Amaranath Sahu Kulageri

Amaranath Sahu Kulageri "ಏನಾದರೂ ಆಗು ಮೊದಲು ಮಾನವನಾಗು"

ಕಲಬುರಗಿ ನಗರದ ಬಸವ ಸಂಸ್ಕೃತಿ ವೇದಿಕೆಯಲ್ಲಿ 893ನೇ ಬಸವ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ವೀರ...
21/04/2026

ಕಲಬುರಗಿ ನಗರದ ಬಸವ ಸಂಸ್ಕೃತಿ ವೇದಿಕೆಯಲ್ಲಿ 893ನೇ ಬಸವ ಜಯಂತಿ ಪ್ರಯುಕ್ತ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವೀರಶೈವ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ನಮ್ಮೆಲ್ಲರ ನೆಚ್ಚಿನ ನಾಯಕರು ಶ್ರೀ ಅರುಣಕುಮಾರ ಎಸ್ ಪಾಟೀಲ್ ಕೊಡಲಹಂಗರಗಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಸವಣ್ಣರ ತತ್ವ-ಆದರ್ಶಗಳು ಇಡೀ ಪ್ರಪಂಚಕ್ಕೆ ದಾರಿ ತೋರಿಸುವಂತವು, ಪ್ರೇರಣಾದಾಯಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ವಚನಗಳ ಮೂಲಕ ಸಮಾಜದ ಅಂತರಂಗವನ್ನು ಸ್ಪರ್ಶಿಸಿದ ಬಸವಣ್ಣರು “ಕಾಯಕವೇ ಕೈಲಾಸ” ಎಂಬ ತತ್ವದಡಿ ಬದುಕಿನ ಮೌಲ್ಯಗಳನ್ನು ಬೋಧಿಸಿದ್ದಾರೆ. ಅವರ ಚಿಂತನೆಗಳು ನಿತ್ಯ ನೂತನವಾಗಿದ್ದು, ವಿದ್ಯಾರ್ಥಿಗಳು ಹಾಗೂ ಯುವಜನತೆ ಅವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಬಸವಣ್ಣರ ಆದರ್ಶಗಳು ಎಲ್ಲರಿಗೂ ಪ್ರೇರಣೆ ಹಾಗೂ ಮಾರ್ಗದರ್ಶನವಾಗಲಿ ಎಂಬ ಆಶಯ ವ್ಯಕ್ತಪಡಿಸಿ, ಬೆಂಗಳೂರಿನ ಮೆಟ್ರೋ ನಿಲ್ದಾಣಕ್ಕೆ "ಬಸವಣ್ಣರ"ಹೆಸರಿಡಬೇಕು ಹಾಗೂ ಮಕ್ಕಳಿಗೆ ಪಾಲಕರು ಬಸವಣ್ಣರ ಚಿಂತನೆಗಳನ್ನು ಪರಿಚಯಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪರಮಪೂಜ್ಯರು, ಜನಪ್ರತಿನಿಧಿಗಳು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ಸಮಸ್ತ ನಾಡಿನ ಜನತೆಗೆ ಜಗಜ್ಯೋತಿ ಶ್ರೀ ಅಣ್ಣ ಬಸವಣ್ಣನವರ 893ನೇ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು.🙏ಬಸವಣ್ಣನವರ ಸಮತೆ ಮತ್ತು ಕಾಯಕದ ತತ್ವಗಳು ನ...
20/04/2026

ಸಮಸ್ತ ನಾಡಿನ ಜನತೆಗೆ ಜಗಜ್ಯೋತಿ ಶ್ರೀ ಅಣ್ಣ ಬಸವಣ್ಣನವರ 893ನೇ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು.🙏

ಬಸವಣ್ಣನವರ ಸಮತೆ ಮತ್ತು ಕಾಯಕದ ತತ್ವಗಳು ನಾಡಿನ ಜನರ ಮನಗಳಲ್ಲಿ ಸದಾ ಬೆಳಗಲಿ.
ಈ ಪವಿತ್ರ ದಿನವು ಎಲ್ಲರಿಗೂ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಯನ್ನು ತರಲಿ.

ಕಲಬುರಗಿ ನಗರದಲ್ಲಿ ವೀರಶೈವ ಸಮಾಜ ಜಿಲ್ಲಾಧ್ಯಕ್ಷರು ಹಾಗೂ ನಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಅರುಣಕುಮಾರ ಎಸ್ ಪಾಟೀಲ ಕೊಡಲಹಂಗರಗಾ ಅವರಿಗೆ ಬಸ...
19/04/2026

ಕಲಬುರಗಿ ನಗರದಲ್ಲಿ ವೀರಶೈವ ಸಮಾಜ ಜಿಲ್ಲಾಧ್ಯಕ್ಷರು ಹಾಗೂ ನಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಅರುಣಕುಮಾರ ಎಸ್ ಪಾಟೀಲ ಕೊಡಲಹಂಗರಗಾ ಅವರಿಗೆ ಬಸವಮಿತ್ರ ಮಂಡಳಿಯಿಂದ ಅವರ ನಿವಾಸದಲ್ಲಿ ಬಸವಜಯಂತಿ ಪ್ರಯುಕ್ತ ಸನ್ಮಾನಿಸಿ ಗೌರವಿಸಿದ ಸಂದರ್ಭ.

