KRS Party Mulbagilu - ಕೆ ಆರ್ ಎಸ್ ಮುಳುಬಾಗಿಳು

  • Home
  • India
  • Kolar
  • KRS Party Mulbagilu - ಕೆ ಆರ್ ಎಸ್ ಮುಳುಬಾಗಿಳು

KRS Party Mulbagilu -  ಕೆ ಆರ್ ಎಸ್ ಮುಳುಬಾಗಿಳು Contact information, map and directions, contact form, opening hours, services, ratings, photos, videos and announcements from KRS Party Mulbagilu - ಕೆ ಆರ್ ಎಸ್ ಮುಳುಬಾಗಿಳು, Political Party, Kolar.

17/10/2023
ಇವತ್ತಿನ ದಿನಮಾನಗಳಲ್ಲಿ, ನ್ಯಾಯಾಕೇಳಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಕ್ಕೆ ಭಯ ಪಡುವಂತಹ ಸಾಮಾನ್ಯ ವರ್ಗದ ಜನರು, ಕಾರಣ ಒಳಗೆ ದೂರು ಕ...
28/09/2023

ಇವತ್ತಿನ ದಿನಮಾನಗಳಲ್ಲಿ, ನ್ಯಾಯಾಕೇಳಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಕ್ಕೆ ಭಯ ಪಡುವಂತಹ ಸಾಮಾನ್ಯ ವರ್ಗದ ಜನರು, ಕಾರಣ ಒಳಗೆ ದೂರು ಕೊಡಲು ಒಳಗೆ ಹೋದರೆ ಮತ್ತೆ ಆಚೆ ಬರುತ್ತೇವೋ ಇಲ್ಲವೋ ಅಂತ, ಯಾವ ಸುಳ್ಳು ಪ್ರಕರಣ ದಾಖಲು ಮಾಡಿ ಒಳಗೆ ಹಾಕಿ, ಜೀವನ ನಾಶ ಮಾಡುತ್ತಾರೆ ಅಂತ.

ಯಾವತ್ತಾದರೂ ಯೋಚನೆ ಮಾಡಿದ್ದೀರಾ, ಇಷ್ಟು ಕ್ರೂರವಾಗಿ ಈ ಅಧಿಕಾರಿಗಳು ಕೆಲಸ ಯಾಕೆ ಮಾಡುತ್ತಾರೆ ಅಂತ?
ಉತ್ತರ : ರಾಜಕಾರಣಿಗಳು ಅವರ, ಬಲಗೈಬಂಟ, ಎಡಗೈಬಂಟ ಎಂದು ಹೇಳಿಕೊಂಡು ತಿರುಗಾಡುವ ಒಂದಷ್ಟು ನೀಚರು, ಕಳ್ಳತನಾನೋ, ಅತ್ಯಾಚಾರಾನೋ, ಭೂ ಕಬ್ಜ, ಕೊಲೆ ಮುಂತಾದ ಕೃತ್ಯಗಳನ್ನು ಮಾಡಿದಾಗ, ನೊಂದವರು ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ, ಪೊಲೀಸ್ ಠಾಣೆಗಳಿಂದ ಆ ನೀಚರಿಗೆ, ಅದೇ ತರಹದ ನೀಚ ಬುದ್ದಿ ಉಳ್ಳ ಪೊಲೀಸ್ ಯಾರೋ ಒಬ್ಬರು ಕರೆ ಮಾಡಿ, ಅವನು ಯಾವುದೋ ರಾಜಕಾರಣಿ ಇಲ್ಲ ಅವನ ಚೇಲ ಅಂತ ಮಾಹಿತಿ ನೀಡಿದಾಗ, ಆ so called ರಾಜಕಾರಣಿ ಈ ನೀಚ ಕೃತ್ಯಗಳು ಮಾಡಿರುವುದು ನನ್ನರು, ಅವರಿಂದ ನನಗೆ ಸಾಕಷ್ಟು ಮತಗಳು ಬರುತ್ತವೆ ಹಾಗಾಗಿ ಯಾವುದೋ ಒಂದು ಕುಟುಂಬದ ಮತ ನನಗೆ ಬಂದಿಲ್ಲ ಅಂದ್ರೆ ಏನೂ ಸಮಸ್ಯೆ ಆಗಲ್ಲ, ಆ ಅಮಾಯಕನ ಮೇಲೆ ಯಾವುದೋ ಪ್ರಕರಣ ಸೃಷ್ಟಿ ಮಾಡಿ ದಾಖಲು ಮಾಡಿ, ಎಂದು ಹೇಳಿ ಯಾವಾಗ ಈ ರಾಜಕಾರಣಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡುವುದಕ್ಕೆ ಪ್ರಾರಂಭ ಮಾಡಿದರೋ , ಅವತ್ತಿನಿಂದ ನಮ್ಮ ದೇಶ ಹಾಗೂ ವ್ಯವಸ್ಥೆ ಹದಗೆಡಲು ಕಾರಣವಾಯಿತು.

