Muthegere Grama Panchayath - ಮುತ್ತೇಗೆರೆ ಗ್ರಾಮ ಪಂಚಾಯತಿ

  • Home
  • India
  • Mandya
  • Muthegere Grama Panchayath - ಮುತ್ತೇಗೆರೆ ಗ್ರಾಮ ಪಂಚಾಯತಿ

Muthegere Grama Panchayath - ಮುತ್ತೇಗೆರೆ ಗ್ರಾಮ ಪಂಚಾಯತಿ Local Government.

*ಮುತ್ತೇಗೆರೆ ಗ್ರಾಮ ಪಂಚಾಯತಿಯಲ್ಲಿ ಬೇಸಿಗೆ ಶಿಬಿರ ದಿನ -1*ಮೇ 2 ರಂದು ಮುತ್ತೇಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ  ಶ್ರೀಮತಿ ಪುಟ್ಟಮ್ಮ ಮತ್ತ...
01/05/2025

*ಮುತ್ತೇಗೆರೆ ಗ್ರಾಮ ಪಂಚಾಯತಿಯಲ್ಲಿ ಬೇಸಿಗೆ ಶಿಬಿರ ದಿನ -1*

ಮೇ 2 ರಂದು ಮುತ್ತೇಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪುಟ್ಟಮ್ಮ ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ, ಆಯ್ಕೆಯಾದ ಮಕ್ಕಳಿಗೆ ಶಿಬಿರದ ನಿಯಮವನ್ನು ತಿಳಿಸಿ ಕೊಡುವುದು ಹಾಗೂ ಮಕ್ಕಳ ಪರಸ್ಪರ ಪರಿಚಯ ಮಾಡಿಕೊಳ್ಳುವುದು, ಆಣೆ ಕಲ್ಲು, ಹುಲಿ ಕುರಿ ಆಟ ಆಡಿಸುವುದು. ವಿಜೇತ ಮಕ್ಕಳಿಗೆ ಕಡಲೆ ಮಿಠಾಯಿ ಮತ್ತು ಬೆಲ್ಲದ ಮಿಠಾಯಿಯನ್ನು ನೀಡಲಾಗುವದು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಉಂಟು. ಮರೆಯದೆ ನಾಳೆ 10.30ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುತ್ತೇಗೆರೆ ಇಲ್ಲಿ ಸಿಗ್ತೀರಿ ಅಲ್ವಾ ಪುಟ್ಟಣಿಗಳೇ.!!

*ಮೇ.2 ರಿಂದ ಮುತ್ತೇಗೆರೆ ಗ್ರಾಮ ಪಂಚಾಯಿತಿ ಮಟ್ಟದ ಮುತ್ತೇಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ*ಜಿಲ್ಲಾ ಪಂಚಾಯತ್, ಶಾಲಾ...
01/05/2025

*ಮೇ.2 ರಿಂದ ಮುತ್ತೇಗೆರೆ ಗ್ರಾಮ ಪಂಚಾಯಿತಿ ಮಟ್ಟದ ಮುತ್ತೇಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ*

ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮೇ 2 ರಿಂದ 26 ರವರೆಗೆ 3 ರಿಂದ 10ನೇ ತರಗತಿ ಮಕ್ಕಳಿಗೆ ಮುತ್ತೇಗೆರೆ ಗ್ರಾಮ ಪಂಚಾಯತಿ ಮಟ್ಟದಲ್ಲಿ 21 ದಿನಗಳ ಬೇಸಿಗೆ ಶಿಬಿರವನ್ನು‌ ಮುತ್ತೇಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ,

ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ಓದುವ, ಬರೆಯುವ, ಅಂಕಿ ಸಂಖ್ಯೆ ವಿಜ್ಞಾನ ವಿಷಯಗಳು, ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಪರಿಸರ ಕಾಳಜಿ, ಸಾಮಾಜಿಕ ಕಾಳಜಿ ಬೆಳೆಸುವುದು ಮತ್ತು ಸ್ಥಳೀಯ ಸಂಸ್ಕೃತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಯುವಂತೆ ಮಾಡುವುದು ಹಾಗೂ ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಬೇಸಿಗೆ ಶಿಬಿರದ ಆಶಯವಾಗಿರುತ್ತದೆ.

