17/12/2024
ಎಲ್ಲರಿಗೂ ನಮಸ್ಕಾರ 🙏🇮🇳
" ಕಲಬುರಗಿ ಚಳಿಗೆ ಹೊದಿಕೆ (ಬ್ಲಾಂಕೆಟ್) ಅಭಿಯಾನ"
ಮಾನವೀಯತೆ ಕಾರ್ಯಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ!
ಯಪ್ಪ ಏನ್ ಚಳಿ ರೀ.....
ಇ ಕೊರೆಯುವ ಚಳಿಯಲ್ಲಿ ಮನೆಯಲ್ಲಿ ಮಲಗುವ ನಾವೇ ನಡುಗುವೆವು ಇನ್ನು ರಸ್ತೆಯ ಬದಿಯಲ್ಲಿ ಚಳಿಯಲ್ಲಿ ನಡುಗುತ್ತ ಪ್ಲಾಸ್ಟಿಕ್ ಹೊದ್ದಿಕೊಂಡು ಮಲಗುವ ಬಡ ಜೀವಗಳ ಪಾಡು ಏನಾಗಿರಬಹುದು...?
ಪ್ರತಿ ವರ್ಷದಂತೆ ಈ ವರ್ಷವೂ ಕೂಡ "ಕಲಬುರಗಿ ಚಳಿಗೆ ಹೊದಿಕೆ (ಬ್ಲಾಂಕೆಟ್)" ಅಭಿಯಾನದ ಅಂಗವಾಗಿ ನಾಲ್ಕುಚಕ್ರ ತಂಡ ನಸುಕಿನ ಜಾವ 4 ಗಂಟೆಗೆ ಪ್ರಾರಂಭಿಸಿ ರಸ್ತೆಯ ಬದಿಯಲ್ಲಿ ಮಲಗುವ ಅಶಕ್ತರಿಗೆ, ನಿರ್ಗತಿಕರಿಗೆ, ಮಾನಸಿಕ ಅಸ್ವಸ್ಥರಿಗೆ, ಭಿಕ್ಷುಕರಿಗೆ, ರೈಲು ನಿಲ್ದಾಣ, ಬಸ ನಿಲ್ದಾಣಗಳಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಚಾದರಗಳನ್ನು (ಬ್ಲಾಂಕೆಟ್) ವಿತರಣೆ ಮಾಡಲಾಯಿತು.. 🙌
ಕೆಲವೊಬ್ಬರ ಪಾಡು ಹೇಳತೀರದು ಯಾವುದೋ ಒಂದು ಮೂಲೆಯಲ್ಲಿ ನಡುಗುತ್ತ ಮಲಗಿರುವುದನ್ನು ನೋಡಿದರೆ ಅತೀವ ನೋವಾಗುತ್ತೆ.. ಈ ಜಗತ್ತಿನಲ್ಲಿ ಬಹಳಷ್ಟು ಜನ ಪ್ರೀತಿ ಕಾಳಜಿಯಿಂದ ವಂಚಿತರಿದ್ದಾರೆ ಸಾಧ್ಯವಾದಷ್ಟು ಅಂತವರಿಗೆ ಪ್ರೀತಿ ಹಂಚುವ ಕಾಳಜಿ ತೋರಿಸುವ ಮತ್ತು ಅವರ ಸಹಾಯಕ್ಕೆ ನಿಲ್ಲುವ ಗುಣವನ್ನು ಹೆಚ್ಚಿಸಿಕೊಳ್ಳೊಣ... Yessss! ಇದ್ದುದ್ದರಲ್ಲಿ ಖುಷಿಯ ಪಡ್ಬೆಕು ಇದೇ ನಿಜವಾದ ಜೀವನ... 💌
ಈ ಅಭಿಯಾನಕ್ಕೆ ಕೈ ಜೋಡಿಸಿ ಇವರೆಲ್ಲರ ಮುಖದಲ್ಲಿ ನಗು ಮೂಡಿಸುವ ಒಂದು ಚಿಕ್ಕ ಪ್ರಯತ್ನಕ್ಕೆ ಸಹಕರಿಸಿದ ದಾನಿಗಳು, ನಾಲ್ಕುಚಕ್ರ ತಂಡಕ್ಕೆ ಮತ್ತು ಸಹೃದಯಿಗಳೆಲ್ಲರಿಗೂ ಅನಂತ ಧನ್ಯವಾದಗಳು...🙏💐
ಎಲ್ಲರೂ ಜೊತೆಗೂಡಿ ಕೈಲಾದಷ್ಟು ಸಮಾಜಮುಖಿ ಸೇವೆ ಮಾಡೋಣ......🙏😊
TeamNalkuChakra