Biruver Kudla Shirthady Ghataka

Biruver Kudla Shirthady Ghataka Contact information, map and directions, contact form, opening hours, services, ratings, photos, videos and announcements from Biruver Kudla Shirthady Ghataka, Mangalore.

ಬಿರುವೆರ್ ಕುಡ್ಲ ಸಂಘಟನೆಯ ಗೌರವಾನ್ವಿತ ಹಿರಿಯ ಮಾರ್ಗದರ್ಶಕರು,  ಹಾಗೂ "ನಡೆದಾಡುವ ಗರಡಿ ಬನ್ನಂಜೆ ಬಾಬು ಅಮೀನ್" ಇವರಿಗೆ ಈ ವರ್ಷದ ಕರ್ನಾಟಕ ರಾ...
31/10/2021

ಬಿರುವೆರ್ ಕುಡ್ಲ ಸಂಘಟನೆಯ ಗೌರವಾನ್ವಿತ ಹಿರಿಯ ಮಾರ್ಗದರ್ಶಕರು, ಹಾಗೂ "ನಡೆದಾಡುವ ಗರಡಿ ಬನ್ನಂಜೆ ಬಾಬು ಅಮೀನ್" ಇವರಿಗೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ನಮಗೆ ಹೆಮ್ಮೆಯ ವಿಚಾರ🙏❤️

ಅಭಿನಂದನೆಗಳು ಬನ್ನಂಜೆ ಬಾಬು ಅಮೀನ್ ಅವರಿಗೆ

ಬಿರುವೆರ್ ಕುಡ್ಲ ಕೇಂದ್ರ ಸಮಿತಿ,
ಬಿರುವೆರ್ ಕುಡ್ಲ ಸಂಘಟನೆಯ ಎಲ್ಲಾ ಘಟಕಗಳು,
ಪದಾಧಿಕಾರಿಗಳು, ಹಾಗೂ ಸದಸ್ಯರುಗಳು.

ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ.🌹

ಕನ್ನಡ ಚಿತ್ರರಂಗದ ಮೇರುನಟ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡನಾಡಿನ ಸರಳ ಸಜ್ಜನಿಕೆಯ ಅದೆಷ್ಟು ವೃದ್ಧಾಶ್ರಮ ಅನಾಥಾಶ್ರಮ ಗೋಶಾಲೆ ವಿದ್ಯಾರ್ಥಿಗಳಿಗ...
31/10/2021

ಕನ್ನಡ ಚಿತ್ರರಂಗದ ಮೇರುನಟ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡನಾಡಿನ ಸರಳ ಸಜ್ಜನಿಕೆಯ ಅದೆಷ್ಟು ವೃದ್ಧಾಶ್ರಮ ಅನಾಥಾಶ್ರಮ ಗೋಶಾಲೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ದೇವರಾಗಿದ್ದ ನಮ್ಮ *ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್* ರವರು ನಮ್ಮನ್ನೆಲ್ಲಾ ಆಗಲಿ ಆ ದೇವರ ಪಾದವನ್ನು ಸೇರಿರುತ್ತಾರೆ ಅವರಿಗೆ ಆತ್ಮಕ್ಕೆ ಚಿರಶಾಂತಿ ನೀಡಲೆಂದು ನಾವು *ಫ್ರೆಂಡ್ಸ್ ಬಳ್ಳಲ್ಭಾಗ್ ಬಿರುವೇರ್ ಕುಡ್ಲ (ರಿ.) ಕೇಂದ್ರ ಸಮಿತಿ ಮಂಗಳೂರು* ಇದರ ವತಿಯಿಂದ ಮೌನ ಪ್ರಾರ್ಥನೆ ಮಾಡಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಲಾಯಿತು
Biruver Kudla

ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವರಿಗೆ ಕೋಟಿ ಚೆನ್ನಯರು ಹಾಗೂ ನಾರಾಯಣ ಗುರುಗಳ ಸ್ಮರಣಿಕೆ ನೀಡಿದ ಬಿರುವೆರ್ ಕುಡ್ಲ ಸ್ಥಾಪಕಾಧ್...
27/10/2021

ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವರಿಗೆ ಕೋಟಿ ಚೆನ್ನಯರು ಹಾಗೂ ನಾರಾಯಣ ಗುರುಗಳ ಸ್ಮರಣಿಕೆ ನೀಡಿದ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷರು, ಉದಯೋನ್ಮುಖ ನಟ, ಉದಯ್ ಪೂಜಾರಿ ಅಣ್ಣ..

