BJP Kalburgi

BJP Kalburgi Bjp Kalaburagi page

ಭಾರತಮಾತೆಯ ಸೇವಕನಾಗಿ ಭಾರತೀಯರಿಗೆ ಪ್ರಧಾನಸೇವಕನಾಗಿ ಭಾರತದ ಹಿರಿಮೆಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಧೀಮಂತ ನಾಯಕ, ಜಾಗತಿಕವಾಗಿ ಭಾರತವೇ...
17/09/2025

ಭಾರತಮಾತೆಯ ಸೇವಕನಾಗಿ ಭಾರತೀಯರಿಗೆ ಪ್ರಧಾನಸೇವಕನಾಗಿ ಭಾರತದ ಹಿರಿಮೆಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಧೀಮಂತ ನಾಯಕ, ಜಾಗತಿಕವಾಗಿ ಭಾರತವೇ ಸರ್ವ ಶ್ರೇಷ್ಠ ಎಂಬ ಸಂಕಲ್ಪದೊಂದಿಗೆ ಆಡಳಿತ ನಡೆಸುತ್ತಿರುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಗೆ ಜನ್ಮದಿನದ ಶುಭಾಶಯಗಳು.

ಇಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಮರನಾಥ ಪಾಟೀಲ ಮಹಾಗಾಂವ ಸರ್ ರವರ ನಿವಾಸಕ್ಕೆ ಆಗಮಿಸಿದ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ಗುರ...
26/06/2025

ಇಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಮರನಾಥ ಪಾಟೀಲ ಮಹಾಗಾಂವ ಸರ್ ರವರ ನಿವಾಸಕ್ಕೆ ಆಗಮಿಸಿದ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ಗುರುಪ್ರಕಾಶ್ ಪಾಸ್ವಾನ ರವರಿಗೆ ಸನ್ಮಾನಿಸಲಾಯಿತು. ನಂತರ ನಗರದ ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಹಾಗೂ ಚೇಂಬರ್ ಆಫ್ ಕಾಮರ್ಸ್ ಆಡಿಟೋರಿಯಂನಲ್ಲಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್ ಕಲಬುರಗಿ ವತಿಯಿಂದ ಆಯೋಜಿಸಿದ್ದ "ತುರ್ತು ಪರಿಸ್ಥಿತಿ" ಯನ್ನು ಹೆರಿದ ಕಾಂಗ್ರೆಸ್ ಸರ್ಕಾರದ ಕರಾಳ ಇತಿಹಾಸಕ್ಕೆ 50 ವರ್ಷ ತುಂಬಿದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಮರನಾಥ ಪಾಟೀಲ, ಮಹಾಗಾಂವ ಸರ್ ರವರು ಪಾಲ್ಗೊಂಡಿದರು. ತುರ್ತು ಪರಿಸ್ಥಿತಿಯ ಕರಾಳ ದಿನಗಳು ಕುರಿತು ಬಿಜೆಪಿ ರಾಷ್ಟೀಯ ವಕ್ತರರಾದ ಶ್ರೀ ಗುರುಪ್ರಕಾಶ ಪಾಸ್ವನ ಜೀ ಹಾಗೂ ಉತ್ತರಪ್ರಾಂತ ಪ್ರಚಾರ ಪ್ರಮುಖರಾದ ಶ್ರೀ ಕೃಷ್ಣ ಜೋಶಿ ಜೀ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಮಾಜಿ ಸಂಸದರಾದ ಡಾ ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮೂಡ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ಸುಭಾಷ ಆರ್ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷರಾದ ಅಶೋಕ ಬಗಲಿ, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕೇಂದ್ರ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.

24/06/2025

ಭಾರತದ ಇತಿಹಾಸದ ಕರಾಳ ಅಧ್ಯಾಯ ಎಂದೇ ಪರಿಗಣಿಸಲಾಗುವ ತುರ್ತು ಸ್ಥಿತಿ ಹೇರಿಕೆಯಾಗಿ ಬುಧವಾರಕ್ಕೆ 50 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್....

