Namma Saaligrama - ನಮ್ಮ ಸಾಲಿಗ್ರಾಮ

Namma  Saaligrama - ನಮ್ಮ ಸಾಲಿಗ್ರಾಮ Contact information, map and directions, contact form, opening hours, services, ratings, photos, videos and announcements from Namma Saaligrama - ನಮ್ಮ ಸಾಲಿಗ್ರಾಮ, Landmark & historical place, Krishnarajanagara.

ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ದಿ ಬರುವ ಅನುಧಾನ ಎಲ್ಲಿಗೆ ಹೋಗುತ್ತಿದೆ ಎಂಬುಕ್ಕೆ ಪ್ರಶ್ನೆಗೆ ಉತ್ತರವಿಲ್ಲ‌  ಮೈಸ...
06/03/2024

ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ದಿ ಬರುವ ಅನುಧಾನ ಎಲ್ಲಿಗೆ ಹೋಗುತ್ತಿದೆ ಎಂಬುಕ್ಕೆ ಪ್ರಶ್ನೆಗೆ ಉತ್ತರವಿಲ್ಲ‌ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗಮಂಟದ ಕೆಳಗೆ ಮಕ್ಕಳು ಕೊಠಡಿ ಸಮಸ್ಯೆ ಯಿಂದ ಪಾಠ ಕೇಳುವ ವ್ಯವಸ್ಥೆಗೆ ಶಿಕ್ಷಣ ಇಲಾಖೆಯು ಉತ್ತರಿಸ ಬೇಕಿದೆ

*ಚುಂಚನಕಟ್ಟೆ ಜಾತ್ರಾ ಮಹೋತ್ಸವ ಹಾಗೂ ರಾಸುಗಳ ಜಾತ್ರೆಯ ಉದ್ಘಾಟನೆ*ಇಂದಿನಿಂದ ಪ್ರಾರಂಭವಾಗುವ ಚುಂಚನಕಟ್ಟೆ  ಜಾತ್ರೆಗೆ ಇಂದು  ಸಮಯ ಬೆಳಿಗ್ಗೆ  1...
01/01/2024

*ಚುಂಚನಕಟ್ಟೆ ಜಾತ್ರಾ ಮಹೋತ್ಸವ ಹಾಗೂ ರಾಸುಗಳ ಜಾತ್ರೆಯ ಉದ್ಘಾಟನೆ*

ಇಂದಿನಿಂದ ಪ್ರಾರಂಭವಾಗುವ ಚುಂಚನಕಟ್ಟೆ ಜಾತ್ರೆಗೆ ಇಂದು ಸಮಯ ಬೆಳಿಗ್ಗೆ 11:30 ಮಾನ್ಯ ಶಾಸಕರಾದ *ಸನ್ಮಾನ್ಯ ಶ್ರೀ ಡಿ.ರವಿಶಂಕರ್ ರವರು* ಚಾಲನೆ ನೀಡಲಿದ್ದಾರೆ .

ತಾಲ್ಲೂಕಿನ ಎಲ್ಲಾ ಹಂತದ ಜನಪ್ರತಿನಿಧಿಗಳು ,ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ವಿಧಾನಸಭಾ ಕ್ಷೇತ್ರದ ಎಲ್ಲಾ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಯಸಶ್ವಿಗೊಳಿಸಬೇಕಾಗಿ ಕೋರಿದೆ.

