14/01/2026
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನನಾಯಕರು ಹಾಗೂ ಮಾನ್ಯ ಸಂಸದರಾದ ಡಾ. ಕೆ. ಸುಧಾಕರ್ ಅವರು ನನ್ನ ಜನ್ಮದಿನದ ಸಂದರ್ಭದಲ್ಲಿ ದೂರವಾಣಿ ಮೂಲಕ ಶುಭಾಶಯಗಳನ್ನು ತಿಳಿಸಿದ್ದು ನನಗೆ ಅಪಾರ ಸಂತೋಷವನ್ನುಂಟುಮಾಡಿದೆ. ತಮ್ಮ ಅಮೂಲ್ಯ ಸಮಯದ ಮಧ್ಯೆಯೂ ನನ್ನಂತಹ ಕಾರ್ಯಕರ್ತನನ್ನು ನೆನಪಿಸಿಕೊಂಡು ಹಾರೈಸಿದ ಅವರ ಮನೋಭಾವ ಹೃದಯಸ್ಪರ್ಶಿಯಾಗಿದೆ.
ಡಾ. ಕೆ. ಸುಧಾಕರ್ ಅವರೊಂದಿಗೆ ಕಾರ್ಯನಿರ್ವಹಿಸುವುದು ನನ್ನ ಭಾಗ್ಯ ಮತ್ತು ಆಶೀರ್ವಾದವಾಗಿದೆ. ಕಾರ್ಯಕರ್ತರಿಗೆ ಸದಾ ಪ್ರೇರಣೆ ನೀಡುವ ಅವರ ಆಶೀರ್ವಾದ ಹಾಗೂ ಉತ್ತೇಜನ ನನ್ನ ಸಮಾಜಸೇವೆಯ ಪಯಣದಲ್ಲಿ ಮತ್ತಷ್ಟು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ನೀಡಿದೆ. ಇಂತಹ ಜನನಾಯಕನಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಗೌರವಪೂರ್ವಕ ನಮನಗಳು.
– ನಿಮ್ಮವ,
ಅಂಜನಮೂರ್ತಿ ಗೌಡ್ರು
ನಗರಸಭಾ ಸದಸ್ಯರು
ನೆಲಮಂಗಲ ನಗರಸಭೆ