Santosh Lad

Santosh Lad Minister for Labour, Employment & Training, GoK I MLA Kalaghatagi Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice

ಪ್ರವಾಸ ವಿವರ
05/08/2026

ಪ್ರವಾಸ ವಿವರ

ವಿಧಾನ ಪರಿಷತ್ ನ ಮಾಜಿ ಸಭಾಪತಿಗಳು ಹಾಗೂ ಹಿರಿಯ ನಾಯಕರಾದ ಶ್ರೀ ವೀರಣ್ಣ ಮತ್ತಿಕಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಶಕುಂತಲಾ ಮತ್ತಿಕಟ್ಟಿ ಅವರು ಇತ...
05/08/2026

ವಿಧಾನ ಪರಿಷತ್ ನ ಮಾಜಿ ಸಭಾಪತಿಗಳು ಹಾಗೂ ಹಿರಿಯ ನಾಯಕರಾದ ಶ್ರೀ ವೀರಣ್ಣ ಮತ್ತಿಕಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಶಕುಂತಲಾ ಮತ್ತಿಕಟ್ಟಿ ಅವರು ಇತ್ತೀಚೆಗೆ ನಿಧನರಾಗಿದ್ದರು. ಇಂದು ಅವರ ನಿವಾಸಕ್ಕೆ ತೆರಳಿ ಶ್ರೀ ವೀರಣ್ಣ ಮತ್ತಿಕಟ್ಟಿ ಅವರು ಹಾಗೂ ಅವರ ಪರಿವಾರಕ್ಕೆ ಸಂತಾಪ ಸೂಚಿಸಲಾಯಿತು.

ಕೃಷಿ ಇಲಾಖೆಯ ತಾಂತ್ರಿಕ ಹುದ್ದೆಗಳ ನೇಮಕಾತಿಯು ಹುದ್ದೆಗಳ ವರ್ಗೀಕರಣ ಮತ್ತು ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ನಡೆಸಬೇಕು ಹಾಗೂ ಕೃಷಿ ಕ್ಷೇತ್ರದ...
05/08/2026

ಕೃಷಿ ಇಲಾಖೆಯ ತಾಂತ್ರಿಕ ಹುದ್ದೆಗಳ ನೇಮಕಾತಿಯು ಹುದ್ದೆಗಳ ವರ್ಗೀಕರಣ ಮತ್ತು ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ನಡೆಸಬೇಕು ಹಾಗೂ ಕೃಷಿ ಕ್ಷೇತ್ರದಲ್ಲಿ ಪ್ರಾಯೋಗಿಕ ಜ್ಞಾನ, ಕ್ಷೇತ್ರಾನುಭವ ಹಾಗೂ ಕೃಷಿ ಶಿಕ್ಷಣ ಪಡೆದ ಪದವೀಧರರಿಗೆ ಆದ್ಯತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮನವಿ ಸ್ವೀಕರಿಸಲಾಯಿತು.

ಈ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಆದಷ್ಟು ಬೇಗ ಬಗೆಹರಿಸಲು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸನ್ಮಾನ್ಯ Chief Minister of Karnataka ಅವರು ಸೂಚನೆ ನೀಡಿದ್ದಾರೆ.

ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅತಿವೃಷ್ಟಿ / ಬರ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಲಾಯಿತು....
05/08/2026

ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅತಿವೃಷ್ಟಿ / ಬರ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಲಾಯಿತು.

ಜಿಲ್ಲೆಯಲ್ಲಿ ಮಳೆಯ ಕೊರತೆಯಾಗಿದ್ದು, ಪರ್ಯಾಯ ಕ್ರಮಗಳು, ಜಾನುವಾರುಗಳಿಗೆ ಮೇವಿನ ಪೂರೈಕೆ, ಕುಡಿಯುವ ನೀರು ಒದಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್‌ ಆರ್‌., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಭುವನೇಶ್‌ ಪಾಟೀಲ್‌, ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಗೀತಾ ಸಿ. ಡಿ., ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಧಾರವಾಡದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು.
05/08/2026

ಧಾರವಾಡದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು.

