Kodagu Forest Circle - ಕೊಡಗು ಅರಣ್ಯ ವೃತ್ತ

  • Home
  • India
  • Madikeri
  • Kodagu Forest Circle - ಕೊಡಗು ಅರಣ್ಯ ವೃತ್ತ

Kodagu Forest Circle - ಕೊಡಗು ಅರಣ್ಯ ವೃತ್ತ ಅರಣ್ಯ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷ?

08/10/2025

Treks should be booked atleast 1 days in advance. Further, advance bookings are allowed only upto 15 days. For pre-bookin trekking visit https://aranyavihaara.karnataka.gov.in/availability ಕೊಡಗು ಜಿಲ್ಲೆಯ ವಾಯುವ್ಯ ದಿಕ್ಕನಲ್ಲಿರುವ ಪುಷ್ಪಗಿರಿ ವನ್ಯಜೀವಿ ಧಾಮವು ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳಿಂದ ಮತ್ತು ಶೋಲಾ ಹುಲ್ಲುಗಾಲುಗಳಿಂದ ಮೈದುಂಬಿದೆ. ಅತ್ಯಂತ ವಿಶಿಷ್ಠವಾದ ಮತ್ತು ಅಪರೂಪದ ಸಸ್ಯ ಮತ್ತು ಇತರೆ ಜೀವ ಸಂಕುಲದ ಮನೆಯಾಗಿರುವ ಈ ಕಾಡು ಅಳಿವಿನಂಚಿನಲ್ಲಿರುವ ವಿವಿಧ ಪ್ರಬೇಧಗಳನ್ನು ಹೊಂದಿದೆ. ಲಿಂಗದಹೊಳೆ, ಕುಮಾರಧಾರಾ, ಮಾರಿಗುಂಡಿಹೊಳೆಗಳ ಉಗಮ ಸ್ಥಾನವೂ ಆಗಿರುವ ಈ ಪ್ರದೇಶದಲ್ಲಿರುವ ಕುಮಾರಪರ್ವತವು ರಾಜ್ಯದ ನಾಲ್ಕನೇ ಎತ್ತರದ ಗಿರಿ ಶಿಖರವಾಗಿರುತ್ತದೆ. ಅಚ್ಚರಿ ಮೂಡಿಸುವ ಮತ್ತು ಆಹ್ಲಾದಮಯವಾದ ಬೃಹನ್ನೋಟಗಳಿಂದ ಕೂಡಿರುವ ಈ ಸಾಲುಗಳು ಚಾರಣಿಗರ ಅತ್ಯಂತ ಪ್ರಿಯವಾದ ತಾಣವಾಗಿದೆ. ರುದ್ರ ರಮಣೀಯ ಕುಮಾರ ಪರ್ವತ ಶಿಖರವನ್ನು ಬೀದಹಳ್ಳಿ ಪ್ರಕೃತಿ ಶಿಬಿರದಿಂದ ತಲುಪಲು 07 ಕಿಮೀ ಕ್ರಮಿಸಬೇಕಿರುತ್ತದೆ. ಕುಮಾರ ಪರ್ವತ ಶಿಖರದಿಂದ ಪುನಃ ಬೀದಹಳ್ಳಿ ಶಿಬಿರಕ್ಕೆ ಮರಳಬಹುದಿದ್ದು ಒಟ್ಟು ಚಾರಣದ ಅಂತರ 14 ಕಿಮಿ ಆಗಿರುತ್ತದೆ. ಇಳಿಜಾರಿನ ಅಷ್ಠೇನು ಕಠಿಣವಲ್ಲದ ಹಾದಿಯನ್ನು ಹೊಂದಿರುವ ಈ ಚಾರಣದ  14 ಕಿಮೀ ದೂರವನ್ನು  ಅಂದಾಜು 04 ರಿಂದ 06 ತಾಸುಗಳಲ್ಲಿ ಕ್ರಮಿಸಬಹುದಿರುತ್ತದೆ.