ಸ್ವಪಕ್ಷದ ಶಾಸಕರ ವಿಶ್ವಾಸವನ್ನೇ ಗಳಿಸಲು ವಿಫಲವಾದ ಕಾಂಗ್ರೆಸ್ ಸರ್ಕಾರದಿಂದ ಜನ ಸಾಮಾನ್ಯರೇನು ನಿರೀಕ್ಷಿಸಲು ಸಾಧ್ಯ!ಕಾಂಗ್ರೆಸ್‌ ಪಕ್ಷದ ಶಾಸಕರೇ...
24/06/2025

ಸ್ವಪಕ್ಷದ ಶಾಸಕರ ವಿಶ್ವಾಸವನ್ನೇ ಗಳಿಸಲು ವಿಫಲವಾದ ಕಾಂಗ್ರೆಸ್ ಸರ್ಕಾರದಿಂದ ಜನ ಸಾಮಾನ್ಯರೇನು ನಿರೀಕ್ಷಿಸಲು ಸಾಧ್ಯ!

ಕಾಂಗ್ರೆಸ್‌ ಪಕ್ಷದ ಶಾಸಕರೇ ಅನುದಾನಕ್ಕಾಗಿ ಎರಡು ವರ್ಷ ಅಲೆಯಬೇಕು ಅಂದರೆ, ಇನ್ನು ಜನಸಾಮಾನ್ಯರ ಗತಿ ಏನು?

"ಒಂದು ರಾಷ್ಟ್ರ - ಒಂದು ಚುನಾವಣೆ ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರದ ಶ್ರೇಷ್ಠ ಕಲ್ಪನೆ "ಕಲಬುರಗಿಯಲ್ಲಿಂದು ಆಯೋಜಿಸಿದ್ದ ಒಂದು ದೇಶ - ಒಂದು ಚುನ...
14/06/2025

"ಒಂದು ರಾಷ್ಟ್ರ - ಒಂದು ಚುನಾವಣೆ
ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರದ ಶ್ರೇಷ್ಠ ಕಲ್ಪನೆ "

ಕಲಬುರಗಿಯಲ್ಲಿಂದು ಆಯೋಜಿಸಿದ್ದ ಒಂದು ದೇಶ - ಒಂದು ಚುನಾವಣೆ ಕುರಿತ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ದೇಶದ ನಾಗರೀಕರ ಬಹು ವರ್ಷಗಳ ಆಶಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಿಸಿ ಸುಭದ್ರ ಭಾರತ ಕಟ್ಟುವ ನಿಟ್ಟಿನಲ್ಲಿ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರ ನೇತೃತ್ವದ ಸರ್ಕಾರ ಜಾರಿಗೊಳಿಸಿದೆ.