ಮೇ 2 ರಂದು ಮಾನ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪುಟ್ಟಮ್ಮ ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ, ಆಯ್ಕೆಯಾದ ಮಕ್ಕಳಿಗೆ ಶಿಬಿರದ ನಿಯಮವನ್ನು ತಿಳಿಸಿ ಕೊಡುವುದು ಹಾಗೂ ಮಕ್ಕಳ ಪರಸ್ಪರ ಪರಿಚಯ ಮಾಡಿಕೊಳ್ಳುವುದು, ಆಣೆ ಕಲ್ಲು, ಹುಲಿ ಕುರಿ ಆಟ ಆಡಿಸುವುದು.

ಮೇ 3 ರಂದು ಮಕ್ಕಳ ಕುಟುಂಬಗಳ ಪರಿಚಯ ಹಾಗೂ "ನನ್ನ ಕನಸಿನ ಊರು" ವಿಷಯದ ಕುರಿತು ಪ್ರತಿಯೊಬ್ಬರು ಮಾತನಾಡಲು ಅವಕಾಶ ಕಲ್ಪಿಸಲಾಗುವುದು, ನಂತರ ಪಾಸಿಂಗ್ ದ ಬಾಲ್ ಆಟವನ್ನು ಆಡಿಸಲಾಗುವುದು,

ಮೇ 5 ರಂದು ಸ್ಥಳೀಯ ಯೋಗಪಟುಗಳನ್ನು ಬಳಸಿಕೊಂಡು ಮಕ್ಕಳಿಗೆ ಯೋಗಭ್ಯಾಸ ಮಾಡಿಸುವುದು, ಮೂರರಿಂದ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಬಣ್ಣಗಳ ಪರಿಚಯದ ಆಟವಾಡಿಸುವುದು, 6 ರಿಂದ 8 ನೇ ತರಗತಿ ಮಕ್ಕಳಿಗೆ ಪದಗಳ ಸರಣಿ ಬೆಳೆಸುವ ಆಟವಾಡಿಸುವುದು, ಮೂರರಿಂದ ಐದನೇ ತರಗತಿ ಹಾಗೂ ಆರರಿಂದ ಎಂಟನೇ ತರಗತಿಯ ಮಕ್ಕಳನ್ನು ವಿವಿಧ ಗುಂಪುಗಳಾಗಿ ರಚಿಸಿ ಕಬಡ್ಡಿ ಆಟ ಆಡಿಸಲಾಗುವುದು,

ಮೇ 6 ರಂದು ದಿನಪತ್ರಿಕೆಗಳಲ್ಲಿ ಬರುವ ಚಿತ್ರಗಳನ್ನು ಕೊಠಡಿಯಲ್ಲಿ ಹಾಕುವುದು, ಮಕ್ಕಳು ತಮಗಿಷ್ಟದ ಚಿತ್ರವನ್ನು ಆಯ್ದು ಅದಕ್ಕೆ ತಮ್ಮದೇ ಆದ ಕಥೆಯನ್ನು ಕಟ್ಟಿ ಹೇಳಲು ಸಮಯಾವಕಾಶ ನೀಡುವುದು, ನಂತರ ಕಣ್ ಕಟ್ಟಿ ಮಡಿಕೆ ಹೊಡೆಯುವ ಆಟ ಆಡಿಸಲಾಗುವುದು.

ಮೇ 7 ರಂದು ಭಾಷಾ ಆಟಗಳಾದ ಪದಕಟ್ಟು, ಪದ ಅಂತ್ಯಾಕ್ಷರಿ ಗಳನ್ನು ಆಡಿಸಲಾಗುವುದು, ನಂತರ ಲಗೋರಿ ಆಟ, ಹುಲಿ ಹಸು ಆಟ ಆಡಿಸಲಾಗುವುದು.

