ಸಾಧಕರ ಹಾದಿ/Sadhakara Haadi

ಸಾಧಕರ ಹಾದಿ/Sadhakara Haadi Achievers information and Live program �

30/09/2021
 #ಸಾಧಕರ_ಕಥೆ- 41 #ಸಾಧಕರ_ಹಾದಿ ಜೊತೆ #ಹರಿಪ್ರಸಾದ್_ನಂದಳಿಕೆ ಇವರ #ಸಾಧನೆಯ_ಕಥೆ        ಬರಹ: ಸಾಯಿ ದೀಕ್ಷಿತ್ ಪುತ್ತೂರು                 ...
11/08/2021

#ಸಾಧಕರ_ಕಥೆ- 41
#ಸಾಧಕರ_ಹಾದಿ ಜೊತೆ
#ಹರಿಪ್ರಸಾದ್_ನಂದಳಿಕೆ ಇವರ
#ಸಾಧನೆಯ_ಕಥೆ

ಬರಹ: ಸಾಯಿ ದೀಕ್ಷಿತ್ ಪುತ್ತೂರು
#ಸಾಧಕರ_ಹಾದಿ

ತನಗಿರುವ ತೊಡಕುಗಳನ್ನೇ ಮೂಲವಾಗಿ ಇಟ್ಟುಕೊಂಡು, ಕೊರಗಿ ಕೊಂಡು ಕೂರುವ ಬದಲು, ಇದ್ದಿದ್ದರಲ್ಲೇ ಖುಷಿಯನ್ನು ಹುಡುಕಿಕೊಂಡು, ಜೀವನದಲ್ಲಿ ಮುಂದೆ ಬರುವ ದಾರಿಯಲ್ಲಿ ಹೆಜ್ಜೆಯಿಡುತ್ತಾ ಯಶಸ್ಸಿನ ಮೆಟ್ಟಿಲೇರುವುದೇ ದೊಡ್ಡ ಸಾಧನೆ. ಅಂತಹ ನೋವುಗಳನ್ನು ಮರೆತು ಇಂದು ದೊಡ್ಡ ಸಾಧಕನಾಗಿ ಹೊರಹೊಮ್ಮಿದ ಹರಿಪ್ರಸಾದ್ ನಂದಳಿಕೆ ಇವರ ಸಾಧನೆಯ ಕಥೆ ನಿಮ್ಮ ಜೊತೆ.

ಇವರು ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಶ್ರೀ ಸಿದ್ದಪ್ಪ ಮತ್ತು ಶ್ರೀಮತಿ ಲಲಿತಾ ಇವರ ಕೊನೇಯ ಪುತ್ರನಾಗಿ ಜನಿಸಿದವರು. ಇವರಿಗೆ ಒಬ್ಬ ಸಹೋದರ ಮತ್ತು ಇಬ್ಬರು ಸಹೋದರಿಯರು ಇದ್ದಾರೆ.

ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ನಂದಳಿಕೆ ಸರ್ಕಾರಿ ಪ್ರಾಥಮಿಕ ಬೋರ್ಡ್ ಶಾಲೆ , ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್ ನಲ್ಲಿ ಪೂರೈಸಿ , ಪದವಿ ಶಿಕ್ಷಣವನ್ನು ಮಂಗಳೂರಿನಲ್ಲಿ ಮುಗಿಸಿರುತ್ತಾರೆ. ಪ್ರಸ್ತುತ ವಿಜಯವಾಣಿ ಹಾಗೂ ದೈಜಿವರ್ಲ್ಡ್ ವಾಹಿನಿಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ ಇವರ ತಂದೆ ತಾಯಿ ಕೂಲಿ ಕೆಲಸ ಮಾಡಿ ಇವರನ್ನು ಸಾಕಿದ್ದಾರೆ. ಇವರಿಗೆ ಶಾಲೆ ಕಾಲೇಜು ಕಲಿಯಬೇಕು ಅನ್ನೋ ಛಲವಿತ್ತು. ಆದರೆ, ಆರ್ಥಿಕವಾಗಿ ಕುಗ್ಗಿದ್ದರು. ಇವರು ಇವರ ಛಲವನ್ನು ಬಿಡದೆ ಶಾಲಾ ಬಿಡುವಿನ ವೇಳೆಯಲ್ಲಿ ಕೂಲಿ ಕೆಲಸಗಳಿಗೆ ಹೋಗಿ, ಹಣ ಹೊಂದಿಸಿಕೊಂಡು ಶಿಕ್ಷಣವನ್ನು ಪಡೆಯುತ್ತಾರೆ. ಶಿಕ್ಷಣದ ಜೊತೆಗೆ ಕಲೆಯಲ್ಲಿ ಅಭಿರುಚಿಯನ್ನು ಹೊಂದಿದ ಇವರು ಕಲಾಮಾತೆಯ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡರು. ಕಲಾಮಾತೆಯ ಪೂಜೆಗೆ ಪ್ರತಿಫಲವಾಗಿ ಈಗ ಇವರು ಪತ್ರಕರ್ತರಾಗಿ, ರಂಗಭೂಮಿ ಹಾಗೂ ತುಳು ಸಿನಿಮಾ ರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಬಾಲ್ಯದಲ್ಲಿ ಪ್ರತಿಭಾ ಕಾರಂಜಿ ಮೂಲಕ ಪ್ರತಿಭೆಯನ್ನು ಅನಾವರಣ ಮಾಡಿದ ಇವರು ಮುಂದೆ. ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ ವೇಳೆ ನೃತ್ಯ , ನಟನೆಯ ಜೊತೆ ಸಾಹಿತ್ಯ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಎಳೆಯ ವಯಸ್ಸಿನಲ್ಲೇ ನಾಟಕ ರಚನೆಯಲ್ಲಿ ತೊಡಗಿಸಿಕೊಂಡ ಇವರು ಹಲವಾರು ನಾಟಕವನ್ನು ಬರೆಯುತ್ತಾರೆ.‌

ಹರಿಪ್ರಸಾದ್ ನಂದಳಿಕೆ ಎಂದ ತಕ್ಷಣ ನೆನಪಾಗುವುದೇ ಅವರ ವಿಶೇಷ ಬರವಣಿಗೆಯ ಶೈಲಿ. ಅದೆಷ್ಟೋ ಜನ ಇವರ ಮುಖ ಪರಿಚಯವಿಲ್ಲದಿದ್ದರೂ ಇವರ ಬರವಣಿಗೆಯ ಪರಿಚಯವನ್ನಂತು ಮಾಡಿಕೊಂಡಿದ್ದಾರೆ.
ತುಳು, ಕನ್ನಡ ಭಾಷೆಯಲ್ಲಿ ಹಲವಾರು ಕಥೆ, ಕವನ , ನಾಟಕ ,ಲೇಖನಗಳನ್ನು ಬರೆಯುವುದರ ಮೂಲಕ ಸಾಹಿತ್ಯ ರಂಗದಲ್ಲಿ ಪರಿಚಿತರಾಗಿದ್ದಾರೆ. ಈಗಾಗಲೇ ಹಲವಾರು ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗೋಷ್ಟಿ, ಗೋಷ್ಠಿಗಳಲ್ಲಿ ತೊಡಗಿಸಿಕೊಂಡು ಸಾಹಿತ್ಯ ರಂಗದಲ್ಲಿ ಮಿಂಚುತ್ತಿದ್ದಾರೆ.

