Rahul Dist.Congress

Rahul Dist.Congress To exhibit policital Morality to young politicians

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.  ಗ್ರಾಮದೇವತೆ ದೇವಸ್ಥಾನ ಉದ್ಘಾಟನೆ. ವರುಣ ಗ್ರಾಮದಲ್ಲಿ  ಮಾನ್ಯ ಶಾಸಕರಾದ ಡಾ.ಯತಿಂದ್ರ ಸಿದ್ದರಾಮಯ್ಯ  ಗ್ರ...
06/09/2024

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.

ಗ್ರಾಮದೇವತೆ ದೇವಸ್ಥಾನ ಉದ್ಘಾಟನೆ.

ವರುಣ ಗ್ರಾಮದಲ್ಲಿ ಮಾನ್ಯ ಶಾಸಕರಾದ ಡಾ.ಯತಿಂದ್ರ ಸಿದ್ದರಾಮಯ್ಯ ಗ್ರಾಮ ದೇವತೆಯ ದೇವಸ್ಥಾನ ಹಾಗೂ ಪರಿವರ್ತನಾ ಯುವಕರ ಸಂಘ ಉದ್ಘಾಟನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗೌರಿ ಹಬ್ಬದ ಪ್ರಯುಕ್ತ ಗ್ರಾಮದ ಸಹೋದರಿಯರಿಗೆ ಬಾಗಿನ ನೀಡಲಾಯಿತು.

- ವರದಿ
- ಡಿಸಿಸಿ ಮಾಧ್ಯಮ ವಿಭಾಗ.

10/07/2024
21/12/2023

*ದಲಿತರು ಬಲಿತರಾಗಬೇಕು* !
-- ರಾಹುಲ್ ಕುಂಬರಹಳ್ಳಿ
9008559330

_ದಲಿತರು ರಾಜಕೀಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕು_ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ ಸ್ವಾತಂತ್ರ್ಯ ನಂತರದ ಸಾಂವಿಧಾನಿಕ ಭಾರತದಲ್ಲಿ ಒಬ್ಬ ದಲಿತ ಸುದೀರ್ಘ ರಾಜಕೀಯ ಅಧಿಕಾರಗಳನ್ನು ಮತ್ತು ಸವಲತ್ತುಗಳನ್ನು ಅನುಭವಿಸಿದ ಏಕೈಕ ವ್ಯಕ್ತಿ ಶ್ರೀ ಮಲ್ಲಕಾರ್ಜುನ ಖರ್ಗೆ ಅವರು. ನಿವೃತ್ತ ಐ.ಪಿ.ಎಸ್ ಅಧಿಕಾರಿ ಎಂ.ನಂಜುಂಡಸ್ವಾಮಿ ಅವರ ಸಂಶೋಧನಾ ಗ್ರಂಥವಾದ ಹೊಲೆಯರು-ಮಾದಿಗರು ರಾಜರು ಎಂಬ ಕೃತಿಯಲ್ಲಿ ದಲಿತರು ದಕ್ಷಿಣ ಭಾರತವನ್ನು ಆಳಿದ ಮೊದಲ ರಾಜರು ಎಂದು ಉಲ್ಲೇಖಿಸುತ್ತಾರೆ. ಮುಂದುವರೆದು ಒಂದು ಕಾಲದಲ್ಲಿ ಈ ದಕ್ಷಿಣ ದೇಶದ ಸಂಪೂರ್ಣ ಸಂಪತ್ತು ದಲಿತರ ಸ್ವತ್ತಾಗಿತ್ತು ಕಾಲಾನಂತರ ಆರ್ಯರ ಮತ್ತು ಇತರರ ದಾಳಿಗಳಿಂದ ದಲಿತರ ಕೈಯಿಂದ ಜಾರಿತು ಎಂಬ ಆಧಾರ ಸಹಿತ ಐತಿಹಾಸಿಕ ಸತ್ಯಗಳನ್ನು ದಾಖಲಿಸಿದ್ದಾರೆ. ಇಂದು ಪ್ರತಿಯೊಂದನ್ನು ಮೀಸಲಾತಿಯ ಮುಖಾಂತರ ಪಡೆದುಕೊಳ್ಳುತ್ತಿರುವ ದಲಿತರು ಹಿಂದೊಮ್ಮೆ ರಾಜ್ಯವಾಳುತ್ತಿದ್ದರು ಎಂಬುದನ್ನು ಮರೆಯಬಾರದು.