ಮೇ 8 ರಂದು ಗ್ರಾಮ ಪಂಚಾಯಿತಿ ಮತ್ತು ಶಾಲಾ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಬಳಸಿಕೊಂಡು ಗಟ್ಟಿ ಧ್ವನಿಯಲ್ಲಿ ಸ್ವರಭಾರದೊಂದಿಗೆ ಮಕ್ಕಳು ಪುಸ್ತಕ ಓದುವ ಹವ್ಯಾಸ ನಡೆಸಲಾಗುವುದು, ನಂತರ ಟ್ರಷರ್ ಹಂಟ್ ( ನಿಧಿ ಶೋಧ) ಆಟವನ್ನು ಆಡಿಸಲಾಗುವುದು.

ಮೇ 9 ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳ ಚಿತ್ರವನ್ನು ಪ್ರದರ್ಶನ ಮಾಡಿ ಅವರ ವ್ಯಕ್ತಿ ಪರೀಕ್ಷೆಯೊಂದಿಗೆ ಪ್ರಯಾಣಾತ್ಮಕ ಚರ್ಚೆ ಏರ್ಪಡಿಸಲಾಗುವುದು, ಅದೇ ದಿನ ಮಕ್ಕಳಿಗೆ ಗುಡ್ ಟಚ್ ಅಂಡ್ ಬ್ಯಾಡ್ ಟಚ್ ಬಗ್ಗೆ ವಿಡಿಯೋ ಪ್ರದರ್ಶನ ಏರ್ಪಡಿಸಿ ಅರಿವು ಮೂಡಿಸಲಾಗುವುದು, ನಂತರ ಟೋಪಿ ಬೇಕಾ ಟೋಪಿ ಆಟ ಆಡಿಸಲಾಗುವುದು.

ಮೇ 10 ರಂದು ಹಳೆ ದಿನಪತ್ರಿಕೆಗಳನ್ನು ಬಳಸಿ ವಿವಿಧ ಆಕೃತಿಗಳ ರಚನೆ ಮತ್ತು ವಿವಿಧ ವಸ್ತುಗಳನ್ನು ರಚಿಸುವುದು, ಆತ್ಮರಕ್ಷಣೆ ಕೌಶಲ್ಯಗಳನ್ನು ವೃದ್ಧಿಸಿಕೊಳುವ ಕುರಿತು ಮಾಹಿತಿ ನೀಡಲಾಗುವುದು, ನಂತರ ಕೇರಂ ಕೋಲು ಕುಟಿಸಿ ಆಟ ಆಡಿಸಲಾಗುವುದು.

ಮೇ 12 ರಂದು ಗಣಿತಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಿಸಲಾಗುವುದು, ನಂತರ ಸಂಖ್ಯಾ ಚಪ್ಪಾಳೆ ಆಟವನ್ನು ಆಡಿಸಲಾಗುವುದು.

ಮೇ 13ರಂದು ವಿಜ್ಞಾನದೊಂದಿಗೆ ಮೋಜು ಸರಳ ಪ್ರಯೋಗ ಕಾರ್ಯಕ್ರಮದ ಅಡಿ ಸ್ಥಳೀಯವಾಗಿ ಲಭ್ಯ ಇರುವ ವಸ್ತುಗಳನ್ನು ಬಳಸಿಕೊಂಡು ತೇಲುವ ಮುಳುಗುವ ಕರಗುವ ಕರಗಲಾಗದ ವಸ್ತುಗಳನ್ನು ತಿಳಿಸುವ ಪ್ರಯೋಗ ಮಾಡುವುದು, ಗಾಳಿಯಲ್ಲಿ ತೂಕವಿದೆ ಎಂಬುದನ್ನು ಬಲೂನ್ ಬೆಳೆಸಿ ಚಟುವಟಿಕೆ ಮಾಡಿ ತೋರಿಸುವುದು, ಆಮ್ಲಜನಕವಿದ್ದಾಗ ದೀಪ ಉರಿಯುತ್ತದೆ ಎಂಬುದನ್ನು ಗಾಜಿನ ಬಾಟಲಿನೊಳಗೆ ಉರಿಯುವ ಮೇಣದ ಬತ್ತಿ ಇಟ್ಟು ಮುಚ್ಚಿದಾಗ ಆಗುವ ಬದಲಾವಣೆ ತೋರಿಸುತ್ತಾ ವಿವರಿಸುವುದು, ಬೆಂಕಿ ಅವಗಡಗಳು ತಡೆಗಟ್ಟುವ ಬಗ್ಗೆ ಅಗ್ನಿಶಾಮಕ ದಳದ ವತಿಯಿಂದ ಅನುಕು ಪ್ರದರ್ಶನ ಏರ್ಪಡಿಸಲಾಗುವುದು, ನಂತರ ನಾಯಿ ಮೂಳೆ ಆಟ ಆಡಿಸಲಾಗುವುದು.

