𝐑𝐚𝐣𝐚𝐧 𝐃𝐨𝐝𝐦𝐚𝐧𝐢

𝐑𝐚𝐣𝐚𝐧 𝐃𝐨𝐝𝐦𝐚𝐧𝐢 Contact information, map and directions, contact form, opening hours, services, ratings, photos, videos and announcements from 𝐑𝐚𝐣𝐚𝐧 𝐃𝐨𝐝𝐦𝐚𝐧𝐢, Public & Government Service, Byadagi, Haveri.

ಸೌರಮಾನ ಯುಗಾದಿ - ವಿಷು ಹಬ್ಬದ ಶುಭಾಶಯಗಳು.
15/04/2026

ಸೌರಮಾನ ಯುಗಾದಿ - ವಿಷು ಹಬ್ಬದ ಶುಭಾಶಯಗಳು.

ಡಾ. ಬಿ.ಆರ್. ಅಂಬೇಡ್ಕರ್ (ಭೀಮರಾವ್ ರಾಮ್‌ಜಿ ಅಂಬೇಡ್ಕರ್) ಅವರು ಏಪ್ರಿಲ್ 14, 1891 ರಂದು ಮಧ್ಯಪ್ರದೇಶದ ಮಾಹೋವ್ ಎಂಬಲ್ಲಿ ಜನಿಸಿದರು. ಅವರು ಭ...
14/04/2026

ಡಾ. ಬಿ.ಆರ್. ಅಂಬೇಡ್ಕರ್ (ಭೀಮರಾವ್ ರಾಮ್‌ಜಿ ಅಂಬೇಡ್ಕರ್) ಅವರು ಏಪ್ರಿಲ್ 14, 1891 ರಂದು ಮಧ್ಯಪ್ರದೇಶದ ಮಾಹೋವ್ ಎಂಬಲ್ಲಿ ಜನಿಸಿದರು. ಅವರು ಭಾರತದ ಸಂವಿಧಾನದ ಶಿಲ್ಪಿಯಾಗಿದ್ದಾರೆ ಮತ್ತು ಸಮಾಜ ಸುಧಾರಕ, ನ್ಯಾಯವಾದಿ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ತತ್ವಜ್ಞಾನಿಯಾಗಿಯೂ ಪ್ರಸಿದ್ಧರಾಗಿದ್ದಾರೆ.
ಅಂಬೇಡ್ಕರ್ ಅವರು ಅಸ್ಪೃಶ್ಯ ಸಮುದಾಯಕ್ಕೆ ಸೇರಿದವರಾಗಿದ್ದರು ಮತ್ತು ಬಾಲ್ಯದಿಂದಲೂ ತೀವ್ರ ತಾರತಮ್ಯವನ್ನು ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರು ಮತ್ತು ಅನೇಕ ಅಡೆತಡೆಗಳನ್ನು ಮೀರಿ ಉನ್ನತ ಶಿಕ್ಷಣವನ್ನು ಪಡೆದರು. ಅವರು ಮುಂಬೈನ ಎಲ್ಫಿನ್‌ಸ್ಟೋನ್ ಕಾಲೇಜಿನಿಂದ ಪದವಿ ಪಡೆದರು, ನಂತರ ಬರೋಡಾ ಮಹಾರಾಜರ ಸಹಾಯದಿಂದ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದಲೂ ಪದವಿ ಪಡೆದರು.
ಅಂಬೇಡ್ಕರ್ ಅವರ ಪ್ರಮುಖ ಸಾಧನೆಗಳು:
* ಭಾರತದ ಸಂವಿಧಾನದ ರಚನೆ: ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು ಮತ್ತು ಭಾರತದ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂವಿಧಾನವು ಎಲ್ಲಾ ನಾಗರಿಕರಿಗೂ ಸಮಾನತೆ ಮತ್ತು ನ್ಯಾಯವನ್ನು ഉറಪಡಿಸುತ್ತದೆ.
* ದಲಿತರ ಹಕ್ಕುಗಳಿಗಾಗಿ ಹೋರಾಟ: ಅವರು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಡಿದರು ಮತ್ತು ದಲಿತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.
* ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ: ಅವರು ಮಹಿಳೆಯರ ಸಮಾನತೆಗಾಗಿ ശക്തವಾಗಿ ಪ್ರತಿಪಾದಿಸಿದರು ಮತ್ತು ಹಿಂದೂ ಕೋಡ್ ಬಿಲ್ ಅನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಇದು ಮಹಿಳೆಯರಿಗೆ ಆಸ್ತಿ ಮತ್ತು ವಿಚ್ಛೇದನದ ಹಕ್ಕುಗಳನ್ನು ನೀಡಿತು.
* ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ: ಅವರು ಕಾರ್ಮಿಕರ ಹಕ್ಕುಗಳಿಗಾಗಿಯೂ ಹೋರಾಡಿದರು ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ನ್ಯಾಯಯುತ ವೇತನವನ್ನು ಪಡೆಯಲು ಶ್ರಮಿಸಿದರು.
* ಬೌದ್ಧ ಧರ್ಮ ಸ್ವೀಕಾರ: 1956 ರಲ್ಲಿ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು ಮತ್ತು ಅನೇಕ ದಲಿತರು ಅವರೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಡಿಸೆಂಬರ್ 6, 1956 ರಂದು ನಿಧನರಾದರು. ಅವರ ಕೊಡುಗೆಗಳನ್ನು ಭಾರತೀಯ ಸಮಾಜ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಇಂದಿಗೂ ದಲಿತರು ಮತ್ತು ಇತರ ಹಿಂದುಳಿದ ವರ್ಗದ ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಭಾರತೀಯ ಚಿತ್ರರಂಗದ ಸ್ವರ ಸಾಮ್ರಾಜ್ಞಿ , ಪ್ರಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಆಶಾ ಭೋಸ್ಲೆ ಅವರ ನಿಧನಕ್ಕೆ ತೀವ್ರ ಸಂತಾಪಗಳು. ಹಿಂದಿ, ಕನ್ನಡ,...
12/04/2026