ಹಾಗಾದರೆ ಈ ಸಮಸ್ಯೆಗಳಿಗೆ ಕಾರಣವೇನು?

ಉತ್ತರ : ಒಳ್ಳೆಯ ರಾಜಕೀಯ ವ್ಯವಸ್ಥೆ, ಪ್ರಾಮಾಣಿಕರು, ವಿದ್ಯಾವಂತರು, ರಾಜಕಾರಣಕ್ಕೆ ಬಂದು, ಪ್ರಮಾಣಿಕವಾಗಿ ಸೇವೆ ಸಲ್ಲಿಸಿದರೆ ಮಾತ್ರ ಈ ಸಮಸ್ಯೆಗಳಿಗೆ ಹಂತ್ಯೆ ಸಿಗುತ್ತೆ.

ಗಡಿಭಾಗದಲ್ಲಿ ನಮ್ಮ ಸೈನಿಕರು ಪ್ರಾಣವನ್ನೂ ಲೆಕ್ಕಿಸದೆ, ನಮ್ಮ ದೇಶ ಕಾಯುತ್ತಿದಾರೆ ಉಗ್ರರಿಂದ ನಮ್ಮ ದೇಶವನ್ನು ಕಾಪಾಡಿಕೊಳ್ಳಲು, ಆದರೆ ಇವತ್ತು ನಮ್ಮ ದೇಶದ ಒಳಗೆ ಉಗ್ರರಂತೆ ಈ ರಾಜಕಾರಣಿಗಳು, ಅವರ ಚೇಲಾಗಳು, ಅವರ ಪರವಾಗಿ ಸಾಹೇಬರೇ ಸಾಹೇಬರೇ ಎಂದು ಗುಲಾಮಗಿರಿತನ ಮಾಡುತ್ತಿದ್ದಾರೆ , ಅನ್ಯಾಯಗಳನ್ನು ಮಾಡಿ, ಅಮಾಯಕರ ಬದುಕುಗಳೊಂದಿಗೆ ಚೆಲ್ಲಾಟ ವಾಡುತ್ತಿದ್ದಾರೆ.