08/10/2025

ಶಾನಿ ಬೆಟ್ಟ ಅಥವಾ ನಿಶಾನಿ ಮೊಟ್ಟೆ ಶಿಖರ ಕೊಡಗಿನ ತಲಕಾವೇರಿ-ಬ್ರಹ್ಮಗಿರಿ ಶ್ರೇಣಿಯಲ್ಲಿರುವ ನಿಗೂಢ ಮತ್ತು ಅತ್ಯಂತ ಸುಂದರವಾದ ಶಿಖರವಾಗಿದೆ. ಈ ಶಿಖರವು ಅಂದಾಜು 60 ಡಿಗ್ರಿ ಏರು ಹಾದಿಯನ್ನು ಹೊಂದಿದ್ದು, ಇದು ಸವಾಲಿನ ಮತ್ತು ಅಷ್ಟೇ ಮೈನವಿರೇಳಿಸುವ ಚಾರಣವಾಗಿದೆ. Treks should be booked atleast 1 days in advance. Further, advance bookings are allowed only upto 15 days. For pre-booking visit https://aranyavihaara.karnataka.gov.in/

As part of 71st   celebration 2025, Madikeri Wildlife Division, Kodagu circle have organised various awareness programs ...
29/09/2025

As part of 71st celebration 2025, Madikeri Wildlife Division, Kodagu circle have organised various awareness programs to create awareness on Wildlife Conservation #ವನ್ಯಜೀವಿ ಸಪ್ತಾಹ #ಪರಿಸರನಡಿಗೆ #ಆನೆಮಾನವಸಂಘರ್ಷ #ಅರಣ್ಯ

As part of 71st   celebration 2025, Madikeri Wildlife Division, Kodagu circle have organised various awareness programs ...
29/09/2025

As part of 71st celebration 2025, Madikeri Wildlife Division, Kodagu circle have organised various awareness programs to create awareness on Wildlife Conservation #ವನ್ಯಜೀವಿ ಸಪ್ತಾಹ #ಪರಿಸರನಡಿಗೆ #ಆನೆಮಾನವಸಂಘರ್ಷ #ಅರಣ್ಯ

ದಿನಾಂಕ: 14ನೇ & 15ನೇ ಮಾರ್ಚ್ ರಂದು ಮಾಕುಟ್ಟ ಪ್ರಾದೇಶಿಕ ಮತ್ತು ಬ್ರಹ್ಮಗಿರಿ ವನ್ಯಜೀವಿ ವಲಯದ ಸಿಬ್ಬಂದಿಗಳು; ವನ್ಯಜೀವಿ ಮಂಡಳಿ ಸದಸ್ಯರಾದ ಮಾ...
15/03/2025

ದಿನಾಂಕ: 14ನೇ & 15ನೇ ಮಾರ್ಚ್ ರಂದು ಮಾಕುಟ್ಟ ಪ್ರಾದೇಶಿಕ ಮತ್ತು ಬ್ರಹ್ಮಗಿರಿ ವನ್ಯಜೀವಿ ವಲಯದ ಸಿಬ್ಬಂದಿಗಳು; ವನ್ಯಜೀವಿ ಮಂಡಳಿ ಸದಸ್ಯರಾದ ಮಾನ್ಯ ಶ್ರೀ ಸಂಕೇತ್ ಪೂವಯ್ಯರವರು ಮತ್ತು ಮಾನ್ಯ ಡಿ. ಸಿ.ಎಫ್. ಶ್ರೀ ಜಗನ್ನಾಥರವರ ಮಾರ್ಗದರ್ಶನದಲ್ಲಿ; ಪೆರುoಬಾಡಿಯಿಂದ ಕೂಟುಪೊಳೆವರೆಗೆ ರಸ್ತೆ ಬದಿಯಲ್ಲಿ ಸಾರ್ವಜನಿಕರು ಹಾಕಿರುವ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು ಹಾಗೂ ಬೆಟೋಳಿ ಗ್ರಾಮ ಪಂಚಾಯಿತಿಯವರ ಸಹಕಾರದಿಂದ ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.

Address

Aranya Bhavana, Mysuru Road
Madikeri
571201

Alerts

Be the first to know and let us send you an email when Kodagu Forest Circle - ಕೊಡಗು ಅರಣ್ಯ ವೃತ್ತ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Kodagu Forest Circle - ಕೊಡಗು ಅರಣ್ಯ ವೃತ್ತ:

Share