Namma Muroor ನಮ್ಮ ಮೂರೂರು

Namma Muroor ನಮ್ಮ ಮೂರೂರು social media

27/08/2025
ಮೂರೂರು ಗಣೇಶೋತ್ಸವದ ತಯಾರಿ. ಅನಂತ ಆಚಾರಿ ಮೂರೂರು ರವರಿಂದ ಮೂಡಿಬಂದ ಗಣಪ. ಬನ್ನಿ ಭಾಗವಹಿಸಿ ಪ್ರೊತ್ಸಾಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಿ.
26/08/2025

ಮೂರೂರು ಗಣೇಶೋತ್ಸವದ ತಯಾರಿ.
ಅನಂತ ಆಚಾರಿ ಮೂರೂರು ರವರಿಂದ ಮೂಡಿಬಂದ ಗಣಪ. ಬನ್ನಿ ಭಾಗವಹಿಸಿ ಪ್ರೊತ್ಸಾಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಿ.

ವೇಷ ಕಳಚಿದ ವಿಷ್ಣು ಭಟ್ ಮೂರೂರು.ಯಕ್ಷರಂಗದಲ್ಲಿ ಸ್ತ್ರೀ ವೇಷಕ್ಕೆ ಪ್ರಸಿದ್ದಿ ಪಡೆದು ಅಭಿನಯದಲ್ಲಿ ತಮ್ಮದೆ ಛಾಪು ಮೂಡಿಸಿದ್ದ ವಿಷ್ಣು ಭಟ್ ಮೂರೂ...
08/10/2023

ವೇಷ ಕಳಚಿದ ವಿಷ್ಣು ಭಟ್ ಮೂರೂರು.
ಯಕ್ಷರಂಗದಲ್ಲಿ ಸ್ತ್ರೀ ವೇಷಕ್ಕೆ ಪ್ರಸಿದ್ದಿ ಪಡೆದು ಅಭಿನಯದಲ್ಲಿ ತಮ್ಮದೆ ಛಾಪು ಮೂಡಿಸಿದ್ದ ವಿಷ್ಣು ಭಟ್ ಮೂರೂರು ಇಂದು ನಮ್ಮನ್ನಗಲಿದ್ದಾರೆ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ಆ ದೇವರು ನೀಡಲಿ.

23/09/2023

ಪ್ರಗತಿ ವಿದ್ಯಾಲಯ ಮೂರೂರು ಗಣೇಶೋತ್ಸವ ನಿಮಿತ್ತ ನಡೆದ ಮಕ್ಕಳ ತಾಳಮದ್ದಳೆ ಕಾರ್ಯಕ್ರಮ.

22/09/2023

ಮೂರೂರು ಸಾರ್ವಜನಿಕ ಗಣಪತಿ ವಿಸರ್ಜನೆ.

ಗುರುಭ್ಯೊ ನಮಃ ನಿವೃತ್ತ ಪ್ರಾಂಶುಪಾಲರಾದ ಡಾ||ಮಹೇಶ್ ಅಡಕೋಳಿಯವರು ಬಸ್ ನಿಲ್ದಾಣದಲ್ಲಿ ಅಂಟಿಸಿದ್ದ ಬಿತ್ತಿಪತ್ರವನ್ನು ತೆರವುಗೊಳಿಸಿ ಬಸ್ ನಿಲ್ದ...
16/08/2023