ಕಳೆದ ಹದಿನೈದು ವರ್ಷಗಳಲ್ಲಿ ವಿವಿಧ ಸಂಸ್ಥೆಯಲ್ಲಿ ಪತ್ರಕರ್ತರಾಗಿ ದುಡಿದ ಇವರು ಪ್ರಸ್ತುತ ವಿಜಯವಾಣಿ ದಿನಪತ್ರಿಕೆ ಹಾಗೂ ದೈಜಿವರ್ಲ್ಡ್ ಸುದ್ದಿ ವಾಹಿನಿಯ ವರದಿಗಾರರಾಗಿ ದುಡಿಯುತ್ತಿದ್ದಾರೆ. ಹಲವಾರು ಸಮಾಜದ ಆಗು ಹೋಗುಗಳನ್ನು ಸಮಾಜದ ಮುಖ್ಯವಾಹಿನಿಗೆ ತಿಳಿಸುವುದರ ಜೊತೆಯಲ್ಲಿ ಗ್ರಾಮೀಣ ಭಾಗದ ಹಲವಾರು ಸಮಸ್ಯೆಗಳನ್ನು ಪತ್ರಿಕೆಯಲ್ಲಿ ವರದಿಯನ್ನು ಮಾಡುವುದರ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯುವುದರೊಂದಿಗೆ ಸಮಸ್ಯೆಗಳಿಗೆ ಮುಕ್ತಿ ನೀಡುವಲ್ಲಿ ಪ್ರಯತ್ನಿಸುತ್ತಿದ್ದಾರೆ.

ಹಲವಾರು ದೇವಸ್ಥಾನ ಹಾಗೂ ದೈವಸ್ಥಾನದ ಭಕ್ತಿಗೀತೆಗಳನ್ನು ರಚಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಭಕ್ತಿಗೀತೆಯಲ್ಲಿ ಸಾಹಿತ್ಯವನ್ನು ಬರೆದಿದ್ದು, ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಭಕ್ತಿಗೀತೆ ರಚನೆಯ ಜೊತೆಯಲ್ಲಿ ನಿರ್ದೇಶನವನ್ನು ಕೂಡ ಮಾಡಿದ್ದಾರೆ. ಅಲ್ಲದೆ ಹಲವಾರು ಸಾಹಿತ್ಯಗಳನ್ನು ಬೇರೆಯವರಿಗೆ ಬರೆದು ಕೊಟ್ಟಿದ್ದಾರೆ.

ಇವರು ಕಳೆದ 15 ವರ್ಷಗಳಿಂದ ತುಳು ನಾಟಕ ರಂಗದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ಹಲವಾರು ಸ್ಥಳೀಯ ನಾಟಕ ತಂಡಗಳಲ್ಲಿ ಅಭಿನಯಿಸಿದ ಇವರು ಪ್ರಸ್ತುತ ಕಳೆದ 8 ವರ್ಷಗಳಿಂದ ತುಳುನಾಡಿ ಶ್ರೇಷ್ಠ ತಂಡವಾದ "ಕಿನ್ನಿಗೋಳಿ ವಿಜಯ ಕಲಾವಿದರು" ನಾಟಕ ತಂಡದಲ್ಲಿ ಹಾಸ್ಯ ಕಲಾವಿರಾಗಿ ನಟಿಸುತ್ತಿದ್ದಾರೆ. ಮುಂಬಯಿ, ಸೂರತ್, ಬೆಂಗಳೂರು, ಬರೋಡ, ಕಾಸರಗೋಡು, ಅವಿಭಜಿತ ದ.ಕ, ಉಡುಪಿ ಜಿಲ್ಲೆಯಾದ್ಯಂತ ನಾಟಕ ಪ್ರದರ್ಶನವನ್ನು ನೀಡಿದ್ದಾರೆ. ಸುಮಾರು 750ಕ್ಕೂ ಅಧಿಕ ನಾಟಕ ಪ್ರದರ್ಶನದಲ್ಲಿ ಅಭಿನಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜೊತೆಗೆ ತುಳು ಹಾಗೂ ಕನ್ನಡ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ನಾಟಕ ರಚನೆಯ ಜೊತೆಯಲ್ಲಿ ನಾಟಕದ ನಿರ್ದೇಶನದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

