13/05/2026
ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷರಾದ ಹೆಚ್ ಡಿ ದೇವೇಗೌಡ ಅವರ ಜನ್ಮ ದಿನಾಚರಣೆ ಹಾಗೂ ಪಕ್ಷದ ರಜತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಜನತಾ ಪ್ರೇಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಬೆಂಗಳೂರಿನ ಮಾದಾವರದ ನೈಸ್ ಗ್ರೌಂಡ್ ನಲ್ಲಿ ಇದೇ 15, 16 ಹಾಗೂ17ರಂದು ಆಯೋಜಿಸಲಾಗಿದೆ. ಒಟ್ಟು 26 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ.
ಒಟ್ಟು 15 ಆಟಗಾರರನ್ನು ಒಳಗೊಂಡ ತಂಡ ಕೊಪ್ಪಳ ಜಿಲ್ಲಾ ಜೆಡಿಎಸ್ ಘಟಕವನ್ನು ಪ್ರತಿನಿಧಿಸುತ್ತಿದೆ. ಜಿಲ್ಲೆಯ ಕ್ರೀಡಾ ಘಟಕದ ಅಧ್ಯಕ್ಷರಾದ ಸೈಯದ್ ಮಹೇಮೂದ್ ಹುಸೇನಿ ಬಲ್ಲೆ ಅಂಜನಾದ್ರಿ ಫೈಟರ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಪಕ್ಷದ ಸಾಮಾಜಿಕ ಜಾಲತಾಣ ವಿಭಾಗ ಹಾಗೂ ಯುವ ಘಟಕಗಳು ಜಂಟಿಯಾಗಿ ಪಂದ್ಯಾವಳಿಯನ್ನು ಆಯೋಜಿಸಿವೆ. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಬುಧವಾರ ಪಕ್ಷದ ಜಿಲ್ಲಾ ಕಛೇರಿಯಲ್ಲಿ ನಡೆದ ಕೊಪ್ಪಳ ಜಿಲ್ಲೆಯ ಜೆಡಿಎಸ್ ತಂಡ 'ಅಂಜನಾದ್ರಿ ಫೈಟರ್ಸ್' ಜರ್ಸಿ ಅನಾವರಣ ಕಾರ್ಯಕ್ರಮ ಜರುಗಿತು.
ಪಂದ್ಯಾವಳಿಯಲ್ಲಿ ಗೆದ್ದು ಕೊಪ್ಪಳದ ಅಂಜನಾದ್ರಿ ಫೈಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂದು ಹಾರೈಸಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ್ ಭೂಮರಡ್ಡಿ, ಜಿಲ್ಲಾ ಅಲ್ಪಸಂಖ್ಯಾತ ಅಧ್ಯಕ್ಷ ಸಿರಾಜ್ ಅಹಮದ್, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ನಗರ ಘಟಕ ಅಲ್ಪಸಂಖ್ಯಾತ ಅಧ್ಯಕ್ಷ ಸಿರಾಜ್ ಕೋಲ್ಕಾರ್, ತಾಲೂಕು ಎಸ್ ಸಿ ಘಟಕದ ಅಧ್ಯಕ್ಷ ಸುರೇಶ ದದೇಗಲ್, ತಾಲೂಕು ಎಸ್ ಟಿ ಘಟಕದ ಅಧ್ಯಕ್ಷ ಮಲ್ಲಪ್ಪ ಹಂದ್ರಾಳ, ಜಿಲ್ಲಾ ಖಜಾಂಚಿ ಮೌನೇಶ್ ಕಿನ್ನಾಳ, ದ್ಯಾಮಣ್ಣ ಕಲಕೇರಿ, ಮುತ್ತಣ್ಣ ಕಲಕೇರಿ, ರೋಹಿತ್ ಹಣವಾಳ, ಕಲಿಲ್ ಮಾನ್ವಿ ಹಾಗೂ ಇತರರು ಉಪಸ್ಥಿತರಿದ್ದರು.
ಅಂಜನಾದ್ರಿ ಫೈಟರ್ಸ್ ತಂಡದ ಆಟಗಾರರು: ಸೈಯದ್ ಮಹೇಮೂದ್ ಹುಸೇನಿ ಬಲ್ಲೆ ( ನಾಯಕ), ಸುರೇಶ್ ಚೌಹಾಣ್, ಮಹೇಶ್ ಲಮಾಣಿ, ಸೋಮನಗೌಡ ಬಿ ಎಚ್, ಪ್ರಹ್ಲಾದ್ ಕೆ, ವಿಷ್ಣು ಆರ್ ಸದ್ದಾಂ ಹುಸೇನ್, ಕಾಳಜ್ಜ ಸಾಗರ್, ಸಾಧಿಕ್, ಯುವರಾಜ್ ಸೈಯದ್ ಶಂಸುದ್ದೀನ್, ಖಲೀಲ್ ಮಾನ್ವಿ, ಹುಸೇನಿ ಹಾಗೂ ಉಮರ್ ಫಾರೂಕ್.
ನಿಮ್ಮ ಸಿವಿಸಿ