20/04/2026
ಇಂದು ನಮ್ಮ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ರಿ ಸಂಸ್ಥೆಯ ಕಾರ್ಯಾಲಯ ಉದ್ಘಾಟನೆ ಅಂಗವಾಗಿ ದಾನಿಗಳ ಸಹಕಾರ ದೊಂದಿಗೆ ಇವತ್ತು ಅನಾಥ ನಿರ್ಗತಿಕ ಕುಟುಂಬಕ್ಕೆ ಎರಡು ತಿಂಗಳಿಗೆ ಆಗುವಷ್ಟು ಕಿರಾಣಿ ಹಾಗೂ ರೈಸ್ ಪ್ಯಾಕೆಟ್ ವಿತರಣೆ ಮಾಡಿದ್ದೇವೆ ಈ ಸಹಾಯವನ್ನು
ರಾಮ್ ಬಾಬು ಲಿಂಗಸುಗೂರು ಹಾಗೂ
ಚಂದ್ರಕಲಾ ಮೇಡಂ ಸಿಂಧನೂರು ಇವರ ಸಹಕಾರದಿಂದ ಮಾಡಿದ್ದೇವೆ.
ಅವರು ಇಬ್ಬರ ದಾನಿಗಳಿಗೆ ನಮ್ಮ ಸಂಸ್ಥೆಯಿಂದ ಹೃದಯಪೂರ್ವಕ ಧನ್ಯವಾದಗಳು
ಅನಾಥ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ಅವರಿಗೆ ನಾವು ಸದಾ ಬೆನ್ನೆಲುಬಾಗಿ ಇರುತ್ತೇವೆ.
ಈ ಸಮಯದಲ್ಲಿ ಸಿಂಧನೂರಿನ ಕರಿಬಸವನಗರದ ರಂಭಾಪುರಿ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯ, ದಿವ್ಯ ಆಶೀರ್ವಾದದೊಂದಿಗೆ ಅಶೋಕ್ ನಲ್ಲ ಕಾರ್ಯದರ್ಶಿಗಳು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್, ಖಾಜಾ ಹುಸೇನ್ ಸದಸ್ಯರು, ರಾಜೇಶ್ ಸದಸ್ಯರು ಹಾಗೂ ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ್, ಯುವ ಮುಖಂಡ ರುದ್ರಗೌಡ, ಬುದೇಶ ಮರಾಠಿ, ಇನ್ನು ಅನೇಕರು ಭಾಗವಹಿಸಿದ್ದಾರೆ