Sub-Division Police office Somawarpete

Sub-Division Police office Somawarpete Contact information, map and directions, contact form, opening hours, services, ratings, photos, videos and announcements from Sub-Division Police office Somawarpete, Police station, Near Govt Hospital, Kushalnagar.

Information
21/03/2022

Information

06/09/2021

ಅಕ್ರಮ ಇಸ್ಪೀಟು
ಜೂಜಾಟ, 8 ಮಂದಿ ಬಂಧನ.

ಕೊಡಗು ಜಿಲ್ಲೆಯ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲೂರು ದೊಡ್ಡ ಭಂಡಾರ ಗ್ರಾಮದ ರಸ್ತೆ ಬದಿಯ ಪೊದೆಯ ಬಳಿ ಅಕ್ರಮವಾಗಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಇಂದು ದಾಳಿ ನಡೆಸಿದ ಪೋಲಿಸ್ ಇನ್ಸ್ಪೆಕ್ಟರ್ ಶ್ರೀ ಎಸ್. ಪರಶಿವಮೂರ್ತಿ ಮತ್ತು ಸಿಬ್ಬಂದಿಗಳು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 10 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ.30,450, 1 ಕಾರು, 7 ಬೈಕ್ ಮತ್ತು 1 ಸ್ಕೂಟರ್ ಸೇರಿದಂತೆ ಒಟ್ಟು 6 ಲಕ್ಷದ 50 ಸಾವಿರ ರೂ.ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶ್ರೀ ಶಶಿಕುಮಾರ್,ಶ್ರೀ ಡಿಂಪಲ್, ಶ್ರೀ ಪರಮೇಶ್ ಮತ್ತು ಚಾಲಕ ಕುಮಾರ್ ರವರು ಭಾಗಿಯಾಗಿದ್ದು, ಇವರ ಉತ್ತಮ ಕಾರ್ಯಯನ್ನು ಪ್ರಶಂಸಿಸಲಾಗಿದೆ.

04/08/2021

ಅಕ್ರಮ ಜೂಟಾಟ, 5 ಮಂದಿ ಬಂಧನ:

ದಿನಾಂಕ 02.08.2021ರಂದು ರಾತ್ರಿ 9 ಗಂಟೆಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಶನಿವಾರಸಂತೆ ಠಾಣೆಯ ಪೋಲಿಸ್ ನಿರೀಕ್ಷಕರಾದ ಎಸ್. ಪರಶಿವಮೂರ್ತಿ ಮತ್ತು ಸಿಬ್ಬಂದಿಗಳು ಕೊಡ್ಲಿಪೇಟೆ ಗ್ರಾಮದ ಮಹೇಶ್ ಎಂಬುವರ ಮನೆಯ ಬಳಿ ದಾಳಿ ಮಾಡಿ ,ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 5 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು ಜೂಜಾಟದಲ್ಲಿ ಪಣವಾಗಿಟ್ಟಿದ್ದ ರೂ 15,620 ಮತ್ತು 2 ಕಾರು, 2 ಸ್ಕೂಟರ್ ಸೇರಿದಂತೆ ಒಟ್ಟು 3,50,000 ಸಾವಿರ ರೂ ಮೌಲ್ಯದ ಸ್ವತ್ತುಗಳನ್ನು ವಶ ಪಡಿಸಿ ಕೊಂಡಿರುತ್ತಾರೆ.

ಈ ಕಾರ್ಯಾಚರಣೆಯು ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವಮೂರ್ತಿಯವರ ನೇತೃತ್ವದಲ್ಲಿ ನಡೆದಿದ್ದು ಸಿಬ್ಬಂದಿಗಳಾದ ಎಂ.ಎಸ್. ಬೋಪಣ್ಣ, ಹರೀಶ್, ಧನಂಜಯ, ಪ್ರಶಾಂತ್ ಪಾಟೀಲ್, ಪ್ರದೀಪ್ ಮತ್ತು ಚಾಲಕ ಕುಮಾರ್ ರವರು ಭಾಗವಹಿಸಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಲಾಗಿದೆ.

28/02/2021
ಪತ್ರಿಕಾ ಪ್ರಕಟಣೆಕೊಡಗು ಜಿಲ್ಲೆಯ ಕಳವು ಪ್ರಕರಣಗಳಲ್ಲಿ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆರವರು ಕಳ್ಳತನ ಪ್ರಕರಣವನ್ನು ತಡೆಗಟ್ಟುವ ಹಾಗೂ ಪತ್ತೆ...
02/02/2018