ಭಾರತೀಯ ಚಿತ್ರರಂಗದ ಸ್ವರ ಸಾಮ್ರಾಜ್ಞಿ , ಪ್ರಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಆಶಾ ಭೋಸ್ಲೆ ಅವರ ನಿಧನಕ್ಕೆ ತೀವ್ರ ಸಂತಾಪಗಳು.

ಹಿಂದಿ, ಕನ್ನಡ, ತೆಲುಗು, ಮರಾಠಿ, ಇಂಗ್ಲಿಷ್, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 12 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಕಲಾಸೇವೆಗೈದಿರುವ ಅವರು, ಅತ್ಯಧಿಕ ರೆಕಾರ್ಡಿಂಗ್‌ ಹಾಡುಗಳ ಒಡತಿ ಎಂಬ ಗಿನ್ನಿಸ್‌ ದಾಖಲೆಯನ್ನೂ ಬರೆದಿದ್ದಾರೆ. ದಿವಂಗತ ಹಿನ್ನೆಲೆ ಗಾಯಕಿ ಭಾರತ ರತ್ನ ಲತಾ ಮಂಗೇಶ್ಕರ್ ಅವರ ಸಹೋದರಿಯಾಗಿರುವ ಆಶಾ ಅವರು, ವಿಶಿಷ್ಟ ಧ್ವನಿ ಹಾಗೂ ವಿಶಿಷ್ಟ ಗಾಯನ ಶೈಲಿಯಿಂದಲೇ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಅವರಿಗೆ ಪದ್ಮ ವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ಹಿರಿಯ ಗಾಯಕಿಯ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ.‌ ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬದವರು ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಕನ್ನಡ ನೆಲದ ಅಪ್ರತಿಮ ಚೇತನ, ಗಾನಗಂಧರ್ವ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಅವರ ಸರಳತೆ ...
12/04/2026

ಕನ್ನಡ ನೆಲದ ಅಪ್ರತಿಮ ಚೇತನ, ಗಾನಗಂಧರ್ವ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಅವರ ಸರಳತೆ ಮತ್ತು ಆದರ್ಶಗಳು ನಮಗೆ ಎಂದಿಗೂ ದಾರಿದೀಪ.

