ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ Hubballi Dharwad Municipal Corporation

  • Home
  • India
  • Hubli
  • ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ Hubballi Dharwad Municipal Corporation

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ Hubballi Dharwad Municipal Corporation Official Facebook Account of Hubballi - Dharwad Municipal Corporation Regulation of land-use and construction of buildings . Fire services .

The Twelfth Schedule of the Constitution lists the subjects that municipal corporations are responsible for. Corporations may be entrusted to perform functions and implement schemes including those in relation to the matters listed in the Twelfth Schedule. Urban planning including town planning . Planning for economic and social development . Water supply for domestic, industrial and commercial pu

rposes . Public health, sanitation conservancy and solid waste management . Urban forestry, protection of the environment and promotion of ecological aspects. Safeguarding the interests of weaker sections of society, including the handicapped and mentally disabled
Slum improvement and upgradation. Repair street lights
Urban poverty alleviation. Provision of urban amenities and facilities such as parks, gardens, playgrounds. Promotion of cultural, educational and aesthetic aspects. Burials and burial grounds; cremations, cremation grounds and electric crematoriums. Cattle pounds; prevention of cruelty to animals. Vital statistics including registration of births and deaths. Public amenities including street lighting, parking lots, bus stops and public conveniences. Regulation of slaughter houses and tanneries

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿಯ ಮೇಲೆ ಶೇಕಡಾ 5 ರಷ್ಟು ವಿಶೇಷ ರಿಯಾಯಿತಿ ಪಡೆಯಲು ನ...
30/05/2026

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆ ಪಾವತಿಯ ಮೇಲೆ ಶೇಕಡಾ 5 ರಷ್ಟು ವಿಶೇಷ ರಿಯಾಯಿತಿ ಪಡೆಯಲು ನಾಳೆಯೇ ಕೊನೆಯ ದಿನವಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿನಂತಿಸಲಾಗಿದೆ. ಆನ್‌ಲೈನ್ ಮೂಲಕ ಆಸ್ತಿ ತೆರಿಗೆಯನ್ನು ಪಾವತಿಸಲು ಪಾಲಿಕೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನೀಡಲಾಗಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸುಲಭವಾಗಿ ಪಾವತಿಸಬಹುದು.
​ | | | | |

28/05/2026

ಅವಳಿನಗರದ ಗೋಡೆಗಳಿಗೆ ಹೊಸ ರೂಪ!

ವಲಯ ಸಂಖ್ಯೆ 8ರ ದೃಶ್ಯ!

ಎಲ್ಲೆಂದರಲ್ಲಿ ಉಗುಳ ಬೇಡಿ.. ನಗರದ ಸೌಂದರ್ಯ ಕಾಪಾಡಿ
| | | |

27/05/2026

ಅವಳಿನಗರದ ಗೋಡೆಗಳಿಗೆ ಹೊಸ ರೂಪ!
| | | |

26/05/2026

ಆಡಳಿತ ವ್ಯವಸ್ಥೆಯ ಜೊತೆಗೆ ಪ್ರತಿಯೊಬ್ಬ ನಾಗರಿಕನ ಸಂಪೂರ್ಣ ಸಹಕಾರವಿದ್ದಾಗ ಮಾತ್ರ ನಗರವನ್ನು ಸ್ವಚ್ಛವಾಗಿಡಲು ಸಾಧ್ಯ. ದಯವಿಟ್ಟು ಎಲ್ಲೆಂದರಲ್ಲಿ ಕಸ ಚೆಲ್ಲುವುದನ್ನು ನಿಲ್ಲಿಸಿ, ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಮಹಾನಗರ ಪಾಲಿಕೆಯ ಕಸದ ವಾಹನಗಳಿಗೆ ಮಾತ್ರ ನೀಡಿ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಲಿ.
| | | |

ಸೂರತ್ ಮಹಾನಗರಪಾಲಿಕೆ ಹಾಗೂ 'Enviro Control Private Limited' ತಾಂತ್ರಿಕ ಸಹಯೋಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಅತಿ ...
23/05/2026

ಸೂರತ್ ಮಹಾನಗರಪಾಲಿಕೆ ಹಾಗೂ 'Enviro Control Private Limited' ತಾಂತ್ರಿಕ ಸಹಯೋಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಅತಿ ದೊಡ್ಡ 140 MLD ಸಾಮರ್ಥ್ಯದ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ಹುಬ್ಬಳ್ಳಿ–ಧಾರವಾಡ ಮಹಾನಗರಪಾಲಿಕೆಯ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿತು.