ಪತ್ರಿಕಾ ಪ್ರಕಟಣೆ
ಕೊಡಗು ಜಿಲ್ಲೆಯ ಕಳವು ಪ್ರಕರಣಗಳಲ್ಲಿ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆರವರು ಕಳ್ಳತನ ಪ್ರಕರಣವನ್ನು ತಡೆಗಟ್ಟುವ ಹಾಗೂ ಪತ್ತೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದು, ಅದರಂತೆ ಕಾರ್ಯಪ್ರವೃತ್ತರಾದ ಕುಶಾಲನಗರ ಪೊಲೀಸರು ಪಿಕ್ ಪಾಕೆಟು (ಜೇಬುಗಳ್ಳತನ) ಕಳವು ಮಾಡಿರುವ ಆಸಾಮಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ: 01.02.2018 ರಂದು 4 ಜನರು ಕುಶಾಲನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದು, ಸದರಿಯವರುಗಳು ಕಳುವು ಮಾಡಲು ಯತ್ನಿಸುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಕುಶಾಲನಗರ ವೃತ್ತ ನಿರೀಕ್ಷಕರು ಅಪರಾಧ ಪತ್ತೆ ಕಾರ್ಯ ಸಿಬ್ಬಂದಿಯವರುಗಳನ್ನು ಪರಿಶೀಲನೆಯ ಬಗ್ಗೆ ಕಳುಹಿಸಿದಲ್ಲೂ ಅನುಮಾನಾಸ್ಪದ ಓಡಾಡುತ್ತಿದ್ದ ವ್ಯಕ್ತಿಗಳು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ 4 ಜನರ ಪೈಕಿ ಇಬ್ಬರನ್ನು ಹಿಡಿದು ವಿಚಾರಿಸಲಾಗಿ ಸದರಿಯವರು ಸುಮಾರು 1 1/2 ತಿಂಗಳ ಹಿಂದೆ ಕುಶಾಲನಗರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಹರೀಶ ಎಂಬುವವರ ಜೇಬಿನಿಂದ ಹಣ ಕಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾರೆ. ಸದರಿ ಆರೋಪಿಗಳ ಹೆಸರು ಈ ಕೆಳಕಂಡಂತೆ ಇರುತ್ತದೆ.
1.) ಇಮ್ರಾನ್ ಪಾಷ @ ಬೈಜೂ @ ಬಚ್ಚು ತಂದೆ: ಪೌತಿ ಅಸ್ಲಾಂ ಪಾಷ, ಪ್ರಾಯ 28 ವರ್ಷ, ಎಲೆಕ್ಟ್ರೀಷಿಯನ್ ಕೆಲಸ, ಹಾಲಿ ವಾಸ: ಮನೆ ಸಂಖ್ಯೆ 370, ಮೈಸೂರು ರಸ್ತೆ, ಚಿಲ್ಕುಂದ ಗ್ರಾಮ ಮತ್ತು ಅಂಚೆ, ಹುಣಸೂರು ತಾಲೋಕು, ಮೈಸೂರು ಜಿಲ್ಲೆ. ಹಿಂದಿನ ವಿಳಾಸ: ಬೀಡಿ ಕಾಲೋನಿ, ಮಹದೇವಪುರ ರಸ್ತೆ, ಅಮೀನ್ ಮಸೀದಿ ಹತ್ತಿರ, ಅಜೀಜ್ ಸೇಠ್ ನಗರ, ಮೈಸೂರು.

2) ಫೈಸಲ್ ಅಹಮ್ಮದ್ @ ಮೆಂಟಲ್ ಮೂಸಾ ತಂದೆ ನಿಸಾರ್ ಅಹಮ್ಮದ್ , ಪ್ರಾಯ 26 ವರ್ಷ, ಆಟೋ ರಿಕ್ಷಾ ಚಾಲಕ, ವಾಸ 1 ನೇ ಸ್ಟೇಜ್ , ವಿಜಯನಗರ, 2 ನೇ ಫೇಸ್, 2ನೇ ಕ್ರಾಸ್, ಮೈಸೂರು.
ಸದರಿ ಆರೋಪಿ ಇಮ್ರಾನ್ ಪಾಷರವರನ್ನು ಕೂಲಂಕುಶವಾಗಿ ವಿಚಾರಣೆ ಮಾಡಲಾಗಿ, ಆತನು ಹಾಲಿ ಚಿಲ್ಕುಂದ ಗ್ರಾಮದಲ್ಲಿ ವಾಸವಾಗಿರುವುದಾಗಿ ಈ ಮೊದಲು ಮಂಡ್ಯ ಜಿಲ್ಲೆಯ ಕೆ.ಆರ್.ಎಸ್. ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ಗಳ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ. ಸದರಿ ಆರೋಪಿಯ ಹಿಂದಿನ ಪ್ರಕರಣಗಳ ವಿವರ ಈ ಕೆಳಕಂಡಂತಿರುತ್ತದೆ.
1) ಕೆ.ಆರ್.ಎಸ್. ಪೊಲೀಸ್ ಠಾಣೆಯಲ್ಲಿ ಮೊ.ಸಂ. 31/2015 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ಶ್ರೀರಂಗಪಟ್ಟಣದ ನ್ಯಾಯಾಲಯದಲ್ಲಿ ಸಿ.ಸಿ. ಸಂಖ್ಯೆ 585/2015 ರಲ್ಲಿ ವಿಚಾರಣೆಯಲ್ಲಿರುತ್ತದೆ.
ಮತ್ತೊಬ್ಬ ಆರೋಪಿ ಫೈಸಲ್ ಅಹಮ್ಮದ್ @ ಮೆಂಟಲ್ ಮೂಸಾ ರವರನ್ನು ಕೂಲಂಕುಶವಾಗಿ ವಿಚಾರಣೆ ಮಾಡಲಾಗಿ, ಆತನು ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣೆಯ ಮೊ.ಸಂ. 75/2016 ಕಲಂ 302 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪ್ರಸ್ತುತ ಮೈಸೂರು 4 ನೇ ಎ.ಡಿ.ಜೆ. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.
ಈ ಪ್ರಕರಣವನ್ನು ಮಾನ್ಯ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರುರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಮುರಳೀಧರ್ ನೇತೃತ್ವದಲ್ಲಿ ಕುಶಾಲನಗರವೃತ್ತ ನಿರೀಕ್ಷಕರಾದ. ಕ್ಯಾತೇಗೌಡ, ಕುಶಾಲನಗರ ನಗರ ಪೊಲೀಸ್ಠಾಣೆಯ ಪಿಎಸ್ಐ ಜಗದೀಶ್.ಪಿ, ಸಿಬ್ಬಂದಿಯವರಾದ ಶ್ರೀ. ಸುಧೀಶ್ ಕುಮಾರ್, ಶ್ರೀ.ಮುಸ್ತಾಫ, ಶ್ರೀ. ಸುರೇಶ್, ಶ್ರೀ. ಸುದೀಶ್, ಶ್ರೀ ದಿನಕರ್, ಶ್ರೀ ಸತೀಶ್, ಶ್ರೀ ಸುರೇಶ್. ಎಸ್.ಎಂ. ಶ್ರೀ.ಸಂಪತ್ರೈ, ಚಾಲಕರಾದ ಶ್ರೀ. ಗಣೇಶ್ ಹಾಗೂ ಸೈಬರ್ ಸೆಲ್ನ ಶ್ರೀ.ರಾಜೇಶ್ ಹಾಗೂ ಶ್ರೀ.ಗಿರೀಶ್, ಪತ್ತೆಹಚ್ಚಿರುತ್ತಾರೆ. ಇವರ ಕಾರ್ಯವೈಖರಿಯನ್ನು ಶ್ಲಾಘಿಸಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿರುತ್ತಾರೆ.
ಸಾರ್ವಜನಿಕರು ಬಸ್ ನಿಲ್ದಾಣಗಳಲ್ಲಿ ಹಾಗೂ ಜನಜಂಗುಳಿ ಸೇರುವ ಕಾರ್ಯಕ್ರಮಗಳ ಸಂದರ್ಭದಲ್ಲಿ ಜೇಬುಗಳ್ಳರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮಾನ್ಯ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆರವರು ಕೋರಿರುತ್ತಾರೆ