ಗುರುಭ್ಯೊ ನಮಃ
ನಿವೃತ್ತ ಪ್ರಾಂಶುಪಾಲರಾದ ಡಾ||ಮಹೇಶ್ ಅಡಕೋಳಿಯವರು ಬಸ್ ನಿಲ್ದಾಣದಲ್ಲಿ ಅಂಟಿಸಿದ್ದ ಬಿತ್ತಿಪತ್ರವನ್ನು ತೆರವುಗೊಳಿಸಿ ಬಸ್ ನಿಲ್ದಾಣವನ್ನು ಸ್ವಚ್ಚಗೊಳಿಸಿದ್ದಾರೆ ಇವರ ಈ ಕಾರ್ಯ ಸಮಾಜಕ್ಕೊಂದು ಮಾದರಿಯಾಗಬೇಕಿದೆ.
ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿ ಬಿತ್ತಿಪತ್ರ ಅಂಟಿಸುವ, ಗಲೀಜು ಮಾಡುವ ವಿಕೃತಮನಸ್ಸಿನ ಜನರಿಗೆ, ಅಡಕೋಳಿ ಸರ್ ಅವರ ಈ ಕಾರ್ಯ ಒಂದು ಪಾಠವಾಗಬೇಕಾಗಿದೆ. ಸಾವಿರಾರು ಜನ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ವೃತ್ತಿಯಿಂದ ನಿವೃತ್ತಿಯಾದರೂ ತಮ್ಮ ಜೀವನ ಮೌಲ್ಯಗಳಿಂದ ಅಡಕೋಳಿ ಸರ್ ರವರು ಸಮಾಜಮುಖಿ ಕಾರ್ಯದ ಮೂಲಕ ಸಮಾಜಕ್ಕೆ ನೈತಿಕ ಶಿಕ್ಷಣದ ಪಾಠ ಮಾಡುತ್ತಿದ್ದಾರೆ. ಇವರ ಈ ಕಾರ್ಯ ಜನರಿಗೆ ಪ್ರೇರಣೆಯಾಗಬೇಕಾಗಿದೆ. ನಮ್ಮ ಪರಿಸರವನ್ನು, ವಾತಾವರಣವನ್ನು ಉಳಿಸಿ ಬೆಳೆಸಿ ಸ್ವಚ್ಚವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂಬ ಅರಿವು ಮೂಡುವಲ್ಲಿ ಅಡಕೋಳಿ ಸರ್ ರವರ ಈ ನಡೆ ಮಹತ್ವದ್ದಾಗಿದೆ.

ನಮ್ಮ ಊರಿನ ಹೆಮ್ಮೆ.
30/06/2022

ನಮ್ಮ ಊರಿನ ಹೆಮ್ಮೆ.

ಭಾರಿ ಮಳೆಗೆ ಅಘನಾಶಿನಿ ನದಿ ತುಂಬಿ ಹರಿಯುತ್ತಿದ್ದು ಮೂರೂರು ಸೇರಿದಂತೆ ಹಲವು ಊರುಗಳು ಜಲಾವೃತಗೊಂಡಿದೆ. ಹಲವು ಮನೆಗಳಿಗೆ, ತೋಟ ಗದ್ದೆಗಳಿಗೆ ನೀರ...
23/07/2021

ಭಾರಿ ಮಳೆಗೆ ಅಘನಾಶಿನಿ ನದಿ ತುಂಬಿ ಹರಿಯುತ್ತಿದ್ದು ಮೂರೂರು ಸೇರಿದಂತೆ ಹಲವು ಊರುಗಳು ಜಲಾವೃತಗೊಂಡಿದೆ. ಹಲವು ಮನೆಗಳಿಗೆ, ತೋಟ ಗದ್ದೆಗಳಿಗೆ ನೀರು ತುಂಬಿ ಅಪಾರ ಹಾನಿಯುಂಟಾಗುದೆ, ಜನಜೀವನ ಅಸ್ಥವ್ಯಸ್ಥವಾಗಿದೆ.. ಕರ್ಕಿಮಕ್ಕಿ, ಬೊಗ್ರಿಬೈಲ್ ರಸ್ತೆ ಸಂಪರ್ಕ ಕಡಿತಗೊಂಡಿದೆ.

ರಾಮ ನಿಧಿ ಸಮರ್ಪಣಾ ಅಭಿಯಾನ. ರಾಷ್ಟ್ರೀಯ ಸ್ವಯಂ ಸೇವಕ ಸಂಘಅಯೋಧ್ಯಾ ರಾಮ ಮಂದಿರ ನಿರ್ಮಾಣ ನಿಮಿತ್ತ ಜನವರಿ ೧೫ ರಿಂದ ಫೆಬ್ರವರಿ ೫ ರ ವರೆಗೆ ರಾಮ ...
01/01/2021

ರಾಮ ನಿಧಿ ಸಮರ್ಪಣಾ ಅಭಿಯಾನ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ
ಅಯೋಧ್ಯಾ ರಾಮ ಮಂದಿರ ನಿರ್ಮಾಣ ನಿಮಿತ್ತ ಜನವರಿ ೧೫ ರಿಂದ ಫೆಬ್ರವರಿ ೫ ರ ವರೆಗೆ ರಾಮ ನಿಧಿ ಸಮರ್ಪಣಾ ಅಭಿಯಾನವನ್ನು ಹಮ್ಮಿಕೊಂಡಿದೆ. ದೇಶದಾದ್ಯಂತ ನಡೆಯುವ ಅಭಿಯಾನದಲ್ಲಿ ಪ್ರತಿ ಹಿಂದುಗಳು ಭಾಗಿಯಾಗಿ ರಾಮ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸೋಣ.
ಇಂದು ಕೋಣಾರೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಬೈಟಕ್ ನಲ್ಲಿ ರಾಮ ಭಜನೆ, ರಾಮ ಪೂಜೆ ಕೈಗೊಂಡು ಅಭಿಯಾನದ ಬಗ್ಗೆ ಚರ್ಚಿಸಲಾಯಿತು.