ಇವರು "ಆಲ್ ಎನ್ನಾಲ್", "ಒಯಿಕ್ಲ ಕಾಸ್ ಬೋಡು", "ತೂಪಿನಾರೇ ಆಪಿನಾರ್", "ಲೆಕ್ಕತತ್ತಿಬೊಕ್ಕ", "ಕೇರಿಗೊರಿ ಕೇಸರಿ", "ಬಿಲೆ ಕಟ್ಟರೆ ಆವಂದಿನ", "ಬೈರಾಸ್ ಭಾಸ್ಕರೆ", "ಕಂಡಡೊರಿ ದಂಡ್ ಡೊರಿ", "ಕಾನೂನುದ ಕಣ್ಣ್" ಹೀಗೆ ಅನೇಕ ಪ್ರಸಿದ್ಧ ನಾಟಕಗಳಲ್ಲಿ ಹಾಸ್ಯ ಪಾತ್ರದ ಮೂಲಕ ಕಲಾಭಿಮಾನಿಗಳನ್ನು ನಗಿಸುವ ಪ್ರಯತ್ನದ ಜೊತೆ ಕಲಾ ಸೇವೆಯಲ್ಲಿ ತೊಡಗಿದ್ದಾರೆ.
ತಾನೊಬ್ಬ ಕಲಾವಿದನಾಗಿದ್ದುಕೊಂಡು ತನ್ನಂತೆ ಇತರರಿಗೂ ಅವಕಾಶ ನೀಡಬೇಕೆಂದು ಬೆಳ್ಮಣ್ ನಲ್ಲಿ "ತುಳುವ ಸಿರಿ ಕಲಾವಿದೆರ್" ಎನ್ನುವ ನಾಟಕ ತಂಡವನ್ನು ಕಟ್ಟಿಕೊಂಡು ಯುವ ಕಲಾವಿದರಿಗೆ ಮಾರ್ಗದರ್ಶನ ಮಾಡುತ್ತಾ ಬರುತ್ತಿದ್ದಾರೆ. ಇವರ ನಾಟಕ ರಂಗದ ಸಾಧನೆಯ ಹಿಂದೆ ಗುರು ಹಾಗೂ ಮಾರ್ಗದರ್ಶಕರಾದ "ಕಿನ್ನಿಗೋಳಿ ವಿಜಯ ಕಲಾವಿದರು" ತಂಡದ ಯಜಮಾನ "ಶರತ್ ಶೆಟ್ಟಿ" ಹಾಗೂ "ರಂಗಭೂಮಿಯ ಭೀಷ್ಮ" ಎಂದೇ ಪರಿಚಿತರಾದ ಹಿರಿಯ ನಿರ್ದೇಶಕ "ಜಗದೀಶ್ ಶೆಟ್ಟಿ ಕೆಂಚನಕೆರೆ"ಯವರ ಶ್ರಮವೂ ಇದೆ. ಅವರ ಪ್ರೋತ್ಸಾಹದಿಂದ ರಂಗಭೂಮಿಯಲ್ಲಿ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹರಿಪ್ರಸಾದ್ ನಂದಳಿಕೆ ನೆನಪಿಸಿಕೊಳ್ಳುತ್ತಾರೆ.

ಇವರ ರಂಗಭೂಮಿ ಹಾಗೂ ಪತ್ರಿಕಾ ರಂಗದ ಸೇವೆಗಾಗಿ ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ.
*ನಂದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ "ಮುಟ್ಟಿಕಲ್ಲು ನಾರಾಯಣ ಶೆಟ್ಟಿ" ಪ್ರಶಸ್ತಿ.
*ನಾಟಕ ರಂಗದ ಸಾಧನೆಗಾಗಿ "ತುಳುವೆರೆ ಬೊಳ್ಳಿ" ಪ್ರಶಸ್ತಿ, ಮತ್ತು "ಅತ್ಯುತ್ತಮ ಜಿಲ್ಲಾ ಸಂಘ ಸಂಸ್ಥೆ ಪ್ರಶಸ್ತಿ" ಹಾಗೂ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ" ಪಡೆದ ನಂದಳಿಕೆ
*ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ವತಿಯಿಂದ "ಸೌರಭ" ಪ್ರಶಸ್ತಿ.
*ಅಂತರಾಷ್ಟ್ರೀಯ ಜೇಸಿ ಸಂಸ್ಥೆಯ ಮುಂಡ್ಕೂರು ಭಾರ್ಗವ ಜೇಸಿ ಘಟಕದ ವತಿಯಿಂದ "ಕಲಾ ಪ್ರಶಸ್ತಿ" ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರವನ್ನು ಪಡೆದಿದ್ದಾರೆ.

"ತುಳುವ ಸಿರಿ ಕಲಾವಿದರು" ಬೆಳ್ಮಣ್ ನಾಟಕ ತಂಡದ ಸಾರಥಿಯಾಗಿದ್ದು, ಕಿನ್ನಿಗೋಳಿ "ವಿಜಯಾ ಕಲಾವಿದರು" ನಾಟಕ ತಂಡದ ಪ್ರಬುದ್ದ ಹಾಸ್ಯ ಕಲಾವಿದರಾಗಿ ಮಿಂಚುತ್ತಿರುವ ಇವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದು, ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಸದಸ್ಯರಾಗಿದ್ದು, ಕಾರ್ಕಳ ತಾಲೂಕು ಪತ್ರಕರ್ತ ಸಂಘದಲ್ಲಿಯೂ ಸದಸ್ಯರಾಗಿದ್ದಾರೆ ಮತ್ತು ಮೂಲ್ಕಿ ವಲಯ ಪತ್ರಕರ್ತರ ಸಮೂಹದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಬೆಳ್ಮಣ್ ಜೇಸಿಐ ಸಂಸ್ಥೆಯ ಸದಸ್ಯರಾಗಿದ್ದು, ಶ್ರೀ ಗುರುದುರ್ಗಾ ಮಿತ್ರ ಮಂಡಳಿ ರಿ. ನಂದಳಿಕೆ ಇದರ ಉಪಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ ಹೋಬಳಿ ಘಟಕದ ಕಾರ್ಯದರ್ಶಿಯಾಗಿದ್ದಾರೆ.

ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಅಡಕವಾಗಿರುತ್ತದೆ. ಸೂಕ್ತವಾದ ಪ್ರೋತ್ಸಾಹ ಹಾಗೂ ವೇದಿಕೆ ಹಾಗೂ ಸಹಕಾರ ಸಿಕ್ಕಾಗ ಸಾಧನೆಯನ್ನು ಮೆರೆಯಲು ಸಾಧ್ಯವಾಗುತ್ತದೆ. ಕಲಾವಿದರಲ್ಲಿ ತಾನು ಬೆಳೆಯುವುದರ ಜೊತೆಯಲ್ಲಿ ಇತರರನ್ನು ಬೆಳೆಸುವ ಗುಣವಿರಬೇಕು. ಯಾವತ್ತೂ ಕಲಾವಿದರು ತಮಗೆ ಕಲಿಸಿದ‌ ಗುರುವನ್ನು ಮರೆಯಬಾರದು. ನಿಷ್ಠೆಯಿಂದ ಕಲಾಸೇವೆ ಮಾಡಿದರೆ ಕಲೆ ನಮ್ಮನ್ನು ಎಂದೂ ಕೈ ಬಿಡುವುದಿಲ್ಲ. ಎನ್ನುವುದು ಹರಿಪ್ರಸಾದ್ ನಂದಳಿಕೆಯವರ ಮಾತು. ಇವರ ಈ ಸಾಧನೆಯನ್ನು ಗುರುತಿಸಿ ನಮಗೆ ಖುಷಿಯಾಗಿದೆ. ಇನ್ನಷ್ಟು ವೇದಿಕೆಗಳು ಇವರನ್ನು ಹರಸಿ ಬರಲಿ ಎಂದು ಆಶಿಸೋಣ.

