ಸಾವಂತರಮನೆ - Savantharamane

ಸಾವಂತರಮನೆ - Savantharamane Contact information, map and directions, contact form, opening hours, services, ratings, photos, videos and announcements from ಸಾವಂತರಮನೆ - Savantharamane, Landmark & historical place, Thenkabettu, Ulthooru, Kundapur.

12/01/2018

ನನ್ನದು ಕರಾವಳಿ ತಡಿಯ ಪುಟ್ಟ ಊರು.. ಸದಾ‌ ಕಾಲ ಸರ್ವರಿಗೂ ಒಳ್ಳೆಯದನ್ನೇ ಬಯಸುವ ಊರು ಉಳ್ತೂರು ಆಯಿತು ಎನ್ನುವುದು ಪ್ರತೀತಿ.ಕಳೆದ ವರ್ಷ ನೂತನವಾಗಿ ಶಿಲಾಮಯಗೊಂಡು ದಾಖಲೆಯ ೬ ತಿಂಗಳಲ್ಲಿ ಲೋಕಾರ್ಪಣೆಗೊಂಡ ಮಾತನಾಡುವ ಮಹಾಲಿಂಗೇಶ್ವರನ‌ ಪುಣ್ಯಭೂಮಿ.. ಗ್ರಾಮ ಪುಟ್ಟದಾದರೂ ಜನ ಹೃದಯ ಶ್ರೀಮಂತಿಕೆಗೆ ಹೆಸರಾದವರು. ನಮ್ಮೂರಿನ ಅಗು ಹೋಗುಗಳಿಗೆ ಸದಾ ಸ್ಪಂದಿಸುವ ನಿಟ್ಟಿನಲ್ಲಿ 35 ಸಂವತ್ಸರಗಳ ಹಿಂದೆ ನಮ್ಮ ಹಿರಿಯರು ಮಹಾಲಿಂಗೇಶ್ವರ ನ ಹೆಸರಿನಲ್ಲಿ ಆರಂಬಿಸಿದ್ದು ನಮ್ಮಿ ಯುವಕ‌ ಮಂಡಲವನ್ನ. ಸದಾ ಹೊಸತನದೊಂದಿಗೆ ಯುವಕರ ಬಲದಿಂದಾಗಿ ಯಶಸ್ವಿ ಯಾಗಿ‌ ನಡೆದುಕೊಂಡು ಬಂದಿದೆ.. ಸದ್ದಿಲ್ಲದೇ ಸಮಸ್ಯೆಗಳಿಗೆ ಸ್ಪಂದಿಸುತ್ತ, ನೊಂದವರ ನೋವಿಗೆ ನೆರವಾಗುತ್ತ ತನ್ನ ಉದ್ದೇಶಗಳನ್ನ ಮರೆಯದೇ ಕಾರ್ಯನಿರ್ವಹಿಸುತ್ತ ಬಂದಿರುವ ಸಂಸ್ಥೆ..
ನಮ್ಮೆಲ್ಲರ ಆದರ್ಶರಾಗಿದ್ದ ಅಣ್ಣ, ಗೆಳೆಯ ದಿನಕರ ಕೊಠಾರಿಯವರ ಅಗಲುವಿಕೆಯ ನಂತರ ಅವರ ಹೆಸರಿನಲ್ಲಿ ಶಾಶ್ವತ ಪ್ರಶಸ್ತಿಯೊಂದನ್ನ ಸ್ಥಾಪಿಸಿ ಕಲೆ,ಸಂಸ್ಕೃತಿ, ಕ್ರೀಡೆ ಹೀಗೆ ವಿವಿದ ರಂಗಗಳಲ್ಲಿ ಸಾಧನೆ ಮಾಡಿದವರನ್ನ ಗುರುತಿಸಿ ಪ್ರಶಸ್ತಿಯನ್ನಿತ್ತು ಗೌರವಿಸಿದ್ದೆವು.. ಯಕ್ಷರಂಗದಲ್ಲಿ 50 ವರ್ಷಗಳ ತಿರುಗಾಟವನ್ನ ಪೂರೈಸಿದ್ದ ರಮೇಶ್ ಬೇಲ್ತೂರು, ಜಿಲ್ಲಾ ಪ್ರಗತಿಪರ ಕೃಷಿಕ ಪ್ರಶಸ್ತಿ ವಿಜೇತ ರಾಮ ಭಟ್ ಕೆದೂರು, ಕುಂದಾಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಈ ಹಿಂದೆ ನೆನಪು ಪ್ರಶಸ್ತಿ ಪಡೆದಿದ್ದರು...

ಈ ಬಾರಿಯ ನೆನಪು ಪ್ರಶಸ್ತಿ ಪ್ರಧಾನ ಸಮಾರಂಭ ದಿನಾಂಕ 15/02/2018 ರಂದು ನಡೆಯಲಿದೆ.. ಮಳೆ, ಚಳಿ ಬಿಸಿಲೆನ್ನದೇ ಗಡಿಯಲ್ಲಿ ನಿಂತು ದೇಶ ರಕ್ಷಣೆಗೆ ಪ್ರಾಣ ಪಣಕ್ಕಿಟ್ಟು ಹೋರಾಡುವ ವೀರ ಯೋದರ ಕುಟುಂಬ ಭಾರತೀಯ ಸೇನೆಗೆ ಪ್ರಶಸ್ತಿ ನೀಡಲಾಗುವುದು.. ಜೊತೆಗೆ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ವೀರ ಯೋದರ ನಿದಿಗೆ ಗೌರವಧನವನ್ನ ಕೂಡ ಇದೇ ಸಂದರ್ಭ ಹಸ್ತಾಂತರಿಸಲಾಗುವುದು..

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯದನ ವಿತರಣೆ, ನೊಂದವರಿಗೆ ಧನಸಹಾಯ ನಿಡುವುದು ಹಾಗೂ ಪ್ರತಿಬಾ ಪುರಸ್ಕಾರ ಕಾರ್ಯಕ್ರಮ ಕೂಡ ಅಂದೇ ನಡೆಯಲಿದೆ.

ಜಿಲ್ಲೆಯ ಕಲಾವಿದರಿಗೆ, ಪ್ರತಿಭೆಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ನಗೆ ಸಾಮ್ರಾಟರು, Voice of Ulthur, Dancing Super Stars ಕಾರ್ಯಕ್ರಮ ಕೂಡ ನಡೆಯಲಿದೆ..

ಹೆಚ್ಷಿನ ವಿವರಗಳು ......
ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ..

Kola 2k17
07/05/2017

Kola 2k17

Address

Thenkabettu, Ulthooru
Kundapur
576231

Website

Alerts

Be the first to know and let us send you an email when ಸಾವಂತರಮನೆ - Savantharamane posts news and promotions. Your email address will not be used for any other purpose, and you can unsubscribe at any time.

Share