ಪ್ರೆಂಡ್ಸ್ ಬಳ್ಳಾಲ್ಭಾಗ್ ಬಿರುವೆರ್ ಕುಡ್ಲ(ರಿ) "ಶಿರ್ತಾಡಿ ಘಟಕ"ದ ಮೂಲಕ ಮೊಟ್ಟ ಮೊದಲ ಸೇವಾ ಕಾರ್ಯವಾಗಿ "ಅಸಹಾಯಕ ಕುಟುಂಬಗಳ ಹಸಿವನ್ನು ನೀಗಿಸು...
24/10/2021

ಪ್ರೆಂಡ್ಸ್ ಬಳ್ಳಾಲ್ಭಾಗ್ ಬಿರುವೆರ್ ಕುಡ್ಲ(ರಿ) "ಶಿರ್ತಾಡಿ ಘಟಕ"ದ ಮೂಲಕ ಮೊಟ್ಟ ಮೊದಲ ಸೇವಾ ಕಾರ್ಯವಾಗಿ "ಅಸಹಾಯಕ ಕುಟುಂಬಗಳ ಹಸಿವನ್ನು ನೀಗಿಸುವ" ಸಲುವಾಗಿ "ಸಾಗುವಳಿ" ಕಾರ್ಯಕ್ಕೆ ಚಾಲನೆ ನೀಡಲಾಯಿತು..

ಉದಯ್ ಪೂಜಾರಿ ಬಳ್ಳಾಲ್ಭಾಗ್ ಹಾಗೂ ರಾಕೇಶ್ ಪೂಜಾರಿ ಬಳ್ಳಾಲ್ಭಾಗ್ ನೇತೃತ್ವದ "ಪ್ರೆಂಡ್ಸ್ ಬಳ್ಳಾಲ್ಭಾಗ್ ಬಿರುವೆರ್ ಕುಡ್ಲ(ರಿ)" ಸಂಘಟನೆಯ "ಶಿರ್ತಾಡಿ ಘಟಕ"ವು ಇತ್ತೀಚೆಗೆ ಕಾರ್ಯರೂಪಕ್ಕೆ ಬಂದು, ಇದರ ಮೊಟ್ಟ ಮೊದಲ ಸೇವಾ ಕಾರ್ಯವಾಗಿ 3 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಗದ್ದೆಯ ಸಾಗುವಳಿ ಕಾರ್ಯಕ್ಕೆ ಶಿರ್ತಾಡಿ ಘಟಕದ ಸದಸ್ಯರಾಗಿರುವ "ಯುವ ವಕೀಲರಾದಂತಹ ಶ್ರೀಯುತ ರಾಕೇಶ್ ಪೂಜಾರಿ ಮಾಂಟ್ರಾಡಿ" ಇವರ ದಿವ್ಯಹಸ್ತದಿಂದ ಚಾಲನೆ ನೀಡಲಾಯಿತು..
ಬೋರುಗುಡ್ಡೆ ಸಮೀಪದ "ಬಡಕೋಡಿ ಗುತ್ತು" ಮನೆತನದ "ಮಹಾವೀರ ಜೈನ್" ಇವರು ತಮ್ಮ ಒಡೆತನದ ಕಂಬಳ ಗದ್ದೆಯನ್ನು ಶಿರ್ತಾಡಿ ಘಟಕದ ಸೇವಾ ಕಾರ್ಯಕ್ಕೆ ನೀಡಿರುತ್ತಾರೆ, ಆ ಪ್ರಯುಕ್ತ ಇಂದು ಶಿರ್ತಾಡಿ ಘಟಕದ ಮೂಲಕ "ಬ್ರಹ್ಮಶ್ರೀ ನಾರಾಯಣ ಗುರು"ಗಳ ತತ್ವದಂತೆ ಸರ್ವ ಜಾತಿ ಬಾಂಧವರನ್ನು ಸೇರಿಸಿ ಶ್ರಮದಾನದ ಮೂಲಕ ಗದ್ದೆಯ ಕೆಲಸ ಮಾಡಲಾಯಿತು..
ಈ ನಮ್ಮ ಕಾರ್ಯಕ್ಕೆ ಯುವ ಬಿರುವೆರ್ ಮಾಂಟ್ರಾಡಿ ತಂಡದ ಅಧ್ಯಕ್ಷರಾದ ಆಶ್ವಿನ್ ಪೂಜಾರಿ ಹಾಗೂ ಸದಸ್ಯರು, ರತ್ನಾಕರ ನಾಯ್ಕ್ ಮೂಡುಕೊಣಾಜೆ ಇವರುಗಳು ಭಾಗಿಯಾಗಿ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ..

