ರಾಷ್ಟ್ರದೇವೋಭವ

ರಾಷ್ಟ್ರದೇವೋಭವ "ಜನನಿ ಜನ್ಮ ಭೂಮಿಶ್ಚ ಸ್ವರ‍್ಗಾದಪಿ ಗರೀಯಸಿ" 🚩

01/10/2025

ತರಕಾರಿ ತೂಗುವಾಗ ತೂಕದ ಯಂತ್ರದ ಮೇಲೆ ಒಂದು ನೊಣ ಕುಳಿತರೂ, ತೂಕದಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ.ಆದರೆ ಅದೇ ನೊಣ ಬಂಗಾರ ತೂಗುವಾಗ ತೂಕದ ಯ...
29/04/2025

ತರಕಾರಿ ತೂಗುವಾಗ ತೂಕದ ಯಂತ್ರದ ಮೇಲೆ ಒಂದು ನೊಣ ಕುಳಿತರೂ, ತೂಕದಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ.

ಆದರೆ ಅದೇ ನೊಣ ಬಂಗಾರ ತೂಗುವಾಗ ತೂಕದ ಯಂತ್ರದ ಮೇಲೆ ಕುಳಿತರೆ, ಅದರಿಂದ ಹತ್ತು -ಇಪ್ಪತ್ತು ಸಾವಿರ ರೂಪಾಯಿಗಳಷ್ಟು ವ್ಯತ್ಯಾಸ ಉಂಟಾಗಬಹುದು. !!

ಇಲ್ಲಿ ತೂಕವು ಮುಖ್ಯವಲ್ಲ
ನೀವು ಯಾವ ಸ್ಥಳದಲ್ಲಿ ಇದ್ದೀರೋ ಅದು ಮುಖ್ಯ.

ಆದುದರಿಂದ ಉತ್ತಮ ವ್ಯಕ್ತಿಗಳೊಂದಿಗೆ ಇರಲು ಪ್ರಯತ್ನಿಸಿ. ನಿಮ್ಮನ್ನು ಒಳ್ಳೆಯ ವಾತಾವರಣದಲ್ಲಿ ಇರಿಸಿಕೊಳ್ಳಿ ಮತ್ತು ನಿಮ್ಮ ಗೌರವ ಹಾಗೂ ಮೌಲ್ಯವನ್ನು ಉಳಿಸಿಕೊಳ್ಳಿ. 🙂

ತನ್ನ ಮಕ್ಕಳಂತೆ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿದಾತೆ "ಪದ್ಮಶ್ರೀ" ಪ್ರಶಸ್ತಿ ಪಡೆದ ವೃಕ್ಷಮಾತೆ  ತುಳಸಿ ಗೌಡ ಅವರು ಇನ್ನಿಲ್ಲ.....ಉತ್ತರ...
17/12/2024

ತನ್ನ ಮಕ್ಕಳಂತೆ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿದಾತೆ "ಪದ್ಮಶ್ರೀ" ಪ್ರಶಸ್ತಿ ಪಡೆದ ವೃಕ್ಷಮಾತೆ ತುಳಸಿ ಗೌಡ ಅವರು ಇನ್ನಿಲ್ಲ.....

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರ ಪರಿಸರದ ಪ್ರೀತಿ ಮಾಡಿದ ಸಾಧನೆ ಅಪಾರ. ವೃಕ್ಷಮಾತೆಯಾದ ಆಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ,ಲಕ್ಷಗಟ್ಟಲೇ. ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944 ರಲ್ಲಿ ಜನಿಸಿದವರು. ಬಡತನದ ಜತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಶಾಲೆ ಮೆಟ್ಟಿಲನ್ನು ಏರದೆ ತಾಯಿಯ ಜೊತೆ ಕೂಲಿ ಕೆಲಸಕ್ಕೆ ತೆರಳಲು ಪ್ರಾರಂಭಿಸಿದ್ದರು. ಗೋವಿಂದೇ ಗೌಡ ಎನ್ನುವವರ ಜತೆ ಬಾಲ್ಯ ವಿವಾಹವಾದ ತುಳಸಿ ಗೌಡ, ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನೂ ಕಳೆದುಕೊಂಡು ವಿಧವೆಯಾದರು.

