Govt. Higher Primary School Bagwady

Govt. Higher Primary School Bagwady This is the page of old students of Govt. Higher Primary School Noojadi, (Bagwady). You can share your opinions and support your school.

ಇಂದಿಗೆ ಬಾಳ ಪಯಣದಲ್ಲಿ ಜೊತೆಯಾಗಿ 30 ಸಂವತ್ಸರಗಳು
02/05/2025

ಇಂದಿಗೆ ಬಾಳ ಪಯಣದಲ್ಲಿ ಜೊತೆಯಾಗಿ 30 ಸಂವತ್ಸರಗಳು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆನೂಜಾಡಿ-2 ಬಗ್ವಾಡಿ  ಇಲ್ಲಿಇಂದು ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ  ಇವರ ಸಹಯೋಗದೊಂದಿಗೆ ಗಾಂಧೀಜಿ ಮತ್ತು ಲಾಲ...
02/10/2023

ಸರಕಾರಿ ಹಿರಿಯ ಪ್ರಾಥಮಿಕ ಶಾಲೆನೂಜಾಡಿ-2 ಬಗ್ವಾಡಿ ಇಲ್ಲಿ
ಇಂದು ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಇವರ ಸಹಯೋಗದೊಂದಿಗೆ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಎಸ್‌ಡಿಎಂಸಿ ಸದಸ್ಯರಾದ ಶ್ರೀ ಗೋಪಾಲ್ ಪೂಜಾರಿ ವಹಿಸಿದ್ದರು. ಹಕ್ಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಗಾಂಧೀಜಿ ಬಗ್ಗೆ ಉಪನ್ಯಾಸ ನೀಡಿದರು .ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಕುಮಾರಿ ನಿಧಿ ಇವಳನ್ನು ಲೈಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಸಭೆಯಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಗಣಪಯ್ಯ ಶೆಟ್ಟಿ ಕಾರ್ಯದರ್ಶಿ ಸಂಜೀವ ಬಿಲ್ಲವ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಜೀವ ಶೆಟ್ಟಿ, ಪಂಚಾಯತ್ ಸದಸ್ಯರಾದ ಅಶೋಕ್ ಪೂಜಾರಿ ,ಹಿರಿಯರಾದ ಸೂಲಿಯಣ್ಣ ಶೆಟ್ಟಿ ,ಯುವಕ ಮಂಡಲದ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ಲಯನ್ಸ್ ಕ್ಲಬ್ ನ ಸದಸ್ಯರು ,ಪೋಷಕರು, ಊರವರು, ಎಸ್ ಡಿ ಎಂ ಸಿ ಸದಸ್ಯರು, ಮಕ್ಕಳು ,ಅಂಗನವಾಡಿ ಕಾರ್ಯಕರ್ತೆ ಸಹಾಯಕಿ,ಶಿಕ್ಷಕವೃಂದ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯನಿ ಶೈಲಜಾ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಸತ್ಯವತಿ ವಂದಿಸಿ, ಶ್ರೀಮತಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ವೇತ ,ಜಯಂತಿ ,ಹರ್ಷಿತ ಸಹಕರಿಸಿದರು.

25/02/2023
15/02/2023
Independence day
27/08/2022

Independence day

Karnataka's first "BUS-SCHOOL" work on progress...
12/02/2022

Karnataka's first "BUS-SCHOOL" work on progress...

