18/04/2023
ವಿಕೃತ ಮನಸ್ಸಿನ ಕೆಲಸ ಎಂದಷ್ಟೇ ಹೇಳಬಹುದು !!
ಸಂಡೂರಿನಲ್ಲಿ ಬೇಸಿಗೆ ಸಂದರ್ಭದಲ್ಲಿ ಕಾಡಿನಲ್ಲಿ ಬೆಂಕಿ ಹಚ್ಚುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಈ ರೀತಿ ಸುಟ್ಟರೆ ಮುಂದಿನ ದಿನಗಳಲ್ಲಿ ಹುಲ್ಲು ಚೆನ್ನಾಗಿ ಬರುತ್ತದೆ ಎನ್ನುವ ಅಭಿಪ್ರಯವಿದೆ. ಆದರೆ ಇಂತಹ ಕೃತ್ಯ ಎಸಗಿದಾಗ ಆಗುವ ನಷ್ಟದ ಅಂದಾಜು ಇವರಿಗಿದೆಯೆ ??
ಕಾಡಿನ ಪ್ರಾಣಿಗಳು, ಏಷ್ಟೋ ವರ್ಷಗಳ ಮರಗಳು, ಪಕ್ಷಿ ಸಂಕುಲ ಅಲ್ಲದೆ ಇಲ್ಲಿ ಸಿಗುವ ವಿವಿಧ ಬಗೆಯ ಔಷದಿ ಗುಣಗಳುಳ್ಳ ಗಿಡಗಳು ಎಲ್ಲವೂ ನಾಶವಾಗುತ್ತವೆ. ಈಗಾಗಲೇ ಉರಿ ಬಿಸಿಲಿಗೆ ತತ್ತರಿಸುತ್ತಿರುವ ನಮಗೆ ಈ ರೀತಿಯ ಘಟನೆಗಳು ಮುಂದಿನ ದಿನಗಳು ಇನ್ನೂ ಕಷ್ಟಕರವಾಗಿರಲಿದೆ ಎನ್ನುವ ಮುನ್ಸೂಚನೆ.
ಕಾಡಿನ ನಾಶ ಒಂದೆಡೆ ಆದರೆ, ಇದನ್ನು ಆರಿಸುವ ಕೆಲಸ ಮಾಡುವ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪಾಡು ಹೇಳಿರಿ, ಅವರಿಗೂ ಕುಟುಂಬ , ಮಕ್ಕಳು ಇರುತ್ತಾರೆ ಅಲ್ಲವೇ ?? ನೀವು ಮಾಡುವ ಇಂತಹ ಕೃತ್ಯಗಳು ಮತ್ತೊಬ್ಬರ ಜೀವನಕ್ಕೆ ಕಂಟಕ ತರುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವೇ.
ಪ್ರತಿ ಬಾರಿ ಅರಣ್ಯ ಇಲಾಖೆಯ ಕಡೆ ಕೈ ಮಾಡುವ ನಾವುಗಳು ಇಂದು ಏನು ಹೇಳಬೇಕು. ಅರಣ್ಯ ಇಲಾಖೆಯ ಸಿಬ್ಬಂದಿಗಳ ಶ್ರಮ ಹಾಗೂ ಕಷ್ಟ ಯಾರಿಗೂ ಬೇಡ. ದಯವಿಟ್ಟು ಇಂಥ ಕೆಲಸ ಮಾಡುವವರ ಬಗ್ಗೆ ಮಾಹಿತಿ ಸಿಕ್ಕರೆ ಸಂಭಂದಪಟ್ಟ ಇಲಾಖೆಗೆ ತಿಳಿಸಿ.
ಬೇರೆಯವರು ಬದಲಾಗಬೇಕು, ನಮಗೆ ಒಳ್ಳೆಯದನ್ನು ಮಾಡಬೇಕು ಎಂದು ಬಯಸುವ ನಾವು ನಮ್ಮ ಬದಲಾವಣೆ ಮರೆತ್ತಿದ್ದೇವೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಆಗದಂತೆ ಸಹಕರಿಸಿ.
ಮತ್ತೊಮ್ಮೆ ಇಂತಹ ಕೃತ್ಯ ಎಸಗಿದ ನೀಚ ಮನಸುಗಳಿಗೆ ಧಿಕ್ಕಾರ !!
#ಅರಣ್ಯಉಳಿಸಿ