ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲೆ

  • Home
  • India
  • Sagar
  • ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲೆ ರೈತರಿಗಾಗಿ ರೈತರಿಗೋಸ್ಕರ

ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಸಿದ್ಧಪಡಿಸಲಾಗಿರುವ ‘ಕಸ್ತೂರಿ ರಂಗನ್ ವರದಿ’ ಜಾರಿಯಾದರೆ ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ,ಹೊಸನಗರ,ಶಿಕಾ...
21/08/2026

ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಸಿದ್ಧಪಡಿಸಲಾಗಿರುವ ‘ಕಸ್ತೂರಿ ರಂಗನ್ ವರದಿ’ ಜಾರಿಯಾದರೆ ನಮ್ಮ ಶಿವಮೊಗ್ಗ ಜಿಲ್ಲೆಯ ಸಾಗರ,ಹೊಸನಗರ,ಶಿಕಾರಿಪುರ,ತೀರ್ಥಹಳ್ಳಿ ತಾಲೂಕುಗಳ ರೈತರು, ಅರಣ್ಯವಾಸಿಗಳು, ಬುಡಕಟ್ಟು ಜನಾಂಗದವರು ಮತ್ತು ಸಾಮಾನ್ಯ ಜನರ ಆರ್ಥಿಕ ಹಾಗೂ ಸಾಮಾಜಿಕ ಜೀವನಕ್ಕೆ ತೀವ್ರ ಧಕ್ಕೆಯಾಗಲಿದೆ.

ಈ ವಿಷಯದ ಗಂಭೀರತೆಯನ್ನು ಪರಿಗಣಿಸಿ, ನಮ್ಮ ಸಂಘಟನೆಯು ಕಸ್ತೂರಿ ರಂಗನ್ ವರದಿಗೆ ಸೇರ್ಪಡೆಯಾದ ಗ್ರಾಮಗಳ ಮುಖಂಡರನ್ನು ಬೇಟಿ ಮಾಡಿ ಮುಂದಿನ ಹೋರಾಟದ ಬಗ್ಗೆ ಗ್ರಾಮಸ್ಥರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಲುವಾಗಿ , ಸಾಗರ ತಾಲೂಕಿನ ಎಲ್ಕುಂದ್ಲಿ, ಮನೆ ಘಟ್ಟ ಗ್ರಾಮಗಳ ಮುಖಂಡರನ್ನು ಜಿಲ್ಲಾ ಅಧ್ಯಕ್ಷರಾದ ದಿನೇಶ್ ಶಿರವಾಳ ನೇತೃತ್ವದಲ್ಲಿ ಭೇಟಿ ಮಾಡಿ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಆ ನಿಟ್ಟಿನಲ್ಲಿ ಹೋರಾಟ ರೂಪಿಸಬೇಕೆಂದು ಸುದೀರ್ಘ ಚರ್ಚೆ ನಡೆಸಲಾಯಿತು.

“ಮಲೆನಾಡು ಭಾಗದ ಜನರ ಹಿತರಕ್ಷಣೆ ನಮಗೆ ಮುಖ್ಯ. ಜನಜೀವನಕ್ಕೆ ಮಾರಕವಾಗುವ ಹಾಗೂ ಅಭಿವೃದ್ಧಿಗೆ ತೊಡಕಾಗುವ ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ಕೈ ಬಿಡಬೇಕು .

ನಮ್ಮ ಜನರ ಹಕ್ಕುಗಳಿಗಾಗಿ, ಮತ್ತು ರೈತರ ಹಿತಕ್ಕಾಗಿ ನಮ್ಮ ಹೋರಾಟ ನಿರಂತರ.

ನಿಮ್ಮ ಭರವಸೆ - ನಮ್ಮ ಜವಾಬ್ದಾರಿ!
#ಶಿವಮೊಗ್ಗ_ಜಿಲ್ಲಾ_ರೈತಸಂಘ

ನಾಡಿನ ಸಮಸ್ತ ಭಕ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಜಗನ್ಮಾತೆ ಎಲ್ಲರಿಗೂ ಸುಖ, ಸಮೃದ್ಧಿ, ಆರೋಗ್ಯ, ಯಶಸ್ಸುಗಳನ್ನು ಕ...
21/08/2026

ನಾಡಿನ ಸಮಸ್ತ ಭಕ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು.

