ನಮ್ಮ ತಹಶೀಲ್ಧರ್ ನಮ್ಮ ಹೆಮ್ಮೆ ಕನಕಪುರ- Varsha Wodeyar

  • Home
  • India
  • Gangavati
  • ನಮ್ಮ ತಹಶೀಲ್ಧರ್ ನಮ್ಮ ಹೆಮ್ಮೆ ಕನಕಪುರ- Varsha Wodeyar

ನಮ್ಮ ತಹಶೀಲ್ಧರ್ ನಮ್ಮ ಹೆಮ್ಮೆ ಕನಕಪುರ- Varsha Wodeyar Contact information, map and directions, contact form, opening hours, services, ratings, photos, videos and announcements from ನಮ್ಮ ತಹಶೀಲ್ಧರ್ ನಮ್ಮ ಹೆಮ್ಮೆ ಕನಕಪುರ- Varsha Wodeyar, Public & Government Service, Gangavati.

ತಾಲ್ಲೂಕು ಕಛೇರಿಯಲ್ಲಿ ನೆನ್ನೆ ನಡೆದ ದಲಿತರ ಕುಂದು ಕೊರತೆಗಳ ಸಭೆ ಮುಗಿಸಿದ ಬಳಿಕ ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರ...
18/03/2021

ತಾಲ್ಲೂಕು ಕಛೇರಿಯಲ್ಲಿ ನೆನ್ನೆ ನಡೆದ ದಲಿತರ ಕುಂದು ಕೊರತೆಗಳ ಸಭೆ ಮುಗಿಸಿದ ಬಳಿಕ ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ BSP ಮುಖಂಡರಾದ ನೀಲಿ ರಮೇಶ್ ರವರ ಮನವಿಯ ಮೇರೆಗೆ, ಅವರ ಕೋರಿಕೆಯ ಅನುಸಾರವಾಗಿ ಹಾರೋಹಳ್ಳಿ ಹೋಬಳಿಯ ಮೇಡಮಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿಯ ಸರ್ಕಾರಿ ಗೋಮಾಳದ ಸರ್ವೆ ನಂಬರ್ 55 ರಲ್ಲಿ ಸುಮಾರು ವರ್ಷಗಳಿಂದ ಮನೆಕಟ್ಟಿಕೊಂಡಿರುವ ಪರಿಶಿಷ್ಟ ಜಾತಿಗೆ ಸೇರಿದ ಜನಾಂಗಕ್ಕೆ ಹಕ್ಕು ಪತ್ರ ಕೊಡುವ ಬಗ್ಗೆ ಪ್ರಸ್ತಾಪಿಸಿ, ಕಂದಾಯ ಇಲಾಖೆಯ 94/C ರನ್ವಯ ತಮ್ಮ ಇಲಾಖೆಯ ಅಧಿಕಾರಿ ವರ್ಗದ VA, RI ಗಳ ಜೊತೆ ಸ್ಥಳ ಪರಿಶೀಲನೆ ಮಾಡಿದರು. ಆ ಗ್ರಾಮದ ದಲಿತರ ಅಹವಾಲುಗಳನ್ನು ಸ್ವೀಕರಿಸಿ VA, RI ಗಳ ವರದಿಯನ್ನು ಸ್ಥಳದಲ್ಲೆ ಸಿದ್ದಪಡಿಸಿ ಪ್ರಸ್ತುತ ಸರ್ಕಾರಿ ಗೋಮಾಳದಲ್ಲಿ ಮನೆ ಕಟ್ಟಿಕೊಂಡಿರುವ ದಲಿತರ ಸಮುದಾಯದವರಿಗೆ ಅಕ್ರಮ-ಸಕ್ರಮದಡಿಯಲ್ಲಿ ಶೀಘ್ರದಲ್ಲೆ ಹಕ್ಕು ಪತ್ರ ಕೊಡಿಸುವ ಭರವಸೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಎಲ್ಲಾ ದಲಿತ ನಿವಾಸಿಗಳು ಹಾಜರಿದ್ದರು. ಜನರ ಕಷ್ಟಗಳಿಗೆ ನೇರವಾಗಿ ಸ್ಪಂದಿಸಿ, ಸೂಕ್ತವಾದ ರೀತಿಯಲ್ಲಿ ನ್ಯಾಯ ದೊರಕಿಸಿಕೊಡುವ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ನೆನ್ನೆ ರಾಮನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮೀಟಿಂಗ್ ಮುಗಿಸಿ ಕನಕಪುರಕ್ಕ...
13/03/2021

