Huladenahalli Grama Panchayath, Malur

Huladenahalli Grama Panchayath, Malur ಹುಳದೇನಹಳ್ಳಿ ಗ್ರಾಮ ಪಂಚಾಯಿತಿ, ಮಾಲೂರು ತ?

25/09/2025
25/09/2025
22/09/2025
27/07/2025
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿ ಗ್ರಾಮದಲ್ಲಿ ದಿನಾಂಕ 5.12.2023 ರಂದು ITC MSK - ಮೈರಾಡ, ಗ್ರಾಮ ಪಂಚಾಯಿತಿ, ರೈತ ಸಂಘ, ಮತ್ತ...
05/12/2023

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿ ಗ್ರಾಮದಲ್ಲಿ ದಿನಾಂಕ 5.12.2023 ರಂದು ITC MSK - ಮೈರಾಡ, ಗ್ರಾಮ ಪಂಚಾಯಿತಿ, ರೈತ ಸಂಘ, ಮತ್ತು ಗ್ರಾಮದ ರೈತರ ಸಹಯೋಗದಲ್ಲಿ ನೀರು ಮತ್ತು ಮಣ್ಣು ವಿಶ್ವ ಮಣ್ಣು ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹುಳದೇನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಮ್ಮ, ಸದಸ್ಯರಾದ ಶ್ರೀಮತಿ ಹೇಮಮಾಲಿನಿ.ಎಸ್, ಗಂಗಮ್ಮ, ಮುನಿರಾಜು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸೋಮೇಶ್ , ಮೈರಾಡ ಸಂಸ್ಥೆಯ ಶಿವಶಂಕರ್, ವೆಂಕಟರೆಡ್ಡಿ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಎಸ್ ವಿ ಮಂಜುನಾಥ್, ಅರಣ್ಯ ಉಪವಲಯಾಧಿಕಾರಿಗಳಾದ ಶ್ರೀಮತಿ ಪ್ರೇಮಾವತಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ದಿವ್ಯ, ಹುಳದೇನಹಳ್ಳಿ ಗ್ರಾಮದ ರೈತ ಸಂಘದ ಶ್ರೀ ಪರಮೇಶ್, ರಮೇಶ್ ಊರಿನ ಗಣ್ಯರಾದ ಚಂದ್ರಶೇಖರ್ ಗೌಡ ಮತ್ತು ಶ್ರೀನಾಥ್ ಬಾಬು ಹಾಗೂ ಊರಿನ ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ಹುಳದೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು Entrepreneur Development Institute of India, ಗ್ರಾಮ ಪಂಚಾಯಿತಿ ಮತ್ತು ಮಾಡ್ರನ್ ಎಜುಕೇಶನಲ್...
07/10/2023

ಹುಳದೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು Entrepreneur Development Institute of India, ಗ್ರಾಮ ಪಂಚಾಯಿತಿ ಮತ್ತು ಮಾಡ್ರನ್ ಎಜುಕೇಶನಲ್ ಸೊಸೈಟಿ, ಸಾಹಸ ಸಹಯೋಗ್ ಎನ್‌ಜಿಒ ಸಹಯೋಗದೊಂದಿಗೆ ಸಂಜೀವಿನಿ ಮಹಿಳಾ ಸಂಘದ ಎಲ್ಲಾ ಸದಸ್ಯರಿಗೂ ಉಚಿತ ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಾಗೂ Sahas Sahyog NGO ವತಿಯಿಂದ ಒಂದು ದಿನದ ಮಟ್ಟಿಗೆ ಬ್ಯಾಗುಗಳನ್ನು ಹೊಲಿಯುವ ಟೈಲರಿಂಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು ಇದರ ಪ್ರಯೋಜನವನ್ನು ಹುಳದೇನಹಳ್ಳಿ ವ್ಯಾಪ್ತಿಯ ಸಂಘದ ಸುಮಾರು 50 ಮಹಿಳೆಯರು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಮ್ಮ ಸದಸ್ಯರಾದ ಮುತ್ತು ಮಾಡ್ರನ್ ಎಜುಕೇಶನ್ ಸೊಸೈಟಿ ಮುಖ್ಯಸ್ಥರಾದ ಶ್ರೀಮತಿ ಹೇಮಮಾಲಿನಿ ನಾರಾಯಣಸ್ವಾಮಿ, ಸಂಜೀವಿನಿ ಸುಗಮ ಹುಳದೇನಹಳ್ಳಿ ಪಂಚಾಯಿತಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ಎಂ.ಬಿ.ಕೆ ಶೋಭರಾಣಿ, ಕಾರ್ಯದರ್ಶಿ ಯಾಮಿನಿ, ನಾಗವೇಣಿ, EDII ಸಿಬ್ಬಂದಿ, NGO ಸಿಬ್ಬಂದಿ ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯಿತಿ ಸ್ಥಳೀಯ ವಿಧಾನ ಸಭೆ ಹಾಗಾಗಿ ಗ್ರಾಮ ಸರ್ಕಾರ ಮಂತ್ರಿ ಮಂಡಳಿಯ ರಚನೆ ಮಾಡಲಾಗಿದೆ
23/09/2023

ಗ್ರಾಮ ಪಂಚಾಯಿತಿ ಸ್ಥಳೀಯ ವಿಧಾನ ಸಭೆ ಹಾಗಾಗಿ ಗ್ರಾಮ ಸರ್ಕಾರ ಮಂತ್ರಿ ಮಂಡಳಿಯ ರಚನೆ ಮಾಡಲಾಗಿದೆ

...

ಹುಳದೇನಹಳ್ಳಿ ಗ್ರಾಮ ಪಂಚಾಯಿತಿಯ ಘನ ಮತ್ತು ದ್ರವತ್ಯಾಜ್ಯ ಘಟಕದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲ್ ಮತ್ತು ಕಾಗದ ಇನ್ನಿತರ ತ್ಯಾಜ್ಯ ಸಂಗ್...
19/07/2023

ಹುಳದೇನಹಳ್ಳಿ ಗ್ರಾಮ ಪಂಚಾಯಿತಿಯ ಘನ ಮತ್ತು ದ್ರವತ್ಯಾಜ್ಯ ಘಟಕದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲ್ ಮತ್ತು ಕಾಗದ ಇನ್ನಿತರ ತ್ಯಾಜ್ಯ ಸಂಗ್ರಹಣೆಯನ್ನು ಜೂನ್ ತಿಂಗಳಲ್ಲಿ ಗುಜರಿ ಅಂಗಡಿಗೆ ಮಾರಲಾಗಿ ಬಂದಂತ ಹಣ 5600/- ರೂಗಳು ಗ್ರಾ.ಪಂ. ಒಕ್ಕೂಟಕ್ಕೆ ಸಂದಾಯವಾಗಿದೆ.

Address

Kolar
563101

Website

Alerts

Be the first to know and let us send you an email when Huladenahalli Grama Panchayath, Malur posts news and promotions. Your email address will not be used for any other purpose, and you can unsubscribe at any time.

Share

Category