ಇದೆ ಹಾದಿಯಲ್ಲಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಬರಿ ದಕ್ಷಿಣವಲ್ಲದೆ ಇಡೀ ದೇಶದ ಪ್ರತಿಷ್ಠಿತ ಐತಿಹಾಸಿಕ ಪಕ್ಷದ ಸರ್ವ ನಿರ್ಣಾಯಕನಾಗಿ ಆಳುತ್ತಿರುವುದು ಇತಿಹಾಸ ಮರು ನಿರ್ಮಾಣದ ಮುನ್ಸೂಚನೆ. ಶತ ಶತಮಾನದಿಂದಲೂ ದಲಿತರು ನಿಷ್ಠೆ, ಪ್ರಾಮಾಣಿಕತೆ ಮತ್ತು ಶ್ರಮದಿಂದ ಗುರುತಿಸಲ್ಪಟ್ಟವರು. ಅಂತೆಯೇ ಖರ್ಗೆ ಅವರು ಸಿದ್ದಾಂತವನ್ನು ಬಿಟ್ಟು ರಾಜಕೀಯ ಮಾಡದೇ, ಅಧಿಕಾರಕ್ಕಾಗಿ ಪಕ್ಷವನ್ನು ಬಲಿಕೊಡದೇ, ಪಕ್ಷದಿಂದ ಪಕ್ಷಕ್ಕೆ ಪಾಲಾಯನವಾದಿಯಾಗದೆ, ಪಕ್ಷಕ್ಕೆ ಯಾವತ್ತೂ ಮುಜಗರವನ್ನುಂಟು ಮಾಡದ ದೇಶ ಕಂಡ ಅನಮ್ಯ ರಾಜಕೀಯ ಮುತ್ಸದ್ದಿ. ಹೌದು ಅಧಿಕಾರಕ್ಕಾಗಿ ಎಂದಿಗೂ ಕಾಂಗ್ರೆಸ್ ಮತ್ತು ತಾವು ನಂಬಿರುವ ಸಿದ್ದಾತಂವನ್ನು ಬಿಟ್ಟು ನಡೆಯದೆ, ಎಂದಿಗೂ ಕೂಡಾ ಕಾಂಗ್ರೆಸ್ ಪಕ್ಷಕ್ಕೆ, ತಮ್ಮ ನಾಯಕರಿಗೆ ಮುಜಗರ ಬರುವಂತೆ ನಡೆದುಕೊಂಡವರಲ್ಲಾ. ಪಕ್ಷದ ಕೆಲಸವನ್ನು ತಲೆ ಮೇಲೆ ಹೊತ್ತಿಕೊಂಡು ಮಾಡ್ತೇನೆ. ನಾನು ಯಾವತ್ತೂ ಅಧಿಕಾರವನ್ನು ಕೇಳಿಲ್ಲ. ಪಕ್ಷ ನೀಡಿದ ಅಧಿಕಾರವನ್ನು ಕಾಯಾ ವಾಚಾ ಮನಸಾ ಮಾಡುತ್ತೇನೆ ಅಂತ ಹೇಳುವ ಮಲ್ಲಿಕಾರ್ಜುನ ಖರ್ಗೆ, ಇದೀಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು.