ಸರಗಳ್ಳತನ ಪ್ರಕರಣ ಪತ್ತೆ:      ದಿನಾಂಕ 21/11/2017 ರಂದು ಮಾದಾಪುರ ಜಂಬೂರು ಗ್ರಾಮದಲ್ಲಿ ನಡೆದ ಜಂಬೂರು ಗ್ರಾಮದ ಪೌತಿ ಕುಟ್ಟಪ್ಪನವರ ಪತ್ನಿಯಾ...
17/12/2017

ಸರಗಳ್ಳತನ ಪ್ರಕರಣ ಪತ್ತೆ:
ದಿನಾಂಕ 21/11/2017 ರಂದು ಮಾದಾಪುರ ಜಂಬೂರು ಗ್ರಾಮದಲ್ಲಿ ನಡೆದ ಜಂಬೂರು ಗ್ರಾಮದ ಪೌತಿ ಕುಟ್ಟಪ್ಪನವರ ಪತ್ನಿಯಾದ ಚಿಣ್ಣವ್ವ ಎಂಬುವರ ಸರಗಳ್ಳತನದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆ ಮೊ. ಸಂ. 343/17 ಕಲಂ 392 ರೀತ್ಯ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರು ಅವರ ತಂಡ ಹಾಗೂ ಡಿಸಿಐಬಿ ಪೊಲೀಸ್ ನಿರೀಕ್ಷಕರು ಅವರ ತಂಡ ಮಾದಾಪುರದ ಸೂರ್ಲಬ್ಬಿ ಗ್ರಾಮದ ನಿವಾಸಿಗಳಾದ ಮುದ್ದಂಡ ಎಂ. ಭೀಮಯ್ಯ @ ಭೀಮಣಿ ಹಾಗೂ ಮುದ್ದಂಡ ಬಿ. ಕಾರ್ಯಪ್ಪ @ ಕಿಟ್ಟು ಎಂಬುವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿ, ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರ, ಉಂಜಿಗನಹಳ್ಳಿ ಹಾಗೂ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬೆಟಗೇರಿಯಲ್ಲಿ 3 ಮನೆಗಳ್ಳತನ, ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯಡವನಾಡು, ಬಜೆಗುಂಡಿ, ಜಂಬೂರಿನಲ್ಲಿ 3 ಸರಗಳ್ಳತನ ಹಾಗೂ ಇಗ್ಗೊಡ್ಲು ಗ್ರಾಮದ ಸೀತಮ್ಮ ರವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ. ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಅವರ ವಿವರ ಈ ಕೆಳಕಂಡಂತಿರುತ್ತದೆ.



1) ಮುದ್ದಂಡ ಎಂ. ಭೀಮಯ್ಯ @ ಭೀಮಣಿ ತಂದೆ ಪೌತಿ ಎಂ.ಕೆ. ಮುದ್ದಪ್ಪ, ಪ್ರಾಯ 30 ವರ್ಷ, ವ್ಯವಸಾಯ ವೃತ್ತಿ, ವಾಸ

ಸೂರ್ಲಬ್ಬಿ ಗ್ರಾಮ ಮತ್ತು ಅಂಚೆ, ಮಾದಾಪುರ, ಸೋಮವಾರಪೇಟೆ ತಾಲ್ಲೂಕು.

2) ಮುದ್ದಂಡ ಬಿ. ಕಾರ್ಯಪ್ಪ @ ಕಿಟ್ಟು, ತಂದೆ ಪೌತಿ ಬಿದ್ದಪ್ಪ, ಪ್ರಾಯ 30 ವರ್ಷ, ವ್ಯವಸಾಯ ವೃತ್ತಿ, ವಾಸ ಸೂರ್ಲಬ್ಬಿ ಗ್ರಾಮ

ಮತ್ತು ಅಂಚೆ, ಮಾದಾಪುರ, ಸೋಮವಾರಪೇಟೆ ತಾಲ್ಲೂಕು.

1 ಆರೋಪಿ ಮುದ್ದಂಡ ಭೀಮಯ್ಯ ನು 5 ನೇ ತರಗತಿಯವರೆಗೆ ಸೂರ್ಲಬ್ಬಿ ಗ್ರಾಮದಲ್ಲಿ ವ್ಯಾಸಂಗ ಮಾಡಿದ್ದು, ಮನೆಯಲ್ಲಿ ವ್ಯವಸಾಯ ವೃತ್ತಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿರುತ್ತದೆ.



2ನೇ ಆರೋಪಿ ಮುದ್ದಂಡ ಬಿ. ಕಾರ್ಯಪ್ಪ ನು ದ್ವೀತಿಯ ಪಿ.ಯು.ಸಿ. ವರೆಗೆ ಸೂರ್ಲಬ್ಬಿ ಗ್ರಾಮದಲ್ಲಿ ಹಾಗೂ ಮಾದಾಪುರದಲ್ಲಿ ವ್ಯಾಸಾಂಗ ಮಾಡಿದ್ದು 2009ನೇ ಇಸವಿಯಲ್ಲಿ ಬೆಂಗಳೂರಿನ ಓಂ ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಸಿಂಡಿಕೇಟ್ ಬ್ಯಾಂಕ್ ನ ಎ.ಟಿ.ಎಂ., ಹಣ ಕಳ್ಳತನದ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿದೆ.