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ನೆನ್ನೆ ರಾಮನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮೀಟಿಂಗ್ ಮುಗಿಸಿ ಕನಕಪುರಕ್ಕೆ ವಾಪಸ್ ಬರುವಾಗ ಸರಿ ಸುಮಾರು ರಾತ್ರಿ 8 ಗಂಟೆಯ ಸಮಯದಲ್ಲಿ ಅನುಮಾನಸ್ಪದಗೊಂಡ ಲಾರಿಯನ್ನು ತಡೆ ಹಿಡಿದು ಡ್ರೈವರನ್ನು ವಿಚಾರಿಸಿದಾಗ ಲಾರಿಗೆ ಯಾವುದೇ ಪರ್ಮಿಟ್ ಆಗಲೀ, ಡಾಕ್ಯುಮೆಂಟ್ಸ್ ಆಗಲೀ ಇಲ್ಲವೆಂದು ತಿಳಿಯುತ್ತದೆ. ಕೂಡಲೇ ಅಕ್ರಮವಾಗಿ ಸಾಗಿಸುತ್ತಿದ್ದ ಗ್ರಾನೈಟ್ ಕಲ್ಲನ್ನು ವಶಕ್ಕೆ ಪಡೆದು ಸ್ಥಳದಲ್ಲಿಯೇ FIR ದಾಖಲಿಸಲು ಆದೇಶ ನೀಡಿದರು. ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ತನಿಖೆ ಕೈಗೊಂಡು ಶಿಕ್ಷೆ ಕೊಡಿಸುವ ದಕ್ಷ ಪ್ರಾಮಾಣಿಕ ಅಧಿಕಾರಿಗಳಲ್ಲಿಯೇ ಒಬ್ಬರೆಂದರೆ ಅದು ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

ಕನಕಪುರ ತಾಲ್ಲೂಕು ಬನವಾಸಿ ಗ್ರಾಮದಲ್ಲಿ ಇಂದು ನಡೆದ ಕಂದಾಯ ಇಲಾಖ ವತಿಯಿಂದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮದಲ್ಲಿ ರಾಮನಗರ ...
20/02/2021

ಕನಕಪುರ ತಾಲ್ಲೂಕು ಬನವಾಸಿ ಗ್ರಾಮದಲ್ಲಿ ಇಂದು ನಡೆದ ಕಂದಾಯ ಇಲಾಖ ವತಿಯಿಂದ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ ಕಾರ್ಯಕ್ರಮದಲ್ಲಿ ರಾಮನಗರ ಅಸಿಸ್ಟೆಂಟ್ ಕಮಿಷನರ್ ಆದ ಶ್ರೀಮತಿ ದಾಕ್ಷಾಯಿಣಿ ರವರು ಕನಕಪುರ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಭಾಗವಯಿಸಿ ಸಾರ್ವಜನಿಕರಿಂದ ಕುಂದು ಕೊರತೆಗಳ ಅರ್ಜಿ ಸ್ವೀಕರಿಸಿದರು...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಇಂದು ತಮ್ಮ ಕಛೇರಿ ಮುಂಭಾಗ ಕೆಲಸ ಮುಗಿಸಿ ಹೊರಗೆ ಬರುತ್ತಿರುವಾಗ ಅಲ್ಲಿಯೇ ನಿಂ...
21/01/2021

