01/10/2025
ಬನವಾಸಿ ಮತ್ತು ಬೆಂಗಳಿ, ಗುಡ್ನಾಪುರ, ಮಧುರವಳ್ಳಿ, ಕೊಕ್ಕಳ್ಳಿ ಹೀಗೆ ಹಲವಾರು ಹಳ್ಳಿಗಳ ಜನರು ದಿನನಿತ್ಯ ಓಡಾಡುವ ರಸ್ತೆ. 2008 ರಲ್ಲಿ ಗ್ರಾಮ್ ಸಡಕ್ ಯೋಜನೆಯಡಿ ಆದ ಈ ರಸ್ತೆ ಮತ್ತು 2020 ಆಸುಪಾಸು ಮತ್ತೆ ಮರುಡಾಂಬರಿಕರಣ ಮಾಡಲಾಗಿದೆ. ದುರ್ದೈವ ಅಂದರೆ ಈ ರಸ್ತೆಯ ಅಕ್ಕಪಕ್ಕದ ಗಿಡಗಂಟಿಗಳನ್ನು ಸವರದೇ ಬಹುಶ: ೪ ವರುಷಗಳ ಮೇಲಾಗಿದೆ. ಈ ವರುಷದಿಂದ ಬೆಳಿಗ್ಗೆ ಮತ್ತು ಸಂಜೆ ಕರಾರಸಸಂ ಬಸ್ಸುಗಳು ಓಡಾಡುತ್ತಿವೆ ಮತ್ತು ದಿನನಿತ್ಯ ಚಿಕ್ಕಪುಟ್ಟ ಅವಘಡಗಳು ಆಗುತ್ತಲೇ ಇವೆ. ಹಾಗಾಗಿ ತುತ್ತಾಗಿ ಈ ರಸ್ತೆಯ ಅಕ್ಕಪಕ್ಕದಿರುವ ಗಿಡಗಂಟಿಗಳಿನ್ನು ಸವರಿಸಬೇಕಾಗಿ ಸಂಭಂದಪಟ್ಟ ಇಲಾಖೆಗಳ, ಗ್ರಾಮ, ತಾಲೂಕು, ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳಲ್ಲಿ ವಿನಂತಿ 🙏