ಮೇಲ್ಕಂಡ ಆರೋಪಿಗಳು ಭಾಗಿಯಾಗಿದ್ದ ಪ್ರಕರಣಗಳ ವಿವರ ಈ ಕೆಳಕಂಡಂತಿದೆ


1. ಸೋಮವಾರಪೇಟೆ ಠಾಣೆ ಮೊ.ಸಂ.137/2014 ಕಲಂ 454, 457, 380 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ರತನ್ ತಿಮ್ಮಯ್ಯ, ವಕೀಲರು, ಮೂವತ್ತೊಕ್ಲು ಗ್ರಾಮ ರವರಿಗೆ ಸೇರಿದ 22 ಗ್ರಾಂ ಚಿನ್ನದ ಗಟ್ಟಿ ಮತ್ತು ಒಂದು ಪೀಚೆ ಕತ್ತಿ-

2. ಸೋಮವಾರಪೇಟೆ ಠಾಣೆ ಮೊ.ಸಂ.278/14 ಕಲಂ 392 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಶ್ರೀಮತಿ ಶೀಲ ಯಡವನಾಡು ಗ್ರಾಮ ಇವರಿಗೆ ಸೇರಿದ 22 ಗ್ರಾಂ ಚಿನ್ನದ ಗಟ್ಟಿ-

3. ಸೋಮವಾರಪೇಟೆ ಠಾಣೆ ಮೊ.ಸಣ.36/15 ಕಲಂ 454, 457, 380 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಅಯ್ಯಪ್ಪ, ಉಂಜಿಗನ ಹಳ್ಳಿ ಗ್ರಾಮ ಇವರಿಗೆ ಸೇರಿದ 22 ಗ್ರಾಂ ಚಿನ್ನದ ಗಟ್ಟಿ, 1 ಬೆಳ್ಳಿಯ ಚೈನು.

4. ಸೋಮವಾರಪೇಟೆ ಠಾಣೆ ಮೊ.ಸಣ 193/15 ಕಲಂ 392 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಪ್ರೇಮ, ಬಜೆಗುಂಡಿ ಗ್ರಾಮ ಇವರಿಗೆ ಸೇರಿದ 16 ಗ್ರಾಂ ಚಿನ್ನದ ಗಟ್ಟಿ-

5. ಕುಶಾಲನಗರ ಗ್ರಾಮಾಂತರ ಠಾಣೆ ಮೊ.ಸಂ 70/15 ಕಲಂ 454, 380 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಗಣೇಶ, ಚಿಕ್ಕಬೆಅಗೇರಿ ಗ್ರಾಮ ಇವರಿಗೆ ಸೇರಿದ 16 ಗ್ರಾಂ ಚಿನ್ನದ ಗಟ್ಟಿ-

6. ಸೋಮವಾರಪೇಟೆ ಠಾಣೆ ಮೊ.ಸಂ299/17 ಕಲಂ 302, 201 ಐಪಿಸಿ ಪ್ರಕರಣದ ಫಿರ್ಯಾದುದಾರರಾದ ಇಗ್ಗೋಡ್ಲು ಗ್ರಾಮದ ಸೀತಮ್ಮರವರ ಕೊಲೆ ಪ್ರಕರಣಕ್ಕೆ ಸಮಬಂಧಿಸಿದಂತೆ 16 ಗ್ರಾಂ ಚಿನ್ನದ ಗಟ್ಟಿ-

7. ಸೋಮವಾರಪೇಟೆ ಠಾಣೆ ಮೊ.ಸಂ. 343/17 ಕಲಂ 392 ಐಪಿಸಿ ಪ್ರಕರಣದ ಫಿರ್ಯಾದುದಾರರಾದ , ಜಂಬೂರು ಗ್ರಾಮದ ಚಿಣ್ಣವ್ವ ಇವರಿಗೆ ಸೇರಿದ 12 ಗ್ರಾಂ. ಚಿನ್ನದ ಗಟ್ಟಿ, 2 ಗ್ರಾಂ ಚಿನ್ನದ ಚೈನು ಚೂರು, 1 ಪಲ್ಸರ್ ಬೈಕ್, 1 ಹೆಲ್ಮಟ್, 1 ಬ್ಯಾಗ್ - ವಶಪಡಿಸಿಕೊಳ್ಳಲಾಗಿದೆ.

ಸದರಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮಾಲಿನ ವಿವರ ಈ ಕೆಳಕಂಡಂತಿರುತ್ತದೆ.

(1) 114 ಗ್ರಾಂ. ಚಿನ್ನ
(2) ಒಂದು ಬೆಳ್ಳಿಯ ಚೈನು
(3) 94 ಕೆ.ಜಿ. ಕರಿಮೆಣಸು
(4) ಒಂದು ಪೀಚೆ ಕತ್ತಿ
(5) ರೂ 5,000/- ನಗದು
(6) ಪಲ್ಸರ್ ಬೈಕ್ ನಂ. ಕೆಎ-04-ಹೆಚ್.ಜೆ.-7361 (ಕೃತ್ಯ ಮಾಡಲು ಉಪಯೋಗಿಸಿದ ವಾಹನ)
(7) ಒಂದು ಹೆಲ್ಮೆಟ್ ಹಾಗೂ ಒಂದು ಬ್ಯಾಗ್



ಈ ಪ್ರಕರಣವನ್ನು ಮಾನ್ಯ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರುರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪಿ. ಮುರಳೀಧರ ರವರ ನೇತೃತ್ವದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡ ಮಡಿಕೇರಿ ಡಿ.ಸಿ.ಐ.ಬಿ., ವಿಭಾಗದ ಆರಕ್ಷಕ ನಿರೀಕ್ಷಕರಾದ ಎಂ.ಮಹೇಶ, ಶನಿವಾರಸಂತೆ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಹೆಚ್.ಎಂ. ಮರಿಸ್ವಾಮಿ, ಸೋಮವಾರಪೇಟೆ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಎಂ. ಶಿವಣ, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಪಿ. ಜಗದೀಶ ಹಾಗೂ ಸೋಮವಾರಪೇಟೆ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ದಯಾನಂದ, ಸಜಿ, ಪ್ರಕಾಶ, ಸಂದೇಶ, ಜೋಸೆಫ್, ಉದಯ, ಸುಧೀಶ, ಮುಸ್ತಾಫ, ಸುರೇಶ, ಪ್ರದೀಪ, ಹರೀಶ, ಪರಮೇಶ, ಮಂಜು, ಕುಮಾರಸ್ವಾಮಿ, ಅನಂತ, ಸ್ವಾಮಿ ಮತ್ತು ಡಿಸಿಐಬಿ ಸಿಬ್ಬಂದಿಯಾದ ಯೋಗೇಶ್ ರವರುಗಳು ಪತ್ತೆಹಚ್ಚಿರುತ್ತಾರೆ. ಇವರ ಕಾರ್ಯವೈಖರಿಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