ಹುಟ್ಟಿನಿಂದ ಸಹಜವಾಗಿ ಪ್ರಕೃತಿಯ ಬಗೆಗೆ ಕಾಳಜಿ ಪ್ರೀತಿ ಹುಟ್ಟಿತ್ತು. ಊರಿನವರ ಜೊತೆ ಕಟ್ಟಿಗೆ ತರುವ ಕೆಲಸವನ್ನ ಮಾಡಿ ಪ್ರತಿ ದಿನವೂ 5 ರಿಂದ 6 ರೂಪಾಯಿ ದುಡಿಯುತ್ತಿದ್ದ ತುಳಸಿಗೆ ಅರಣ್ಯ ಇಲಾಖೆ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ನೀಡಿತ್ತು. ಹೀಗೆ ಪ್ರೀತಿಯಿಂದ ಬೀಜಗಳನ್ನು ತಂದು ಸಸಿ ಮಾಡುವ ಕೆಲಸ ಪ್ರಾರಂಭಿಸಿದರು ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನ ಮಾಡುತ್ತಿದ್ದ ತುಳಸಿ ಗೌಡ ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರು. ಆದರೆ ತಮ್ಮ ಪರಿಸರ ಕಾಳಜಿಯಿಂದ ಕೆಲಸವನ್ನು ಮಾತ್ರ ನಿಲ್ಲಿಸಲೇ ಇಲ್ಲ.

ಸುಮಾರು ವರ್ಷಕ್ಕೆ 30 ಸಾವಿರ ಗಿಡಗಳ ನಾಟಿ ಇದರೊಂದಿಗೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಸುಮಾರು 30 ಸಾವಿರ ಸಸಿಗಳನ್ನ ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದರು. ಈಕೆ ನೆಟ್ಟು ಪೋಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳನ್ನ ಕೊಡುವ ಕೆಲಸ ಮಾಡುತ್ತಿವೆ. ಆಕೆ ನೆಟ್ಟ ಗಿಡ ನಮ್ಮ ಮುಂದಿನ ಪೀಳಿಗೆಗೂ ಸಹಾಯವಾಗಬಲ್ಲದು. ಇಂತಹ ಅಪರೂಪದ ಕಾಯಕದಲ್ಲಿ ತೊಡಗಿಸಿಕೊಂಡಿರುವ ವೃಕ್ಷಮಾತೆ ತುಳಸಿ ಗೌಡ.

ವೃಕ್ಷಮಾತೆ ಎನ್ನಲು ಮತ್ತೊಂದು ಕಾರಣ ತನ್ನ ಮಕ್ಕಳಾಗಿರುವ ಗಿಡ ಮರಗಳ ಬಗ್ಗೆ ಪರಿಸರ ವಿಜ್ಞಾನಿಗಿಂತ ಹೆಚ್ಚು ತಿಳಿದಿದ್ದಾರೆ. ಯಾವ ಯಾವ ಗಿಡಗಳನ್ನ ಯಾವ ಯಾವ ಋತುವಿನಲ್ಲಿ ನೆಡಬೇಕು. ಎಷ್ಟು ನೀರು ಗೊಬ್ಬರ ಬೇಕು. ಯಾವ ಗಿಡಗಳು ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ. ಹೀಗೆ ಅರಣ್ಯದಲ್ಲಿನ ಸುಮಾರು 300ಕ್ಕೂ ಹೆಚ್ಚು ಪ್ರಭೇದದ ಮರಗಳ ಬಗ್ಗೆ ಇವರ ಅಂಗೈಯಲ್ಲೇ ಮಾಹಿತಿ ಇದೆ. ತನ್ನ ಸುತ್ತಮುತ್ತಲೂ ಯಾರು ಮರಗಳನ್ನ ಕಡಿಯದಂತೆ ನೋಡಿಕೊಂಡಿದ್ದಾರೆ. ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನ ಮರಗಳ್ಳರು ಕಡಿದಾಗ ತುಳಸಿ ಕಡಿದ ಮರವನ್ನ ಅಪ್ಪಿ ಅತ್ತ ಘಟನೆಗಳು ಸಾಕಷ್ಟಿವೆ.....