Muroora muttugalu - 1ಮೂರೂರು ದೇವರು ಹೆಗಡೆಯವರೆಂದರೆ ಅವರೊಬ್ಬ ಯಕ್ಷಗಾನದ ಮನೆಮಾತಾದ ಅಪರೂಪದ ಕಲಾವಿದ. ನನ್ನ ಮನೆ ಅವರ ಮನೆ ಬಹಳ ಸಮೀಪ. ಅವರು...
24/12/2020

Muroora muttugalu - 1

ಮೂರೂರು ದೇವರು ಹೆಗಡೆಯವರೆಂದರೆ ಅವರೊಬ್ಬ ಯಕ್ಷಗಾನದ ಮನೆಮಾತಾದ ಅಪರೂಪದ ಕಲಾವಿದ. ನನ್ನ ಮನೆ ಅವರ ಮನೆ ಬಹಳ ಸಮೀಪ. ಅವರು ವಯಸ್ಸಿನಲ್ಲಿ ನನಗಿಂತ ಐವತ್ತು ವರ್ಷಕ್ಕಿಂತ ಹಿರಿಯರು. ಅವರನ್ನು ನಾವೆಲ್ಲ, ಅಂದರೆ ಇಡೀ ಊರವರೇ ಪ್ರೀತಿಯಿಂದ ಕರೆಯುವುದು ದೇವಣ್ಣ ಎಂದು. ದೇವಣ್ಣನ ದೇಹ ಸೌಂದರ್ಯ ಅಪರೂಪದ್ದು. ಆರು ಅಡಿಗೂ ಮೀರಿದ ಆಜಾನಬಾಹು. ಸಾಯಿಬಾಬಾರ ತಲೆಕೂದಲನ್ನು ಹೋಲುವ ತಲೆ ಕೂದಲು. ಆ ಕೂದಲು ಬಿಚ್ಚಿಕೊಂಡು ಬಿಳಿ ಜುಬ್ಬˌ ಬಿಳಿ ಮುಂಡು ಇಳಿ ಬಿಟ್ಟು ನಿಂತರೆ ಬಹಳ ಆಕರ್ಷಕ.
ಹಾಗಾಗಿಯೇ ದೇವಣ್ಣ ವೇಷ ಕಟ್ಟಿದರಂತೂ ಚೆಂದˌ ಕಟ್ಟದಿದ್ದರೆ ಇನ್ನೂ ಚೆಂದ. ಗಂಭೀರ ವ್ಯಕ್ತಿತ್ವ, ಆದರೆ ತುಂಬಾ ತುಂಬಾ ಸರಳ ಸಜ್ಜನ. ಯಾವುದೇ ದುಶ್ಚಟ ಅಂಟಿಸಿಕೊಂಡವರಲ್ಲ, ಸಂಧ್ಯಾವಂದನೆˌ ಅನುಷ್ಠಾನವನ್ನು ಎಂದೂ ಬಿಟ್ಟವರಲ್ಲ. ಹಲವಾರು ಆದರ್ಶ ಗುಣಗಳಿಂದಲೇ ಹೆಸರು ದೇವರು ಹೆಗಡೆಯಾದರೂ ಹಲವರು ಅವರನ್ನು ನಡೆದಾಡುವ ದೇವರು ಎಂದು ಕರೆದದ್ದೂ ಇದೆ. ಅಪ್ರತಿಮ ಕಲಾವಿದರಾಗಿದ್ದರಿಂದ ಪರ ಊರಲ್ಲಿ ದೇವಣ್ಣನಿಗೆ ಗೌರವ ಸಹಜ. ಆದರೆ, ದೇವಣ್ಣನ ಬಗೆಗೆ ಊರಲ್ಲಿಯೂ ಒಂದೇ ಒಂದು ಅಪಸ್ವರವಿರಲಿಲ್ಲ.