Chennai police inspector Periyapandi shot dead by robbers in Rajasthan.My deep condolences to the family and salute to t...
14/12/2017

Chennai police inspector Periyapandi shot dead by robbers in Rajasthan.

My deep condolences to the family and salute to the brave heart !

ಪತ್ರಿಕಾ ಪ್ರಕಟಣೆ ಕೊಡಗು ಜಿಲ್ಲೆಯಾದ್ಯಂತ ದ್ವಿಚಕ್ರವಾಹನಗಳ ಕಳವು ಹೆಚ್ಚಾಗುತ್ತಿದ್ದು, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆರವರು ದ್ವಿಚಕ್ರ ವಾ...
08/12/2017

ಪತ್ರಿಕಾ ಪ್ರಕಟಣೆ
ಕೊಡಗು ಜಿಲ್ಲೆಯಾದ್ಯಂತ ದ್ವಿಚಕ್ರವಾಹನಗಳ ಕಳವು ಹೆಚ್ಚಾಗುತ್ತಿದ್ದು, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆರವರು ದ್ವಿಚಕ್ರ ವಾಹನಗಳನ್ನು ತಡೆಯುವ ನಿಟ್ಟಿನಲ್ಲಿ, ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದ್ದು, ಅದರಂತೆ ಕಾರ್ಯ ಪ್ರವೃತ್ತರಾದ ಕುಶಾಲನಗರ ಪೊಲೀಸರು ದ್ವಿಚಕ್ರ ವಾಹನಗಳ ಕಳವು ಮಾಡಿರುವ ಆಸಾಮಿ ಬೋಪಣ್ಣ ಎಂ.ಎ. @ ಶರಣ್ @ ಹರ್ಷ, ತಂದೆ: ಪೌತಿ ಅಚ್ಚಯ್ಯ, ಪ್ರಾಯ: 28 ವರ್ಷ, ವಾಸ: ಕಾಂಡನಕೊಲ್ಲಿಗ್ರಾಮ, ಸುಂಟಿಕೊಪ್ಪ ಈತನನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ: 05.12.2017 ರಂದು ಒಬ್ಬ ಆಸಾಮಿಯು ಕುಶಾಲನಗರದಕೂಡಿಗೆ ಸೇತುವೆಯ ಬಳಿ ದ್ವಿಚಕ್ರ ವಾಹನವೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಕುಶಾಲನಗರ ವೃತ್ತ ನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಪರಿಶೀಲನೆಯ ಬಗ್ಗೆ ಕೂಡಿಗೆ ಸೇತುವೆಯ ಬಳಿ ತೆರಳಿದಾಗ ಅಲ್ಲಿನ ಗ್ಯಾರೇಜ್‌‌ ಮುಂದೆ ಕೆಎ-05-ಇಎಫ್-7085 ರ ಮೋಟಾರ್ ಸೈಕಲ್‌‌ನೊಂದಿಗೆ ನಿಂತಿದ್ದ ವ್ಯಕ್ತಿಯು ಇವರನ್ನು ನೋಡಿ ಪರಾರಿಯಾಗಲು ಯತ್ನಿಸಿದವನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸದರಿ ಮೋಟಾರ್ ಸೈಕಲ್ ಕುಶಾಲನಗರದ ಇಂದಿರಾ ಬಡಾವಣೆಯಲ್ಲಿ ಕಳುವು ಮಾಡಿರುವುದಾಗಿ ತಿಳಿಸಿರುತ್ತಾನೆ.
ಸದರಿ ಆರೋಪಿಯನ್ನು ಕೂಲಂಕುಶವಾಗಿ ವಿಚಾರಣೆ ಮಾಡಲಾಗಿ, ಆತನು 10 ನೇ ತರಗತಿಯವರೆಗೆ ಸುಂಟಿಕೊಪ್ಪ ಮಾದಾಪುರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಬೆಂಗಳೂರಿನ ಎ.ಡಿ.ಸಿ. ಹಾಗೂ ಸೆಕ್ಯೂರ್ ವ್ಯಾಲ್ಯೂ ಸಾಪ್ಟ್‌‌‌ವೇರ್ ಕಂಪನಿಗಳಲ್ಲಿ ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದು, ನಂತರ ಮಡಿಕೇರಿಯ ವ್ಯಾಂಡಮ್ ಎಂಟರ್ ಪ್ರೈಸೆಸ್ ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿ ನಂತರ ಬೆಂಗಳೂರಿನ ಜಿ ಪಿ. ಮಾರ್ಗನ್ ಕಂಪೆನಿಯಲ್ಲಿ ಟಿ ಕೌಂಟರ್ ನಡೆಸುತ್ತಿರುವುದಾಗಿ, ಬೆಂಗಳೂರು, ಮೈಸೂರು, ಮಡಿಕೇರಿಗಳಲ್ಲಿ ಒಟ್ಟು 21 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ಆರೋಪಿಯು ಸದರಿ ಮೋಟಾರ್ ಸೈಕಲ್‌ಗಳನ್ನು ಕಳುವು ಮಾಡಿ ಕುಶಾಲನಗರದಲ್ಲಿ-03, ಸುಂಟಿಕೊಪ್ಪದಲ್ಲಿ-01, ಕಾಂಡನಕೊಲ್ಲಿಯಲ್ಲಿ-01, 7ನೇ ಹೊಸಕೋಟೆಯಲ್ಲಿ-01, ಮಡಿಕೇರಿಯಲ್ಲಿ-03, ಮಾದಾಪುರದಲ್ಲಿ-02, ಮೂರ್ನಾಡಿನಲ್ಲಿ-01, ವಿರಾಜಪೇಟೆಯಲ್ಲಿ-04, ಗೋಣಿಕೊಪ್ಪದಲ್ಲಿ-02, ಸಿದ್ದಾಪುರದಲ್ಲಿ-01 ಮತ್ತು ಬೆಂಗಳೂರಿನಲ್ಲಿ-01 ಕಡೆಯ ಗ್ಯಾರೇಜ್ಗಳಲ್ಲಿ ಮೆಕ್ಯಾನಿಕ್‌ಗಳಿಗೆ ಹಾಗೂ ಆರೋಪಿಯ ಸ್ನೇಹಿತರಿಗೆ ಸ್ವಂತದೆಂದು ನಂಬಿಸಿ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಸದರಿ ಆರೋಪಿ ಕಳವು ಮಾಡಿದ್ದ ಸುಮಾರು 6,30,000/- ರೂ ಬೆಲೆಯ 21 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿಆರೋಪಿ ಬೋಪಣ್ಣ ಎಂ.ಎ. ವಿರುದ್ಧ ಈ ಹಿಂದೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಮೊ.ಸಂ. 67/2016 ಕಲಂ 379 ಐ.ಪಿ.ಸಿ ಯನ್ವಯ ಕಳುವು ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣವನ್ನು ಮಾನ್ಯ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರುರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ. ಪಿ.ಕೆ.ಮುರುಳಿಧರ ರವರ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ. ಕ್ಯಾತೇಗೌಡ, ಕುಶಾಲನಗರ ನಗರ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್.ಪಿ, ಸಿಬ್ಬಂದಿಯವರಾದ ಶ್ರೀ.ಸುದಿಶ್‌‌ ಕುಮಾರ್, ಶ್ರೀ ಲೋಕೇಶ್, ಶ್ರೀ.ಮುಸ್ತಾಫ, ಶ್ರೀ ಸಜಿ, ಶ್ರೀ.ದಯಾನಂದ, ಶ್ರೀ. ಸುರೇಶ್, ಶ್ರೀ.ಉದಯಕುಮಾರ್, ಶ್ರೀ.ಸಂಪತ್ರೈ, ಶ್ರೀ.ಚಾಲಕರಾದ ಶ್ರೀ.ಲೋಕೇಶ್ ಬಿ.ಆರ್. ಮತ್ತು ಶ್ರೀ. ಗಣೇಶ್ ಹಾಗೂ ಸೈಬರ್ ಸೆಲ್‌‌‌ನ ಶ್ರೀ.ರಾಜೇಶ್ ಹಾಗೂ ಶ್ರೀ.ಗಿರೀಶ್, ಹೋಂಗಾರ್ಡ್‌ ಕುಮಾರ ರವರು ಪತ್ತೆಹಚ್ಚಿರುತ್ತಾರೆ. ಇವರ ಕಾರ್ಯವೈಖರಿಯನ್ನು ಶ್ಲಾಘಿಸಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿರುತ್ತಾರೆ.
ಸಾರ್ವಜನಿಕರು ಹಳೆಯ ವಾಹನಗಳನ್ನು ಖರೀದಿಸುವ ಸಂದರ್ಭದಲ್ಲಿ ಸದರಿ ವಾಹನದ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಕಛೇರಿಯಲ್ಲಿರುವ ವಾಹನ ತಪಾಸಣಾ ವಿಭಾಗದಲ್ಲಿ ಪರಿಶೀಲನೆ ಮಾಡಿಸಿ ನಂತರ ಆ ವಾಹನವನ್ನು ಖರೀದಿಸುವಂತೆ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ರವರು ಕೋರಿರುತ್ತಾರೆ.