ಜಗನ್ಮಾತೆ ಎಲ್ಲರಿಗೂ ಸುಖ, ಸಮೃದ್ಧಿ, ಆರೋಗ್ಯ, ಯಶಸ್ಸುಗಳನ್ನು ಕರುಣಿಸಲಿ, ನಾಡಿಗೆ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ.
#ವರಮಹಾಲಕ್ಷ್ಮಿ
#ಶಿವಮೊಗ್ಗ_ಜಿಲ್ಲಾ_ರೈತಸಂಘ

21/08/2026

ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಏಳಿಗೆಗೆ ತಮ್ಮ ಜೀವನವನ್ನೇ ಸಮರ್ಪಿಸಿದ ದೂರದೃಷ್ಟಿಯ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.

ರಾಜ್ಯದಲ್ಲಿ ಉಳುವವನೇ ಹೊಲದೊಡೆಯ ಕಾನೂನು ಜಾರಿಗೆ ತಂದ ಹಾಗೂ ಸಮಾನತೆ, ಸಾಮಾಜಿಕ ನ್ಯಾಯ, ಭೂಸುಧಾರಣೆ ಹಾಗೂ ಶೋಷಿತ ಸಮುದಾಯಗಳ ಸಬಲೀಕರಣಕ್ಕಾಗಿ ಅವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯ. ಅವರ ಆದರ್ಶಗಳು ಮತ್ತು ಜನಪರ ಆಡಳಿತದ ಚಿಂತನೆಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿ.
#ಡಿ_ದೇವರಾಜ್_ಅರಸ್
#ಶಿವಮೊಗ್ಗ_ಜಿಲ್ಲಾ_ರೈತಸಂಘ

ಆತ್ಮೀಯರೇ ಸಾಗರ ತಾಲೂಕಿನ ಬಂದಗದ್ದೆ ಗ್ರಾಮದ ದಲಿತ ಬಡ ಕುಟುಂಬದ ಶ್ರೀ ಕೇಶವ ಹಾಗೂ ರಂಜಿತಾ ಎಂಬ ದಂಪತಿಗಳ ಮುದ್ದಿನ ಮಗಳಾದ ಮೈನಾ ಎಂಬ ಎರಡು ವರ್ಷ...
20/08/2026

ಆತ್ಮೀಯರೇ ಸಾಗರ ತಾಲೂಕಿನ ಬಂದಗದ್ದೆ ಗ್ರಾಮದ ದಲಿತ ಬಡ ಕುಟುಂಬದ ಶ್ರೀ ಕೇಶವ ಹಾಗೂ ರಂಜಿತಾ ಎಂಬ ದಂಪತಿಗಳ ಮುದ್ದಿನ ಮಗಳಾದ ಮೈನಾ ಎಂಬ ಎರಡು ವರ್ಷ ಎರಡು ತಿಂಗಳಿನ ಬಾಲಕಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು ಇಂದು ಅವರ ಮನೆಗೆ ಜಿಲ್ಲಾಧ್ಯಕ್ಷರಾದ ದಿನೇಶ್ ಶಿರವಾಳ,ಕಾರ್ಯದ್ಯಕ್ಷರಾದ ರಮೇಶ್ ಕೆಳದಿ,ತಾಲೂಕು ಅಧ್ಯಕ್ಷರಾದ ರಾಮಚಂದ್ರ ಮನೆಘಟ್ಟ ಅವರು ಬೇಟಿ ನೀಡಿ ಕುಟುಂಬದವರಿಗೆ ದೈರ್ಯತುಂಬಿದರು.