ತುಳಸಿ ಗೌಡರ ಪರಿಸರ ಕಾಳಜಿ ವೃಕ್ಷಗಳ ಜ್ಞಾನ ಎಲ್ಲವೂ ಇಡೀಯ ದೇಶಕ್ಕೆ ಮಾದರಿ. ನಿಜವಾದ ಪರಿಸರ ಪ್ರೇಮಿ ಹಾಗೂ ತಾಯಿಯಾಗಿ ಮುಂದಿನ ಪೀಳಿಗೆಗೂ ನೆರವಾಗುವಂತೆ ಸಾವಿರಾರು ವೃಕ್ಷಗಳನ್ನು ಪೋಷಿಸಿ ಬೆಳೆಸಿದ ದಿಮಂತ ಮಹಿಳೆ ಈಕೆ. ಇಂತವರು ಈ ಭೂಮಿಯಲ್ಲಿ ಸಾವಿರ ಜನ ಹುಟ್ಟಿಬರಲಿ.... 🌳

ಮಾನವೀಯತೆಗೆ ಸವಾಲಾಗುತ್ತಿರುವ ಹಲವು ಸಂಗತಿಗಳು
10/12/2024

ಮಾನವೀಯತೆಗೆ ಸವಾಲಾಗುತ್ತಿರುವ ಹಲವು ಸಂಗತಿಗಳು

07/12/2024
ಹಿಂದೂಗಳ ಹೋರಾಟಕ್ಕೆ ಮತ್ತೊಂದು ಗೆಲುವು...ಮಥುರಾ ಕೃಷ್ಣ ಜನ್ಮಭೂಮಿ ಸರ್ವೇಗೆ ಕೋರ್ಟ್ ಅನುಮತಿಶಾಹಿ ಈದ್ಗಾ ಮಸೀದಿಯಲ್ಲಿ ಸರ್ವೇಗೆ ಹೈಕೋರ್ಟ್ ಆದೇ...
14/12/2023

ಹಿಂದೂಗಳ ಹೋರಾಟಕ್ಕೆ ಮತ್ತೊಂದು ಗೆಲುವು...ಮಥುರಾ ಕೃಷ್ಣ ಜನ್ಮಭೂಮಿ ಸರ್ವೇಗೆ ಕೋರ್ಟ್ ಅನುಮತಿ

ಶಾಹಿ ಈದ್ಗಾ ಮಸೀದಿಯಲ್ಲಿ ಸರ್ವೇಗೆ ಹೈಕೋರ್ಟ್ ಆದೇಶ
🛕🚩

ಜಯ್ ಶ್ರೀರಾಮ್!ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಆರಾಧ್ಯಮೂರ್ತಿ ಶ್ರೀರಾಮ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಕ್ಷಣಗಳನ್ನು ಭಕ್ತಿಯಿಂದ ಸಂಭ್ರಮಿಸೋ...
04/11/2023

ಜಯ್ ಶ್ರೀರಾಮ್!

ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಆರಾಧ್ಯಮೂರ್ತಿ ಶ್ರೀರಾಮ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಕ್ಷಣಗಳನ್ನು ಭಕ್ತಿಯಿಂದ ಸಂಭ್ರಮಿಸೋಣ.

ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ 22 ಜನವರಿ 2024 ರಂದು ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂಲಕ ಮನವಿಯೊಂದನ್ನು ಮಾಡಲಾಗಿದ್ದು ಶ್ರೀರಾಮ ಭಕ್ತರಾದ ನಾವೆಲ್ಲರೂ ಪಾಲಿಸೋಣ.

⛳ ಪ್ರಾಣ ಪ್ರತಿಷ್ಠೆಯ ದಿನದಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 01:00 ರವರೆಗೆ ನಮ್ಮ ಸ್ಥಳೀಯ ದೇವಸ್ಥಾನದಲ್ಲಿ ಭಜನೆ-ಕೀರ್ತನೆ ಏರ್ಪಡಿಸುವುದು.

⛳ ಶಂಖ ನಾದ, ಘಂಟಾನಾದ, ಆಯೋಜನೆ ಮಾಡುವ ಮೂಲಕ ಅಯೋಧ್ಯೆಯ ಸಂಭ್ರಮದ ಸಮಾರಂಭವನ್ನು ಸಮಾಜಕ್ಕೆ ತೋರಿಸುವುದು‌.

⛳ "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪಿಸುವುದು.

⛳ ಹನುಮಾನ್ ಚಾಲೀಸಾ, ಸುಂದರಕಾಂಡ, ರಾಮರಕ್ಷಾ ಸ್ತೋತ್ರ ಇತ್ಯಾದಿಗಳನ್ನು ಸಾಮೂಹಿಕವಾಗಿಯೂ ಪಠಿಸುವುದು.

