10/05/2020
ಅಮ್ಮ ನನ್ನಿಜನುಮಾ ನಿನ್ನ ವರದಾನವಮ್ಮ ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ, ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ ನಿಲ್ಲದೆ ಮಿಡಿದಿದೆ ಅಮ್ಮ, ಗುಡಿಯ ಹಂಗಿರದ ಕೀರ್ತನೆ ಬೇಕಿರದ ನಡೆವ ದೈವವೇ ಅಮ್ಮ, ಅಮ್ಮ ನನ್ನಿಜನುಮಾ ನಿನ್ನ ವರದಾನವಮ್ಮ ಅಮ್ಮsss ನಿನ್ನ ಒಂದು ಕೈ ತುತ್ತು ಸಾಕು ಈ ಜನ್ಮ ಪೂರ್ತಿ ಉಪವಾಸ ಇರುವೇನು, ನಿನ್ನ ಒಂದು ಅಪ್ಪುಗೆಯು ಸಾಕು ಆ ನೆನಪಿನಲ್ಲೆ ಸೆರೆವಾಸ ಇರುವೇನು, ನಿನೆ ನನ್ನ ಲೋಕವೂ ನೀನೆ ನನ್ನ ಜೀವವು, ನೀನೆ ನನಗೆ ಎಲ್ಲವೂ ಅಮ್ಮsss ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ ,ಅಮ್ಮssss. ನಿನ್ನ ಒಂದು ಸಾಂತ್ವನವೇ ಸಾಕು ನೋವನೆಲ್ಲ ನಾ ನುಂಗಿ ನಗುವೆನು, ನಿನ್ನ ಒಮ್ಮೆ ಬೆನ್ತಡವೂ ಸಾಕು ಈ ಜಗವನೆಲ್ಲ ನಾ ಗೆದ್ದು ಬರುವೆನು ನೂರು ನೂರು ದೇವರು ನಿನ್ನ ಒಳಗೆ ಇರುವರು ಎಂಬ ನಿಜವ ಅರಿತೆನೂ ಅಮ್ಮಾss ಅಮ್ಮ ನನ್ನಿಜನುಮಾ ನಿನ್ನ ವರದಾನವಮ್ಮ ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ, ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ ನಿಲ್ಲದೆ ಮಿಡಿದಿದೆ ಅಮ್ಮಾ, ಗುಡಿಯ ಹಂಗಿರದ ಕೀರ್ತನೆ ಬೇಕಿರದ ನಡೆವ ದೈವವೇ ಅಮ್ಮ, ಅಮ್ಮಾsss. ❤️❤️❤️😍😘 ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು ಪ್ರೀತಿಯ ಅಮ್ಮಂದಿರಿಗೆ❤❤😍😘