ಕಡು ಬಡತನದಲ್ಲಿ ಜನಿಸಿ, ಮಗುವಿದ್ದಾಗಲೇ ಎಲ್ಲರನ್ನು ಕಳೆದುಕೊಂಡು, ಹುಟ್ಟಿನಿಂದ ಹೋರಾಟದ ಹಾದಿಯಲ್ಲಿಯೇ ಬೆಳೆದು ಬಂದ ಡಾ. ಮಲ್ಲಿಕಾರ್ಜುನ ಖರ್ಗೆ ಈಗ ಶತಮಾನದ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.ಜೀವನದ ಬಹುತೇಕ ಸಮಯ ಮುಳ್ಳಿನ‌ ಹಾದಿಯಲ್ಲಿ ನಡೆದು ಯಶಸ್ವಿ ಜೀವನದತ್ತ ಬಂದಿರುವ ಖರ್ಗೆ ಕೈಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟ್‌ರ್ ಡೋಸ್ ನೀಡಿದಂತಾಗಿದೆ. ಹೌದು ದೇಶದ ಅತಿ ಹಳೆಯದಾದ ಮತ್ತು ಅತಿ ದೊಡ್ಡದಾಗ ಕಾಂಗ್ರೆಸ್ ಪಕ್ಷದ ಆಡಳಿತ ಚುಕ್ಕಾಣೆ ಹಿರಿಯ ರಾಜಕೀಯ ಮುತ್ಸದಿ ಖರ್ಗೆ ಕೈಗೆ ಸಿಕ್ಕಿದೆ. ದೇಶದ ಸಾಂವಿಧಾನಿಕ ಅತ್ಯುನ್ನತ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕಿಳಿದು ಭರ್ಜರಿ ಗೆಲುವಿನ ಮೂಲಕ ಎಐಸಿಸಿ ಸಾರಥಿ ಆಗಿ ಆಯ್ಕೆ ಆಗಿದ್ದಾರೆ.ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಹರಿಕಾರ, ಸೋಲಿಲ್ಲದ ಸರದಾರನೆಂಬ ಖ್ಯಾತಿ ಗಳಿಸಿದ್ದ ಖರ್ಗೆ ಅವರ ಹಿಂದಿನ ಜೀವನ ಮಾತ್ರ ಹೂವಿನಿಂದ ಕೂಡಿದ ಮೇತ್ತನೇಯ ಹಾದಿಯಾಗಿರಲಿಲ್ಲ ಅನ್ನೋದು ಗಮನಾರ್ಹ ವಿಷಯ.