ಬೆಂಗಳೂರಿನ ಜಯದೇವ ಹಾಸ್ಪಿಟಲ್ ನಲ್ಲಿ ತುರ್ತಾಗಿ ಆಪರೇಷನ್ ಮಾಡುವ ಸಲುವಾಗಿ ಮೂರರಿಂದ ನಾಲ್ಕು ಲಕ್ಷ ಹಣ ಬೇಕಾಗಿದೆ ಹಾಗಾಗಿ ಈ ಕೆಳಗಿನ ಪೋನ್ ಪೇ ನಂಬರ್ ಗೆ ಹಣ ಹಾಕಿ ಅಂತ ವಿನಂತಿಸಿಕೊಳ್ಳುತ್ತೇವೆ🙏
ಪೋನ್ ಪೇ ನಂಬರ್86188 97471 ಗುರುಮೂರ್ತಿ(ಮಗುವಿನ ದೊಡ್ಡಪ್ಪ).

ನಿಮ್ಮ ಒಂದೊಂದು ರೂಪಾಯಿ ಕೂಡ ಆ ಮಗುವಿನ ಹಾಗೂ ಅಸಹಾಯಕ ಕುಟುಂಬಕ್ಕೆ ನೆರವಾಗುತ್ತದೆ.

ಹಣ ಹಾಕಿದವರು ಸ್ಕ್ರೀನ್ ಶಾಟ್ ಹಾಕಬಹುದು

ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು_ಗದ್ದೆಮನೆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿರಿ ಕಾಂಕ್ರಿಟ್ ಪ್ರೊಡಕ್ಟ್ ಎ...
20/08/2026

ಸಾಗರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು_ಗದ್ದೆಮನೆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿರಿ ಕಾಂಕ್ರಿಟ್ ಪ್ರೊಡಕ್ಟ್ ಎಂಬ ಘಟಕದಿಂದ ಸ್ಥಳೀಯರಿಗೆ ಹಾಗೂ ಕೃಷಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು,ಕಾನೂನುಬದ್ದ ಕ್ರಮ ಕೈಗೊಳ್ಳಲು ಸಹಕರಿಸಬೇಕೆಂದು ಜಿಲ್ಲಾಧ್ಯಕ್ಷರಾದ ದಿನೇಶ್ ಶಿರವಾಳ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
#ಸಾಗರ

ಹನೂರು ಪ್ರಕರಣದಲ್ಲಿ 3 ಜನರ ಸಾವಾಗಿದೆ ,ಯಾವ ಕೋನದಿಂದಲೂ ನೋಡಿದರೂ ಇದೊಂದು ನಿರ್ಲಕ್ಷಿಸಬಹುದಾದ ಎನ್ಕೌಂಟರ್ ಪ್ರಕರಣ ಅಲ್ಲವೇ ಅಲ್ಲ.ಇದೊಂದು ದೊಡ್...
19/08/2026

ಹನೂರು ಪ್ರಕರಣದಲ್ಲಿ 3 ಜನರ ಸಾವಾಗಿದೆ ,ಯಾವ ಕೋನದಿಂದಲೂ ನೋಡಿದರೂ ಇದೊಂದು ನಿರ್ಲಕ್ಷಿಸಬಹುದಾದ ಎನ್ಕೌಂಟರ್ ಪ್ರಕರಣ ಅಲ್ಲವೇ ಅಲ್ಲ.ಇದೊಂದು ದೊಡ್ಡ ಗಂಭೀರ ದುರಂತ.ರಾಜ್ಯ ಸರಕಾರ ಅರಣ್ಯ ಇಲಾಖೆ ಹೊಣೆಗಾರಿಕೆ ಪ್ರದರ್ಶಿಸಬೇಕು.

ಕಾರಣ, ಪರಿಸ್ಥಿತಿ ಏನೇ ಇದ್ದರೂ ಮಾನವತೆ ಪರ ಇರೋರೆಲ್ಲ ಇದನ್ನು ಸಂಶಯದಿಂದ ನೋಡಲೇಬೇಕು ಮತ್ತು ವಿರೋಧಿಸಲೇಬೇಕು.
ಕಳ್ಳರೇ ಆಗಿದ್ದರೂ, ಗುಂಡು ಹೊಡೆಯಲೇಬೇಕಾದ ಅನಿವಾರ್ಯತೆ ಒದಗಿದ್ದರೆ ಜೀವ ಹಾನಿಯಾಗದಂತೆ ಕಾಲಿಗೆ ಹೊಡೆಯಬಹುದಿತ್ತು. ಈ ವೇಳೆ ಒಂದು ಸಾವಾಗಿದ್ದರೂ ಆಕಸ್ಮಿಕ ಅನ್ನಬಹುದಿತ್ತು. ಕತ್ತಲೆಯಲ್ಲೂ ಕೂಡ ಮೂರು ಸಾವಾಗಿದೆ.

"ಮನುಷ್ಯನನ್ನು ಗುಂಡಿಟ್ಟು ಕೊಲ್ಲಲು ಹಿಂಜರಿಯದ ಮನುಷ್ಯ ಮೃಗಗಳು ಕಾಡುಪ್ರಾಣಿಯ ರಕ್ಷಣೆ ಬಗ್ಗೆ ಮಾತನಾಡುವುದೇ ಬಹುದೊಡ್ಡ ವ್ಯಂಗ್ಯ"

ಉನ್ನತ,ನಿಷ್ಪಕ್ಷಪಾತ ತನಿಖೆಯಾಗಿ ಸತ್ಯ ಹೊರಗೆ ಬರಲೇಬೇಕು. ತಪ್ಪಾಗಿದ್ದರೇ ಅಪರಾಧಿಗಳು ಬೆಲೆ ತೆರಲೇಬೇಕು.

ಅರಣ್ಯ ರಕ್ಷಣೆ,ವನ್ಯಜೀವಿ ಪ್ರಾಣಿಗಳ ರಕ್ಷಣೆ ಜೊತೆ ಕಾಡಂಚಿನಲ್ಲಿ ವಾಸಮಾಡುತ್ತಿರುವ ಜನರ ರಕ್ಷಣೆಯು ಕೂಡ ಸರ್ಕಾರದ ಕೆಲಸ
#ಶಿವಮೊಗ್ಗ_ಜಿಲ್ಲಾ_ರೈತಸಂಘ

18/08/2026

ಸಾಗರ ತಾಲೂಕು ಅಧ್ಯಕ್ಷರಾದ ಡಾ.ರಾಮಚಂದ್ರಪ್ಪ ಮನೆಘಟ್ಟ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಶಿರವಾಳ,ಕಾರ್ಯಾಧ್ಯಕ್ಷರಾದ ರಮೇಶ್ ಕೆಳದಿ ಹಾಗೂ ಪದಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಶುಭ ಕೋರಿದರು.

ಪಾದರಸದಂತ ವ್ಯಕ್ತಿತ್ವದ ಸಾಗರ ತಾಲೂಕು ಅಧ್ಯಕ್ಷರಾದ ಡಾ.ರಾಮಚಂದ್ರಪ್ಪ ಮನೆಘಟ್ಟ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು .ಮಲೆನಾಡಿನ ಮಡಿಲಾದ ಸಾಗರ ತ...
17/08/2026

ಪಾದರಸದಂತ ವ್ಯಕ್ತಿತ್ವದ ಸಾಗರ ತಾಲೂಕು ಅಧ್ಯಕ್ಷರಾದ ಡಾ.ರಾಮಚಂದ್ರಪ್ಪ ಮನೆಘಟ್ಟ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು .

ಮಲೆನಾಡಿನ ಮಡಿಲಾದ ಸಾಗರ ತಾಲೂಕಿನ ಮನೆಘಟ್ಟ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ಶ್ರೀ ರಾಮಚಂದ್ರಪ್ಪನವರು , ತಮ್ಮ ಶ್ರಮ, ಛಲ ಮತ್ತು ನಿಷ್ಠೆಯಿಂದ ಜೀವನದಲ್ಲಿ ಉನ್ನತ ಎತ್ತರಕ್ಕೇರಿದ ಅಪರೂಪದ ಸಾಧಕರು.

​1989ರಲ್ಲಿ 'ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್' ಶಿಕ್ಷಣವನ್ನು ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ ಪೂರ್ಣಗೊಳಿಸಿದ ಇವರು, ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದು ಮಹಾರಾಷ್ಟ್ರದ ಪುಣೆಯಲ್ಲಿ.