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಇಂದು ತಮ್ಮ ಕಛೇರಿ ಮುಂಭಾಗ ಕೆಲಸ ಮುಗಿಸಿ ಹೊರಗೆ ಬರುತ್ತಿರುವಾಗ ಅಲ್ಲಿಯೇ ನಿಂತಿದ್ದ ವಯಸ್ಸಾದ ವೃದ್ದರನ್ನು ಕಂಡು ತಾವೆ ವೃದ್ಧರ ಹತ್ತಿರ ಹೋಗಿ ಮಾತನಾಡಿ, ಅವರಿಗೆ ಆಗಬೇಕಾದ ಕೆಲಸಗಳನ್ನು ವಿಚಾರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕಾಯಕವೇ ಕೈಲಾಸ ಎಂದು ಜನರ ಕಷ್ಟಗಳಿಗೆ ಸ್ಪಂದಿಸುವ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಇಂದು ತಾಲ್ಲೂಕಿನ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಜನರಿಗೆ ಟೋಕನ್ ಗಳನ್ನು ವಿತ...
10/09/2020

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಇಂದು ತಾಲ್ಲೂಕಿನ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಜನರಿಗೆ ಟೋಕನ್ ಗಳನ್ನು ವಿತರಿಸಿದರು. ಜನರಿಗೆ ನೀಡಿದ ಮಾತಿನಂತೆ ಪ್ರತಿ 5 ದಿನಗಳಿಗೊಮ್ಮೆ 100 ಟೋಕನ್ ಗಳನ್ನು ವಿತರಿಸುವ ಮೂಲಕ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆದರು. ಆಧಾರ್ ಕೇಂದ್ರದಲ್ಲಿ ಪ್ರತಿದಿನ ಹೊಸ ಆಧಾರ್ ಕಾರ್ಡ್ ಮತ್ತು ಆಧಾರ್ ತಿದ್ದುಪಡಿ ಮಾಡುತ್ತಿದ್ದು ಇದರಿಂದ ಜನರು ದಿನನಿತ್ಯ ಅಲೆಯುವುದು ತಪ್ಪಿದಂತಾಗಿದೆ. ನುಡಿದಂತೆ ನಡೆಯುವ ಜನಪರ, ನಿಷ್ಠಾವಂತ, ಸಹೃದಯ ಅಧಿಕಾರಿ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರಿಗೆ ತಾಲ್ಲೂಕಿನ ನಾಡ ಕಛೇರಿಯಲ್ಲಿ ಆಧಾರ್ ಕೇಂದ್ರಗಳ ಕಾರ್ಯಗಳನ್ನು ಸ್ಥಗಿತಗೊಳಿಸ...
01/09/2020

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರಿಗೆ ತಾಲ್ಲೂಕಿನ ನಾಡ ಕಛೇರಿಯಲ್ಲಿ ಆಧಾರ್ ಕೇಂದ್ರಗಳ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದು, ಇದರಿಂದ ಜನರಿಗೆ ಹೊಸ ಆಧಾರ್ ಕಾರ್ಡ್ ಮತ್ತು ಆಧಾರ್ ತಿದ್ದುಪಡಿಗೆ ತೊಂದರೆಯಾಗುತ್ತಿದೆ ಎಂದು ಜನರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ತಕ್ಷಣವೇ ಆಧಾರ್ ಕೇಂದ್ರ ಸ್ಥಾನವಾದ ತಾಲ್ಲೂಕಿನ ನಾಡ ಕಛೇರಿಗೆ ಭೇಟಿ ನೀಡಿ ಸಂಬಂಧಪಟ್ಟ ಸಿಬ್ಬಂದಿಗಳ ಹತ್ತಿರ ಮಾತನಾಡಿ ಸ್ಥಳದಲ್ಲಿಯೇ 100 ಟೋಕನ್ ಗಳನ್ನು ಜನರಿಗೆ ವಿತರಿಸಿದರು. ಆಧಾರ್ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರಿಗೂ ಹೊಸ ಆಧಾರ್ ಕಾರ್ಡ್ ಮತ್ತು ಆಧಾರ್ ತಿದ್ದುಪಡಿ ಮಾಡಿಕೊಡಬೇಕು. ವೃದ್ದರು, ರೈತರು, ಮಕ್ಕಳು, ಗರ್ಭಿಣಿಯರು, ನಿರ್ಗತಿಕರು, ವಿದ್ಯಾರ್ಥಿಗಳು ಇತ್ಯಾದಿ ಪ್ರತಿನಿತ್ಯ ಕೆಲಸಗಳಿಗಾಗಿ ಅಲೆದಾಡಿಸಬಾರದು ಹಾಗೂ ನೀವೇ ಸ್ವತಃ ಜನರ ಕಷ್ಟಗಳನ್ನು ತಿಳಿದು ಅವರಿಗೆ ಕೆಲಸಗಳನ್ನು ಮಾಡಿಕೊಡಬೇಕು ಎಂದು ತಿಳಿಸಿದರು. ಈ ಕ್ಷಣದಿಂದಲೇ ಪ್ರತಿ 5 ದಿನಗಳಿಗೊಮ್ಮೆ 100 ಟೋಕನ್ ಗಳನ್ನು ಕೊಡಬೇಕು ಮತ್ತು ಜನರ ಹತ್ತಿರ ಯಾವುದೇ ಕೆಲಸಗಳಿಗೂ ಹಣವನ್ನು ತೆಗೆದುಕೊಳ್ಳಬಾರದು ಎಂದು ಆದೇಶಿಸಿದರು. ಜನರ ಕಷ್ಟಗಳಿಗೆ ಸ್ಪಂದಿಸುವ, ರೈತರ ಪರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಮಾಣಿಕ ದಕ್ಷ ಅಧಿಕಾರಿ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಕಸಬಾ ಹೋಬಳಿ ಸೀಗೆಕೋಟೆ ಗ್ರಾಮದಲ್ಲಿ ಕೆರೆ ಒತ್ತುವರಿ ಮಾಡಿದ್ದಾರೆಂಬ ಗ್ರಾಮಸ್...
19/07/2020