12/02/2022

ಆತ್ಮೀಯ ವಿದ್ಯಾಭಿಮಾನಿಗಳೆ
‌ನಮ್ಮ ಶಾಲೆಯಹಳೆವಿದ್ಯಾರ್ಥಿಯೋರ್ವನ ಕೌಶಲ್ಯಕ್ಕೆ ಮೆಚ್ಚಿ‌ ಕರ್ನಾಟಕ ರಾಜ್ಯ ರಸ್ತೆ ‌ಸಾರಿಗೆ ನಿಗಮ ಮಂಡಳಿಯವರು‌‌ ತನ್ನೂರ ಶಾಲೆಗಾಗಿ ಬೇಡಿಕೆ ಇಟ್ಟಿರುವುದನ್ನು ನೋಡಿ‌ಒಂದು ಸ್ಕ್ರ್ಯಾಪ್ ಬಸ್ಸನ್ನು‌ನೀಡಿರುತ್ತಾರೆ. ಇದರಲ್ಲಿ ಕ್ಲಾಸ್ ರೂಮ್ ಮಾಡಿ ರಾಜ್ಯ ದಲ್ಲಿಯೇ ಪ್ರಪ್ರಥಮ ವಾಗಿ ನೀಡುತ್ತಿದ್ದೇವೆ. ಆದಷ್ಟು ಬೇಗ ತರಗತಿಯಾಗಿ ಮಾರ್ಪಡಿಸಿ ಅದನ್ನು ನೋಡಲು ಅಂದಿನ ಸಾರಿಗೆ ಸಚಿವರು ನಾನು ನೋಡಲು ಬರುತ್ತೇನೆ ಎಂದು ಹೇಳಿರುತ್ತಾರೆ.‌ಅದರ ಮಧ್ಯ ದಲ್ಲಿ ಕೋವಿಡ್ ಕಾರಣದಿಂದ ತರಗತಿ ಯಾಗಿ‌ಮಾರ್ಪಡಿಸುವುದು ತುಂಬಾ ವಿಳಂಬವಾಗಿದೆ.ಇದೀಗ‌ಮೊನ್ನೆ ನಡೆದ ಹಳೆವಿದ್ಯಾರ್ಥಿ ಸಂಘ ಮತ್ತು ಎಸ್.ಡಿ.ಎಮ್.ಸಿ. ಜಂಟಿ ಸಭೆಯಲ್ಲಿ ಮಾರ್ಚ್ ಎರಡನೆ ವಾರದ‌ಒಳಗೆ‌ತರಗತಿಯಾಗಿ ಮಾರ್ಪಡಿಸಿ ಉದ್ಘಾಟನೆ ಮಾಡುವ ಎನ್ನುವ ನಿರ್ಣಯ ಕೈಗೊಂಡಿದ್ದಾರೆ. ‌ರಾಜ್ಯದಲ್ಲಿಯೇ‌ ಪ್ರಪ್ರಥಮವಾಗಿ ‌ಉದ್ಘಾಟನೆ‌ಗೊಳ್ಳಲಿರುವ ಈತರಗತಿಯನ್ನು ನೋಡಲು ರಾಜ್ಯದ ಬೇರೆಬೇರೆ‌ಶಾಲೆಯ ಎಸ್.ಡಿ.ಎಮ್.ಸಿ.ಸದಸ್ಯರು‌ವಿದ್ಯಾಭಿಮಾನಿಗಳು
ಕಾತುರರಾಗಿದ್ದಾರೆ ಅದಲ್ಲದೆ ತಮ್ಮೂರ ಶಾಲೆಗೆ ಬಸ್ಸಿಗಾಗಿ ನಿಗಮದ ಮುಂದೆ ಬೇಡಿಕೆ ಇಟ್ಟಿರುತ್ತಾರೆ. ‌ನಿಗಮದ ಅಧಿಕಾರಿಗಳು ನಮಗೆ ಕರೆ ಮಾಡಿ ಮೊದಲು ನೀವು ಮಾಡಿ ಅದನ್ನು ನೋಡಿ ನಾವು ಬೇರೆಯವರಿಗೆ‌ ಹೇಳುತ್ತೇವೆ ಎನ್ನುತ್ತಿದ್ದಾರೆ.ಆದ್ದರಿಂದ ನಾವುಮಾಡುವ ಈ ತರಗತಿ ರಾಜ್ಯ ಮಟ್ಟದಲ್ಲಿ‌ಗುರುತಿಸಲ್ಪಡುವ ಭಾಗ್ಯ ನಮ್ಮೂರಿಗೆ ಬಂದಿದೆ. ಆದ್ದರಿಂದ ನಾವು ಉತ್ತಮ ತರಗತಿಯನ್ನಾಗಿ ಮಾಡಿ ಉದ್ಘಾಟನಾ ‌ಕಾರ್ಯಕ್ರಮ ಮಾಡಬೇಕಾಗಿದೆ.‌ಅದಕ್ಕಾಗಿ ಊರಿನ ಎಲ್ಲಾ ವಿದ್ಯಾಭಿಮಾನಿಗಳು ಶಾಲೆಯ ಹಳೆವಿದ್ಯಾರ್ಥಿಗಳು **ತನುಮನಧನ * ಸಹಕಾರ ನೀಡಿ ಕಾರ್ಯಕ್ರಮ* ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ
*ನಮ್ಮೂರ ಶಾಲೆ ನಮ್ಮೂರ ಹೆಮ್ಮೆ*
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2ಬಗ್ವಾಡಿ

Address

Govt. Higher Primary School Noojadi II (Bagwady)
Kundapur
576233

Website

Alerts

Be the first to know and let us send you an email when Govt. Higher Primary School Bagwady posts news and promotions. Your email address will not be used for any other purpose, and you can unsubscribe at any time.

Share