​ಪರಿಚಿತರೊಬ್ಬರ ಮಾರ್ಗದರ್ಶನದಲ್ಲಿ ಪುಣೆಯ ಪ್ರಸಿದ್ಧ 'ದೀವಗಿ ಮೆಟಲ್‌ವೇರ್ (Divgi Metalware Pvt Ltd)' ಕಂಪನಿಗೆ ಇಂಜಿನಿಯರ್ ಆಗಿ ಸೇರ್ಪಡೆಗೊಂಡ ಇವರು, ತಮ್ಮ ದಕ್ಷತೆಯಿಂದ ಬಡ್ತಿ ಪಡೆಯುತ್ತಾ 'ಅಸಿಸ್ಟೆಂಟ್ ಮ್ಯಾನೇಜರ್' ಹುದ್ದೆಯವರೆಗೆ ಬೆಳೆದರು. ಇದೇ ಸಂಸ್ಥೆಯಲ್ಲಿ ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುದೀರ್ಘ ಹಾಗೂ ಶ್ರೇಷ್ಠ ಸೇವೆ ಅವರ ವೃತ್ತಿಪರತೆಗೆ ಹಿಡಿದ ಕನ್ನಡಿ.

​ತಮ್ಮ ಸುದೀರ್ಘ ಅನುಭವದ ನಂತರ, 'ಬಿಗ್ ವಿಷನ್ ವಾಟರ್‌ಟೇಕ್ (Big Vision Watertake Pvt Ltd)' ಕಂಪನಿಯ ಸಂಸ್ಥಾಪಕ ಸದಸ್ಯರಾಗಿ (Founder Member) ಜವಾಬ್ದಾರಿ ವಹಿಸಿಕೊಂಡರು. ಈ ಸಂಸ್ಥೆಯನ್ನು ಅತ್ಯಂತ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಭಾರತದ ಸುಮಾರು 10 ರಿಂದ 12 ರಾಜ್ಯಗಳಲ್ಲಿ ಸಂಸ್ಥೆಯ ಬ್ರಾಂಡ್ ಹಾಗೂ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದರು.

​ಉದ್ಯಮ ರಂಗದಲ್ಲಿ ಮತ್ತಷ್ಟು ಸಾಧಿಸುವ ಹಂಬಲದಿಂದ 2017 ರಲ್ಲಿ ಪುಣೆಯಲ್ಲಿ ಸ್ವತಃ 'ರೆಡೆರಾ ಇಂಡಿಯಾ (Redera India Pvt Ltd)' ಎಂಬ ಕಂಪನಿಯನ್ನು ಹುಟ್ಟುಹಾಕಿದರು. ಇವರ ಈ ಸಾಧನೆ ಮತ್ತು ಉದ್ಯಮಶೀಲತೆಯನ್ನು ಗುರುತಿಸಿ, 2017ರಲ್ಲಿ 'ಮಾರ್ಕೆಟಿಂಗ್ ಫೀಲ್ಡ್'ನಲ್ಲಿ ಗೌರವ ಡಾಕ್ಟರೇಟ್ ಪದವಿ ಲಭಿಸಿತು. ಜೊತೆಗೆ ಪುಣೆಯಲ್ಲಿ ಅತ್ಯಂತ ಗೌರವಾನ್ವಿತ 'ಸಂಘರ್ಷ ನಾಯಕ' ಪ್ರಶಸ್ತಿಗೂ ಇವರು ಭಾಜನರಾದರು.

​ನಗರ ಜೀವನದಲ್ಲಿ ಯಶಸ್ಸಿನ ಶಿಖರವೇರಿದರೂ, ತಮ್ಮ ಹುಟ್ಟೂರಿನ ಮಣ್ಣಿನ ಋಣ ತೀರಿಸಬೇಕೆಂಬ ಉದಾತ್ತ ಚಿಂತನೆಯಿಂದ 05:08:2020 ರಲ್ಲಿ ಜನ್ಮಭೂಮಿಯಾದ ಸಾಗರಕ್ಕೆ ಮರಳಿದರು.