ಮೇ 14 ರಂದು ಶಿಬಿರದ ಮಕ್ಕಳನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿಯ ವತಿಯಿಂದ ಎಲ್ಲಾ ಸದಸ್ಯರು ಅಧಿಕಾರಿಗಳು ಸೇರಿ ಮಕ್ಕಳ ಗ್ರಾಮ ಸಭೆ ನಡೆಸುವುದು, ನಂತರ ಚೌಕ ಬಾರ, ಫಾಲೋ ದಿ ಲೀಡರ್ ಆಟ ಆಡಿಸಲಾಗುವುದು,

ಮೇ 15 ರಂದು ಪ್ರತಿ ಮಗುವಿಗೂ ಅವರಿಗಿಷ್ಟದ ಒಂದು ವಿಷಯ ಮತ್ತು ವಸ್ತುವಿನ ಕುರಿತು ತಮ್ಮದೇ ಆದ ಪದಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗುವುದು, ನಂತರ ಹಗ್ಗ ಜಗ್ಗಾಟ ಆಟವನ್ನು ಆಡಿಸಲಾಗುವುದು.

ಮೇ 16ರಂದು ಪ್ರತಿಯೊಂದು ಮಗುವಿಗೂ ಬಿಳಿ ಹಳೆ ಪೆನ್ಸಿಲ್ ಕ್ರೈಂ ಇತ್ಯಾದಿಗಳನ್ನು ಒದಗಿಸಿ ತಮಗಿಷ್ಟದ ಚಿತ್ರ ರಚಿಸಿ ಬಣ್ಣ ಹಾಕಲು ಅವಕಾಶ ಕಲ್ಪಿಸಿ ಸ್ಥಳದಲ್ಲಿ ಮಕ್ಕಳಿಗೆ ಚಿತ್ರಗಳನ್ನು ಪ್ರದರ್ಶನಕ್ಕಿಡುವುದು, ನಂತರ ಸೆಟ್ ಆಟವನ್ನು ಆಡಿಸಲಾಗುವುದು.

ಮೇ 17ರಂದು ಸ್ಥಳೀಯವಾಗಿ ಭೇಟಿ ನೀಡಲು ಸೂಕ್ತ ಇರುವ ಜಾಗಗಳಾದ ಅಂಚೆ ಕಚೇರಿ, ಗ್ರಾಮ ಪಂಚಾಯಿತಿ, ಹಾಲಿನ ಡೈರಿ, ಬ್ಯಾಂಕ್ ಇತ್ಯಾದಿಗಳ ಕಚೇರಿಗೆ ಕ್ಷೇತ್ರ ಭೇಟಿ ನೀಡಿಸತಕ್ಕದ್ದು.

ಮೇ 19 ರಂದು ಮಕ್ಕಳಿಗೆ ಗೊತ್ತಿರುವ ಹಾಡು ನೃತ್ಯ ಅಭಿನಯ ಗೀತೆಗಳನ್ನು ಆಡಿಸುವುದು, ಗೀತೆಗಳು ನೃತ್ಯ ಮಾಡಿಸುವುದು, ನಂತರ ಕ್ರಿಕೆಟ್ ಆಡಿಸಲಾಗುವುದು.

ಮೇ 20 ರಂದು ಪಾತ್ರ ಅಭಿನಯ, ಪೋಕ್ಸೋ ಮಕ್ಕಳಿಗೆ ಗುಡ್ ಟಚ್ ಬ್ಯಾಡ್ ಟಚ್ ಗಳ ಅರಿವು ಮೂಡಿಸುವುದು, ಬಾಲ್ಯ ವಿವಾಹ, ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸಲಾಗುವುದು, ನಂತರ ಹಿಡಿ ಗೆಲ್ಲು ಆಟ ಆಡಿಸಲಾಗುವುದು.