ಅಯೋಧ್ಯೆಯ ರಾಮ ಮಂದಿರ ರಾಷ್ಟ್ರ ಮಂದಿರವಾಗಿ ಬೆಳಗಲಿ, ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಅಯೋಧ್ಯೆಯ ಹೆಸರು ಅಜರಾಮರವಾಗಲಿ.

04/11/2023

ನೋಡಲೇಬೇಕಾದ ಚಿತ್ರ:

"ಶ್ರೀರಾಮ ಜನ್ಮಭೂಮಿ ಕಿ ವಿಜಯಗಾಥಾ"
ರಾಮಮಂದಿರಕ್ಕಾಗಿ 500 ವರ್ಷಗಳ ಹೋರಾಟ ಮತ್ತು ರಾಮಮಂದಿರ ನಿರ್ಮಾಣದ ಕಥೆಯನ್ನು ಕಿರುಚಿತ್ರದ ಮೂಲಕ ತುಂಬಾ ಸುಂದರವಾಗಿ ತೋರಿಸಲಾಗಿದೆ. ಈ ಕಿರುಚಿತ್ರವನ್ನು ಪ್ರಸಿದ್ಧ ಟಿವಿ ಧಾರಾವಾಹಿಯ ಚಾಣಕ್ಯ ಡಾ. ಚಂದ್ರಪ್ರಕಾಶ್ ದ್ವಿವೇದಿ ನಿರ್ಮಿಸಿದ್ದು, ಕ್ರಿ.ಶ.1528ರಿಂದ ಇಂದಿನವರೆಗಿನ ರಾಮ ಮಂದಿರ ನಿರ್ಮಾಣದ ಪ್ರತಿಯೊಂದು ಹಂತಗಳನ್ನು ಡಾ. ಚಂದ್ರಪ್ರಕಾಶ್ ದ್ವಿವೇದಿ ಅವರು ತಮ್ಮ ಈ ಕಿರುಚಿತ್ರದಲ್ಲಿ ಜನರ ಮನಮುಟ್ಟುವಂತೆ ಅದ್ಭುತವಾಗಿ ತೋರಿಸಿದ್ದಾರೆ. ತಪ್ಪದೇ ನೋಡಿ.
🛕🚩

ವಿಜಯದಶಮಿಯ ಪರ್ವ ದಿನದಂದು 1925ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನಾ ದಿನದ ಶುಭಾಶಯಗಳು....
24/10/2023

ವಿಜಯದಶಮಿಯ ಪರ್ವ ದಿನದಂದು 1925ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ
ಸ್ಥಾಪನಾ ದಿನದ ಶುಭಾಶಯಗಳು.

ಬದಲಾವಣೆ ಜಗದ ನಿಯಮ. #ಭಾರತ 🔥♥️
09/09/2023

ಬದಲಾವಣೆ ಜಗದ ನಿಯಮ.

#ಭಾರತ 🔥♥️

ಭಾರತವೆಂದರೆ ಭಾರತೀಯರೇ ಮೂಗು ಮುರಿಯುತ್ತಿದ್ದ ಕಾಲ ಈಗ ಬದಲಾಗಿದ್ದು, ಜಗತ್ತೇ "ಭಾರತ್ ಮಾತಾ ಕೀ ಜೈ" ಎಂಬ ಸಂದರ್ಭ ಬಂದಿದೆ.ಇಷ್ಟು ವರ್ಷಗಳ ಕಾಲ ಜ...
09/09/2023

ಭಾರತವೆಂದರೆ ಭಾರತೀಯರೇ ಮೂಗು ಮುರಿಯುತ್ತಿದ್ದ ಕಾಲ ಈಗ ಬದಲಾಗಿದ್ದು, ಜಗತ್ತೇ "ಭಾರತ್ ಮಾತಾ ಕೀ ಜೈ" ಎಂಬ ಸಂದರ್ಭ ಬಂದಿದೆ.

ಇಷ್ಟು ವರ್ಷಗಳ ಕಾಲ ಜಿ-20 ಶೃಂಗಸಭೆಗೆ ಕೇವಲ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದ ಭಾರತ, ಇಂದು ಅದೇ ಜಿ-20 ರಾಷ್ಟ್ರಗಳ ಅಧ್ಯಕ್ಷನಾಗಿ, ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಳ್ಳುವಷ್ಟು ಸಮರ್ಥವಾಗಿದೆ.