ನಮ್ಮೂರ ಚುಂಚನಕಟ್ಟೆ ಸೇತುವೆ ಮೇಲೆ ಕೋತಿಗಳ ರಕ್ಷಣೆಗೆ ಹಾಕಿದ ಸೃಜನಶೀಲ ಸೂಚನ ಪಲಕ (Sign Board)ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕು ವ್ಯಾಪ...
02/06/2023

ನಮ್ಮೂರ ಚುಂಚನಕಟ್ಟೆ ಸೇತುವೆ ಮೇಲೆ ಕೋತಿಗಳ ರಕ್ಷಣೆಗೆ ಹಾಕಿದ ಸೃಜನಶೀಲ ಸೂಚನ ಪಲಕ (Sign Board)

ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕು ವ್ಯಾಪ್ತಿಯ ಚುಂಚನಕಟ್ಟೆ ನಮ್ಮ ಭಾಗದ ಪ್ರಮುಖ ಪ್ರೇಕ್ಷಣೀಯ ಸ್ಥಳ. ಇಲ್ಲಿನ ಕೋದಂಡರಾಮ ದೇವಾಲಯ, ಪ್ರತಿವರ್ಷ ಅಲ್ಲಿನ ನಡೆಯುವ ದನಗಳ ಜಾತ್ರೆ, ಜಾನುವಾರು ಸಂತೆ, ರಥೋತ್ಸವ, ಕಾವೇರಿ ನದಿ, ಜಲಪಾತ, ಸಕ್ಕರೆ ಕಾರ್ಖಾನೆ, ಕಿರು ವಿದ್ಯುತ್ ಉತ್ಪಾದನಾ ಘಟಕ ಮುಂತಾದವು ಈ ಪುಟ್ಟ ಗ್ರಾಮವನ್ನು ಪ್ರೇಕ್ಷಣೀಯ ತಾಣ ಮತ್ತು ಪ್ರಮುಖ ವ್ಯಾವಹಾರಿಕ ಕೇಂದ್ರವಾಗಿಸಿವೆ.

ನಮ್ಮೂರ ಭಾಗದಲ್ಲಿ ಎಲ್ಲೂ ಹೆಚ್ಚಾಗಿ ಕಾಣಸಿಗದ ಕೆಂಪು ಕೋತಿಗಳು ಇಲ್ಲಿ ಮಾತ್ರ ಕಾಣಸಿಗುತ್ತವೆ. ಹಿಂದಿನ ದಿನಗಳಿಗೆ ಹೋಲಿಸಿದೇ ಇತ್ತೀಚಿನ ಇಲ್ಲಿ ಇವುಗಳ ಸಂತತಿ ತೀರಾ ಕಡಿಮೆ ಇದ್ದರು ಅಲ್ಪಸ್ವಲ್ಪ ಉಳಿದಿವೆ. ಇನ್ನು ಚುಂಚನಕಟ್ಟೆಯಿಂದ ಸಾಲಿಗ್ರಾಮಕ್ಕೆ ಸಂಪರ್ಕ ಕಲ್ಪಿಸುವ, ಕಾವೇರಿ ನದಿ ಮೇಲಿನ ಈ ಸೇತುವೆ, ಹಾಸನ ಜಿಲ್ಲೆಯ ಕೊಣನೂರು, ರಾಮನಾಥಪುರ - ಮೈಸೂರು ನಗರಕ್ಕೆ ಇರುವ ಅತಿ ಪ್ರಮುಖ ಮಾರ್ಗ ಕೂಡ. ಈ ಸೇತುವೆ 1950 ರ ದಶಕದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ರವರಿಂದ ಉದ್ಘಾಟನೆಯಾಗಿದೆ. ಈ ಸೇತುವೆ ಮೇಲೆ ‌ನದಿ ನೋಡಲು ಇಳಿಯುವ ಪ್ರವಾಸಿಗರು ತಮ್ಮ ಪುಣ್ಯ ಹೆಚ್ಚಲಿ ಎನ್ನುವ ಉದ್ದೇಶಕ್ಕೆ ಎನ್ನುವಂತೆ ಆಗಾಗ್ಗೆ ಆಹಾರ ನೀಡುವ ಕಾರಣದಿಂದಲೇನೋ ಇಲ್ಲಿ ಕೋತಿಗಳ ಸಂಖ್ಯೆ ಇತರೆಡೆಗಿಂತ ಹೆಚ್ಚಾಗಿ ಅವುಗಳು ರಸ್ತೆ ಅಪಘಾತಕ್ಕೆ ತುತ್ತಾಗುವ ಪ್ರಕರಣಗಳು ಕೂಡ ಹೆಚ್ಚಾಗಿವೆ. ಆ ಕಾರಣಕ್ಕೆ ಕೋತಿಗಳ ಮೇಲೆ ಕಾಳಜಿ ಹೊಂದಿದ ಯಾರೋ ಪುಣ್ಯಾತ್ಮರು ಈ ಸೂಚನ ಫಲಕವನ್ನು ಸೃಜನಾತ್ಮಕ ಬರಹದೊಂದಿಗೆ ಇಲ್ಲಿ ಅಳವಡಿಸಿದ್ದಾರೆ.

