26/12/2025
ಭೀಮಾ ಮಿಷನ್ ವತಿಯಿಂದ ಕಲಬುರಗಿ ಯಾದಗಿರಿ ಮತ್ತು ಬೀದರ ಜಿಲ್ಲೆಯಲ್ಲಿ ಬರುವ ಮುಖ್ಯ ಕಾಲುವೆ ಮೇಲೆ ಅಧ್ಯಯನ ಪಾದಯಾತ್ರೆ ಹಮ್ಮಿಕೊಂಡಿದ್ದು ದಿನಾಂಕ 01/01/2026 ರಿಂದ 30/03/2026 ಕುರಿತು ಪತ್ರಿಕಾ ಗೋಷ್ಠಿ ನಡಿಸಲಾಯಿತು ಕರ್ನಾಟಕ ನೀರಾವರಿ ನಿಗಮ ನಿಯಮಿತ ನೀರಾವರಿ ಯೋಜನೆಗಳ ಕಲ್ಬುರ್ಗಿ ವಲಯ ಕಚೇರಿಗಳ ಅಡಿಯಲ್ಲಿ ಬರುವ ಭೀಮಾ ಎತ್ತ ನೀರಾವರಿ ತಾಲೂಕು ಅಫ್ಜಲಪುರ ಅಮರ್ಜಾ ಆಳಂದ್ ತಾಲೂಕ್ ಚುಲಕಿನಾಳ ತಾಲೂಕು ಬಸವಕಲ್ಯಾಣ ಕಾರಂಜ ಬೀದರ್ ಚಂದ್ರಪ್ಪಳ್ಳಿ, ಚಿಂಚೋಳಿ ತಾಲೂಕ್ , ಮಲ್ಲಮಾರಿ ಕೆಳದಂಡೆ ಚಿಂಚೋಳಿ ತಾಲೂಕ್ ಹತ್ತಿಕುಣಿ ತಾಲೂಕ್ ಯಾದಗಿರಿ ಸೌದಗರ್ ತಾಲೂಕ್ ಯಾದಗಿರಿ ಮಲ್ಲಮಾರಿ ಮೇಲ್ದಂಡೆ ತಾಲೂಕ್ ಹುಮುನಾಬಾದ್ ಗಂಡೋರಿನಾಲ್ ತಾಲೂಕ್ ಕಮಲಾಪುರ ಮತ್ತು ಬೆಣ್ಣೆತೋರ ತಾಲೂಕ್ ಚಿತ್ತಾಪುರ ಈ ಮೂರು ಜಿಲ್ಲೆಗಳಲ್ಲಿ ಸ್ಥಾಪಿಸಲಾದ ಮಾಧ್ಯಮಕ್ಕೆರೆ ಡ್ಯಾಮ್ ಗಳು ನೀರಾವರಿ ಯೋಜನೆ ಸ್ಥಾಪಿಸಲಾಗಿದೆ ಜಲಾಶಯಗಳಲ್ಲಿ ನೀರಿದೆ ಮುಖ್ಯ ಕಾಲುವೆಗಳಿವೆ ಆದರೆ ರೈತರ ಹೊಲಗಳಿಗೆ ನೀರು ತಲುಪಿಲ್ಲ ಏಕೆ ನೀರಾವರಿ ಸೌಲಭ್ಯ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ವಿತರಣಾ ಕಾಲುವೆ ಮರಿ ಕಾಲುವೆಯಿಂದ ನೀರನ್ನು ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಜಾಗೃತಿಯ ಕೊರತೆ ಕಂಡುಬರುತ್ತದೆ ಮತ್ತು ರಾಜಕೀಯ ನಾಯಕರ ಇಚ್ಛಾಶಕ್ತಿ ಇಲ್ಲದ ಕಾರಣ ಸಂಪೂರ್ಣವಾಗಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ರೈತರು ಎಚ್ಚೆತ್ತುಕೊಂಡು ಸಂಗ್ರಹವಾಗಿದ್ದ ನೀರನ್ನು ಬಳಸಿಕೊಳ್ಳಲು ಸಣ್ಣದರಾಗಬೇಕಾಗಿದೆ ನಾವು ಎಚ್ಚರಗೊಳ್ಳುವುದಲ್ಲದೆ ಜವಾಬ್ದಾರಿ ಹೊಂದಿದ ಅಧಿಕಾರಿಗಳನ್ನು ಎಚ್ಚರಿಸಬೇಕಾಗಿದೆ ನಮ್ಮ ಸ್ಪಷ್ಟ ಬೇಡಿಕೆಗಳು 1) ಎಲ್ಲಾ ನೀರಾವರಿ ಯೋಜನೆಗಳ ತ್ವರಿತ ಪೂರ್ಣಗೊಳಿಸಬೇಕು 2) ಕಾಲುವೆಗಳ ಶುದ್ಧೀಕರಣ 3) ಸಂಗ್ರ ನೀರಿನ ನೂರರಷ್ಟು ಬಳಕೆ 4) ಕಾಲುವೆ ವಿನ್ಯಾಸ ದೋಷ ತಿದ್ದುಪಡಿ 5) ಶಾಶ್ವತ ನೀರಾವರಿ ಕಾರ್ಯ ಯೋಜನೆ_--------------------------=- ಏತಕ್ಕಾಗಿ ಹೋರಾಟ 1) ಜಲಾಶಯ ತುಂಬಿದರು ನೀರಾವರಿ ತಲುಪದ ಸ್ಥಿತಿ 2) ಅಪೂರ್ಣ ಮುಖ್ಯ ಕಾಲುವೆ ವಿತರಣಾ ಕಾಲುವೆಗಳು ಮರಿ ಕಾಲುವೆಗಳು 3) ಮಣ್ಣು ಕಲ್ಲು ತುಂಬಿದ ಮತ್ತು ಒಡೆದ ಕಾಲುವೆಗಳು 4) ಸರ್ಕಾರ ಹಾಗೂ ಅಧಿಕಾರಿಗಳ ಅಲಕ್ಷ 5) 11 ನೀರಾವರಿ ಯೋಜನೆಗಳು ಅಪೂರ್ಣ ಸ್ಥಿತಿಯಲ್ಲಿ. ನೀರಿದ್ದರೆ ನೂರಾರು ಅಭಿವೃದ್ಧಿ ನೀರಿದೆ ಡ್ಯಾಮ್ ಇದೆ ಕಾಲುವೆ ಇದೆ ರೈತರ ಹೊಲಗಳಿಗೆ ನೀರಿಲ್ಲ ಏಕೆ