ಪುಟ್ಟ ಕಂದಮ್ಮನ ಕರಾಳ ದಿನದಿಂದ ಹಿಡಿದು ರಾಜಕೀಯದಲ್ಲಿ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದ ಮಲ್ಲಿಕಾರ್ಜುನ ಖರ್ಗೆ, ಹುಟ್ಟುತ್ತಲೇ ಸುಖದ ಸುಪ್ಪತ್ತಿಗೆಯಲ್ಲಿ ಇದ್ದವರಲ್ಲ, ಕಡುಬಡತನ ಮನೆಯಲ್ಲಿ ಜನಿಸಿ ಸಾಕಷ್ಟು ನೋವು ನಷ್ಟ ಕಷ್ಟ ಅನುಭವಿಸಿದವರು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ಕಡು ಬಡತನದ ಮನೆಯಲ್ಲಿ ಜುಲೈ 21, 1942 ರಲ್ಲಿ ಜನಿಸಿದ ಖರ್ಗೆ, ಮಗು ಇದ್ದಾಗಲೇ ದುಷ್ಟರ ದುಷ್ಕೃತ್ಯದಿಂದ ತಾಯಿ ಮತ್ತು ಒಡಹುಟ್ಟಿದವರನ್ನು ಕಳೆದುಕೊಂಡು ತಂದೆಯೊಂದಿಗೆ ಕಲಬುರಗಿಗೆ ಒಲಸೆ ಬಂದಿದ್ದಾರೆಂಬ ಕರಾಳ ಇತಿಹಾಸ ಉಲ್ಲೇಖವಿದೆ.1947 ಆಗಸ್ಟ್ 15 ರಂದು ದೇಶಕ್ಕೆ ಸ್ವತಂತ್ರ ಸಿಕ್ಕಿತ್ತು. ಆದರೆ ನಿಜಾಮನ ಕಪಿಮುಷ್ಠಿಯಲ್ಲಿದ್ದ ಹೈದ್ರಾಬಾದ ಕರ್ನಾಟಕ ಪ್ರದೇಶ ಒಂದು ವರ್ಷ ತಡವಾಗಿ ಭಾರತದಲ್ಲಿ ವಿಲಿನಗೊಂಡಿತ್ತು. ನಿಜಾಮ ಆಢಳಿತ ಅವಧಿಯಲ್ಲಿ ನಿಜಾಮನ‌ ಖಾಸಗಿ ಸೈನ್ಯ ರಜಾಕಾರರ ಪಡೆ ನಡೆಸಿದ ದಾಳಿ ಅಷ್ಟಿಷ್ಟಲ್ಲ, ಕ್ರೌರ್ಯ‌ ಮನೋಭಾವದ ರಜಾಕಾರರ ದಾಳಿಯಿಂದ ಈ‌ ಪ್ರದೇಶದಲ್ಲಿ ಅಸಂಖ್ಯಾತ ಜನರು ಪ್ರಾಣ ಕಳೆದುಕೊಂಡರು. ಅದೆಷ್ಟೋ ಜನರು ಎಲ್ಲವನ್ನ ಕಳೆದುಕೊಂಡು ಬೀದಿಗೆ ಬಿದ್ದರು. ಇದೆ ರಜಾಕರ ದಾಳಿ‌ ಸಂದರ್ಭದಲ್ಲಿ ಖರ್ಗೆ ಕುಟುಂಬ ಕೂಡಾ ನಲುಗಿ ಹೋಗಿತ್ತು. ರಜಾಕರ ಪಡೆ ಖರ್ಗೆ ಅವರ ಇಡಿ ಕುಟುಂಬ ಸದಸ್ಯರನ್ನ ಬಲಿ ಪಡೆದಿದೆ ಎಂಬ ಇತಿಹಾಸ ಕೆಲವಡೆ ಉಲ್ಲೇಖವಿದೆ.ಮಲ್ಲಿಕಾರ್ಜುನ ಖರ್ಗೆ ಮಗುವಾಗಿದ್ದಾಗ ವರವಟ್ಟಿ ಗ್ರಾಮದಲ್ಲಿ ರಜಾಕರ ಪಡೆ ದಾಳಿ ನಡೆಸಿತ್ತು. ಕೈಗೆ ಸಿಕ್ಕಸಿಕ್ಕವರ ಹತ್ಯೆಗೈದಿತ್ತು. ಮನೆಗಳಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿತ್ತು. ಇದೆ ಸಂದರ್ಭದಲ್ಲಿ ಖರ್ಗೆ ಕುಟುಂಬ ವಾಸವಿದ್ದ ಗುಡಿಸಲಿಗೂ ಕೊಳ್ಳಿ ಇಟ್ಟಿತ್ತು. ಖರ್ಗೆ ತಾಯಿ ಹಾಗೂ ಒಡಹುಟ್ಟಿದವರು ಅದೆ ಬೆಂಕಿಗೆ ಬಲಿಯಾದರು. ಅದೃಷ್ಟಕ್ಕೆ ಗುಡಿಸಿಲಿನಿಂದ ಹೋರಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ತಂದೆ ಮಾಪಣ್ಣ ಬದುಕುಳಿದಿದ್ದರು. ನಂತರ ಖರ್ಗೆ ತಮ್ಮ ತಂದೆಯೊಂದಿಗೆ ಕಲಬುರಗಿಗೆ ಒಲಸೆ ಬಂದಿದ್ದರು ಎಂಬ ಕರಾಳ ಇತಿಹಾಸ ಕೆಲವಡೆ ಉಲ್ಲೇಖಿಸಲಾಗಿದೆ..