ಮೇ 21ರಂದು ಆಹಾರ ಮತ್ತು ಆರೋಗ್ಯದ ಕುರಿತು ಮಕ್ಕಳಿಗೆ ವಿಟಮಿನ್ ಗಳ ಪರಿಚಯ ಉತ್ತಮ ಆಹಾರ ಸೇವೆ ಕುರಿತು ಮಾಹಿತಿ ನೀಡುವುದು. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರನ್ನು ಆಹ್ವಾನಿಸಿ ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಕುರಿತು ಮಾಹಿತಿ ಒದಗಿಸಲಾಗುವುದು.

ಮೇ 22ರಂದು ಸುಗಮಕಾರರೇ ಒಂದು ಮೌಲ್ಯವನ್ನು ಸಾರುವ ಕಥೆಯನ್ನು ಸಿದ್ಧಪಡಿಸಿಕೊಂಡು ಸೂಕ್ತ ಸ್ವಭಾವದೊಂದಿಗೆ ಹೇಳುವುದು, ನಂತರ ಚರ್ಚೆಯ ಮೂಲಕ ಮೌಲ್ಯವನ್ನು ಅರ್ಥೈಸುವುದು ಪ್ರೇರಣದಾಯಕ ನುಡಿಗಳ ಮೂಲಕ ಮಕ್ಕಳಿಗೆ ಧನಾತ್ಮಕ ಭಾವನೆಗಳನ್ನು ಮೂಡಿಸಲಾಗುವುದು, ನಂತರ ಕುಂಟೆ ಬಿಲ್ಲೆ ಆಟ ಆಡಿಸಲಾಗುವುದು,

ಮೇ 23 ರಂದು ತಲಾ 4 ರಿಂದ 5 ಮಕ್ಕಳನ್ನು ಗುಂಪುಗಳಾಗಿ ಮಾಡಿ ಪ್ರತಿ ಗುಂಪಿಗೂ ಪರಿಸರದಲ್ಲಿ ಲಭ್ಯವಿರುವ ಗಮನಿಸಲು ಸಾಧ್ಯವಾಗುವ ಯಾವುದಾದರೂ ಒಂದು ವಿಷಯದ ಬಗ್ಗೆ ಪ್ರಾಜೆಕ್ಟ್ ಮಾಡಿಸುವುದು, ಅನಂತರ ಪ್ರದರ್ಶನಕ್ಕೆ ಇಡುವುದು, ನಂತರ ಕೆರೆ ದಡ, ಮ್ಯೂಸಿಕಲ್ ಚೇರ್ ಆಟ ಆಡಿಸಲಾಗುವುದು.

ಮೇ 24 ರಂದು ಸಮಾರೋಪ ಸಮಾರಂಭಕ್ಕೆ ಪೂರ್ವಸಿದ್ಧತೆ ಮತ್ತು ಹಾಡು ನೃತ್ಯ ಇತ್ಯಾದಿಗಳನ್ನು ಸಿದ್ದಪಡಿಸುವುದು ನಂತರ ಮೆಮೊರಿ ಗೇಮ್ ಆಟ ಆಡಿಸಲಾಗುವುದು.

ಮೇ 26ರಂದು ಮಕ್ಕಳ ಕಲಿಕಾ ಪ್ರದರ್ಶನ ಸಮಾರೋಪ ಸಮಾರಂಭ ಮಕ್ಕಳಿಂದಲೇ ಕಾರ್ಯಕ್ರಮ ನಿರ್ವಹಣೆ ಮಾಡಿಸಲಾಗುವುದು.