ನಾನು ಅವರ ವೇಷ ನೋಡಿ ತಿಳಿಯುವ ಹೊತ್ತಿಗೆ ಅವರು ವೇಷ ಬಿಡುವ ವಯಸ್ಸಿನಲ್ಲಿದ್ದರು. ಅವರು ನಿರ್ವಹಿಸಿದ ಕಂಸನನ್ನು ಕಂಡರೆ ಎಲ್ಲಿ ವಸುದೇವನನ್ನು ಕೊಂದೇ ಬಿಡುತ್ತಾರೋ ಅನಿಸುತ್ತಿತ್ತು. ಒಮ್ಮೆ ಕಮಿಶನರ್ ಒಬ್ಬರನ್ನು ಆಟಕ್ಕೆ ಆಹ್ವಾನಿಸಿದ್ದರಂತೆ. ಇದೇ ಸನ್ನಿವೇಶದಲ್ಲಿ ಕಮಿಶನರ್ ಸಾಹೇಬರು ಉದ್ವೇಗದಿಂದ, ಭಯದಿಂದ ಎದ್ದು ನಿಂತು stop it ಅಂತ ಹೇಳಿ, ಕೊನೆಗೆ ಇದು ಅಭಿನಯ ಮಾತ್ರ ಅಂತ ಸಮಾಧಾನಪಡಿಸಬೇಕಾಯಿತಂತೆ. ಅಂತಹ ದೈತ್ಯ ವೇಷ. ಕಣ್ಣಿನ ಚಲನೆ, ಅದಕ್ಕೆ ಪೂರಕವಾದ ಆಂಗಿಕ ಅಭಿನಯ. ಅವರ ಪ್ರತಿ ಪಾತ್ರವೂ ಬೇರೆ ಬೇರೆ ಅನುಭವವನ್ನು ಕೊಡುತ್ತಿತ್ತು.
ಅವರ ರಾವಣˌಕುಂಭಕರ್ಣˌಶಕುನಿˌಶನಿˌದುಷ್ಟಬುದ್ಧಿˌ ನಳˌ ಅಕ್ರೂರˌ ಬಲರಾಮˌ ಹನೂಮಂತˌ ಇಂದ್ರಜಿತು ಮೊದಲಾದ ಪಾತ್ರಗಳು ಪೌರಾಣಿಕ ಕಾಲದಲ್ಲಿ ಪಾತ್ರಗಳು ಹೀಗೆಯೇ ಇದ್ದಿರಬಹುದೆಂದು ಭಾವಿಸುವಷ್ಟು ಪ್ರಭಾವಿ ಆಗಿರುತ್ತಿತ್ತು ಎಂದು ಹೇಳುವುದನ್ನು ಕೇಳಿ ಬಲ್ಲೆ. ರಂಗದಲ್ಲಿ ಅವರ ಒಂದೇ ವೇಷವಿರುವಾಗಲೂ ರಂಗ ತುಂಬಿ ಕಾಣುತ್ತಿತ್ತು.
ಧರ್ಮಸ್ಥಳ ಮೇಳದಲ್ಲಿರುವಾಗ ಅವರ ಅಣ್ಣಪ್ಪ ಭೂತˌಸಾಲಿಗ್ರಾಮ ಮೇಳದಲ್ಲಿರುವಾಗ ಮೈತ್ರೇಯ ಭಟ್ಟ ಇವಂತು ಇನ್ನೂ ನೂರು ವರ್ಷ ಕಳೆದರೂ ಅಂತಹ ಭಾವಪರವಶತೆಗೆ ಯಾವ ಕಲಾವಿದರೂ ತಲುಪಲಾರರು. ಕುರಿಯ ವಿಠಲ ಶಾಸ್ರ್ತಿಯವರಿಗೆ ಅನಾರೋಗ್ಯವಾದಾಗ ತನ್ನ ಸ್ಥಾನಕ್ಕೆ ದೇವರು ಹೆಗಡೆಯವರನ್ನೇ ಕರೆಸಬೇಕೆಂದು ಆಗ್ರಹಿಸಿ ಕರೆಸಿಕೊಂಡಿದ್ದರಂತೆ.
ದೇವಣ್ಣ ತನ್ನ ಪಾತ್ರದ ಸಿದ್ಧತೆಗೆ ಓದಿ ಸಿದ್ಧಪಡಿಸಿಕೊಳ್ಳುತ್ತಿದ್ದರು. ನಾನು ಬಾಲ್ಯದಲ್ಲಿ ಅವರ ಮನೆಯ ಶೆಲ್ಪನಲ್ಲಿ ಪುಸ್ತಕಗಳು ತುಂಬಿದ್ದನ್ನು ನೋಡಿದ್ದೆನೆ. ಬಹುತೇಕ ನಾನು ಹೋದಾಗಲೆಲ್ಲ ಅವರು ಏನನ್ನಾದರೂ ಓದುತ್ತಿದ್ದ ದೃಶ್ಯವೇ ನನ್ನ ಕಣ್ಣು ಮುಂದೆ ಈಗಲೂ ಬರುತ್ತದೆ. ಉಪ್ಪರಿಗೆಯ ಮೇಲೆ ಸ್ಟ್ಯಾಂಡಿಗೆ ಜೋಡಿಸಿಟ್ಟ ಐದಡಿ ಎತ್ತರದ ಕನ್ನಡಿ ಇಟ್ಟುಕೊಂಡು ಅದರ ಮುಂದೆ ನಿಂತು ಹಲವು ಸಲ ಅಭಿನಯಿಸಿ ನೋಡಿಕೊಳ್ಳುತ್ತಿದ್ದರು. ಬಹುಷಃ ಇಂತಹ ತಯಾರಿಯನ್ನು ಹೆಚ್ಚಿನ ಕಲಾವಿದರು ಮಾಡುತ್ತಿಲ್ಲ. ಅವರ ಮನೆ ಸದಾ ಮಕ್ಕಳು, ದೊಡ್ಡವರು ಅಂತ ತುಂಬಿ ತುಳುಕುತ್ತಿತ್ತು. ಅನೇಕ ಮಹಾನ್ ಕಲಾವಿದರನ್ನು ಅಲ್ಲೇ ನಾನು ವೇಷವಿಲ್ಲದ ಬಿಡು ಮಯ್ಯಲ್ಲಿ ನೋಡಿದ್ದು. ಕೆರೆಮನೆ ಶಂಭು ಹೆಗಡೆˌ ಮಹಾಬಲ ಹೆಗಡೆˌಚಿಟ್ಟಾಣಿˌ ಹಿರಿಯ ಕೊಂಡದಕುಳಿ ಸಹೋದರರುˌಕರ್ಕಿಯ ಹೆಚ್ಚಿನ ಕಲಾವಿದರಲ್ಲದೆˌ ಸಾಹಿತ್ಯ ಲೋಕದ ಗೌರೀಶ ಕಾಯ್ಕಿಣಿˌ ಜಯಂತ ಕಾಯ್ಕಿಣಿ ಅಲ್ಲದೇ ಭಾಗವತೋತ್ತಮರುಗಳಾದ ಮರಿಯಪ್ಪ ಆಚಾರ್ˌ ಕಡತೋಕ ಮಂಜ ಭಾಗವತರುˌ ಕೃಷ್ಣ ಭಾಗವತರನ್ನು ಅವರನ್ನು ಕಣ್ಣಾರೆ ಕಂಡಿದ್ದೇನೆ.
ದೇವಣ್ಣ ಚೆನ್ನಾಗಿ ಕೊಳಲು ನುಡಿಸುತ್ತಿದ್ದರು. ಜ್ಯೋತಿಷ್ಯವನ್ನು ಶಾಸ್ತ್ರೀಯವಾಗಿ ಕಲಿತು, ಬಂದ ನೂರಾರು ಮಂದಿಗೆ ಹಣ ಪಡೆಯದೆ ಭವಿಷ್ಯ ನುಡಿದು ಸಮಾಧಾನಿಸುತ್ತಿದ್ದರು. ನನ್ನ ದೊಡ್ಡಪ್ಪ ಗಜಾನನ ವರ್ಧನ್ ಆವೆ ಮಣ್ಣಿನ ಗಣಪತಿ ಬೊಂಬೆಯನ್ನು ವರ್ಷಕ್ಕೆ ಐವತ್ತಕ್ಕೂ ಜಾಸ್ತಿ ಮೆತ್ತುತ್ತಿದ್ದರು. ಆಗೆಲ್ಲ ದೇವಣ್ಣ ದಿನವೂ ಬಂದು ತಾವೂ ಬೊಂಬೆ ಮೆತ್ತಲು ರೂಢಿ ಮಾಡಿಕೊಂಡಿದ್ದರು. ಇವರಿಗೆ ಸಂಗೀತದ ಗೀಳು ಇತ್ತು. ತುಂಬಾ ಹಾಸ್ಯ ಪ್ರಜ್ಞೆ ಇತ್ತು. ಇತರರ ಮಾತನ್ನು ತಾಳ್ಮೆಯಿಂದ ಆಲಿಸುತ್ತಿದ್ದರು. ಇವರಲ್ಲಿ ಒಂದು ಸಾಂತ್ವನದ ಮಾತು ಯಾವಾಗಲೂ ಇರುತ್ತಿತ್ತು. ಅಸಾಧ್ಯ ಪ್ರತ್ಯುತ್ಪನ್ನ ಮತಿ ಇವರಲ್ಲಿತ್ತು.