*🚨ನಿಮಗೆ ಗೋರಿಗಳು ಎಷ್ಟು ಮುಖ್ಯವೋ, ನನಗೆ ನನ್ನ ಪೊಲೀಸರು ಅಷ್ಟೆ ಮುಖ್ಯ : ಎಸ್ಪಿ ಅಣ್ಣಾಮಲೈ**ಚಿಕ್ಕಮಗಳೂರು :* ಗೋರಿಗಳನ್ನ ಬೇಕಾದ್ರೆ ಸರಿಪಡಿಸ...
08/12/2017

*🚨ನಿಮಗೆ ಗೋರಿಗಳು ಎಷ್ಟು ಮುಖ್ಯವೋ, ನನಗೆ ನನ್ನ ಪೊಲೀಸರು ಅಷ್ಟೆ ಮುಖ್ಯ : ಎಸ್ಪಿ ಅಣ್ಣಾಮಲೈ*

*ಚಿಕ್ಕಮಗಳೂರು :* ಗೋರಿಗಳನ್ನ ಬೇಕಾದ್ರೆ ಸರಿಪಡಿಸಬಹುದು, ನನ್ನ ಪೊಲೀಸರಿಗೆ ಏನಾದ್ರು ಆದ್ರೆ ಅವರ ಮನೆಯವರಿಗೆ ಉತ್ತರ ಕೊಡೋರು ಯಾರು, ನಿಮಗೆ ಗೋರಿಗಳು ಎಷ್ಟು ಮುಖ್ಯವೋ, ನನಗೆ ನನ್ನ ಪೊಲೀಸರು ಅಷ್ಟೆ ಮುಖ್ಯ ಎಂದು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ತನ್ನ ಸಿಬ್ಬಂದಿಗಳ ಪರ ಮಾನವೀಯತೆ ಮೆರೆದಿದ್ದಾರೆ. ದತ್ತಜಯಂತಿಯ ವೇಳೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್ ಕಾರ್ಯಕರ್ತರು ದತ್ತಪೀಠದಲ್ಲಿ ಘೋರಿಗಳನ್ನ ವಿರೂಪಗೊಳಿಸಿದ್ರು. ಅವುಗಳನ್ನ ದುರಸ್ಥಿಗೊಳಿಸಿ, ಇಂದು ಎರಡೂ ಸಮುದಾಯದವರ ಜೊತೆ ವಿವಿಧ ಸಂಘಟನೆಗಳ ಮುಖ್ಯಸ್ಥರನ್ನ ದತ್ತಪೀಠಕ್ಕೆ ಕರೆದೊಯ್ದ ಎಸ್ಪಿ ಅಣ್ಣಾಮಲೈ, ಘಟನೆಯ ಬಗ್ಗೆ ಪರಾಮರ್ಶೆ ನಡೆಸಿದ್ರು.