#ನಮ್ಮ_ಕಲಾವಿದರು_ನಮ್ಮ_ಹೆಮ್ಮೆ
#ಸಾಧಕರ_ಹಾದಿ

 #ಸಾಧಕರ_ಕಥೆ-40 #ಸಾಧಕರ_ಹಾದಿ ಜೊತೆ #ಆರ್ಯನ್ ಇವರ #ಸಾಧನೆಯ_ಕಥೆ     ಬರಹ: ಸಾಯಿ ದೀಕ್ಷಿತ್ ಪುತ್ತೂರು        #ಸಾಧಕರ_ಹಾದಿ         ಮಾತು ...
24/07/2021

#ಸಾಧಕರ_ಕಥೆ-40
#ಸಾಧಕರ_ಹಾದಿ ಜೊತೆ
#ಆರ್ಯನ್ ಇವರ
#ಸಾಧನೆಯ_ಕಥೆ

ಬರಹ: ಸಾಯಿ ದೀಕ್ಷಿತ್ ಪುತ್ತೂರು

#ಸಾಧಕರ_ಹಾದಿ

ಮಾತು ಬರದ ಮೂಖ ಮಾತನಾಡಬೇಕು ಎಂಬ ಕನಸು ಹೊತ್ತರೆ, ಮಾತೇ ಕೇಳದಿರುವ ಕಿವುಡ ಮಾತುಗಳನ್ನು ಆಲಿಸುವ ನಾಳೆಯನ್ನು ಕಂಡರೆ, ಕಣ್ಣೇ ಕಾಣದಿರುವ ಕುರುಡ ಈ ಜಗತ್ತು ಹೇಗಿರಬಹುದು ಎಂಬ ಕಲ್ಪನೆಯಲ್ಲಿ ಕಾಣುವುದನ್ನು ಕಾಯುತ್ತಿರುತ್ತಾನೆ. ಹಾಗೆಯೇ ಸಾಧನೆ ಎಂಬ ಕನಸನ್ನು ಹೊತ್ತವರು ಬಾಯಿ, ಕಣ್ಣು, ಕಿವಿ ಎಲ್ಲವನ್ನೂ ತೊರೆದು ಕತ್ತಲೆಯ ಕೋಣೆಯಲ್ಲಿ ಬಿಟ್ಟಂತೆ ಸರಿಯಾದ ಸಾಧನೆಯ ಮೆಟ್ಟಿಲನ್ನು ಹುಡುಕಿ ಸಾಧಿಸುತ್ತಾರೆ. ಅಂತಹ ದೊಡ್ಡ ಸಾಧಕರಲ್ಲಿ ಒಬ್ಬರಾದ "ವೇಷದಾರಿ ಆರ್ಯನ್" ಇವರ ಸಾಧನೆಯ ಕಥೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಶ್ರೀ ಬಿ.ಗಂಗಾಧರ ಮತ್ತು ಶ್ರೀಮತಿ ಶಾಲಿನಿ ಇವರ ಜೇಷ್ಠ ಪುತ್ರನಾಗಿ ಫೆಬ್ರವರಿ 11ರಂದು ಜನಿಸಿದರು. ಇವರ ತಂದೆ ತಾಯಿಗೆ ಇಬ್ಬರು ಗಂಡು ಮಕ್ಕಳು. ಇವರು ಮೊದಲನೇ ಮಗ.

ಇವರು ಪ್ರಾಥಮಿಕ ಶಿಕ್ಷಣವನ್ನು ಲಿಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ, ಪ್ರೌಢ ಶಿಕ್ಷಣವನ್ನು ಸಂತ ಫಿಲೋಮಿನ ಬಾಲಕರ ಪ್ರೌಢ ಶಾಲೆ ಪುತ್ತೂರು, ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜ್ ಪುತ್ತೂರು ಮತ್ತು ಎಂ. ಬಿ. ಎ. ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿ, ಕೆನರಾ ಬ್ಯಾಂಕ್ ಇದರ ಐ.ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಸಂಪೂರ್ಣವಾಗಿ ಸಿನಿಮಾ ರಂಗದಲ್ಲಿ ನಟನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರ ತಂದೆ ಗ್ರಾಮ ಲೆಕ್ಕಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಇವರು ತನ್ನ ಬಾಲ್ಯದಲ್ಲಿ ಮೊಟ್ಟ ಮೊದಲು ವಿಷ್ಣುವರ್ಧನ್ ಅವರ ಸಿನಿಮಾ ನೋಡಿದಾಗಿನಿಂದ, ಸಿನಿಮಾದಲ್ಲಿ ಆಸಕ್ತಿ ಹುಟ್ಟಿತು. ಸಿನಿಮಾ ಹಾಡು ಹಾಕಿಕೊಂಡು ಡಾನ್ಸ್ ಮಾಡುವುದು, ಟಿವಿಯಲ್ಲಿ ಬರುವ ಡಾನ್ಸ್, ಫೈಟ್ ಗಳನ್ನು ಅನುಕರಣೆ ಮಾಡುವುದನ್ನು ರೂಢಿ ಮಾಡಿಕೊಂಡರು. ಪುತ್ತೂರಿಗೆ ಒಮ್ಮೆ ಚಲನ ಚಿತ್ರ ನಟ ವಿಷ್ಣುವರ್ಧನ್ ಬಂದಾಗ ಸ್ಟೇಜ್ ಗೆ ಹೋಗಿ ವಿಷ್ಣುವರ್ಧನ್ ಅವರನ್ನು ಮಾತಾಡಿಸಬೇಕೆಂದು ಹಠ ಹಿಡಿದ ಸನ್ನಿವೇಶವನ್ನು ಇಂದಿಗೂ ಹೆತ್ತವರು ಇವರಿಗೆ ನೆನಪಿಸುತ್ತಾರೆ. ಇವರಿಗೆ ಸಿನಿಮಾ ನೋಡುವ ಹುಚ್ಚು. ನೋಡುವುದಕ್ಕೆ ಕೂತರೆ ಏಳುವುದಿಲ್ಲ ಎಂಬ ಕಾರಣಕ್ಕೆ, ಭಾನುವಾರ ಸಂಜೆ ಬೆಂಗಳೂರು ದೂರದರ್ಶನದಲ್ಲಿ ಸಂಜೆ 4ಗಂಟೆಗೆ ಪ್ರಸಾರವಾಗುತಿದ್ದ ಫಿಲಂ ನೋಡಬೇಕಾದರೆ, ಹೋಮ್ ವರ್ಕ್ ಹಾಗೂ ಓದುವ ಕೆಲಸ ಆಗಿರಬೇಕು ಎಂದು ಹೆತ್ತವರು ಕಂಡೀಶನ್ ಹಾಕಿದ್ದರು. , ಅದಕ್ಕಾಗಿ ಭಾನುವಾರ 4ಗಂಟೆಯ ಒಳಗೆ ಓದು, ಕೆಲಸ ಏನೇ ಇದ್ದರೂ ಬೇಗನೆ ಮುಗಿಸಿ ಟೀವಿ ಮುಂದೆ ಕಾಯುತ್ತಿದ್ದರು.
ಸಿನಿಮಾ ನೋಡುತ್ತಾ ನೋಡುತ್ತಾ ಉಪೇಂದ್ರ ಅವರ ಉದ್ದ ಉದ್ದದ ಸಂಭಾಷಣೆಯನ್ನು ಹೇಳುವುದರ ಮೂಲಕ ಶಾಲಾ ದಿನಗಳಲ್ಲಿ ಗೆಳೆಯರಿಂದ, ದಿನಾ ಹೋಗುತ್ತಿದ್ದ ಅಂಗಡಿ ಮಾಲೀಕರಿಂದ ಹೀರೋ ಅಂತ ಕರೆಸಿಕೊಂಡ ಮೇಲೆ ಹೀರೋ ಆಗಬೇಕೆಂಬ ಆಸೆ ಮನದಲ್ಲಿ ನೆಲೆಯೂರಿದ್ದರೂ ಆಸೆಯನ್ನು ಮನದಲ್ಲೇ ಬಚ್ಚಿಟ್ಟುಕೊಂಡಿದ್ದರು. ಶಾಲಾ ಕಾಲೇಜು ದಿನಗಳಲ್ಲಿ ಆಗಾಗ ಡಾನ್ಸ್, ನಾಟಕಗಳಲ್ಲಿ ನಟಿಸುವುದರ ಜೊತೆಗೆ ವಿದ್ಯಾಭ್ಯಾಸ ಕೂಡ ಮುಂದುವರೆಯಿತು. ತನ್ನ ಕಾಲೇಜು ದಿನಗಳಲ್ಲಿ ಪುತ್ತೂರಿನ ಗ್ಲೋರಿಯ ಕಾಲೇಜು ಆಫ್ ಫ್ಯಾಷನ್ ಡಿಸೈನಿಂಗ್ ಇದರ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಬಟ್ಟೆಗಳ ಫ್ಯಾಶನ್ ಫೋಟೋ ಪ್ರಾಜೆಕ್ಟ್ ಗೆ ಮಾಡೆಲ್ ಆಗಿ ಕೂಡ ಪಾಲ್ಗೊಳ್ಳುತ್ತಿದ್ದರು.