*ಆಟದೊಂದಿಗೆ ಪಾಠ, ತನ್ನ ಸ್ವಂತ ಊರಿನ ಪರಿಚಯ, ಕ್ರಾಪ್ಟ್, ಸಂಗೀತ, ನಾಟಕ, ಹೊರಸಂಚಾರ, ಸಾಮಾನ್ಯ ಜ್ಞಾನ ಹೆಚ್ಚಿಸುವ ಚಟುವಟಿಕೆಗಳು, ಮಂಡ್ಯದ ಹಿರಿಮೆ ಸಾರುವ ಚಟುವಟಿಕೆಗಳು, ಓರೇಗಾಮಿ, ಗ್ರಾಮೀಣ ಕ್ರೀಡೆಗಳ ಪರಿಚಯ ಇತ್ಯಾದಿ ಮಕ್ಕಳ ಮಾನಸಿಕ , ದೈಹಿಕ ಸಾಮರ್ಥ್ಯ ವೃದ್ಧಿಸುವ ಚಟುವಟಿಕೆಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದ ಮುತ್ತೇಗೆರೆ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗುತ್ತಿದೆ.
ಎಲ್ಲಾ ನಮ್ಮೂರಿನ ಪುಟ್ಟ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಆಶಿಸುತ್ತೇನೆ*

*ಕೆ.ಆರ್.ನಂದಿನಿ*
*ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ*

17/05/2024
ಕಾಲಮಿತಿಯೊಳಗೆ  ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಿ, ಶೇ. 5ರಷ್ಟು ರಿಯಾಯಿತಿ ಪಡೆಯಿರಿ.
14/05/2024

ಕಾಲಮಿತಿಯೊಳಗೆ ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಿ, ಶೇ. 5ರಷ್ಟು ರಿಯಾಯಿತಿ ಪಡೆಯಿರಿ.

ಮಿಂಚು, ಸಿಡಿಲು ಮತ್ತು ಗುಡುಗು ಸಂದರ್ಭಗಳಲ್ಲಿ ಎಚ್ಚರವಾಗಿರಿ. ಸಿಡಿಲಿನ ನೇರ ಹೊಡೆತಕ್ಕೆ ಸಾವು ಸಂಭವಿಸಬಹುದು. ತಲೆ ತಗ್ಗಿಸಿ, ಕಿವಿ ಮುಚ್ಚಿ, ಕ...
11/05/2024

ಮಿಂಚು, ಸಿಡಿಲು ಮತ್ತು ಗುಡುಗು ಸಂದರ್ಭಗಳಲ್ಲಿ ಎಚ್ಚರವಾಗಿರಿ. ಸಿಡಿಲಿನ ನೇರ ಹೊಡೆತಕ್ಕೆ ಸಾವು ಸಂಭವಿಸಬಹುದು. ತಲೆ ತಗ್ಗಿಸಿ, ಕಿವಿ ಮುಚ್ಚಿ, ಕೆಳಗೆ ಬಾಗಿ ಸಿಡಿಲಿನಿಂದ ಪಾರಾಗಿ.

ಜಿಲ್ಲಾ ಪೊಲೀಸ್ ವತಿಂದ ಜಿಲ್ಲೆಯ ಸಮಸ್ತ ನಾಗರೀಕರಿಗೂ ಯುಗಾದಿ ಹಬ್ಬದ ಮುಂಗಡ ಶುಭಾಶಯಗಳು. ಯುಗಾದಿ ಹಬ್ಬದ ಆಚರಣೆಯ ಸಮಯದಲ್ಲಿ ಜಿಲ್ಲೆಯಲ್ಲಿ ಇಸ್ಪ...
08/04/2024

ಜಿಲ್ಲಾ ಪೊಲೀಸ್ ವತಿಂದ ಜಿಲ್ಲೆಯ ಸಮಸ್ತ ನಾಗರೀಕರಿಗೂ ಯುಗಾದಿ ಹಬ್ಬದ ಮುಂಗಡ ಶುಭಾಶಯಗಳು. ಯುಗಾದಿ ಹಬ್ಬದ ಆಚರಣೆಯ ಸಮಯದಲ್ಲಿ ಜಿಲ್ಲೆಯಲ್ಲಿ ಇಸ್ಪೀಟ್ ಜೂಜಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಸಾರ್ವಜನಿಕರು ಸಹಕರಿಸಲು ಈ ಮೂಲಕ ಕೋರಲಾಗಿದೆ.

ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ವಿಪರೀತ ಸೆಕೆ, ಬಿಸಿ ಗಾಳಿಗೆ ಜನರು ಹೈರಾಣಾಗಿದ್ದಾರೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್...
02/04/2024

ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ವಿಪರೀತ ಸೆಕೆ, ಬಿಸಿ ಗಾಳಿಗೆ ಜನರು ಹೈರಾಣಾಗಿದ್ದಾರೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲು ಶುರುಮಾಡುತ್ತದೆ. ಬಿಸಿಲ ಶಾಖದಿಂದ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ.