​ಪ್ರಸ್ತುತ "ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ (ಶಿವಮೊಗ್ಗ ಜಿಲ್ಲೆ)"ಯ ಸಾಗರ ತಾಲೂಕು ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ರೈತರ ಹಕ್ಕುಗಳಿಗಾಗಿ ಹಾಗೂ ಅವರ ಏಳಿಗೆಗಾಗಿ ಸದಾ ಮುಂಚೂಣಿಯಲ್ಲಿ ನಿಂತು ಜನಸೇವೆ ಮಾಡುತ್ತಿದ್ದಾರೆ.

ಇದೆಲ್ಲದರ ನಡುವೆ ​ಕಳೆದ 20 ವರ್ಷಗಳಿಂದ ಕೃಷ್ಣಪ್ರಜ್ಞೆಯಲ್ಲಿ ತೊಡಗಿ ಇಸ್ಕಾನ್ ನಲ್ಲಿ ಪ್ರಭುಪಾದ ಆಶ್ರಯ ಮತ್ತು ಶ್ರೀ ಜಯಪತಾಕ ಸ್ವಾಮೀಜಿಯ ಗುರು ಆಶ್ರಯ ಪಡೆದುಕೊಂಡಿರುತ್ತಾರೆ. ಹಾಗೂ ನಿರಂತರವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

​ತಾಂತ್ರಿಕ ಜ್ಞಾನ, ಸುದೀರ್ಘ ಉದ್ಯಮದ ಅನುಭವ ಹಾಗೂ ಸಮಾಜಮುಖಿ ಕಳಕಳಿಯನ್ನು ಮೈಗೂಡಿಸಿಕೊಂಡಿರುವ ಡಾ.ರಾಮಚಂದ್ರಪ್ಪ ಮನೆಘಟ್ಟನವರು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದಾರೆ.

ಭಗವಂತನು ಅವರಿಗೆ ಆಯುರ್ ಆರೋಗ್ಯ ನೀಡಿ ಇನ್ನಷ್ಟು ಜನರ,ರೈತರ ಸೇವೆ ಮಾಡುವ ಭಾಗ್ಯ ನೀಡಲಿ ಅಂತ ಹಾರೈಸುತ್ತೇವೆ.
#ಶಿವಮೊಗ್ಗ_ಜಿಲ್ಲಾ_ರೈತಸಂಘ
#ಸಾಗರ

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು! ಶ್ರಾವಣ ಮಾಸದ ಈ ಶುಭ ದಿನವು ಮಾನವ ಮತ್ತು ನಿಸರ್ಗದ ನಡುವಿನ ಅಪೂರ್ವ ಬಾಂಧವ್ಯದ ಸಂಕೇ...
17/08/2026

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು! ಶ್ರಾವಣ ಮಾಸದ ಈ ಶುಭ ದಿನವು ಮಾನವ ಮತ್ತು ನಿಸರ್ಗದ ನಡುವಿನ ಅಪೂರ್ವ ಬಾಂಧವ್ಯದ ಸಂಕೇತ.

ಅಣ್ಣನ ಏಳಿಗೆಗಾಗಿ ತಂಗಿ ಹಾರೈಸುವ ಈ ಶುಭದಿನದಂದು, ಭೂತಾಯಿಯ ಒಡಲನ್ನು ಕಾಯುವ ನಾಗದೇವರು ಎಲ್ಲರಿಗೂ ಆಯುರಾರೋಗ್ಯ, ಸುಖ-ಸಮೃದ್ಧಿ ಹಾಗೂ ಸರ್ವ ರಕ್ಷಣೆಯನ್ನು ಕರುಣಿಸಲಿ. ಪ್ರತಿಯೊಬ್ಬರ ಜೀವನದಲ್ಲೂ ಸಂತಸದ ಸಿಹಿ ತುಂಬಿರಲಿ, ಪ್ರಕೃತಿಯನ್ನು ಪ್ರೀತಿಸುವ ನಮ್ಮ ಸುಂದರ ಸಂಪ್ರದಾಯ ಸದಾ ಮುಂದುವರಿಯಲಿ.
#ಶಿವಮೊಗ್ಗ_ಜಿಲ್ಲಾ_ರೈತಸಂಘ

Address

Sagara
Sagar

Website

Alerts

Be the first to know and let us send you an email when ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Shortcuts

Share

Category