ಪದವಿ ತರಬೇತಿಯ ನಂತರ ಬೆಂಗಳೂರಿನಲ್ಲಿ ದೊರೆತ ಕೆನರಾ ಬ್ಯಾಂಕ್ ನ ಐಟಿ ವಿಭಾಗದಲ್ಲಿ ಕೆಲಸದ ಜೊತೆಗೆ ಎಂ. ಬಿ. ಎ ಪದವಿ ಪಡೆದರು. ಈ ಸಂದರ್ಭದಲ್ಲಿ ಸಿನಿಮಾದ ಅವಕಾಶಕ್ಕಾಗಿ ಗಾಂಧಿ ನಗರ ಇಡೀ ಸುತ್ತಾಡಿದ್ದು ಮರೆಯದ ನೆನಪು. ಆದರೆ, ಸರಿಯಾದ ಮಾರ್ಗದರ್ಶನವಿಲ್ಲದೆ, ದುಡ್ಡು ಕೇಳುವ ಮೋಸಗಾರರಿಂದ ಸಿನಿಮಾ ನಟನಾಗಲು ದುಡ್ಡಿದ್ದರೆ ಮಾತ್ರ ಸಾಧ್ಯ, ನಮ್ಮಂತಹ ಮಧ್ಯಮ ವರ್ಗದವರಿಗಲ್ಲ ಎಂದೂ ನಿರಾಸೆ ಗೊಂಡು ಕೆಲಸದಲ್ಲೇ ಮುಂದುವರೆಯುವ ಯೋಚನೆ ಮಾಡಿದರು. ಆದರೆ, ಈ ಕಲೆ ಎಂಬುದು ಒಮ್ಮೆ ಮನಸ್ಸಿನಲ್ಲಿ ನೆಲೆಯೂರಿದರೆ ಅದು ನಾವು ಬೇಡ ಅಂದರೂ ಕೂಡ ಮತ್ತೆ ಮತ್ತೆ ನಮ್ಮನ್ನು ಅಲ್ಲಿಗೇ ಕರೆದುಕೊಂಡು ಹೋಗುತ್ತದೆ. ಇವರ ಜೀವನದಲ್ಲೂ ಅದೇ ಆಗಿದ್ದು. ನಂತರ ಇವರು ಛಲ ಬಿಡದೆ "ಸೃಷ್ಟಿ ದೃಶ್ಯ ಕಲಾ ಮಾಧ್ಯಮ"ದಲ್ಲಿ "ಶಶಿಕಾಂತ್ ಯಡಹಳ್ಳಿ(ರಂಗ ನಿರ್ದೇಶಕರು, ಮಾಧ್ಯಮ ಮಿತ್ರ)" ಇವರ ಶಿಷ್ಯನಾಗಿ ಅಭಿನಯ ತರಬೇತಿ ಜೊತೆಗೆ "ವಿನಯ ರತ್ನಸಿದ್ದಿ" ಇವರಿಂದ ನೃತ್ಯ ತರಬೇತಿ ಪಡೆದರು. ಅದೇ ವರ್ಷ ಬೆಂಗಳೂರಿನ "ಮಲ್ಲೇಶ್ವರಂ ಚೌಡಯ್ಯ ಮೆಮೋರಿಯಲ್ ಹಾಲ್"ನಲ್ಲಿ ನಡೆದ "ಬ್ಯೂಟಿ ವಿತ್ ಟ್ಯಾಲೆಂಟ್- 2014" ಮಾಡೆಲಿಂಗ್ ಇವೆಂಟ್ ನಲ್ಲಿ "ಮಿಸ್ಟರ್ ಪರ್ಫೆಕ್ಟ್" ಆಗಿ ಗುರುತಿಸಲ್ಪಟ್ಟರು. ಈ ಮಾಡೆಲಿಂಗ್ ಇವೆಂಟಿನಿಂದ ಪರಿಚಯವಾದ "ರಾಧಿಕಾ ಶರ್ಮ", "ವಿಜಯ್ ಸೂರ್ಯ ಮಲ್ಪೆ", "ಪ್ರೇಮ್ ಕುಮಾರ್" ಇವರ ಸಹಾಯದಿಂದ ನಾಯಕ ನಟನಾಗಿ ಆಯ್ಕೆಗೊಂಡರು. ಈಗ ತನ್ನ ಕನಸು ನನಸಾಯಿತೆಂದು ತಾನು ಮಾಡುತಿದ್ದ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಗಿಸಿಕೊಂಡರು. ಸಿನಿಮಾದ ನಿರ್ದೇಶಕ "ನಿವಾಸ್" ಇವರ ಸಹಾಯದಿಂದ "ಥ್ರಿಲ್ಲರ್ ಮಂಜು" ಅವರ ಶಿಷ್ಯರಾದ "ಅಶೋಕ್ ಕುಮಾರ್" ಇವರಿಂದ ಫೈಟಿಂಗ್ ತರಬೇತಿ ಪಡೆದರು. ಆದರೆ, ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಕಾರಣಾಂತರಗಳಿಂದ ಈ ಚಿತ್ರ ಮುಂದುವರೆಯಲಿಲ್ಲ. ಅಲ್ಲಿಗೆ ಕೆಲಸನೂ ಇಲ್ಲ ಸಿನಿಮಾನೂ ಇಲ್ಲ ಎಂಬ ಚಿಂತೆ ಇವರನ್ನು ಕಾಡಲು ಶುರುವಾಗುತ್ತದೆ.