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಕಸಬಾ ಹೋಬಳಿ ಸೀಗೆಕೋಟೆ ಗ್ರಾಮದಲ್ಲಿ ಕೆರೆ ಒತ್ತುವರಿ ಮಾಡಿದ್ದಾರೆಂಬ ಗ್ರಾಮಸ್ಥರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಕ್ರಮವಾಗಿ ಕೆರೆ ಒತ್ತುವರಿ ಮಾಡಿಕೊಂಡು ಸಾರಾಯಿ ಮಾರುತ್ತಿದ್ದ ಅಂಗಡಿಯನ್ನು ತೆರವುಗೊಳಿಸಿ ಹಾಗೂ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಬಿಡಿಸಿದರು. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಜೀವನ ನಡೆಸಲು ಅನುವು ಮಾಡಿಕೊಡುವ ಮತ್ತು ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಹಾರೋಹಳ್ಳಿ ಹೋಬಳಿ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರುವಯ್ಯನಪಾಳ್ಯ...
15/07/2020

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಹಾರೋಹಳ್ಳಿ ಹೋಬಳಿ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರುವಯ್ಯನಪಾಳ್ಯ ಗ್ರಾಮದಲ್ಲಿ ನಿವೇಶನ ಹಂಚಿಕೆ ವಿಚಾರವಾಗಿ ಖಾಸಗಿ ವ್ಯಕ್ತಿ ಮತ್ತು ಗ್ರಾಮಸ್ಥರ ನಡುವೆ ಗಲಾಟೆ ನಡೆಯುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಖಾಸಗಿ ವ್ಯಕ್ತಿ ಮಧ್ಯೆ ಸಮಸ್ಯೆಯನ್ನು ತಿಳಿಗೊಳಿಸಿ, ಎರಡೂ ಕಡೆಯವರು ಸ್ಪಂದಿಸದೇ ಇದ್ದಾಗ ಭೂಮಿ ಒಡೆತನಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸುವವರೆಗೆ ಯಾರೂ ಈ ಜಾಗದಲ್ಲಿ ಯಾವುದೇ ಕೆಲಸವನ್ನು ಮಾಡಬಾರದು. ಹಾಗೂ ಯಥಾಸ್ಥಿತಿ ಕಾಪಾಡಬೇಕು ಎಂದು ಆದೇಶಿಸಿದರು. ಎಂತಹ ಸಂದರ್ಭದಲ್ಲೂ ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ಜನಸ್ನೇಹಿ ಸಹೃದಯಿ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಹಾರೋಹಳ್ಳಿ ಹೋಬಳಿ ಕೊಟಗಾಳು ಗ್ರಾಮದಲ್ಲಿ ಕಡುಬಡವರಿದ್ದು ತಾಲ್ಲೂಕು ಕಛೇರಿಗೆ ...
07/07/2020