ಹೋರಾಟದ ಹಾದಿಯಲ್ಲಿ ಖರ್ಗೆ:
ತಂದೆಯೊಂದಿಗೆ ಹುಟ್ಟುರು ವರವಟ್ಟಿ ತೊರೆದು ಕಲಬುರಗಿಗೆ ಆಗಮಿಸಿದ ಖರ್ಗೆ, ಕಾಲಕ್ರಮೇನ ಚೇತರಿಸಿಕೊಂಡು ಎನ್‌‌ವಿ ಶಾಲೆಯಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ, ಸರ್ಕಾರಿ ಪದವಿ ಕಾಲೇಜಿನಲ್ಲಿ ಪಿಯು ಆರ್ಟ್, ಶೇಠ್ ಶಂಕರ್ ಲಾಲ್ ಲಾಹೋಟಿ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಕಾಲೇಜಿನಲ್ಲಿ ವಿದ್ಯಾರ್ಥಿ ಮುಖಂಡನಾಗಿ, ತಮ್ಮ‌ ತಂದೆ ಮಾಪಣ್ಣ ಕೆಲಸ‌ ಮಾಡುತ್ತಿದ್ದ ಎಮ್‌ಎಸ್‌ಕೆ ಮಿಲ್ ನಲ್ಲಿ ಕಾರ್ಮಿಕ ಮುಖಂಡನಾಗಿ ಗುರುತಿಸಿಕೊಂಡು ಅನೇಕ‌ ಹೋರಾಟಗಳನ್ನು ಮಾಡಿ 1969 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.1972 ರಲ್ಲಿ ಮೊದಲ ಬಾರಿಗೆ ಗುರುಮಠಕಲ್ ಮೀಸಲು ಮತಕ್ಷೇತ್ರದಿಂದ ವಿಧಾನಸಭೆ ಪ್ರವೇಶ ಮಾಡಿದ ಖರ್ಗೆ 2008 ರವರೆಗೆ ಒಂಬತ್ತು ಬಾರಿ ಸತತವಾಗಿ ಶಾಸಕರಾದವರು. ಈ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ, ಹಲವು ಉನ್ನತ ಮಟ್ಟದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.‌ ಇನ್ನು 2009 ಹಾಗೂ 2014 ರಲ್ಲಿ ಎರಡು ಅವಧಿಗೆ ಕಲಬುರಗಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಖರ್ಗೆ ಕೇಂದ್ರ ಮಂತ್ರಿಯಾಗಿ, ಸಂಸದೀಯ ನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ..1972 ರಿಂದ 2019ರ ವರೆಗೆ 9 ಬಾರಿ‌ ಶಾಸಕರಾಗಿ ಎರಡುಬಾರಿ ಸಂಸದರಾದ ಖರ್ಗೆಗೆ ಮೊದಲ ಬಾರಿಗೆ 2019 ರ ಲೋಕಸಭಾ ಚುನಾವಣೆಯಲ್ಲಿ ಸೋಲಾಯಿತು. ಇವರನ್ನು ಸೋಲಿಸಲು ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್ ಶಾ 4 ದಿನಗಳ ಕಾಲ ಕ್ಷೇತ್ರದಲ್ಲೇ ಉಳಿದು ಸೇಡಿನ ಸಂಚು ರೂಪಿಸಿದ್ದರು ಎಂಬ ಆರೋಪ ಇದೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಅವರನ್ನ ರಾಜ್ಯಸಭೆಗೆ ಅವಿರೋಧ ಆಯ್ಕೆ ಮಾಡುವ ಮೂಲಕ ಖರ್ಗೆ ಅವರನ್ನ ಮತ್ತೆ ಮುನ್ನಲೆಗೆ ತಂದಿತ್ತು.