ಬೆಂಗಳೂರಿನಂತಹ ಊರಲ್ಲಿ ಕೆಲಸ ಇದ್ದರೇನೇ ಬದುಕು ಕಷ್ಟ, ಕೆಲಸ ಇಲ್ಲದೆ ಇವರ ಕಷ್ಟ ಯಾರ ಜೊತೆನೂ ಹೇಳಿಕೊಳ್ಳಲಾಗದಂತಿತ್ತು. ಇತ್ತ ಮನೆಯಲ್ಲಿ ಕೆಲಸ ಬಿಟ್ಟು ಸಿನಿಮಾ ನಟನಾಗಲು ಹೊರಟ ವಿಚಾರ ಗೊತ್ತಿಲ್ಲದೆ ಇರುವ ಕಾರಣ ಮನೆಯಿಂದ ಸಹಾಯ ಕೇಳುವಂತೆಯೂ ಇರಲಿಲ್ಲ. ಬಟ್ಟೆಬರೆ ಇದ್ದಿದ್ದನ್ನೇ ಹೇಗೋ ಸುಧಾರಿಸಿಕೊಂಡು ಹೋಗಬಹುದು. ಆದರೆ, ಊಟವಿಲ್ಲದೆ ಬದುಕುವುದು ಕಷ್ಟದ ಮಾತಾಗಿತ್ತು. ಇಂತಹ ಯೋಚನೆಗಳನ್ನು ಬದಿಗೊತ್ತಿ ಆಗಿದ್ದು ಆಗಲಿ ಎಂದು ನಿರ್ಧರಿಸಿ, ಸಿನಿಮಾ ಕ್ಷೇತ್ರದಿಂದ ಹಿಂತಿರುಗಲೇ ಇಲ್ಲ. ಅವಕಾಶಕ್ಕಾಗಿ ಅಲೆದಾಟ ಶುರು ಮಾಡುತ್ತಾರೆ. ಆಡಿಷನ್ ಎದುರಿಸಿವುದು ಪ್ರಾರಂಭವಾಯ್ತು. ಮನೆಯ ಬಾಡಿಗೆ, ಊಟ ತಿಂಡಿಗಾಗಿ ಪಾರ್ಟ್ ಟೈಮ್ ಕೆಲಸ ಮಾಡಿ ದಿನ ದೂಡುತ್ತಾರೆ. ಮುಂದೆ "ಸಿದ್ದಾರ್ಥ", "ಮಸ್ತ್ ಮೋಹಬ್ಬತ್", "ಮೇಲು ಕೋಟೆ ಮಂಜ", "ಉಪ್ಪಿ2", "ಐರಾವತ", "ಯಾನ", "ಗಂಧದ ಕುಡಿ" ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಗಳಲ್ಲಿ ಕಾಣಿಸಿಕೊಂಡರು. "ಕಲಾ ಗಂಗೋತ್ರಿ" ನಾಟಕ ತಂಡವನ್ನು ಸೇರಿ, ಅದರಲ್ಲಿ "ಚಿರಸ್ಮರಣೆ" ಎಂಬ ನಾಟಕ ಪ್ರದರ್ಶನ ಇವರ ಅವಿಸ್ಮರಣೀಯ ಕ್ಷಣಗಳಲ್ಲೊಂದಾಗುತ್ತದೆ.

ಇವರ "ಸೃಷ್ಟಿ" ಅಭಿನಯ ತರಬೇತಿಯ ಗೆಳೆಯರೆಲ್ಲರೂ ಸೇರಿ "ಖದರ್ ಜಗದೀಶ್" ಅವರ ನಿರ್ದೇಶನದಲ್ಲಿ ಚಿತ್ರೀಕರಿಸಿದ "ರೂಲರ್" ಕಿರು ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದರು. "ನೀನ್ ಇಲ್ಲಯ್ ಎನ್ ಡ್ರಾಲ್ ನಾನ್ ಇಲ್ಲಯ್" ಎಂಬ ತಮಿಳು ಆಲ್ಬಮ್ ಸಾಂಗ್, ಯಾರೂ ಮಾಡಲು ಒಪ್ಪದ ಜೀವಂತ ಸಮಾಧಿಯಾಗಿ ನಟಿಸಿದ "ಭ್ರಮೆ" ಕಿರು ಚಿತ್ರ, ಹಾಗೂ "ದೃಷ್ಟಿ" ಎಂಬ ಕಿರುಚಿತ್ರ, "ಅಮ್ಮ ಮಮತೆಯ ತೊಟ್ಟಿಲು " ಎಂಬ ಆಲ್ಬಮ್ ಸಾಂಗ್ ನಲ್ಲಿ, ಉದಯ ಕಾಮಿಡಿಯಲ್ಲಿ ಪ್ರಸಾರವಾಗುತ್ತಿದ್ದ "ಪ್ರಚಂಡ ಕಿಲಾಡಿಗಳು" ಕಾರ್ಯಕ್ರಮದಲ್ಲಿ, ಹಾಗೆಯೇ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತಿದ್ದ "ಅಣ್ಣಯ್ಯ" ಧಾರಾವಾಹಿಯಲ್ಲಿ ನಟಿಸುತ್ತಾ ಗೆಲುವಿನ ಮೆಟ್ಟಿಲೇರುತ್ತಾ ಬರುತ್ತಾರೆ.