ನಾನಂತೂ ಸಿದ್ದ ಪ್ರಾಮಾಣಿಕವಾಗಿ ನಮ್ಮ ದೇಶ ಸೇವೆ ಮಾಡೋಕೆ, ಯಾವತ್ತೋ ಒಂದು ದಿನ ಸಾಯೋದು ತಪ್ಪಲ್ಲ, ಇಂದೇ ನನ್ನ ಪ್ರಾಣ ಹೋದರೂ ಚಿಂತೆ ಇಲ್ಲ, ನನ್ನ ಮಗಳು ನನ್ನ ಅಮ್ಮ ಹೋರಾಟಗಾರ್ತಿ ಎಂದು ಹೆಮ್ಮೆಯಿಂದ ಹೇಳಿಕೊಂಡರೆ ಅದೇ ನನ್ನ ಜೀವನಕ್ಕೆ ಸಾರ್ಥಕ, ನನ್ನ ಕೈಯಲ್ಲಿ ಇಷ್ಟು ಅನ್ಯಾಯಗಳನ್ನು ನೋಡಲು ಆಗುತ್ತಿಲ್ಲ. ಹಾಗಂತ ಬದಲಾವಣೆ ಮಾಡೋಕೆ ಅಧಿಕಾರ ನನ್ನ ಕೈಯಲ್ಲಿ ಇಲ್ಲ. ನನ್ನ ಕೈಜೋಡಿಸಿ ಹೋರಾಟ ಮಾಡೋಣ ಅಂದರೆ, ಪ್ರಾಮಾಣಿಕವಾಗಿ ಹೋರಾಟ ಮಾಡಲು ಮುಂದಾದಾಗ, ಕೆ ಆರ್ ಎಸ್ ಪಕ್ಷ ಒಳ್ಳೆಯ ಕೆಲಸ ಮಾಡ್ತಿದೆ ಅಂತ ಪ್ರಶಂಸೆ ವ್ಯಕ್ತ ಪಡಿಸುತ್ತಿರಾ ಬಿಟ್ಟರೆ, ಅವರ ಜೊತೆ ಹೋದರೆ ಪೊಲೀಸ್ ಕೇಸ್ ಹಾಕುತ್ತಾರೆ ಎಂದು ಭಯಪಟ್ಕೊಂಡು ದೂರ ಉಳಿಯುತ್ತೀರ, ಪ್ರಶ್ನೆನೇ ಮಾಡಿಲ್ಲ ಅಂದ್ರೆ ಬದಲಾಗೋದು ಹೇಗೆ, ಜನಾನೇ ಬಂದಿಲ್ಲ ಅಂದ್ರೆ ಹೋರಾಟಕ್ಕೆ ಅರ್ಥ ಏನಿರುತ್ತೆ, ಮಾತಾನೆ ಹಾಕಿಲ್ಲ ಅಂದ್ರೆ ಅಧಿಕಾರ ಹೇಗೆ ಸಿಗ್ಗುತ್ತೆ.

ಇನ್ನೆಷ್ಟುಕಾಲ ನಿಮ್ಮ ಮತಗಳನ್ನು, ಹಣ, ಹೆಂಡ, ಸೀರೆ, ಕುಕ್ಕರ್, 1000, 2000ಕ್ಕೆ ಮಾರಿಕೊಳ್ಳುತ್ತಿರಾ? ಇನ್ನೆಷ್ಟುಕಾಲ ಈ ನರಕದಲ್ಲಿ ಬದುಕುತ್ತಿರಾ? ಇನ್ನೆಷ್ಟುಕಾಲ ಕುಡುಕರಾಗಿ ಉಳಿದುಕೊಳ್ಳುತ್ತಿರಾ?
ಇನ್ನೆಷ್ಟುಕಾಲ ನಿಮ್ಮ ಕುಟುಂಬಕ್ಕೆ ಅನ್ಯಾಯ ಮಾಡುತ್ತೀರಾ?
ನಿಮ್ಮಿಂದ ನಿಮ್ಮ ಮಕ್ಕಳು ಯಾಕೆ ಶಿಕ್ಷೆ ಅನುಭವಿಸಬೇಕು?