ಹೀಗೆ ಸೋಲಿಲ್ಲದ ಸರ್ಧಾರ ಎಂಬ ಖ್ಯಾತಿ ಪಡೆದ ಖರ್ಗೆ ಮೂರುಬಾರಿ ಮುಖ್ಯಮಂತ್ರಿ ಗಾಧಿಯ ಹೊಸ್ತಿಲವರಗೆ ಹೋಗಿ ವಂಚಿತರಾಗಿ ಮರಳಿದ ಇತಿಹಾಸ ಕೂಡಾ ಇದೆ.1999, 2004, ಮತ್ತು 2013 ರಲ್ಲಿ ಮೂರುಬಾರಿ ಖರ್ಗೆ ಇನ್ನೇನು ಸಿಎಂ ಆಗಿಯೆಬಿಟ್ರು ಎನ್ನುವಷ್ಟರಲ್ಲಿ ರಾಜಕೀಯ ಬದಲಾವಣೆಗಳು ಅವರನ್ನ ಸಿಎಂ ಸ್ಥಾನದಿಂದ ವಂಚಿತರಾಗುವಂತೆ ಮಾಡಿತ್ತು.. ಖರ್ಗೆ ಬದಲಾಗಿ ಎಸ್.ಎಂ‌ ಕೃಷ್ಣ, ಎನ್. ಧರ್ಮಸಿಂಗ್, ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೇರಿದರು.. ಅದೇನೆ ಇರಲಿ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿನ ಸಮಚಿತ್ತ, ಶಾಂತ, ಸೌಮ್ಯ ಸ್ವಭಾವ, ಹೀತ ಮಿತ, ಅಳೆದು ತೂಗಿ ಮಾತನಾಡುವ ಗುಣಲಕ್ಷಣ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಗಾಂಧಿ ಕುಟುಂಬದ ಆಪ್ತನಾಗಿ ಗುರುತಿಸಿಕೊಂಡ ಪ್ರತಿಫಲವಾಗಿ ಖರ್ಗೆ ಅವರಿಗೆ ಇದೀಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಒಲಿದುಬಂದಿದ್ದು ಕನ್ನಡಿಗರಲ್ಲಿ ಹರ್ಷ ತಂದಿದೆ.‌ ಪುಟ್ಟ ವಯಸ್ಸಿನಿಂದ ಇಳಿವಯಸ್ಸಿನವರೆಗೆ ಖರ್ಗೆ ಸಾಕಷ್ಟು ನೋವು ಕಷ್ಟ ನಷ್ಟ ಅನುಭವಿಸಿ ಮುಳ್ಳಿನ ಹಾದಿಯಲ್ಲಿ ನಡೆದು ಬಂದಿದ್ದಾರೆ.

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.- ಯಂಗ್ ಬ್ರಿಗೇಡ್ ಸೇವಾದಳ. ಜಿಲ್ಲೆಯ ಯಂಗ್ ಬ್ರಿಗೇಡ್ ಸೇವಾದಳದ ನೂತನ ಅಧ್ಯಕ್ಷರಾಗಿ ಶ್ರೀ ಪ್ರವೀಣ್ ಸಿದ್ದಲ...
31/03/2023

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.
- ಯಂಗ್ ಬ್ರಿಗೇಡ್ ಸೇವಾದಳ.

ಜಿಲ್ಲೆಯ ಯಂಗ್ ಬ್ರಿಗೇಡ್ ಸೇವಾದಳದ ನೂತನ ಅಧ್ಯಕ್ಷರಾಗಿ ಶ್ರೀ ಪ್ರವೀಣ್ ಸಿದ್ದಲಿಂಗಪುರ ಅಧಿಕಾರ ಸ್ವೀಕಾರ ಹಾಗೂ ಪ್ರಥಮ ಕಾರ್ಯಕಾರಿಣಿ ಸಭೆ. ಸಭೆಯಲ್ಲಿ ಇತರ ಪ್ರಮುಖರು ಉಪಸ್ಥಿತಿ.