ಂತಿ_ಉತ್ಸವ_ಸಮಿತಿ_ಕಲಬುರಗಿ

ಕಲಬುರಗಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ "135 ನೇ ಜಯಂತೋತ್ಸವದ" ಅಂಗವಾಗಿ ಕಲಬುರಗಿಯಲ್ಲಿ ವೀರಶೈವ ಸಮಾಜ ಜಿಲ್ಲ...
15/04/2026

ಕಲಬುರಗಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ "135 ನೇ ಜಯಂತೋತ್ಸವದ" ಅಂಗವಾಗಿ ಕಲಬುರಗಿಯಲ್ಲಿ ವೀರಶೈವ ಸಮಾಜ ಜಿಲ್ಲಾಧ್ಯಕ್ಷರಾದ, ಶ್ರೀ ಅರುಣಕುಮಾರ ಎಸ್ ಪಾಟೀಲ ಕೊಡಲಹಂಗರಗಾ ಅವರು ಡಾ!!ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಹೂ ಮಾಲೆ ಹಾಕಿ ಗೌರವ ನಮನಗಳು ಸಲ್ಲಿಸಿದರು.💐💐

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು ಮತ್ತು ರಾಜ್ಯದ ...
14/04/2026

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು ಮತ್ತು ರಾಜ್ಯದ ಸಮಸ್ತ ಜನತೆಗೆ 'ಸಮಾನತೆಯ ಹರಿಕಾರ' ಡಾ ಬಿ.ಆರ್.ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು.

ಭಾರತೀಯರ ಆತ್ಮಗೌರವವನ್ನೂ ಬಡಿದೆಬ್ಬಿಸಿದ ಅವರ ಚಿಂತನೆಗಳು ಪ್ರತಿಯೊಬ್ಬ ಭಾರತೀಯನಿಗೂ ಶಕ್ತಿ ನೀಡುವ ಶಾಶ್ವತ ಪ್ರೇರಣೆ. ನಮ್ಮ ಶ್ರೇಷ್ಠ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬಲವಾದ ಅಡಿಪಾಯ ಕಟ್ಟಿದ ಮಹಾನ್ ದಾರ್ಶನಿಕ ಡಾ. ಅಂಬೇಡ್ಕರ್ ಅವರ ಚಿಂತನೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ.
#

ಕಲಬುರಗಿ ನಗರದಲ್ಲಿ ನಡೆದ ಬ್ಯಾಡ್ಮಿಂಟನ್ ಓಪನ್ ಟೂರ್ನಮೆಂಟ್ ಫಾರ್ ಮೆನ್ಸ್ ಪಂದ್ಯಾವಳಿಯನ್ನು ನಮ್ಮೆಲ್ಲರ ನೆಚ್ಚಿನ ನಾಯಕರು ಹಾಗೂ ಜಿಲ್ಲಾ ಬ್ಯಾಡ...
04/04/2026

ಕಲಬುರಗಿ ನಗರದಲ್ಲಿ ನಡೆದ ಬ್ಯಾಡ್ಮಿಂಟನ್ ಓಪನ್ ಟೂರ್ನಮೆಂಟ್ ಫಾರ್ ಮೆನ್ಸ್ ಪಂದ್ಯಾವಳಿಯನ್ನು ನಮ್ಮೆಲ್ಲರ ನೆಚ್ಚಿನ ನಾಯಕರು ಹಾಗೂ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಅರುಣಕುಮಾರ ಎಸ್ ಕೊಡಲಹಂಗರಗಾ ಅವರು ಅತಿಥಿಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಗಣ್ಯರು, ಕ್ರೀಡಾಪಟುಗಳು ಹಾಗೂ ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

TrendingNow ProudMoment ViralPost

04/04/2026

ಕನ್ನಡ ವಚನ ಸಾಹಿತ್ಯ ಅಕಾಡೆಮಿ, ಕಲಬುರಗಿ ವತಿಯಿಂದ ನಡೆದ ತ್ರಿವಿಧ ದಾಸೋಹಿ ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಗಳ 109ನೇ ಜನ್ಮದಿನದ ಅಂಗವ...
04/04/2026

