11/09/2025
ಅವೈಜ್ಞಾನಿಕ ಒಳ ಮೀಸಲಾತಿಯ ಮೂಲಕ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿರುವ ಸರ್ಕಾರಕ್ಕೆ ದಿಕ್ಕಾರ, ದಿಕ್ಕಾರ
ಕಾಂಗ್ರೆಸ್ ಪಕ್ಷದ ಒಳ ಮೀಸಲಾತಿ ವರ್ಗೀಕರಣದ ನಿರ್ಣಯವನ್ನು ಉಗ್ರವಾಗಿ ಖಂಡಿಸುವ ನಿಟ್ಟಿನಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಸೇರಿದಂತೆ ಆಲಕ್ಷಿತ ತಳ ಸಮುದಾಯಗಳು ಸೇರಿದಂತೆ ಹಲವು ಸಮಾಜದ ಮುಖಂಡರು ಭಾಗಿಯಾಗಿದ್ದರು
ನಿರೀಕ್ಷೆಯಂತೆ ಬಿಜೆಪಿ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಮುಖಂಡರನ್ನು ಬಿಟ್ಟರೆ ಬೇರೆ ಯಾವುದೇ ಪಕ್ಷದ ಮುಖಂಡರು ಭಾಗವಹಿಸದಿರುವುದು ಎದ್ದು ಕಾಣುತ್ತಿತ್ತು ಒಟ್ಟಾರೆ ಇದು ಬಿಜೆಪಿ ಕಾರ್ಯಕ್ರಮವಾಗಿತ್ತೇ ಹೊರತು ಪಕ್ಷಾತೀತ ಕಾರ್ಯಕ್ರಮವಾಗಿರಲಿಲ್ಲ
ಒಳ ಮೀಸಲಾತಿಯಿಂದ ನಾಲ್ಕು ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಎಲ್ಲಾ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಎಲ್ಲಾ ಮುಖಂಡರು ಭಾಗವಹಿಸಬಹುದಿತ್ತು ಆದರೆ ಯಾವ ಪಕ್ಷದ ನಾಯಕರು ಬರಲಿಲ್ಲವಾದ್ದರಿಂದ ಎಲ್ಲರ ಕಂಗೆಣ್ಣಿಗೆ ಗುರಿಯಾಗಿದ್ದರು
ರಾಜ್ಯದ ಮೂಲೆ-ಮೂಲೆಗಳಿಂದ ಬಂಜಾರ,/ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಅಲೆಮಾರಿ ಜನಾಂಗದವರು ಸರಿ ಸುಮಾರು 6 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸಿದ್ದರು
ಬಿಜೆಪಿ ಪಕ್ಷವನ್ನು ಹೊರತುಪಡಿಸಿದರೆ ಸಮುದಾಯದ ಬಗ್ಗೆ ಕಾಳಜಿ, ಕಳಕಳಿ ಮತ್ತು ಬದ್ಧತೆ ಇರುವ ನಾಲ್ಕು ಸಮುದಾಯದ ಸ್ವಾಮೀಜಿಗಳು ಹಾಗೂ ಸಮಾಜಮುಖಿ ಮುಖಂಡರು ಭಾಗವಹಿಸಿದ್ದರು
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಅವೈಜ್ಞಾನಿಕ, ಅಸಂವಿಧಾನಿಕ ವರದಿ ಮತ್ತು ಸರ್ಕಾರದ ನಿರ್ಣಯವನ್ನು ಖಂಡಿಸಿ ಆಕ್ರೋಶಭರಿತರಾಗಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು
ನಮ್ಮ ಮವವಿಯನ್ನು ಸ್ವೀಕರಿಸಲು ಸ್ವತಃ ಮಾನ್ಯ ಮುಖ್ಯಮಂತ್ರಿಗಳೇ ಬರಬೇಕು ಇಲ್ಲವಾದಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಗಡುವು ನೀಡಿದ್ದರು
ಏತನ್ಮಧ್ಯೆ ಸರ್ಕಾರದ ಪ್ರತಿನಿಧಿಯಾಗಿ ಸರ್ಕಾರದ ಕಾರ್ಯದರ್ಶಿಯೊಬ್ಬರು ಅಹವಾಲನ್ನು ಸ್ವೀಕರಿಸಲಿಕ್ಕೆ ಬಂದಿದ್ದರು, ಮನವಿ ಪತ್ರವನ್ನು ಸರ್ಕಾರದ ಕಾರ್ಯದರ್ಶಿಯವರಿಗೆ ಕೊಡದೆ ಬೇಸತ್ತು ವಿಧಾನಸೌಧಕ್ಕೆ ಮುತ್ತಿಗೆಯನ್ನು ಹಾಕುವ ನಿರ್ಣಯವನ್ನು ಕೈಗೊಂಡು ಪ್ರತಿಭಟನಾಕಾರರು ವಿಧಾನಸೌಧದತ್ತ ತೆರಳುವಷ್ಟರಲ್ಲಿ ಮಾರ್ಗಮಧ್ಯೆ ಬ್ಯಾರಿಕೆಟ್ ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಲಾಯಿತು ಮತ್ತು ನಂತರ ಪ್ರತಿಭಟನಾಕಾರರನ್ನು ಬಂಧಿಸಲಾಯಿತು
ಕೊನೆಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಮನವಿ ಪತ್ರವನ್ನು ಸ್ವೀಕರಿಸಲು ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಸ್ಥಳಕ್ಕೆ ಆಗಮಿಸಿ, ಮನವಿ ಪತ್ರವನ್ನು ಸ್ವೀಕರಿಸಿದರು ನಂತರ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಯಿತು
ಡಿಸಿಪಿ ಗಿರೀಶ್ ರವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನ್ನು ಮಾಡಲಾಗಿತ್ತು
ಪಾರ್ಟಿ, ಪಕ್ಷ ಒಂದೆಡೆ ಏನೇ ಇರಲಿ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ತಮ್ಮ ದೈನಂದಿನ ಕೆಲಸ-ಕಾರ್ಯಗಳನ್ನು ಬದಿಗಿಟ್ಟು ಯಾವುದೇ ಪಕ್ಷವನ್ನು ನೋಡದೆ ನಮ್ಮ ಬಂಜಾರ ತಾಂಡಗಳಿಂದ ಸ್ವಯಂ ಪ್ರೇರಿತರಾಗಿ ಜನಸಮುದಾಯ ಶೇಕಡ 70 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು
ತಮ್ಮ ವೈಯುಕ್ತಿಕ ಬೇಳೆಯನ್ನು ಬೇಯಿಸಿಕೊಳ್ಳಲಿಕ್ಕೆ ಮೂಕ ವೇದನೆಯಿಂದ ಬಳಲುತ್ತಿರುವ ನಮ್ಮ ಬಂಜಾರ ಸಮುದಾಯದವರನ್ನು ಮೇಲಿಂದ ಮೇಲೆ ಇಂತಹ ಪ್ರತಿಭಟನೆಗಳಿಗೆ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ
ಚುನಾವಣೆ ಬಂದಾಗ ಮನೆ-ಮನೆಗೆ ತೆರಳಿ ಯಾಡಿ, ಬಾಪು, ಭೀಯಾ, ಮಾಮಾ, ಕಾಕಾ, ಫೂಪ ಎಂದು ಕಾಡಿ- ಬೇಡಿ ಮತಗಳನ್ನು ಗಿಟ್ಟಿಸಿಕೊಂಡು ವಿಧಾನಸೌಧದಲ್ಲಿ ನಮ್ಮ ಪರವಾಗಿ ಯಾರೂ ಕೂಡ ಚಕಾರವೆತ್ತದ ಶಾಸಕರನ್ನು ಮತ್ತು ನಮ್ಮ ಹೋರಾಟಗಾರರು ಮಾರಾಟವಾಗಿದ್ದಾರೆ ಎಂದು ಅಸಂವಿಧಾನಿಕ ಪದಗಳಿಂದ ತಮ್ಮ-ತಮ್ಮಲ್ಲೇ ಬೈಯುತ್ತಾ ಹಿಡಿ ಶಾಪ ಹಾಕುತ್ತಿದ್ದರು.
ಒಂದಂತೂ ಸತ್ಯ:
ಕೇವಲ ನಾಲ್ಕು ಮಂದಿ ತಮ್ಮ ವೈಯುಕ್ತಿಕ ಲಾಭಕ್ಕಾಗಿ ಸರ್ಕಾರದ ನಿರ್ಣಯವನ್ನು ಮನಸಾರೆ ಒಪ್ಪಿ ಸಮುದಾಯದ ಪರವಾಗಿ ಯಾರನ್ನು ಹೇಳದೇ ಕೇಳದೆ ಮಾನ್ಯ ಮುಖ್ಯಮಂತ್ರಿಗಳನ್ನ ಅಭಿನಂದಿಸಿದ್ದು ನಿಜಕ್ಕೂ ಬೇಸರದ ಸಂಗತಿ
ಆತ್ಮೀಯ ಬಂಜಾರ ಬಂಧುಗಳೇ,
ಸಮುದಾಯದ ಹಿತಾಸಕ್ತಿಗಾಗಿ ಅಥವಾ ಸಮುದಾಯಕ್ಕೆ ಅನ್ಯಾಯವಾದಾಗ ಯಾವುದೇ ಪಾರ್ಟಿ ಪಕ್ಷವಿರಲಿ, ಸಂಘ-ಸಂಸ್ಥೆಗಳಿರಲಿ ಪ್ರತಿಭಟನೆಯನ್ನು ಆಯೋಜನೆ ಮಾಡಿದಾಗ ಪಕ್ಷಾತೀತವಾಗಿ ಸ್ವಯಂ ಪ್ರೇರಣೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಂತಹ ಬೃಹತ್ ಪ್ರತಿಭಟನೆಗಳಲ್ಲಿ ನಮ್ಮ ಬಲವನ್ನು ತೋರಿಸುವುದು ಅತಿ ಮುಖ್ಯವಾಗುತ್ತದೆ ಬಂಧುಗಳೇ
ಧನ್ಯವಾದಗಳೊಂದಿಗೆ