~ ಸಂಜಯ್ ಹೊಯ್ಸಳ

ಸಾಲಿಗ್ರಾಮ ತಾಲ್ಲೂಕು ಜನತೆಯ ಪರವಾಗಿ ಶಾಸಕಾರಾಗಿ ಆಯ್ಕೆಯಾದ ಶ್ರೀ D.Ravishankar MLA ಅವರಿಗೆ ಶುಭಾಶಯಗಳು.
27/05/2023

ಸಾಲಿಗ್ರಾಮ ತಾಲ್ಲೂಕು ಜನತೆಯ ಪರವಾಗಿ ಶಾಸಕಾರಾಗಿ ಆಯ್ಕೆಯಾದ ಶ್ರೀ D.Ravishankar MLA ಅವರಿಗೆ ಶುಭಾಶಯಗಳು.

24/03/2022

ಮೈಸೂರು ಸಂಸ್ಥಾನದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ.

Yaduveer Krishnadatta Chamaraja Wadiyar

20/02/2022
14/02/2022

ಪೊಲೀಸ್ ಪ್ರಕಟಣೆ

29/12/2021

ಜನವರಿ 1 ರಿಂದ ಸಾಲಿಗ್ರಾಮ ತಾಲ್ಲೂಕು ಕೇಂದ್ರ ತನ್ನ ಆಡಳಿತವನ್ನು ಪ್ರಾರಂಭಿಸುತ್ತದೆ.

ಸಾಲಿಗ್ರಾಮ ತಾಲೂಕಿನ ತಹಶೀಲ್ದಾರ್ ಆಗಿ ಮೋಹನ್ ಕುಮಾರ್ ಮುಂಬಡ್ತಿ ಅವರಿಗೆ ಸಾಲಿಗ್ರಾಮ ತಾಲೂಕಿನ ಜನತೆಯ ಪರವಾಗಿ ಶುಭಾಶಯಗಳು.
25/12/2021

ಸಾಲಿಗ್ರಾಮ ತಾಲೂಕಿನ ತಹಶೀಲ್ದಾರ್ ಆಗಿ ಮೋಹನ್ ಕುಮಾರ್ ಮುಂಬಡ್ತಿ ಅವರಿಗೆ ಸಾಲಿಗ್ರಾಮ ತಾಲೂಕಿನ ಜನತೆಯ ಪರವಾಗಿ ಶುಭಾಶಯಗಳು.

15/12/2021

ಕೇಂದ್ರದ ಹಾಗೂ ರಾಜ್ಯದ ಆಹಾರ ಸರಿಯಾದ ಪ್ರಮಾಣದಲ್ಲಿ ವಿತರಿಸಲು ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ವಿನಂತಿ 🙏 ಶೇರ್ ಮಾಡಿ 💯

Address

Krishnarajanagara
571604

Website

Alerts

Be the first to know and let us send you an email when Namma Saaligrama - ನಮ್ಮ ಸಾಲಿಗ್ರಾಮ posts news and promotions. Your email address will not be used for any other purpose, and you can unsubscribe at any time.

Share