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ಹಾರೋಹಳ್ಳಿ ಹೋಬಳಿ ಕೊಟಗಾಳು ಗ್ರಾಮದಲ್ಲಿ ಕಡುಬಡವರಿದ್ದು ತಾಲ್ಲೂಕು ಕಛೇರಿಗೆ ಬರಲು ಆಗದೇ ತೊಂದರೆಯಾದ್ದರಿಂದ ಸ್ವತಃ ತಾವೇ ಗ್ರಾಮಕ್ಕೆ ಭೇಟಿ ನೀಡಿದರು. ಜನರಿಗೆ ಪಿಂಚಣಿ ಸಮಸ್ಯೆ ಇರುವುದರಿಂದ ಅಲ್ಲಿದ್ದ ಎಲ್ಲಾ ವರ್ಗದ ಜನರನ್ನು ವಿಚಾರಿಸಿ ಕುದ್ದು ಸ್ಥಳದಲ್ಲೇ ಅರ್ಜಿಯನ್ನು ಬರೆದರು. ಪಿಂಚಣಿ ಇಲ್ಲದವರಿಗೆ ಪಿಂಚಣಿ, ವಿಧವೆಯರಿಗೆ ವಿಧವಾ ವೇತನ, ಅಂಗವಿಕಲರಿಗೆ ಅಂಗವಿಕಲ ವೇತನ ಮಾಡಿಕೊಡಲು ದಾಖಲಾತಿಯನ್ನು ತೆಗೆದುಕೊಂಡು ಸ್ಥಳದಲ್ಲೇ ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನೆರವೇರಿಸಿದರು. ಜನರ ಬಗ್ಗೆ ಪ್ರೀತಿ ವಿಶ್ವಾಸ ತೋರುವ ತಮ್ಮ ಪ್ರಾಮಾಣಿಕ ಕೆಲಸದಿಂದ ದಕ್ಷತೆಗೆ ಹೆಸರಾದ ನಿಷ್ಠಾವಂತ ಅಧಿಕಾರಿ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ತಮ್ಮ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ದಂಡಾಧಿಕಾರಿಗಳ...
06/07/2020

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ತಮ್ಮ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ದಂಡಾಧಿಕಾರಿಗಳನ್ನು ಭೇಟಿಯಾಗಲು ವೃದ್ದರೊಬ್ಬರು ಬಂದಾಗ ತಾವು ಕುಳಿತ್ತಿದ್ದ ಚೇರಿನಿಂದ ಮೇಲೆದ್ದು ಕಛೇರಿ ಮುಂಭಾಗ ಬಂದು ಅವರ ಸಮಸ್ಯೆಯನ್ನು ವಿಚಾರಿಸಿದರು. ಪಹಣಿ ತಿದ್ದುಪಡಿಗಾಗಿ ಬಂದಿದ್ದ ವಯಸ್ಸಾದ ವೃದ್ದರ ದಾಖಲಾತಿಯನ್ನು ಸ್ಥಳದಲ್ಲೇ ಪರಿಶೀಲನೆ ಮಾಡಿ ತಕ್ಷಣವೇ ಅಧಿಕಾರಿಗಳನ್ನು ಕರೆದು ಪಹಣಿ ತಿದ್ದುಪಡಿ ಮಾಡಿಕೊಡಬೇಕೆಂದು ಸೂಚಿಸಿದರು. ಹಿರಿಯರ ಬಗ್ಗೆ ಕಾಳಜಿ ಗೌರವ ತೋರುವ, ಮಾನವೀಯತೆಗೆ ಸೌಜನ್ಯಕ್ಕೆ ಹೆಸರಾದ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರಿಗೆ ಕುರುಬಳ್ಳಿಯ ಗ್ರಾಮದಲ್ಲಿ ವಾಸಿಸುವ ಗ್ರಾಮಸ್ಥರು ಸ್ಮಶಾನ ಮಂಜೂರು ಮಾಡಬೇಕೆಂ...
05/07/2020