Biruver Kudla
Biruver Kudla Shirthady Ghataka

24/10/2021
22/10/2021

ಬಿರುವೆರ್ ಕುಡ್ಲ ಎನ್ನುವ ಸಂಘಟನೆ ಇಂದು ತುಳುನಾಡಿನ ಹಲವಾರು ಭಾಗಗಳಲ್ಲಿ ಸಮಾಜದ ನೋವಿಗೆ ಸ್ಪಂದಿಸುವಂತಹ ಸಂಸ್ಥೆಯಾಗಿದೆ ಇಂತಹ ಸಾವಿರಾರು ಕಾರ್ಯಕರ್ತರು ಒಗ್ಗಟ್ಟಾಗಿ ಜನಸೇವೆಯನ್ನು ಮಾಡುತ್ತಿರುವ ಅದ್ಭುತ ಸಂಘಟನೆಯನ್ನು ನಿರ್ಮಿಸಿದ #ಉದಯ್_ಪೂಜಾರಿ_ಬಳ್ಳಾಲ್_ಬಾಗ್ ಇವರನ್ನು‌ ಜಿಲ್ಲಾ ಸಂಸದರು ಪ್ರಶಂಸಿದರು💖

🔥

ಬಂಟ್ವಾಳ : ಬಿರುವೆರ್ ಕುಡ್ಲ ಮಹಾ ಸೇವಾ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ನೂತನ ಸುಸಜ್ಜಿತ ಮನೆಯ ಹಸ್ತಾಂತರಸರಕಾರ ಮಾಡುವ ಕೆಲಸ ಬಿರುವೆರ್ ಕುಡ್ಲ ...
20/10/2021

ಬಂಟ್ವಾಳ : ಬಿರುವೆರ್ ಕುಡ್ಲ ಮಹಾ ಸೇವಾ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ನೂತನ ಸುಸಜ್ಜಿತ ಮನೆಯ ಹಸ್ತಾಂತರ

ಸರಕಾರ ಮಾಡುವ ಕೆಲಸ ಬಿರುವೆರ್ ಕುಡ್ಲ ಮಾಡುತ್ತಿದೆ ನಳಿನ್ ಕುಮಾರ್ ಕಟೀಲ್ , ಕಷ್ಟ ಕಣ್ಣೀರಿನಲ್ಲಿರುವವರಿಗೆ ನೆರವು ನೀಡುವುದೇ ಭಗವಂತನ ಪೂಜೆಯಾಗಿದ್ದು,
ಬ್ರಹ್ಮಶ್ರೀ ನಾರಾಯಣ ಗುರುಗಳು ಕೂಡ ಇದನ್ನೇ ಪ್ರತಿಪಾದಿಸಿದ್ದರು‌. ಒಂದು ಸರಕಾರ ಮಾಡುವ ಕಾರ್ಯವನ್ನು ಬಿರುವೆರ್ ಕುಡ್ಲ ಮಾಡುತ್ತಿದೆ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಬಂಟ್ವಾಳ ಭಂಡಾರಿಬೆಟ್ಟಿನಲ್ಲಿ ಮಂಗಳೂರು ಫ್ರೆಂಡ್ಸ್ ಬಳ್ಳಾಲ್ ಬಾಗ್- ಬಿರುವೆರ್ ಕುಡ್ಲದ ಮಹಾ ಸೇವಾ ಯೋಜನೆ- ೨೦೨೧ ವತಿಯಿಂದ ನಿರ್ಮಿಸಲಾದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಲಿಂಗಪ್ಪ ಹಾಗೂ ಮೋಹಿನಿ ದಂಪತಿಯ ನೂತನ ಸುಸಜ್ಜಿತ ಮನೆಯನ್ನು ಹಸ್ತಾಂತರಿಸಿದರು.
ಸಣ್ಣ ವಯಸ್ಸಿನಲ್ಲೇ ಸಾಧನೆಯನ್ನು ಮಾಡಿದ ಉದಯ ಪೂಜಾರಿ ಬಲಿಷ್ಠ ಯುವ ಪಡೆಯನ್ನು ಕಟ್ಟಿಕೊಂಡು ಟೀಕೆಗಳಿಗೆ ಸೇವಾ ಕಾರ್ಯದ ಮೂಲಕವೇ ಉತ್ತರ ನೀಡುವ ಕಾರ್ಯ ಮಾಡುತ್ತಿದೆ. ನಾಲ್ಕು ಯುವಕರು ಸೇರಿದರೆ ಬಡವರಿಗೆ ಮನೆ ನಿರ್ಮಾಣವಾಗುತ್ತದೆ ಎಂಬುದನ್ನು ಬಿರುವೆರ್ ಕುಡ್ಲ ತೋರಿಸಿಕೊಟ್ಟಿದೆ. ಈ ಮನೆಯ ಶಾಶ್ವತ ಆಶೀರ್ವಾದ ಬಿರುವೆರ್ ಕುಡ್ಲದ ಮೇಲಿರುತ್ತದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಿರುವೆರ್ ಕುಡ್ಲ‌ ಸಂಘಟನೆಯು ಸಮಾಜಕ್ಕೆ ಹತ್ತಿರವಾಗುವ ಕಾರ್ಯ ಮಾಡುತ್ತಿದ್ದು, ಹಲವಾರು ಸೇವಾ ಕಾರ್ಯಗಳ ಮೂಲಕ ದುರ್ಬಲರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ವೇದಿಕೆಯಲ್ಲಿ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬಳ್ಳಾಗ್ ಬಾಗ್, ಬಿಜೆಪಿ ಮುಂದಾಳು ವಸಂತ ಪೂಜಾರಿ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.
ಬಿರುವೆರ್ ಕುಡ್ಲಕ್ಕೆ ನೆರವು ನೀಡಿದ ವೆಂಕಟೇಶ್ ಹಾಗೂ ಲಕ್ಷ್ಮಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ನೆರವು ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸಂಘಟನೆಯ ಮುಂದಾಳು ನ್ಯಾಯವಾದಿ ಚಂದ್ರಶೇಖರ್ ನೆರವು ನೀಡಿದವರ ವಿವರ ನೀಡಿದರು. ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.