ಜಿ-20 ಸಭೆಯಿಂದ ಭಾರತೀಯರ ಹೊಟ್ಟೆ ತುಂಬುತ್ತದೆಯಾ ಎಂದು ಪ್ರಶ್ನೆ ಮಾಡುವ ಬಹಳಷ್ಟು ವಂಧಿಮಾಗದರು ನಮ್ಮ ನಡುವೆಯೇ ಇದ್ದಾರೆ. ಆದರೆ ಜಗತ್ತು ಮುಂದಿನ 20 ವರ್ಷ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಭಾರತದ ಮೇಲೆ ಅವಲಂಬಿತವಾಗಿದೆ ಎಂಬುದು ವರ್ತಮಾನದ ವಾಸ್ತವ.

ಅಷ್ಟಕ್ಕೂ ಜಿ-20 ರಾಷ್ಟ್ರಗಳ ಶೃಂಗಸಭೆ ಎಂಬುದು ಸಾಮಾನ್ಯ ಸಭೆಯಲ್ಲ. ಜಿ -20 ರಾಷ್ಟ್ರಗಳು ಜಾಗತಿಕ ಜಿಡಿಪಿಯಲ್ಲಿ ಒಟ್ಟು 85% ಪಾಲನ್ನು ಹೊಂದಿದ್ದು, ಜಗತ್ತಿನ ಮೂರನೇ ಎರಡರಷ್ಟು (2/3) ಜನಸಂಖ್ಯೆ ಹೊಂದಿವೆ.

ಜಗತ್ತಿನ ಬಲಿಷ್ಠ ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಅವರೆಲ್ಲರೂ ಈಗ ಭರವಸೆ ಇಟ್ಟಿರುವುದು ಭಾರತದ ಮುಂದಾಳತ್ವದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಮೇಲೆ. ಜಗತ್ತಿನ ಪಾಲಿಗೆ ಜಿ-20 ಸಂಕಷ್ಟಹರ ವಿನಾಯಕ.

ಜಗತ್ತು ಕೋವಿಡ್-19 ಮಹಾಮಾರಿ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದೆ. ಕೋವಿಡ್-19 ನಿಂದ ಜಗತ್ತಿನ ಹಲವು ರಾಷ್ಟ್ರಗಳ ಆರ್ಥಿಕತೆ ಕುಸಿದಿದೆ. ಉಕ್ರೇನ್ -ರಷ್ಯಾ ಯುದ್ಧದ ಪರಿಣಾಮ ಪಾಶ್ಚಾತ್ಯ ದೇಶಗಳಲ್ಲಿ ಹಣದುಬ್ಬರ ವಿಪರೀತ ಏರಿದೆ. ಈ ಎಲ್ಲಾ ಸಂಕಷ್ಟಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಜಿ-20ಯದ್ದಾಗಿದೆ.

ಮತ್ತೊಬ್ಬರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಸಹನಶೀಲ ದೇಶ ನಮ್ಮ ಭಾರತ. ಜಿ-20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಭಾರತ ವಿಶ್ವಗುರುವಾಗಿ ಹೊರಹೊಮ್ಮಲು ಇದು ಮೊದಲ ಮೆಟ್ಟಿಲಾಗಿದೆ. ಜಿ-20 ಶೃಂಗಸಭೆಯ ಭಾರತದ ಆತಿಥ್ಯ ಹಾಗೂ ಆಯೋಜನೆ ಬಗ್ಗೆ ವಿಶ್ವದ ಶ್ರೇಷ್ಠ ನಾಯಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

“ಭಾರತದ ಸಾಮರ್ಥ್ಯವನ್ನು ಜಗತ್ತಿನೆದುರು ತೆರೆದಿಡಲು ಜಿ-20 ಅವಕಾಶ ಮಾಡಿಕೊಟ್ಟಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಜಗತ್ತಿನ 5ನೇ ಅತಿದೊಡ್ಡ ಅರ್ಥಶಕ್ತಿಯಾಗಿದ್ದು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದೆ. ಶ್ರೀ ನರೇಂದ್ರ ಮೋದಿಯವರು ದೇಶದ ಒಳಗೆ ಮಾತ್ರವಲ್ಲ, ಹೊರಗೂ ಓರ್ವ ಕ್ರಾಂತಿಕಾರಿ ನಾಯಕ” ಎಂದು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬ್ಬೋಟ್‌ ಹೇಳಿದ್ದಾರೆ.