ಭಾರತ ಕಂಡ ಶ್ರೇಷ್ಠ ಇಂಜಿನಿಯರ್,  ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ ಭಾರತ ರತ್ನ ಶ್ರೀ ಸರ್ ಎಂ. ವಿಶ್ವೇಶ್ವರಯ್ಯನವರ ಪುಣ್ಯಸ್ಮರಣೆಯಂದು ಅವರ...
12/04/2026

ಭಾರತ ಕಂಡ ಶ್ರೇಷ್ಠ ಇಂಜಿನಿಯರ್, ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ ಭಾರತ ರತ್ನ ಶ್ರೀ ಸರ್ ಎಂ. ವಿಶ್ವೇಶ್ವರಯ್ಯನವರ ಪುಣ್ಯಸ್ಮರಣೆಯಂದು ಅವರಿಗೆ ನಮ್ಮ ಅನಂತ ನಮನಗಳು‌.

ಕನ್ನಡದ ಪ್ರಥಮ ಮಹಿಳಾ ಕವಯತ್ರಿ, ಶ್ರೇಷ್ಠ ವಚನಗಾರ್ತಿಯಾದ ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು.
12/04/2026

ಕನ್ನಡದ ಪ್ರಥಮ ಮಹಿಳಾ ಕವಯತ್ರಿ, ಶ್ರೇಷ್ಠ ವಚನಗಾರ್ತಿಯಾದ ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು.

10 ಕೆಜಿ ಅಕ್ಕಿಯನ್ನೂ ನೀಡುತ್ತೇವೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಅಬ್ಬರಿಸಿ ಬೊಬ್ಬಿರಿದ Siddaramaiah ಅವರು, ಇದೀಗ ಅಕ್ಕಿಯನ್ನು ನೀಡದೇ, ...
11/04/2026

10 ಕೆಜಿ ಅಕ್ಕಿಯನ್ನೂ ನೀಡುತ್ತೇವೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಅಬ್ಬರಿಸಿ ಬೊಬ್ಬಿರಿದ Siddaramaiah ಅವರು, ಇದೀಗ ಅಕ್ಕಿಯನ್ನು ನೀಡದೇ, ಹಣವನ್ನೂ ಕೊಡದೇ, ಮೋದಿ ಸರ್ಕಾರದಿಂದ ಸಿಗುವ ಅಕ್ಕಿಯನ್ನೂ ಸಹ ವಿದೇಶಕ್ಕೆ ರಫ್ತು ಮಾಡಿ ಬಡ ಜನತೆಗೆ ಕೇವಲ ಖಾಲಿ ಗೋಣಿ ಚೀಲ‌ ನೀಡುತ್ತಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ಎಪಿಎಂಸಿ ಗೋದಾಮಿನಿಂದ ಬಡವರಿಗೆ ಬಂದಿದ್ದ ಅಕ್ಕಿಯನ್ನು ಪ್ಯಾಕೆಟ್‌ನಲ್ಲಿ ತುಂಬಿ, ವಿದೇಶಕ್ಕೆ ರಫ್ತಾಗುತ್ತಿದ್ದ ಲಾರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಹಸ್ತಕ್ಷೇಪವಿಲ್ಲದೆ ಇಷ್ಟು ದೊಡ್ಡ ದಂಧೆ ನಡೆಸಲು ಸಾಧ್ಯವೇ ಇಲ್ಲ. ಸಚಿವ ಮುನಿಯಪ್ಪ ಅವರೇ ಈ ದಂಧೆಯಲ್ಲಿ ಮುಖ್ಯಮಂತ್ರಿಗಳಿಗೆ ಎಷ್ಟು ಸಂದಾಯವಾಗುತ್ತಿದೆ?