ಏಕಕಾಲದಲ್ಲಿ ಚುನಾವಣೆ ನಡೆಯುವುದರಿಂದ ಚುನಾವಣಾ ವೆಚ್ಚದಲ್ಲಿ ಭಾರಿ ಇಳಿಕೆಯಾಗಲಿದ್ದು, ಸರ್ಕಾರಿ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡುವುದು ಕಡಿಮೆಯಾಗುತ್ತದೆ. ರಾಜಕೀಯ ಪಕ್ಷಗಳೂ ಚುನಾವಣೆ ಬಿಟ್ಟು, ಆಡಳಿತದತ್ತ ಗಮನಕೊಡಲು ಸಾಧ್ಯವಾಗುತ್ತದೆ. ಪದೇ ಪದೇ ಚುನಾವಣೆ ನಡೆಯುವುದರಿಂದ ಜನರಿಗೆ ಆಗುವ ತೊಂದರೆಗಳ ನಿವಾರಣೆ ಸೇರಿದಂತೆ ಆಡಳಿತಾತ್ಮಕ ಮತ್ತು ಭದ್ರತಾ ಪಡೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಈ ಕುರಿತು ಎಲ್ಲೆಡೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿಜೀ, ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ವಿಜೇಯದ್ರ ಯುಡ್ಯೂರಪ್ಪ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಡಾ|| ಮುರಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶಿಲ್ ನಮೋಶಿ, ಮಾಜಿ ಸಂಸದರಾದ ಶ್ರೀ ಉಮೇಶ್ ಜಾಧವ್, ಪ್ರಮುಖರಾದ ಶ್ರೀ ಎಂ.ಶರಣಬಸಪ್ಪನವರು, ಶ್ರೀ ಎಸ್.ವಿ.ಪಾಸರ್ ಅವರು, ಎಪಿಎಂಸಿ ಅಧ್ಯಕ್ಷರಾದ ಶ್ರೀ ಸಂತೋಷ್, ಅಭಿಯಾನದ ಸಹ ಸಂಚಾಲಕರಾದ ಶ್ರೀಮತಿ ಪ್ರತಿಮಾ ಸುಭಾಷ್, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಪ್ರಮುಖರು, ಸಾರ್ವಜನಿಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ಕಲಬುರ್ಗಿ ಬಿ.ಡಿ.ಎ. ಇಂಜಿನಿಯರಿಂಗ್‌ ಕಾಲೇಜ್‌ ಆಡಿಟೋರಿಯಂನಲ್ಲಿ ಏರ್ಪಡಿಸಲಾದ ಮೋದ...
14/06/2025

ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ಕಲಬುರ್ಗಿ ಬಿ.ಡಿ.ಎ. ಇಂಜಿನಿಯರಿಂಗ್‌ ಕಾಲೇಜ್‌ ಆಡಿಟೋರಿಯಂನಲ್ಲಿ ಏರ್ಪಡಿಸಲಾದ ಮೋದಿ ಸರ್ಕಾರದ 11 ವರ್ಷಗಳ ಸಾಧನೆ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರದರ್ಶಿನಿಯನ್ನು ಉದ್ಘಾಟಿಸಿದರು.

ಬಳಿಕ ಕಲಬುರ್ಗಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಆವರಣದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುರುಗೇಶ್‌ ನಿರಾಣಿ, ಶ್ರೀಮತಿ ಮಾಳವಿಕಾ ಅವಿನಾಶ್‌, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಶರಣು ತಳ್ಳೀಕೇರಿ, ಶಾಸಕರಾದ ಶ್ರೀ ಶೈಲೇಂದ್ರ ಬೆಲ್ದಾಳೆ, ಶ್ರೀ ಬಸವರಾಜ ಮತ್ತಿಮೂಡ್, ಮಾಜಿ ಶಾಸಕರಾದ ಶ್ರೀ ದತ್ತಾತ್ರೇ ಸಿ ಪಾಟೀಲ್ ರೇವೂರ್ ಡಾ. ಅವಿನಾಶ್ ಜಾಧವ್, ಪರಿಷತ್‌ ಸದಸ್ಯರಾದ ಶ್ರೀ ಶಶಿಲ್‌ ನಾಮೋಶಿ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಕಲಬುರ್ಗಿ ನಗರ ಜಿಲ್ಲಾಧ್ಯಕ್ಷರಾದ ಶ್ರೀ ಚಂದ್ರಕಾಂತ್ ಬಿ. ಪಾಟೀಲ್, ಕಲಬುರ್ಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಅಶೋಕ್ ಬಗಲಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

Live :- ಪತ್ರಿಕಾಗೋಷ್ಠಿ ಉಪಸ್ಥಿತಿ :- ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಶಾಸಕರಾದ ಶ್ರೀ ಅವಿನಾಶ್ ಜಾಧವ್, ಜಿಲ್ಲಾದ್ಯಕ್ಷರದ ಶ...
14/06/2025