ಸರಕಾರ ಮಾಡುವ ಕೆಲಸ ಬಿರುವೆರ್ ಕುಡ್ಲ ಮಾಡುತ್ತಿದೆ - ನಳಿನ್ ಕುಮಾರ್ ಕಟೀಲ್
20/10/2021

ಸರಕಾರ ಮಾಡುವ ಕೆಲಸ ಬಿರುವೆರ್ ಕುಡ್ಲ ಮಾಡುತ್ತಿದೆ - ನಳಿನ್ ಕುಮಾರ್ ಕಟೀಲ್

ಸರಕಾರ ಮಾಡುವ ಕೆಲಸ ಬಿರುವೆರ್ ಕುಡ್ಲ ಮಾಡುತ್ತಿದೆ ನಳಿನ್ ಕುಮಾರ್ ಕಟೀಲ್ , ಕಷ್ಟ ಕಣ್ಣೀರಿನಲ್ಲಿರುವವರಿಗೆ ನೆರವು ನೀಡುವುದೇ ಭಗವಂತ...

20/10/2021

ರವಿ ಅಣ್ಣನ ಅರ್ಥಗರ್ಭಿತ ಪಾತೆರ ಕೆನ್ಲೆ..

ಮನದ_ಮಾತು      Withಬಿರುವೆರ್ ಕುಡ್ಲ70 ನೇ ಸಂಚಿಕೆಫ್ರೆಂಡ್ಸ್ ಬಳ್ಳಾಲ್ ಬಾಗ್      ಬಿರುವೆರ್ ಕುಡ್ಲಉಮಾನಾಥ ಎ ಕೋಟ್ಯಾನ್      ಶಾಸಕರುಮೂಲ್ಕ...
20/10/2021

ಮನದ_ಮಾತು
With
ಬಿರುವೆರ್ ಕುಡ್ಲ

70 ನೇ ಸಂಚಿಕೆ

ಫ್ರೆಂಡ್ಸ್ ಬಳ್ಳಾಲ್ ಬಾಗ್
ಬಿರುವೆರ್ ಕುಡ್ಲ

ಉಮಾನಾಥ ಎ ಕೋಟ್ಯಾನ್
ಶಾಸಕರು
ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ

ದಿನಾಂಕ : 24/10/2021
ಸಮಯ : ಸಂಜೆ 05:00 ಗಂಟೆ
ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ವೀಕ್ಷಿಸಿ ಶೇರ್ ಮಾಡಿ ಪ್ರೊತ್ಸಾಹಿಸಿ.🙏💐💛
www.facebook.com/Biruverkudlaofficial

Address

Mangalore
575004

Website

Alerts

Be the first to know and let us send you an email when Biruver Kudla Shirthady Ghataka posts news and promotions. Your email address will not be used for any other purpose, and you can unsubscribe at any time.

Contact The Organization

Send a message to Biruver Kudla Shirthady Ghataka:

Share