11/04/2026
ನಗದಿನಿಂದ ಒಂದು ಕ್ಲಿಕ್ ವರೆಗೆ, ಭಾರತದ ಪಾವತಿ ಕ್ರಾಂತಿಯು ಅಡೆತಡೆ ಇಲ್ಲದೆ ಮುಂದುವರೆದಿದೆ... ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್...
11/04/2026

ನಗದಿನಿಂದ ಒಂದು ಕ್ಲಿಕ್ ವರೆಗೆ, ಭಾರತದ ಪಾವತಿ ಕ್ರಾಂತಿಯು ಅಡೆತಡೆ ಇಲ್ಲದೆ ಮುಂದುವರೆದಿದೆ...

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಯುಪಿಐ ಡಿಜಿಟಲ್ ಮತ್ತು ಆತ್ಮನಿರ್ಭರ ಆರ್ಥಿಕತೆಗೆ ಶಕ್ತಿ ತುಂಬುತ್ತಿದೆ.


ಮಹಾತ್ಮ ಗಾಂಧೀಜಿಯವರ ಪ್ರತಿ ಹೆಜ್ಜೆಯಲ್ಲೂ ನೆರಳಾಗಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೌನ ಕ್ರಾಂತಿ ಮಾಡಿದ ತಾಯಿ  'ಕಸ್ತೂರ ಬಾ' ಅವರ  ಜನ್...
11/04/2026

ಮಹಾತ್ಮ ಗಾಂಧೀಜಿಯವರ ಪ್ರತಿ ಹೆಜ್ಜೆಯಲ್ಲೂ ನೆರಳಾಗಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೌನ ಕ್ರಾಂತಿ ಮಾಡಿದ ತಾಯಿ 'ಕಸ್ತೂರ ಬಾ' ಅವರ ಜನ್ಮದಿನದ ದಿವ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. 🌸
​ಸಹನೆ, ಸೌಮ್ಯತೆ ಮತ್ತು ತ್ಯಾಗದ ಪ್ರತೀಕವಾಗಿದ್ದ ಕಸ್ತೂರಬಾ ಗಾಂಧಿಯವರು ಎಂದೆಂದಿಗೂ ನಮಗೆ ಸ್ಫೂರ್ತಿ.

ವೇದಿಕೆ ಹತ್ತಿದರೆ ಬಾಬಾಸಾಹೇಬರ ಸಂವಿಧಾನದ ಪಾಠ! ಕೆಳಗಿಳಿದರೆ ಸರ್ಕಾರಿ ಅರಣ್ಯ ಆಸ್ತಿಯ ಲೂಟಿ! ಇದೇನಾ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರ ಅಸಲ...
11/04/2026

ವೇದಿಕೆ ಹತ್ತಿದರೆ ಬಾಬಾಸಾಹೇಬರ ಸಂವಿಧಾನದ ಪಾಠ! ಕೆಳಗಿಳಿದರೆ ಸರ್ಕಾರಿ ಅರಣ್ಯ ಆಸ್ತಿಯ ಲೂಟಿ!

ಇದೇನಾ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರ ಅಸಲಿ ಬಣ್ಣ? ಇವರು ನುಂಗಿರುವ ಅರಣ್ಯ ಭೂಮಿಯನ್ನು ಸಂವಿಧಾನದ ಅಡಿಯಲ್ಲೇ ವಶಪಡಿಸಿಕೊಳ್ಳುವ ಮೂಲಕ, ಕಾಂಗ್ರೆಸ್ ನ ಬೂಟಾಟಿಕೆಯ ಸಂವಿಧಾನ ನಾಟಕವನ್ನು ಕೋರ್ಟ್ ಬಯಲಿಗೆಳೆದಿದೆ.

Address

Byadagi
Haveri
581106

Telephone

+919663143391

Website

Alerts

Be the first to know and let us send you an email when 𝐑𝐚𝐣𝐚𝐧 𝐃𝐨𝐝𝐦𝐚𝐧𝐢 posts news and promotions. Your email address will not be used for any other purpose, and you can unsubscribe at any time.

Share