- ವರದಿ
ಡಿಸಿಸಿ ಮಾಧ್ಯಮ ವಿಭಾಗ.

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ. ಹಿರಿಯ ರಾಜಕೀಯ ಮುತ್ಸದ್ದಿ ಶ್ರೀ ಸಿದ್ದರಾಮಯ್ಯ ಹಾಗೂ ಪಕ್ಷದ ಪ್ರಮುಖರು ಶ್ರೀ ಆರ್. ದ್ರುವನಾರಾಯಣ್ ಅವರ  ಉ...
22/03/2023

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.

ಹಿರಿಯ ರಾಜಕೀಯ ಮುತ್ಸದ್ದಿ ಶ್ರೀ ಸಿದ್ದರಾಮಯ್ಯ ಹಾಗೂ ಪಕ್ಷದ ಪ್ರಮುಖರು ಶ್ರೀ ಆರ್. ದ್ರುವನಾರಾಯಣ್ ಅವರ ಉತ್ತರ ಕ್ರಿಯಾದಿ ಸಂದರ್ಭದಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಿ, ಅವರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದರು.

- ವರದಿ
ಡಿಸಿಸಿ ಮಾಧ್ಯಮ ವಿಭಾಗ

ಭಾವಪೂರ್ಣ ನುಡಿ ನಮನ.... ವರುಣಾ  ವಿಧಾನಸಭಾ ಕ್ಷೇತ್ರ ದಿಂದ   ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಲೋಕಸಭಾ ಮಾಜಿ ಸದಸ್ಯರಾದ ಶ್ರೀ. ಆರ್. ಧ್ರುವನ...
19/03/2023

ಭಾವಪೂರ್ಣ ನುಡಿ ನಮನ....

ವರುಣಾ ವಿಧಾನಸಭಾ
ಕ್ಷೇತ್ರ ದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಲೋಕಸಭಾ ಮಾಜಿ ಸದಸ್ಯರಾದ ಶ್ರೀ. ಆರ್. ಧ್ರುವನಾರಾಯಣ್ ಅವರಿಗೆ ಆಯೋಜನೆ ಮಾಡಿದ್ದ ನುಡಿ ನಮನ ಸಭೆ.

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ. ಪಿರಿಯಾಪಟ್ಟಣ - ಕಾಂಗ್ರೆಸ್ ಬಿರುಗಾಳಿ ದೊಡ್ಡ ಬ್ಯಾಲಾಳು  ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕ...
19/03/2023

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.

ಪಿರಿಯಾಪಟ್ಟಣ - ಕಾಂಗ್ರೆಸ್ ಬಿರುಗಾಳಿ

ದೊಡ್ಡ ಬ್ಯಾಲಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ, ಮಾಜಿ ಮಂತ್ರಿಗಳಾದ ಶ್ರೀ ಕೆ. ವೆಂಕಟೇಶ್, ಮೈಸೂರು ಡಿಸಿಸಿ ಅಧ್ಯಕ್ಷರಾದ ಡಾ.ಬಿಜೆವಿ, ಶಾಸಕರಾದ ಡಾ. ಯತೀಂದ್ರ ಸಿದ್ರಾಮಯ್ಯ ಹಾಗೂ ಇತರ ಗಣ್ಯರು ಭಾಗಿ.

- ವರದಿ
ಡಿಸಿಸಿ ಮಾಧ್ಯಮ ವಿಭಾಗ

07/03/2023

Address

107 B Block Jyothi Nagar
Mysore
570019

Telephone

+919008559330

Website

Alerts

Be the first to know and let us send you an email when Rahul Dist.Congress posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rahul Dist.Congress:

Share