ಲೋನ್‌ ಆಪ್‌ ಮೂಲಕ ಸಾಲ ತೆಗೆದುಕೊಳ್ಳವವರೆ ಎಚ್ಚರ! ಎಚ್ಚರ! ನೀವು ಸಾಲ/ಲೋನ್ ತೆಗೆದುಕೊಳ್ಳುವ ಆಪ್‌ ನ್ನು Playstore ನಲ್ಲಿ Install ಮಾಡಿಕೊಳ್...
02/04/2024

ಲೋನ್‌ ಆಪ್‌ ಮೂಲಕ ಸಾಲ ತೆಗೆದುಕೊಳ್ಳವವರೆ ಎಚ್ಚರ! ಎಚ್ಚರ! ನೀವು ಸಾಲ/ಲೋನ್ ತೆಗೆದುಕೊಳ್ಳುವ ಆಪ್‌ ನ್ನು Playstore ನಲ್ಲಿ Install ಮಾಡಿಕೊಳ್ಳುವಾಗಲೇ ವಿವಿಧ ರೀತಿಯಲ್ಲಿ ಪರ್ಮಿಷನ್‌ ಕೇಳಿ ನಿಮ್ಮ ಮೊಬೈಲ್‌ ನಲ್ಲಿರುವ ಮಾಹಿತಿಯನ್ನು ಸಂಪೂರ್ಣ ಕಳ್ಳತನ ಮಾಡಿ ಲೋನ್‌ ಹಣ ತೀರಿಸಿದರೂ, ಹೆಚ್ಚಿನ ಹಣ ನೀಡಲು ಬ್ಲಾಕ್‌ ಮೇಲ್‌ ಮಾಡುತ್ತಾರೆ. ಹಣ ನೀಡದಿದ್ದರೆ ನಿಮ್ಮ ಪೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿ ಹೆದರಿಸುತ್ತಾರೆ, ಆದ್ದರಿಂದ ಆನ್ಲೈನಲ್ಲಿ ವ್ಯವಹರಿಸುವಾಗ ಮುನ್ನಚ್ಚರಿಕೆ ವಹಿಸಬೇಕು.

28/03/2024

ಪ್ರಜಾಪ್ರಭುತ್ವದ ಹಬ್ಬವನ್ನು ಮತದಾನ ಮಾಡುವ ಮೂಲಕ ಆಚರಣೆ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳ ಸಂದೇಶ.

ನರೇಗಾ ಕೂಲಿ ಮೊತ್ತವನ್ನು 2024-25ನೇ ಸಾಲಿಗೆ ರೂ 349/- ಗಳಿಗೆ ನಿಗದಿಪಡಿಸಿ ಅದೇಶಿಸಲಾಗಿದೆ.
28/03/2024

ನರೇಗಾ ಕೂಲಿ ಮೊತ್ತವನ್ನು 2024-25ನೇ ಸಾಲಿಗೆ ರೂ 349/- ಗಳಿಗೆ ನಿಗದಿಪಡಿಸಿ ಅದೇಶಿಸಲಾಗಿದೆ.

ಸುಡುವ ಬಿಸಿಲು, ಬಿಸಿ ಗಾಳಿ, ವಿಪರೀತ ಸೆಕೆಯನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಈ ಸಮಯದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕ...
28/03/2024

ಸುಡುವ ಬಿಸಿಲು, ಬಿಸಿ ಗಾಳಿ, ವಿಪರೀತ ಸೆಕೆಯನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಈ ಸಮಯದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಹೀಗಾಗಿ ಈ ಬೇಸಿಗೆ ಸಮಯದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು.

Address

Muttegere Village Basaralu Hobli
Mandya
571416

Website

Alerts

Be the first to know and let us send you an email when Muthegere Grama Panchayath - ಮುತ್ತೇಗೆರೆ ಗ್ರಾಮ ಪಂಚಾಯತಿ posts news and promotions. Your email address will not be used for any other purpose, and you can unsubscribe at any time.

Share