ಕನ್ನಡ ವಚನ ಸಾಹಿತ್ಯ ಅಕಾಡೆಮಿ, ಕಲಬುರಗಿ ವತಿಯಿಂದ ನಡೆದ ತ್ರಿವಿಧ ದಾಸೋಹಿ ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಗಳ 109ನೇ ಜನ್ಮದಿನದ ಅಂಗವಾಗಿ ನಡೆದ ಸಿದ್ಧಗಂಗಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೀರಶೈವ ಸಮಾಜ ಜಿಲ್ಲಾಧ್ಯಕ್ಷರು ಹಾಗೂ ಶ್ರೀ ಸಿದ್ದಗಂಗಾ ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಅರುಣಕುಮಾರ ಎಸ್ ಪಾಟೀಲ್ ಕೊಡಲಹಂಗರಗಾ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾಮೀಜಿಯವರ ತ್ಯಾಗ, ತಪಸ್ಸು, ದಾಸೋಹ ಸೇವೆಯನ್ನು ಸ್ಮರಿಸಿ, ಇಂದಿನ ಪೀಳಿಗೆಗೆ ಅವರ ಬದುಕು ಒಂದು ದೀಪಸ್ತಂಭ ಎಂಬುದನ್ನು ಮನದಟ್ಟು ಮಾಡಿದರು. ತ್ರಿವಿಧ ದಾಸೋಹದ ಮಹತ್ವ, ಶಿಕ್ಷಣ ಕ್ರಾಂತಿಯ ಮೂಲಕ ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿದರು.

ಇಂತಹ ಮಹನೀಯರ ಆದರ್ಶಗಳು ನಮ್ಮ ಜೀವನಕ್ಕೆ ದಾರಿ ತೋರಿಸಲಿ… ನಮ್ಮ ಸಮಾಜದಲ್ಲಿ ಸೇವಾಭಾವನೆ ಇನ್ನಷ್ಟು ಬೆಳೆಯಲಿ.

ಈ ಸಮಯದಲ್ಲಿ ಗಣ್ಯರು ಉಪಸ್ಥಿತರಿದ್ದರು.

kalaburagi

ನಾಡಿನ ಸಮಸ್ತ ಭಕ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು!ಭಕ್ತಿ, ಶಕ್ತಿ ಮತ್ತು ಅಪ್ರತಿಮ ಸೇವಾ ಮನೋಭಾವದ ಪ್ರತೀಕವಾಗಿರುವ ರಾಮಭಕ್ತ ಆಂಜನೇಯ ಸ್ವಾಮ...
02/04/2026

ನಾಡಿನ ಸಮಸ್ತ ಭಕ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು!

ಭಕ್ತಿ, ಶಕ್ತಿ ಮತ್ತು ಅಪ್ರತಿಮ ಸೇವಾ ಮನೋಭಾವದ ಪ್ರತೀಕವಾಗಿರುವ ರಾಮಭಕ್ತ ಆಂಜನೇಯ ಸ್ವಾಮಿಯ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ.

ನಡೆದಾಡುವ ದೇವರು ಸೇವೆಯನ್ನು ಕಾಯಕವೇ ಕೈಲಾಸ ಎಂದ ಅಭಿನವ ಬಸವಣ್ಣ, ಕರ್ನಾಟಕ ರತ್ನ, ಶ್ರೀ ಶ್ರೀ ಶ್ರೀ ಲಿಂ.ಡಾ.ಶಿವಕುಮಾರ ಮಹಾಸ್ವಾಮಿಜೀಗಳ 119ನೇ...
01/04/2026

ನಡೆದಾಡುವ ದೇವರು ಸೇವೆಯನ್ನು ಕಾಯಕವೇ ಕೈಲಾಸ ಎಂದ ಅಭಿನವ ಬಸವಣ್ಣ, ಕರ್ನಾಟಕ ರತ್ನ, ಶ್ರೀ ಶ್ರೀ ಶ್ರೀ ಲಿಂ.ಡಾ.ಶಿವಕುಮಾರ ಮಹಾಸ್ವಾಮಿಜೀಗಳ 119ನೇ ಜನ್ಮ ದಿನದ ಭಕ್ತಿ ಪೂರ್ವಕ ನಮನಗಳು🙏🙏

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು.ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳು ನಮ್ಮ ಜೀವನದಲ್ಲಿ ಧರ್ಮ, ಸತ್ಯ ಮತ್ತು ...
26/03/2026

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು.
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳು ನಮ್ಮ ಜೀವನದಲ್ಲಿ ಧರ್ಮ, ಸತ್ಯ ಮತ್ತು ನಿಷ್ಠೆಯ ದಾರಿಯನ್ನು ಬೆಳಗಲಿ

Address

Kulageri
Gulbarga
585325

Website

Alerts

Be the first to know and let us send you an email when Amaranath Sahu Kulageri posts news and promotions. Your email address will not be used for any other purpose, and you can unsubscribe at any time.

Contact The Organization

Send a message to Amaranath Sahu Kulageri:

Share

Category