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರಿಗೆ ಕುರುಬಳ್ಳಿಯ ಗ್ರಾಮದಲ್ಲಿ ವಾಸಿಸುವ ಗ್ರಾಮಸ್ಥರು ಸ್ಮಶಾನ ಮಂಜೂರು ಮಾಡಬೇಕೆಂದು ಕೋರಿ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ದಂಡಾಧಿಕಾರಿಗಳು ಸಂಬಂದಪಟ್ಟವರ ಜೊತೆ ಕೂಡಲೆ ಚರ್ಚಿಸಿ ಆದಷ್ಟು ಬೇಗ ಸ್ಮಶಾನ ಮಂಜೂರು ಮಾಡುವುದಾಗಿ ಅಲ್ಲಿದ್ದ ಗ್ರಾಮದ ಜನರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರ ಜೊತೆಗೆ ಕರುನಾಡ ಪ್ರಜಾಸೇನೆ ರಾಜ್ಯಾಧ್ಯಕ್ಷರಾದ ರುದ್ರೇಶ್ ಹಾಗೂ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರಾದ ನವೀನ್ ಉಪಸ್ಥಿತರಿದ್ದರು...

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ದೊಡ್ಡಮರಳವಾಡಿ ಪಂಚಾಯಿತಿಯಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಭಾಗವಹಿಸಿ ತ...
25/06/2020

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ವರ್ಷ ಒಡೆಯರ್ ರವರು ದೊಡ್ಡಮರಳವಾಡಿ ಪಂಚಾಯಿತಿಯಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಭಾಗವಹಿಸಿ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಕೋರೋನ ವೈರಸ್ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಕರೆ ಕೊಟ್ಟರು. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಸ್ವಯಂಪ್ರೇರಿತರಾಗಿ ತಪಾಸಣೆಗೆ ಮುಂದಾಗಬೇಕೆಂದು ತಿಳಿಸಿದರು. ಪ್ರತಿಯೊಬ್ಬ ಸಾರ್ವಜನಿಕರು ತಪಾಸಣೆಗೆ ಮುಂದಾಗಿ, ಮುಂಜಾಗ್ರತಾ ಕ್ರಮಗಳನ್ನು ವಹಿಸಿ ತಾಲ್ಲೂಕಿನಲ್ಲಿ ಕೋರೋನ ವೈರಸ್ ತಡೆಗಟ್ಟುವುದಕ್ಕಾಗಿ ಎಲ್ಲಾ ಪಂಚಾಯಿತಿಗಳಿಗೂ ಭೇಟಿ ನೀಡಿ ಮಾಹಿತಿ ನೀಡುವ ಕೆಲಸ ಮಾಡಲಾಗುವುದು ಇದಕ್ಕೆ ಸಬ್ಬಂದಪಟ್ಟ ಎಲ್ಲಾ ವರ್ಗದವರ ಸಹಕಾರ ಮುಖ್ಯವಾದದ್ದು ಎಂದು ಹೇಳಿದರು. ಇದೇ ವೇಳೆ ಪಂಚಾಯಿತಿ ಅಧ್ಯಕ್ಷರು, ಆಶಾ ಕಾರ್ಯಕರ್ತೆಯರು, ತಾಲ್ಲೂಕು ಸಿಬ್ಬಂದಿ ವರ್ಗದವರು ಸಭೆಯಲ್ಲಿ ಹಾಜರಿದ್ದರು. ತಾಲ್ಲೂಕನ್ನು ಕೋರೋನ ಮುಕ್ತವಾಗಿಸಲು ಎಲ್ಲಾ ಪಂಚಾಯಿತಿಗಳಿಗೂ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಜಾಲನೆ ನೀಡುತ್ತಿರುವ ನಮ್ಮ ತಹಶೀಲ್ದಾರ್ ನಮ್ಮ ಹೆಮ್ಮೆ...

Address

Gangavati
583283

Website

Alerts

Be the first to know and let us send you an email when ನಮ್ಮ ತಹಶೀಲ್ಧರ್ ನಮ್ಮ ಹೆಮ್ಮೆ ಕನಕಪುರ- Varsha Wodeyar posts news and promotions. Your email address will not be used for any other purpose, and you can unsubscribe at any time.

Share