ಡಬ್ಬಿಂಗ್ ಪರ ವಿರೋಧ ಚರ್ಚೆಗಳು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.. ಅದ್ರೆ, ತುಳು ಚಿತ್ರರಂಗದಲ್ಲಿ ಮಾತ್ರ ಡಬ್ಬಿಂಗ್ ಪರವಾದ ಅಭಿಪ್ರಾಯ ಬಲವಾಗಿ ಕೇಳಿಬಂದಿದೆ. ಇಲ್ಲಿ ಡಬ್ಬಿಂಗ್ ಬೇಕು ಎನ್ನುವವರೇ ಹೆಚ್ಚು.
ಕಳೆದ ನಾಲ್ಕು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ತುಳು ಚಿತ್ರರಂಗದಲ್ಲಿ ವೃತ್ತಿಪರರ ನಿರ್ಮಾಣಕ್ಕಿಂತ ಭಾಷೆಯ ಅಭಿವೃದ್ಧಿ ಸದ್ಯಕ್ಕೆ ಮುಖ್ಯವೆನ್ನುತ್ತಾರೆ ಅಲ್ಲಿಯವರು. ಡಬ್ಬಿಂಗ್ ಸೌಲಭ್ಯ ಇದ್ದರೆ ಇತರ ಭಾಷೆಗಳ ಅತ್ಯುತ್ತಮ ಚಿತ್ರಗಳನ್ನ ತ
ುಳು ಭಾಷೆಯಲ್ಲೇ ನೋಡುವ ಅವಕಾಶ ಲಭಿಸುತ್ತದೆ ಎಂಬುದು ಅವರ ವಾದ...
ಕನ್ನಡ ಚಿತ್ರರಂಗದಿಂದ ತುಳುವಿಗೆ ಲಾಭವೇ ಆಗಿಲ್ಲ?
ಕನ್ನಡ ಫಿಲಂ ಚೇಂಬರ್'ನ ಅಧೀನದಲ್ಲಿರುವ ತುಳು ಚಿತ್ರರಂಗದಲ್ಲಿ ಯಾವುದೇ ಚಿತ್ರ ನಿರ್ಮಾಣ ಆಗಬೇಕಿದ್ದರೆ ಚೇಂಬರ್ ಲೈಸೆನ್ಸ್ ಮುಖ್ಯ. ಆದರೆ, ವಾಸ್ತವವಾಗಿ ಕನ್ನಡ ಚಿತ್ರರಂಗದಿಂದ ತುಳುವಿಗೆ ಯಾವುದೇ ಲಾಭವಾಗಿಲ್ಲ.
ತುಳು ಉಳಿವಿಕೆ...
ಕರಾವಳಿ ನಾಡಲ್ಲಿ ಬಹುತೇಕರ ಮನೆಮಾತು ತುಳು... ಆದರೆ, ತುಳು ಚಿತ್ರರಂಗ ತುಂಬಾ ಚಿಕ್ಕದಿರುವುದರಿಂದ ಈ ಭಾಷೆಯಲ್ಲಿ ಹೈಬಜೆಟ್ ಚಿತ್ರಗಳನ್ನ ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ, ಇಲ್ಲಿ ತುಳು ಚಿತ್ರಗಳ ನಿರ್ಮಾಣ ತೀರಾ ವಿರಳವಾಗಿದೆ. ಇಲ್ಲಿಯ ಜನರು ಬೇರೆ ವಿಧಿಯಿಲ್ಲದೇ ಬೇರೆ ಭಾಷೆಯ ಚಿತ್ರಗಳನ್ನೇ ನೋಡುವ ಅನಿವಾರ್ಯತೆಗೆ ಸಿಲುಕುತ್ತಾರೆ. ಈ ನಿಟ್ಟಿನಲ್ಲಿ ಬೇರೆ ಭಾಷೆಯ ಚಿತ್ರಗಳನ್ನ ತುಳು ಭಾಷೆಗೆ ಡಬ್ ಮಾಡಿದರೆ ಭಾಷೆಯ ಬೆಳವಣಿಗೆಯೂ ಆಗುತ್ತದೆ, ಜನರಿಗೂ ತಮ್ಮ ಭಾಷೆಯಲ್ಲಿ ಶ್ರೇಷ್ಠ ಚಿತ್ರಗಳನ್ನ ನೋಡುವ ಅವಕಾಶ ಸಿಗುತ್ತದೆ ಎಂಬುದು ಪರಿಣಿತರ ಅನಿಸಿಕೆ.
ಕನ್ನಡ ಚಿತ್ರರಂಗದ ಅಭಿಪ್ರಾಯವೇನೇ ಇರಲಿ, ತುಳು ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿ ಡಬ್ಬಿಂಗ್'ಗೆ ಅವಕಾಶ ನೀಡಬೇಕು ಎಂಬುದು ಕರಾವಳಿಯಲ್ಲಿ ಕೇಳಿಬರುತ್ತಿರುವ ಪ್ರಬಲ ಅಭಿಪ್ರಾಯ.
ಕೃಪೆ:ಸುವರ್ಣ ನ್ಯೂಸ್ ( http://www.suvarnanews.tv )