​ತ್ಯಾಜ್ಯ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಸಂಪೂರ್ಣ ಶುದ್ಧೀಕರಿಸಿ ಕೈಗಾರಿಕೆಗಳಿಗೆ ಮರುಪೂರೈಕೆ ಮಾಡುವ ಮೂಲಕ, ಸೂರತ್ ಪಾಲಿಕೆಯು ಪರಿಸರ ಸಂರಕ್ಷಣೆಯ ಜೊತೆಗೆ ವಾರ್ಷಿಕ ₹60 ಕೋಟಿಗೂ ಅಧಿಕ ಆದಾಯ ಗಳಿಸುತ್ತಿರುವುದು ದೇಶಕ್ಕೇ ಮಾದರಿಯಾಗಿದೆ. ಸೂರತ್ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ಪರೇಶ್ ಪಟೇಲ್ ಅವರು ಘಟಕದ ಕಾರ್ಯವೈಖರಿಯನ್ನು ನಿಯೋಗಕ್ಕೆ ವಿವರಿಸಿದರು..

​ಇದೇ ವೇಳೆ, ಶುದ್ಧೀಕರಿಸಿದ ನೀರಿನ ಗುಣಮಟ್ಟವನ್ನು ಖಚಿತಪಡಿಸುವ ಸಲುವಾಗಿ ನಿಯೋಗದ ಸದಸ್ಯರು ಆ ನೀರನ್ನು ಕುಡಿಯುವ ಮೂಲಕ ಎಲ್ಲರ ಗಮನ ಸೆಳೆದರು. ಅವಳಿ ನಗರದಲ್ಲಿಯೂ ಇಂತಹ ಯೋಜನೆಯನ್ನು ಜಾರಿಗೆ ತಂದರೆ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ, ರೈತರು ಹಾಗೂ ಕೈಗಾರಿಕೆಗಳಿಗೆ ನೀರು ಮತ್ತು ಪಾಲಿಕೆಗೆ ಉತ್ತಮ ಆದಾಯ ಲಭಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಉಪ ಮಹಾಪೌರ ಸಂತೋಷ ಚವ್ಹಾಣ್, ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ಹಾಗೂ ಪಾಲಿಕೆ ಅಭಿವೃದ್ಧಿ ಆಯುಕ್ತ ವಿಜಯಕುಮಾರ ಉಪಸ್ಥಿತರಿದ್ದರು.
| | |

ಹುಬ್ಬಳ್ಳಿ-ಧಾರವಾಡ ಅವಳಿನಗರದ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ,...
22/05/2026

ಹುಬ್ಬಳ್ಳಿ-ಧಾರವಾಡ ಅವಳಿನಗರದ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಪಾಲಿಕೆಯ ಉನ್ನತ ಮಟ್ಟದ ನಿಯೋಗವು ಗುಜರಾತಿನ ಸೂರತ್‌ಗೆ ಭೇಟಿ ನೀಡಿದೆ. ಮುನ್ಸಿಪಲ್ ಬಾಂಡ್‌ಗಳ (Municipal Bonds) ಯಶಸ್ವಿ ಅನುಷ್ಠಾನ, ನಿರ್ವಹಣೆ ಹಾಗೂ ಆರ್ಥಿಕ ಸಬಲೀಕರಣದ ಕುರಿತು ಸೂರತ್ ಮಾದರಿಯನ್ನು ಖುದ್ದಾಗಿ ಅಧ್ಯಯನ ಮಾಡಲು ಈ ಭೇಟಿಯನ್ನು ಆಯೋಜಿಸಲಾಗಿತ್ತು.

ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅವರ ನೇತೃತ್ವದಲ್ಲಿ ತೆರಳಿದ ಈ ನಿಯೋಗದಲ್ಲಿ ಉಪಮಹಾಪೌರರಾದ ಶ್ರೀ ಸಂತೋಷ ಚವ್ಹಾಣ, ಸಭಾನಾಯಕರಾದ ಶ್ರೀ ಈರೇಶ ಅಂಚಟಗೇರಿ, ವಿರೋಧ ಪಕ್ಷದ ನಾಯಕರಾದ ಶ್ರೀ ಇಮ್ರಾನ ಯಲಿಗಾರ ಹಾಗೂ ಪಾಲಿಕೆಯ ಉಪ ಆಯುಕ್ತರಾದ ಶ್ರೀ ವಿಜಯ್ ಕುಮಾರ್ ಆರ್. ಅವರು ಉಪಸ್ಥಿತರಿದ್ದರು.

ಸೂರತ್ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ನಡೆಸಿದ ಈ ಫಲಪ್ರದ ಚರ್ಚೆ ಹಾಗೂ ಅಧ್ಯಯನವು, ಮುಂಬರುವ ದಿನಗಳಲ್ಲಿ ನಮ್ಮ ಪಾಲಿಕೆಯಲ್ಲಿ ನೂತನ ಆರ್ಥಿಕ ಯೋಜನೆಗಳನ್ನು ಜಾರಿಗೆ ತಂದು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಪೂರಕವಾಗಲಿದೆ.

ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ಭವಿಷ್ಯದ ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸುವ HDMC ಯ ಕ್ರಾಂತಿಕಾರಿ 'GIS' ಮತ್ತು '3D ಡಿಜಿಟಲ್ ಟ್ವಿನ್' ಯೋ...
22/05/2026

ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ಭವಿಷ್ಯದ ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸುವ HDMC ಯ ಕ್ರಾಂತಿಕಾರಿ 'GIS' ಮತ್ತು '3D ಡಿಜಿಟಲ್ ಟ್ವಿನ್' ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮುಂಬೈನ ಜೆನೆಸಿಸ್ ಇಂಟರ್ ನ್ಯಾಷನಲ್ ಕಚೇರಿಯಲ್ಲಿ ನಡೆಯಿತು.

ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ನೇತೃತ್ವದ ಉಪ ಮಹಾಪೌರರಾದ ಶ್ರೀ ಸಂತೋಷ್ ಚವ್ಹಾಣ, ಸಭಾ ನಾಯಕರಾದ ಶ್ರೀ ಈರೇಶ ಅಂಚಟಗೇರಿ, ವಿಪಕ್ಷ ನಾಯಕರಾದ ಶ್ರೀ ಇಮ್ರಾನ ಯಲಿಗಾರ ಹಾಗೂ ಉಪ ಆಯುಕ್ತರಾದ ಶ್ರೀ ವಿಜಯಕುಮಾರ ಆರ್. ಅವರ ಉಪಸ್ಥಿತಿಯಲ್ಲಿ ಸಂಸ್ಥೆಯ ತಜ್ಞರೊಂದಿಗೆ ಸಮಗ್ರ ಚರ್ಚೆ ನಡೆಸಿತು. ಹೈ-ಪ್ರಿಸಿಷನ್ ಮ್ಯಾಪಿಂಗ್, ಆಸ್ತಿ ತೆರಿಗೆ ಆಧುನೀಕರಣ ಹಾಗೂ ಡೇಟಾ ಆಧಾರಿತ ಪಾರದರ್ಶಕ ನಗರಾಡಳಿತ ವ್ಯವಸ್ಥೆಯನ್ನು ತ್ವರಿತವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆಯು ಅವಳಿನಗರದ ಸಮಗ್ರ ಅಭಿವೃದ್ಧಿಗೆ ಭರವಸೆಯ ಹೊಸ ಆಯಾಮ ನೀಡಲಿದೆ.

| | | |

Address

Hubballi-Dharwad City Corporation, Sir Siddappa Kambali Road Hubballi
Hubli
580020

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+918362213888

Alerts

Be the first to know and let us send you an email when ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ Hubballi Dharwad Municipal Corporation posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ Hubballi Dharwad Municipal Corporation:

Share