Live :- ಪತ್ರಿಕಾಗೋಷ್ಠಿ

ಉಪಸ್ಥಿತಿ :- ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಶಾಸಕರಾದ ಶ್ರೀ ಅವಿನಾಶ್ ಜಾಧವ್, ಜಿಲ್ಲಾದ್ಯಕ್ಷರದ ಶ್ರೀ ಚಂದು ಪಾಟೀಲ್ ಮತ್ತು ಪ್ರಮುಖರು

ಸ್ಥಳ :- ಕುಲಬುರ್ಗಿ ಬಿಜೆಪಿ ಜಿಲ್ಲಾ ಕಾರ್ಯಾಲಯ, ಕಲ್ಬುರ್ಗಿ

ವಿಕಸಿತ ಭಾರತದ ಅಮೃತಕಾಲ, ಸೇವೆ, ಸುಶಾಸನ, ಬಡವರ ಕಲ್ಯಾಣದ "ಮೋದಿ ಸರ್ಕಾರಕ್ಕೆ 11 ವರ್ಷ" ಸಾಧನೆಯ ಕುರಿತ ಕಾರ್ಯಾಗಾರಕ್ಕೆ ಇಂದು ಕಲಬುರ್ಗಿಯ ಬಿಜ...
12/06/2025

ವಿಕಸಿತ ಭಾರತದ ಅಮೃತಕಾಲ, ಸೇವೆ, ಸುಶಾಸನ, ಬಡವರ ಕಲ್ಯಾಣದ "ಮೋದಿ ಸರ್ಕಾರಕ್ಕೆ 11 ವರ್ಷ" ಸಾಧನೆಯ ಕುರಿತ ಕಾರ್ಯಾಗಾರಕ್ಕೆ ಇಂದು ಕಲಬುರ್ಗಿಯ ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿಗಳು ಸಂಸದರಾದ Jagadish Shettar ರವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.



12/06/2025
12/06/2025

ಅಹಮದಾಬಾದ್‌ನಲ್ಲಿ ಸಂಭವಿಸಿದ ದುರಂತವು ನಮ್ಮನ್ನು ದಿಗ್ಭ್ರಮೆಗೊಳಿಸಿದೆ ಮತ್ತು ಅತೀವ ದುಃಖವನ್ನು ಉಂಟು ಮಾಡಿದೆ: ನರೇಂದ್ರ ಮೋದಿ

PM Modi stunned and saddened by plane crash

ಇಂದು ಕಲಬುರ್ಗಿ ಆಗಮಿಸಿದ ಮಾಜಿ ಸಿಎಂ  ಜಗದೀಶ್ ಶೆಟ್ಟರ್ ಅವರನ್ನು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಹೂವು ಗೊಚ್ಚ ನೀಡಿ ಸ್ವಾಗತಿಸಲಾಯಿತು, ಕಲ್ಬ...
12/06/2025

ಇಂದು ಕಲಬುರ್ಗಿ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಹೂವು ಗೊಚ್ಚ ನೀಡಿ ಸ್ವಾಗತಿಸಲಾಯಿತು, ಕಲ್ಬುರ್ಗಿ ಗ್ರಾಮೀಣ ಶಾಸಕರು ಬಸವರಾಜ ಮತ್ತಿಮೂಡ ಅಮರ್ನಾಥ್ ಪಾಟೀಲ್ ಕಲಬುರ್ಗಿ ಗ್ರಾಮೀಣ ಜಿಲ್ಲಾ ಬಿಜೆಪಿ ಅಧ್ಯಕ್ಷರು ಅಶೋಕ ಬಗಲಿ ಅವರು ಬರಮಾಡಿಕೊಂಡರು

10/06/2025

Address

Gulbarga
585101

Website

Alerts

Be the first to know and let us send you an email when BJP Kalburgi posts news and promotions. Your email address will not be used for any other purpose, and you can unsubscribe at any time.

Share