*ಇದು ಕರುನಾಡ ಹೆಮ್ಮೆ*
*NEWS 🚔 W🌎RLD✔*

ನನ್ನ ಪ್ರಕಾರ ದತ್ತಪೀಠದ ಬಂದೋಬಸ್ತ್ ಪರ್ಫಕ್ಟ್ ಇದೆ. ನೂರಕ್ಕೆ ನೂರು ಸರಿ ಮಾಡೋಕೆ ಸಾಧ್ಯವಿಲ್ಲ. ನಿಮ್ಮ ಮನೆಯಲ್ಲೂ ತಪ್ಪಾಗುತ್ತೆ. ನನಗೆ ನನ್ನ ಪೊಲೀಸರು ಫಸ್ಟ್. ಗೋರಿಗಳು ಸೆಕೆಂಡ್ ಎಂದರು. ಗೋರಿಗಳ ಬಳಿ 10 ಪೊಲೀಸರಿದ್ದಾರೆ. ನೂರಾರು ಜನ ಒಳಗೆ ನುಗ್ಗುತ್ತಿದ್ದಾಗ ನಾನು ಮೊದಲು ನನ್ನ ಪೊಲೀಸರನ್ನ ಸೇವ್ ಮಾಡ್ಬೇಕು ಎಂದು ತನ್ನ ಸಿಬ್ಬಂದಿಗಳ ಪರ ಬ್ಯಾಟ್ ಬೀಸಿದ್ದಾರೆ. ಇದರಿಂದ ಚಿಕ್ಕಮಗಳೂರು ಪೊಲೀಸರಿಗೆ ಅಣ್ಣಾಮಲೈ ಮೇಲಿನ ಗೌರವ, ಪ್ರೀತಿ, ಅಭಿಮಾನ ಮತ್ತಷ್ಟು ಇಮ್ಮಡಿಗೊಂಡಿದೆ.

ಚಿಕ್ಕಮಗಳೂರು : ಗೋರಿಗಳನ್ನ ಬೇಕಾದ್ರೆ ಸರಿಪಡಿಸಬಹುದು, ನನ್ನ ಪೊಲ

06/12/2017

ಡಿ.31ರೊಳಗೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳನ್ನು ಜನಸ್ನೇಹಿಯಾಯಾಗಿಸಲು ಡಿಜಿ ಆದೇಶ

December 6, 2017



ಬೆಂಗಳೂರು, ಡಿ.6-ರಾಜ್ಯದ ಎಲ್ಲ ಪೊಲೀಸ್ ಠಾಣೆಗಳನ್ನು ಡಿ.31ರೊಳಗೆ ಜನಸ್ನೇಹಿಯನ್ನಾಗಿ ಮಾಡಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ಎಸ್.ರಾಜು ಅದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲ ನಗರ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಎಸ್‍ಪಿಗಳಿಗೆ ರವಾನಿಸಲಾಗಿದೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನಸ್ನೇಹಿ ಪೊಲೀಸ್ ಯೋಜನೆಯನ್ನು ಈ ತಿಂಗಳ ಅಂತ್ಯದೊಳಗೆ ಎಲ್ಲ ಠಾಣೆಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಯೋಜನೆಯನ್ನು ಜಾರಿಗೊಳಿಸಲು ವಿಫಲರಾಗುವ ಪೊಲೀಸರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ ಎಚ್ಚರಿಕೆ ನೀಡಿದ್ದಾರೆ.

ಈ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರವು ಪ್ರತಿ ಠಾಣೆಗೆ ತಲಾ 5 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಜನಸ್ನೇಹಿ ಪೊಲೀಸ್ ಠಾಣೆ ಯೋಜನೆ: ಜನಸ್ನೇಹಿ ಪೊಲೀಸ್ ಠಾಣೆ ಯೋಜನೆ ಜಾರಿಗಾಗಿ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಠಾಣೆಗೆ ಸಾರ್ವಜನಿಕರು ಮತ್ತು ದೂರುದಾರರು ಪ್ರವೇಶಿಸುತ್ತಿದ್ದಂತೆ ನಿಮಗೆ ನಮ್ಮ ಸಹಾಯ ಬೇಕೆ ಎಂದು ಕಾಣುವ ಫಲಕ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಇರಬೇಕು, ಠಾಣೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ವಹಿಸಬೇಕು. ಸಂದರ್ಶಕರ ನೋಂದಣಿ ಪುಸ್ತಕ ನಿರ್ವಹಿಸಬೇಕು. ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯೋಜನೆಯನ್ನು ಅನುಷ್ಠಾನಗೊಳಿಸಿರುವುದಕ್ಕೆ ಸಾಕ್ಷಿಯಾಗಿ ಫೋಟೋ ಅಥವಾ ವೀಡಿಯೋವನ್ನು ಸಲ್ಲಿಸಬೇಕು ಎಂಬ ಸೂಚನೆಗಳಿವೆ.

