಟುಂಬ ಸಮೇತರಾಗಿ ಆಗಮಿಸಿ ದೇವರ ಕೃಪೆಗೆ ಹಾಗೂ ಗುರುಗಳ ಮಾರ್ಗದರ್ಶನಕ್ಕೆ ಪ್ರೀತ್ಯಾರ್ಥರಾಗಬೇಕೆಂದು ಈ ಮೂಲಕ ಪ್ರಾರ್ಥಿಸುತ್ತೇನೆ.
ಇದೇ ಸಂದರ್ಭದಲ್ಲಿ #ಹಳ್ಳಿಕಾರ ತಳಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ 10000, ದ್ವಿತೀಯ 5000, ತೃತೀಯ 2500
ಮಹಿಳೆಯರಿಗಾಗಿ #ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ 3000, ದ್ವಿತೀಯ 2000, ತೃತೀಯ 1000
ಈ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಆಶೀರ್ವಾದ ಪಡೆಯಲು ಮನವಿ ಮಾಡುತ್ತೇವೆ.. ಅನ್ನ ದಾಸೋಹಕ್ಕೆ ಸಹಾಯ ಕೂಡ ಮಾಡಬಹುದು..
ದಿನಾಂಕ