ನಮ್ಮ ಕಲಘಟಗಿ ವಿಧಾನಸಭಾ ಕ್ಷೇತ್ರದ ಹಿರೇಹೊನ್ನಳ್ಳಿ ಗ್ರಾಮದ ಜನತೆಯ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ.
05/08/2026

ನಮ್ಮ ಕಲಘಟಗಿ ವಿಧಾನಸಭಾ ಕ್ಷೇತ್ರದ ಹಿರೇಹೊನ್ನಳ್ಳಿ ಗ್ರಾಮದ ಜನತೆಯ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ.

05/08/2026

ಕಲಘಟಗಿ ವಿಧಾನಸಭಾ ಕ್ಷೇತ್ರ ನನ್ನ ಪಾಲಿನ‌ ಪುಣ್ಯಭೂಮಿ. ಈ ಕ್ಷೇತ್ರದ ಜನತೆ ನನಗೆ ರಾಜಕೀಯ ಮರುಜನ್ಮ ನೀಡಿದ ಮಾತೃ ಹೃದಯಿಗಳು.

ನನ್ನೆಲ್ಲ ಏಳ್ಗೆಗಳ ಹಿಂದಿರುವ ಶಕ್ತಿಯೇ ನನ್ನ ಕಲಘಟಗಿ ಮತಕ್ಷೇತ್ರದ ಜನತೆಯ ಆಶೀರ್ವಾದ. ನನ್ನೂರ ಜನರ ಪ್ರೀತಿ, ಅಭಿಮಾನ, ಅವರ ಸಂಭ್ರಮದ ಮುಂದೆ ಮತ್ಯಾವ ಖುಷಿಯೂ ಸಾಟಿಯಲ್ಲ.

ಕಲಘಟಗಿ ವಿಧಾನಸಭಾ ಕ್ಷೇತ್ರದ ಮಹಾ ಜನತೆಯ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸುಯೋಗ.

ಕಲಘಟಗಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಲಘಟಗಿ ತಾಲೂಕು ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಅತಿವೃಷ್ಟಿ/ಬರದ ಸ್ಥಿತಿಗ...
05/08/2026

ಕಲಘಟಗಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಲಘಟಗಿ ತಾಲೂಕು ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಅತಿವೃಷ್ಟಿ/ಬರದ ಸ್ಥಿತಿಗತಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.

ಬೆಳೆ ಹಾಗೂ ಕುಡಿಯುವ ಉದ್ದೇಶಕ್ಕೆ ನೀರಿನ ಕೊರತೆ, ಜಾನುವಾರುಗಳಿಗೆ ಮೇವು ಪೂರೈಕೆ ಮತ್ತಿತರ ವಿಷಯಗಳ ಕುರಿತು ಪರಾಮರ್ಶೆ ನಡೆಸಲಾಯಿತು.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಭುವನೇಶ್‌ ಪಾಟೀಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ಗುಂಜನ್‌ ಆರ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

| Chief Minister of Karnataka | DK Shivakumar | DR. G Parameshwara

ನಮ್ಮ ಧಾರವಾಡ ಜಿಲ್ಲೆಯ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಯಾವತ್ತಿಗೂ ಬೆಲೆ ಕಟ್ಟಲಾಗದು. ನನ್ನೆಷ್ಟೋ ಖುಷಿಗಳನ್ನು ತಮ್ಮದೆಂದು ಸ...
05/08/2026

ನಮ್ಮ ಧಾರವಾಡ ಜಿಲ್ಲೆಯ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಯಾವತ್ತಿಗೂ ಬೆಲೆ ಕಟ್ಟಲಾಗದು. ನನ್ನೆಷ್ಟೋ ಖುಷಿಗಳನ್ನು ತಮ್ಮದೆಂದು ಸಂಭ್ರಮಿಸುವ ಅವರ ಸಹೃದಯತೆಗೆ ನಾನು ಎಷ್ಟು ಋಣಿಯಾಗಿದ್ದರೂ ಸಾಲದು.

ಮತ್ತೊಮ್ಮೆ ಸಚಿವನಾಗಿ ಇವತ್ತು ಜಿಲ್ಲೆಗೆ ಆಗಮಿಸಿದಾಗ ಅವರೆಲ್ಲ ತೋರಿಸಿದ ಪ್ರೀತಿ ಇದೆಯಲ್ಲ, ನಾನು ನಿಜಕ್ಕೂ ಭಾಗ್ಯವಂತ!

05/08/2026

Address

Hubli

Alerts

Be the first to know and let us send you an email when Santosh Lad posts news and promotions. Your email address will not be used for any other purpose, and you can unsubscribe at any time.

Shortcuts

Share