ಮಕ್ಕಳಿಗೆ ಒಂದು ಸಣ್ಣ ಗಾಯವಾದರೆ ಒದ್ದಾಡುತ್ತೇವೆ, ಒಂದು ಸಣ್ಣ ಗಾಯಕ್ಕೆ ಅಷ್ಟು ಸ್ಪಂದಿಸುತ್ತೇವೆ, ಮುಂದೆ ಬೆಳೆದನಂತರ ನಮ್ಮ ಮಕ್ಕಳು ಇದೇ ಸಮಾಜದಲ್ಲಿ ಬದುಕಬೇಕು, ಯಾವಾಗ ಈ ಪೊಲೀಸರು ನಮ್ಮ ಮಕ್ಕಳ ಮೇಲೆ ಯಾವ ಕಾರಣಕ್ಕೆ ಸುಳ್ಳು ಕೇಸ್ ಹಾಕುತ್ತಾರ, ಅವರಿಗೆ ಎಷ್ಟು ಕಷ್ಟ ಕೊಡುತ್ತಾರೋ, ಯಾವ ಕಚೇರಿಗೆ ಹೋದಾಗ ನನ್ನ ಮಕಳ ಬಳಿ ಲಂಚ ತೆಗೆದುಕೊಳ್ಳುತ್ತಾರೋ ಲಂಚ ಕೊಡಲು ಅವರ ಬಳಿ ಸಾಕಷ್ಟು ಹಣ ಇದಿಯೋ ಇಲ್ಲವೋ, ಇಲ್ಲವಾದಲ್ಲಿ ಎಲ್ಲಿ ಸಾಲ ಮಾಡುವ ಪರಿಸ್ಥಿತಿ ಬರುತ್ತೋ, ಸಾಲ ಕೇಳಲು ಹೋದಾಗ ಹೆಣ್ಣು ಮಗುವಾಗಿದ್ದರೆ ಸಾಲಕೊಡೋನು ನಮ್ಮ ಮಗಳ ಬಳಿ ಏನು ಕೇಳುತ್ತಾನೋ, ಸಾಲ ತೆಗೆದುಕೊಂಡ ನಂತರ ಸಾಲ ತೀರಿಸಲು ಆಗುತ್ತೋ ಇಲ್ಲವೋ, ಹಣಕ್ಕೋಸ್ಕರ, ಮರಗಳನ್ನು ಕಡಿಯುತ್ತಿದ್ದಾರೆ, ನನ್ನ ಮಕ್ಕಳು ಉಸಿರಾಡಳು ಸಾಕಷ್ಟು ಗಾಳಿ ಇದಿಯಾ, ಗಾಳಿ ಶುದ್ಧವಾಗಿದಿಯಾ ಒಂದಾ ಎರಡಾ ನಾವು ಅನುಭವಿಸುತ್ತಿರುವ ಕಷ್ಟಗಳು. ಇವೆಲ್ಲಾ ಕಷ್ಟಗಳು ವೀದಿಬರಹಾವೋ, ಇಲ್ಲ ಇವೆಲ್ಲಾ ಕಷ್ಟಗಳಿಗೆ ನಾವೇ ಹೊಣೆಯೋ? ಒಮ್ಮೆ ಯೋಚಿಸಿ.

ಕೆ ಆರ್ ಎಸ್ ಪಕ್ಷಕ್ಕೆ ಬನ್ನಿ, ನಾವು ನೀವು ಎಲ್ಲರೂ ಸೇರಿ ಈ ಸಮಾಜವನ್ನು ನಮ್ಮ ಕೈಯಲ್ಲಿದೆ ಆದಷ್ಟೋ ಬದಲಾಯಿಸೋಣ, ನಮ್ಮವರನ್ನು ಕಾಪಾಡಿಕೊಳ್ಳೋಣ.

ಸಫಾರಿ ಆನಂದ್
ಕೆ ಆರ್ ಎಸ್ ಪಕ್ಷ
28.09.2023

ನಮ್ಮ ಭಾರತ ದೇಶದ ಜನತೆಗೆ ಸ್ವತಂತ್ರ್ಯ ದಿನಾಚರಣೆಯ ಶುಭಾಶಯಗಳು
15/08/2023

ನಮ್ಮ ಭಾರತ ದೇಶದ ಜನತೆಗೆ ಸ್ವತಂತ್ರ್ಯ ದಿನಾಚರಣೆಯ ಶುಭಾಶಯಗಳು

Address

Kolar

Website

Alerts

Be the first to know and let us send you an email when KRS Party Mulbagilu - ಕೆ ಆರ್ ಎಸ್ ಮುಳುಬಾಗಿಳು posts news and promotions. Your email address will not be used for any other purpose, and you can unsubscribe at any time.

Share