“ವಸುಧೈವ ಕುಟುಂಬಕಂ ಎಂಬುದನ್ನು ಭಾರತ ಜಿ-20 ಶೃಂಗಸಭೆಯ ಮೂಲಮಂತ್ರವಾಗಿಸಿದೆ. ಇದಕ್ಕಿಂತ ಉತ್ತಮವಾದ ಸಂದೇಶ ಮತ್ತೊಂದಿಲ್ಲ. ಭಾರತವು ಸರ್ವರನ್ನೂ ಜತೆಗೇ ಕರೆದೊಯ್ಯುವ ಮುಂದಾಳತ್ವ ವಹಿಸಿರುವುದು ನನಗೆ ಸಂತಸ ತಂದಿದೆ" ಎಂದು ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಜುಗ್ನಾಥ್ ಹೇಳಿದ್ದಾರೆ.

ಉಕ್ರೇನ್ -ರಷ್ಯಾ ಯುದ್ಧದಿಂದ ಚೀನಾ ಮತ್ತು ಅಮೆರಿಕ ದೇಶಗಳು ಪರಸ್ಪರ ಮುಖಕ್ಕೆ ಮುಖ ಕೊಟ್ಟು ಮಾತನಾಡದಂತಹ ಸಂದರ್ಭದಲ್ಲಿ, ಆ ಎರಡು ರಾಷ್ಟ್ರಗಳು ಶಾಂತಿಯಿಂದ ಕೂತು ಮಾತನಾಡಲು ಜಗತ್ತಿನಲ್ಲಿ ಇರುವ ಏಕೈಕ ದೇಶವೆಂದರೆ ಅದು ನಮ್ಮ ಭಾರತ.

ಜಿ-20 ಯನ್ನು ಮುನ್ನಡೆಸುವ ಜೊತೆಗೆ ಜಾಗತಿಕ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡುಹಿಡಿಯುತ್ತಿದೆ. ಇದರಿಂದ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಬಹುದೊಡ್ಡ ಉತ್ತೇಜನ ಜಾಗತಿಕ ಮಟ್ಟದಲ್ಲಿ ದೊರೆಯಲಿದೆ.

ಒಂದು ವರ್ಷದವರೆಗೆ ಭಾರತ, ಹಣಕಾಸು, ಹವಾಮಾನ ಹಾಗೂ ವಿಶ್ವ ಬ್ಯಾಂಕ್‌ನ ಸುಧಾರಣೆ ಮತ್ತು ಇತ್ಯಾದಿ ಕೆಲಸಗಳಲ್ಲಿ ಎಲ್ಲಾ ಸದಸ್ಯ ದೇಶಗಳನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವುದು, ಭಾರತದ ಸರ್ವತೋಮುಖ ಬೆಳವಣಿಗೆಗೆ ನೆರವಾಗಲಿದೆ.

ಬದುಕನ್ನು ಮತ್ತಷ್ಟು ಸುಲಭವಾಗಿಸುವ ತಂತ್ರಜ್ಞಾನ, ಜಗತ್ತಿನ ಹಸಿವನ್ನು ನೀಗಿಸುವ ಸುಧಾರಿತ ಕೃಷಿ, ಎಲ್ಲರಿಗೂ ತಲುಪುವಂತಹ ಉತ್ಕೃಷ್ಟ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಭಾರತದ ಕನಸು ಸಾಕಾರವಾಗಲಿದೆ.

ಭಾರತವನ್ನು $ 5 ಟ್ರಿಲಿಯನ್ ಆರ್ಥಿಕತೆಯ ದೇಶವನ್ನಾಗಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗುರಿಗೆ ಜಿ-20 ಶೃಂಗಸಭೆ ಮತ್ತಷ್ಟು ಇಂಬು ನೀಡಲಿದೆ.


Address

Mangalore

Website

Alerts

Be the first to know and let us send you an email when ರಾಷ್ಟ್ರದೇವೋಭವ posts news and promotions. Your email address will not be used for any other purpose, and you can unsubscribe at any time.

Share