05/12/2017

ಸಾರ್ವಜನಿಕರಲ್ಲಿ ವಿನಂತಿ

ಮೈಸೂರು ಜಿಲ್ಲೆಯಲ್ಲಿ ಕಳೆದ 1 ವರ್ಷ 4 ತಿಂಗಳುಗಳಿಂದ ರಕ್ಷಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ . ಈ ಸಂದರ್ಭದಲ್ಲಿ ಯಾವುದೇ ಜಾತಿ ,ಪಂಗಡ, ಧರ್ಮಕ್ಕೆ ಸೀಮಿತವಾದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರ ಏಳಿಗೆಗಾಗಿ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಯತ್ನ ಪಟ್ಟಿದೇನೆ . ನಾನು ಪರಿಪೂರ್ಣನಲ್ಲ ಆದರೆ ಹುಣಸೂರಿನಲ್ಲಿ ನಡೆದ ಘಟನೆಗೆ ಕುರಿತಂತೆ ಹಲವಾರು ಜನ ಬೇರೆ ಬೇರೆ ಬಣ್ಣವನ್ನು ಕೊಟ್ಟು ಮಾನ್ಯ ಗೌರವಾನ್ವಿತ ಸಂಸದರಿಗೆ ಮತ್ತು ನನಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ತುಣುಕುಗಳು ಹಾಗೂ ಪೋಟೋಗಳನ್ನು ಬಳಸಿ ಓಟು ಮಾಡಿ , ಯಾರಿಗೆ ನಿಮ್ಮ ಬೆಂಬಲ ಹಾಗೂ ಇನ್ನಿತರ ಬೇಡದ ಪೋಸ್ಟ್ ಗಳನ್ನು ಹಾಕುತ್ತಿರುವುದು ಸರಿಯಲ್ಲ . ನಾನು ರಕ್ಷಣಾಧಿಕಾರಿ ಹಾಗೂ ಅವರು ಮಾನ್ಯ ಸಂಸದರು ,ಅವರ ಬಗ್ಗೆ ನನಗೆ ಅಪಾರ ಗೌರವವಿದೆ . ನಿತ್ಯ ಕರ್ತವ್ಯ ಮಾಡಬೇಕಾದರೆ ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ.. ಕಾನೂನಿನ ಅಡಿಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಹೊರತು ಯಾವುದೇ ವೈಯಕ್ತಿಕ ದ್ವೇಷ ಆಗಲಿ ಭಿನ್ನ ಅಭಿಪ್ರಾಯವಾಗಲಿ ಇಲ್ಲ .
ಹುಣಸೂರಿನಲ್ಲಿ ಆದ ಘಟನೆಗಳ, ಎಲ್ಲಾ ಅಂಶಗಳ ವಿಷಯಾಧಾರಿತ ಪತ್ರಿಕಾ ಪ್ರಕಟಣೆಯನ್ನು ಜಿಲ್ಲಾಡಳಿತ ಹೊರಡಿಸುತ್ತದೆ .
ಮೆರವಣಿಗೆಯನ್ನು ನಿಷೇಧಿಸಲಾಗಿದೆ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ. ಆದರೆ ಮಾನ್ಯ ಜಿಲ್ಲಾಧಿಕಾರಿಗಳು ಮೆರವಣಿಗೆಯನ್ನ ನಿಷೇಧಿಸಿಲ್ಲ , ಮೆರವಣಿಗೆಗೆ ಇನ್ನೊಂದು ಪ್ರದೇಶವನ್ನು ಸೇರಿಸಬೇಕೆಂಬ ಬೇಡಿಕೆ ಇತ್ತು . ಮೆರವಣಿಯನ್ನು ನಿಷೇಧಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲ. ಆದೇಶ ಮಾಡುವುದು, ನಿಷೇಧಿಸುವುದು, ಮಾರ್ಪಡಿಸುವುದು ದಂಡಾಧಿಕಾರಿಗಳಿಗೆ ಸೇರಿದ್ದು . ಪೊಲೀಸ್ ಇಲಾಖೆಗೆ ಮಾರ್ಪಡಿಸುವ ಅಥವಾ ನಿಷೇಧಿಸುವ ,ಪರವಾನಗಿ ನೀಡುವ ಅಧಿಕಾರ ಇಲ್ಲ . ಮಾನ್ಯ ದಂಡಾಧಿಕಾರಿಗಳು ಹೊರಡಿಸುವ ಆದೇಶವನ್ನು ಪಾಲೀಸುವುದಷ್ಟೇ ನಮ್ಮ ಜವಾಬ್ದಾರಿ, ಹಾಗೂ ನಾವು ಅದನ್ನೆ ಮಾಡಿದ್ದೇವೆ . ಮಾನ್ಯ ಸಂಸದರ ಬಗ್ಗೆ ನನಗೆ ಅಪಾರ ಗೌರವವಿದೆ . ಆದ್ದರಿಂದ
ದಯಮಾಡಿ ಎಲ್ಲರಲ್ಲೂ ವೈಯಕ್ತಿಕವಾಗಿ ಬೇಡಿಕೊಳ್ಳುವುದೇನೆಂದರೆ ಮಾನ್ಯ ಸಂಸದರ ಹಾಗೂ ನನ್ನ ಭಾವಚಿತ್ರಗಳನ್ನು ಬಳಸಿ ಅವರ ಹೇಳಿಕೆ ಹಾಗೂ ನನ್ನ ಹೇಳಿಕೆಗಳಿಗೆ ಇಲ್ಲ ಸಲ್ಲದ ಹೋಲಿಕೆಗಳನ್ನ ಮಾಡುತ್ತಾ ತಿರುಗೇಟು ಕೊಟ್ಟರು ಎಂದು ಸುಖಾಸುಮ್ಮನೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದನ್ನು ನಿಲ್ಲಿಸಬೇಕು . ಹಾಗಾಗಿ ಈ ಸುಳ್ಳು ಸುದ್ದಿಗಳ ಬಗ್ಗೆ ಯಾರು ಕಿವಿಗೊಡಬಾರದು . ದಯಮಾಡಿ ಎಲ್ಲರೂ ಸಹಕರಿಸಬೇಕಾಗಿ ವಿನಂತಿ .

ರವಿ ಡಿ ಚನ್ನಣ್ಣನವರ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು , ಮೈಸೂರು .

Address

Near Govt Hospital
Kushalnagar
571234

Telephone

+918276274400

Website

Alerts

Be the first to know and let us send you an email when Sub-Division Police office Somawarpete posts news and promotions. Your email address will not be used for any other purpose, and you can unsubscribe at any time.

Share

Category