ಆಡಿಷನ್ ಪ್ರತಿಫಲವಾಗಿ "ವಿಕ್ರಮಾದಿತ್ಯ ಭೂಷಿ" ನಿರ್ದೇಶನದ "ವೇಷಧಾರಿ " ಎಂಬ ಕನ್ನಡ ಚಲನ ಚಿತ್ರ ದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದಾಗ ಇವರಿಗಾದ ಖುಷಿ ಆನಂದಭಾಷ್ಪವಾಗಿ ಹೊರಹೊಮ್ಮುತ್ತದೆ. ಈ ಚಿತ್ರ 3 ಜನವರಿ 2020ರಲ್ಲಿ ಬಿಡುಗಡೆಗೊಂಡಿತು. ಇವರು ಪಟ್ಟಿರುವ ಕಷ್ಟಕ್ಕೆ ಕಾಮನಬಿಲ್ಲು ರಂಗೇರಿ ನವಿಲು ಕುಣಿದಂಗಾಯಿತು. "ವೇಷಧಾರಿ " ಚಿತ್ರದ ಬಿಡುಗಡೆಯ ನಂತರ "ಗ್ರೂಫಿ" ಹಾಗೂ "ಸಿಂಪಲ್ಲಾಗೊಂದ್ ಜರ್ನಿ " ಎಂಬ ಎರಡು ಚಿತ್ರ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈ ಎಲ್ಲಾ ಚಿತ್ರಗಳ ನಂತರ "ಅದಿತಿ" ಎಂಬ ಕನ್ನಡ ಚಿತ್ರ, "ಕೋನ" ಎಂಬ ತೆಲುಗು, "ತೋಳ್ ಕೊಡ್ ತೋಲಾ" ಮತ್ತು "ಮರಣ ಅಡಿ" ಎಂಬ ಎರಡು ತಮಿಳು ಚಿತ್ರಕ್ಕೆ ಆಯ್ಕೆಯಾಗುತ್ತಾರೆ. ಇವೆಲ್ಲಾ ಇವರ ಬಹುದಿನದ ಕನಸಿಗೆ ಸಂದ ಗೌರವವೆಂದು ಖುಷಿಯಾಗಿದ್ದಾರೆ.

ಇವರು ಪುತ್ತೂರಿನಲ್ಲಿ "ರಝಾಕ್" ಇವರ ನಿರ್ದೇಶನದ "ಪೆನ್ಸಿಲ್ ಬಾಕ್ಸ್" ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ ಖುಷಿಯೂ ಇದೆ.
ಪುತ್ತೂರಿನ ಗೆಳೆಯರೊಂದಿಗೆ ಸೇರಿ "ಡ್ರೀಮ್ ಕ್ಯಾಚರ್ಸ್" ಎಂಬ ಸಿನಿಮಾ ನಟನಾ ತರಬೇತಿ ಕೇಂದ್ರವನ್ನು ಪ್ರಾರಂಭಿಸಿ, ಪುತ್ತೂರಿನ ಗ್ಲೋರಿಯ ಕಾಲೇಜ್ ನಲ್ಲಿ ಹಿರಿಯ, ಅನುಭವಿ ನಾಟಕ ಮತ್ತು ಚಲನಚಿತ್ರ ಕಲಾವಿದರ ಮೂಲಕ ಸಿನಿಮಾದಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ, ಯುವಕ, ಯುವತಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರಲ್ಲಿ ಮಾರ್ಗದರ್ಶನ ಪಡೆದ ವಿದ್ಯಾರ್ಥಿಗಳು ಇಂದು ಕನ್ನಡ ಹಾಗೂ ತುಳು ಭಾಷೆಯ ಕಿರು ಚಿತ್ರ, ಆಲ್ಬಮ್, ಧಾರವಾಹಿ, ಚಲನಚಿತ್ರಗಳಲ್ಲಿ ಅವಕಾಶ ಪಡೆದಿರುತ್ತಾರೆ. ಬಿಡುವಿನ ಸಮಯದಲ್ಲಿ ಇವರೇ ನಿರ್ದೇಶಿಸಿ, ನಟಿಸಿದ "ಉಡಲ್ದರಸಿ ", "ಎನ್ನ ಉಡಲ್ದ ಅಂಬಾರಿ" ಆಲ್ಬಮ್ ಈಗಾಗಲೇ ಇವರ "ಡ್ರೀಮ್ ಕ್ಯಾಚರ್ಸ್" ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.

ಇವರ ಸಾಧನೆಯ ಹಾದಿಯನ್ನು ಗುರುತಿಸಿ "ಎಸ್. ಎಸ್. ಕೆ ಪಾಟೀಲ್ ಇಂಗ್ಲಿಷ್ ಮೀಡಿಯಂ", "ಸಿ. ಬಿ. ಎಸ್. ಸಿ. ಸ್ಕೂಲ್ ಸಂಕೇಶ್ವರ್(ಬೆಳಗಾವಿ )", "ರೋಟರಿ ಸಮುದಾಯದಳ ಬೆಳ್ಳಾರೆ ಟೌನ್", ಹಾಗೂ "ವಿಷನ್ ಸೇವಾ ಟ್ರಸ್ಟ್ ಪುತ್ತೂರು" ಸೇರಿದಂತೆ ಹಲವಾರು ಸಂಸ್ಥೆಗಳಿಂದ ಸನ್ಮಾನ ಸಂದಿದೆ.