ದೇವಣ್ಣ ಓದಿದ್ದು ಕೇವಲ ನಾಲ್ಕನೆಯ ತರಗತಿಯವರೆಗೆ. ಆದರೆ ಪ್ರಯತ್ನಪಟ್ಟು ಹಿಂದಿ ಓದಿ ಅರ್ಥ ಮಾಡಲು ಕಲಿತುˌಗೋರಖಪುರದವರ ಹಿಂದಿ ರಾಮಾಯಣ ಮಹಾಭಾರತ ಭಾಗವತ ಗಳನ್ನು ಓದಿಕೊಂಡಿದ್ದರು. ಸಂಸ್ಕ್ರತವನ್ನು ಕಲಿತು ಜ್ಯೋತಿಷ್ಯ ಕಲಿತದ್ದೂ ಒಂದು ಸಾಧನೆಯೇ ಹೌದು. ಅತ್ಯುತ್ತಮ ಸಂಘಟನಾಶಕ್ತಿ ಉಳ್ಳವರಾಗಿದ್ದರು. ಉತ್ತಮ ಕೃಷಿಕರು ಕೂಡಾ.
ನಮ್ಮ ದೇವಣ್ಣನ ಯಾವುದೇ ಪಾತ್ರದ್ದೂ ವಿಡಿಯೋ ಇಲ್ಲ. ಆ ಕಾಲದಲ್ಲಿ ಅದನ್ನು ಮಾಡುವ ವ್ಯವಸ್ಥೆಯೂ ಇರಲಿಲ್ಲ. ಇದ್ದಿದ್ದರೆ ಅವರ ಪಾತ್ರದ ಕಲ್ಪನೆಯನ್ನಾದರೂ ಈ ಕಾಲದವರು ನೋಡುವ ಅವಕಾಶ ಒದಗುತ್ತಿತ್ತು. ಅವರು ಅಭಿನಯವನ್ನು ಅಭಿನಯಿಸದೆ ಪಾತ್ರವನ್ನು ಅಭಿನಯಿಸುತ್ತಿದ್ದರು. ಬದುಕಿದ್ದರೆ ಈ ವರ್ಷ ಅವರ ಶತಮಾನೋತ್ಸವ ಆಗಬೇಕಿತ್ತು. ಅಂತಹ ಪುಣ್ಯಾತ್ಮರನ್ನು ಯಕ್ಷಕುಲದವರು ಸದಾ ನೆನಪಿಡಲೇ ಬೇಕಿದೆ. ಮಹಾವಿಷ್ಣು ಯಕ್ಷಗಾನ ಮಂಡಳಿ ಕೋಣಾರೆ ಎಂಬ ಮೇಳವೊಂದನ್ನು ಕಟ್ಟಿ ಹಲವು ವರ್ಷಗಳ ಕಾಲ ನಡೆಸಿದ್ದರು ದೇವಣ್ಣ. ಮುರೂರಿನಲ್ಲಿ ಯಕ್ಷಗಾನ ಶಾಲೆ ಪ್ರಾರಂಭಿಸಿ ಹಲವಾರು ಉತ್ತಮ ಪ್ರೇಕ್ಷಕರನ್ನು ಇನ್ನು ವೃತ್ತಿ ಮೇಳದಲ್ಲಿರುವ ಹಲವಾರು ಹಿಮ್ಮೇಳ-ಮುಮ್ಮೇಳ ಕಲಾವಿದರನ್ನು ರಂಗಕ್ಕೆ ನೀಡಿದ್ದಾರೆ. ದೈತ್ಯ ಪ್ರತಿಭೆ ದೇವಣ್ಣ ಬಗ್ಗೆ ನನ್ನ ಅಳವಿಗೆ ನಿಲುಕುವುಷ್ಟು ಬರೆದಿದ್ದೇನೆ.

ಪ್ರಶಾಂತ್ ಹೆಗಡೆ ವರ್ಧನ್.

Address

Muroor
Kumta
581362

Website

Alerts

Be the first to know and let us send you an email when Namma Muroor ನಮ್ಮ ಮೂರೂರು posts news and promotions. Your email address will not be used for any other purpose, and you can unsubscribe at any time.

Share

Category