ನೋಡುವವರು, ಮಾತಾಡುವವರು, ಅಪಹಾಸ್ಯ ಮಾಡುವವರು, ಕೀಳಾಗಿ ನೋಡುವವರು ಯಾರು ಏನೇ ಮಾಡಲಿ ಸಾಧಿಸಬೇಕು ಎಂಬ ಅಚಲ ಭಕ್ತಿ ಮತ್ತು ನಂಬಿಕೆ, ಧೈರ್ಯ ಇದ್ದರೆ, ನಾವು ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳುವ ಇವರ ಮಾತು ಎಲ್ಲರಿಗೂ ಆದರ್ಶವಾಗಿರಬೇಕು. ಇವರ ಸಾಧನೆ ಇನ್ನೂ ಎತ್ತರಕ್ಕೆ ಬೆಳೆಯಲಿ ನಮ್ಮ ನಾಡಿಗೆ ಕೀರ್ತಿಯಾಗಲಿ ಎಂದು ಆಶಿಸೋಣ.
ನಮ್ಮ ಕಲಾವಿದರು ನಮ್ಮ ಹೆಮ್ಮೆ
#ಸಾಧಕರ_ಹಾದಿ

11/07/2021

ಎಲ್ಲರಿಗೂ ತಲುಪಿಸಿ

ಕೊರೋನ ವಕ್ಕರಿಸಿ ಇಡೀ ವಿಶ್ವವೇ ಮೇಲೆ ಕೆಳಗಾದಂತಾಗಿದೆ. ಬಡವ ಬಲ್ಲಿದರೆನ್ನದೆ ಎಲ್ಲರಿಗೂ ಒಂದೇ ನ್ಯಾಯವೆಂಬ ಪಾಠವನ್ನು ಮಾತ್ರವಲ್ಲದೆ ಕೃಷಿಯ ಬಗೆಗಿನ ಒಲವನ್ನು ಕೂಡ ಎಲ್ಲರಲ್ಲಿ ಬೆಳೆಯುವಂತೆ ಮಾಡಿದೆ. ಅದೆಷ್ಟೋ ಕಂಪನಿಗಳು ನಷ್ಟದ ಅಂಚಿಗೆ ಹೋದರೆ ಇನ್ನಷ್ಟು ಹಲವರು ನಾಷ್ಟಕ್ಕೂ ಒದ್ದಾಡುವ ಪರಿಸ್ಥಿತಿ ಎದುರಾಗಿದೆ. ಇಷ್ಟೆಲ್ಲಾ ಆದ ಮೇಲೆ ಸರ್ಕಾರಕ್ಕೂ ನಷ್ಟ ಆಗಿರುವುದು ಸತ್ಯ.

ಇತ್ತೀಚಿನ ದಿನಗಳಲ್ಲಿ ತೈಲ, ಇಂಧನ ಮತ್ತು ಹಲವಾರು ಕಂಪನಿ ಉತ್ಪನ್ನಗಳ ಬೆಲೆ ಕೂಡ ಏರಿಕೆ ಆಗಿದೆ. ಆದರೆ, ದಿನಾ ಬೇರೆ ಬೇರೆ ಅಂಗಡಿ ಮುಂಗಟ್ಟುಗಳಲ್ಲಿ ದುಡಿಯುವವರಿಗಾಗಲಿ ಅಥವಾ ಕಂಪನಿಗಳಲ್ಲಿ ದುಡಿಯುವ ಕಾರ್ಮಿಕರಿಗಾಗಲಿ ಅಥವಾ ಯಾವುದೇ ಕೆಲಸಗಾರರಿಗಾಗಲಿ ಕೊರೋನ ಕಾರಣ ಸಂಬಳ ಕಮ್ಮಿಯೇ ಕೊಡುತ್ತಾರೆ ಹೊರತು ಜಾಸ್ತಿ ಆಗಿಲ್ಲ. ಸಾಲ ಸೂಲ ಮನೆ ನಿಭಾಯಿಸುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದು ತುಂಬಾ ಹೊಡೆತ ಬಿದ್ದಂತಾಗಿದೆ. ಈ ವಿಚಾರದ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ. ಇದನ್ನು ಯಾರಲ್ಲಿ ಹೇಳಿದರೆ ಏನು ಫಲ ಎಂದು ಎಲ್ಲರೂ ಮೇಲೆ ನೋಡುವಂತಾಗಿದೆ.

✍️ ಸಾಯಿ ದೀಕ್ಷಿತ್ ಪುತ್ತೂರು

Don't miss it. Today evening 5 clock live with Muddhulaxmi Dhruvanth❤️🙏
02/07/2021

Don't miss it. Today evening 5 clock live with Muddhulaxmi Dhruvanth❤️🙏

ತಪ್ಪದೆ ನೋಡಿ ❤️🙏
24/06/2021

ತಪ್ಪದೆ ನೋಡಿ ❤️🙏

https://youtu.be/vHN9MuzotOAನೀವೆಲ್ಲಾದರೂ *ನುಗ್ಗೆವಲ್ಲಿ* ನೋಡಿದ್ದೀರಾ? ನೋಡಿಲ್ಲ ಅಂದ್ರೆ, *ಮಕ್ಕರ್ ಕ್ರಿಯೇಷನ್* ಯೂಟ್ಯೂಬ್ ಚಾನೆಲ್ ನಲ್...
13/06/2021

https://youtu.be/vHN9MuzotOA
ನೀವೆಲ್ಲಾದರೂ *ನುಗ್ಗೆವಲ್ಲಿ* ನೋಡಿದ್ದೀರಾ? ನೋಡಿಲ್ಲ ಅಂದ್ರೆ, *ಮಕ್ಕರ್ ಕ್ರಿಯೇಷನ್* ಯೂಟ್ಯೂಬ್ ಚಾನೆಲ್ ನಲ್ಲಿ ನೋಡಿ. ❤️🙏

DirectionSai Deeksh*th PutturstoryPraveen Anchan kaniyoorCameraAnil Rai PerigeriThirumalesh Gowda KedilaEditingGowrish JalsoorartistPraveen Anchan KaniyoorDe...

06/06/2021

https://youtu.be/CtVsqEjGecg
ಈಗ ನೋಡಿ *ಗುಜುರಿ ಬೂಬೆ* ನಿಮ್ಮ ನಮ್ಮ *ಮಕ್ಕರ್ ಕ್ರಿಯೇಷನ್* ಯೂಟ್ಯೂಬ್ ಚಾನೆಲ್ ನಲ್ಲಿ ❤️🙏😂😂😂😂

ಇಂದು ಸಂಜೆ 4 ಗಂಟೆಗೆ ವೀಕ್ಷಿಸಿ ನಮ್ಮ ನಿಮ್ಮ ಮಕ್ಕರ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ❤️🎉🙏
06/06/2021

ಇಂದು ಸಂಜೆ 4 ಗಂಟೆಗೆ ವೀಕ್ಷಿಸಿ ನಮ್ಮ ನಿಮ್ಮ ಮಕ್ಕರ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್ ನಲ್ಲಿ ❤️🎉🙏

Address

Puttur
574210

Telephone

+919902021592

Website

Alerts

Be the first to know and let us send you an email when ಸಾಧಕರ ಹಾದಿ/Sadhakara Haadi posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಸಾಧಕರ ಹಾದಿ/Sadhakara Haadi:

Share

Category