A Manohar gouda KRPP President Koppal

A Manohar gouda KRPP President Koppal KALYANA RAJYA PRAGATI PARTY DISTRICT PRESIDENT

ಇಂದು ಗಂಗಾವತಿ ತಾ.ಪಂ ಮಂಥನ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀ...
07/04/2025

ಇಂದು ಗಂಗಾವತಿ ತಾ.ಪಂ ಮಂಥನ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಪ್ರಗತಿ ಕಾರ್ಯಗಳ ವರದಿಯನ್ನು ಒಪ್ಪಿಸಿದರು.

ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ತಡೆಯಲು, ಖಾಸಗಿ ಹಾಗೂ ರೈತರ ಬೋರ್‌ವೆಲ್‌ಗಳನ್ನು ಬಳಸುವಂತೆ ಸೂಚಿಸಲಾಯಿತು. ಕುಡಿಯುವ ನೀರಿನ ಸಮಸ್ಯೆ ಸಂಬಂಧ ಸಹಾಯವಾಣಿಯನ್ನು ಪ್ರಾರಂಭಿಸಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದೆ. (ಸಹಾಯವಾಣಿ 6361940327 ಹಾಗೂ 8197895571)

ಜೆ.ಜೆ.ಎಂ. ಯೋಜನೆಯಡಿಯಲ್ಲಿ ನಡೆದ ಕಳಪೆ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದರೆ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂಬ ಎಚ್ಚರಿಕೆ ನೀಡಲಾಯಿತು. ಜೊತೆಗೆ, ಕಳಪೆ ಕಾಮಗಾರಿಗಳನ್ನು ತಿದ್ದುಪಡಿ ಮಾಡಲು ಸೂಚಿಸಲಾಯಿತು.

ವಡ್ಡರಹಟ್ಟಿಯ 108 ಎಕರೆ ಅತಿಕ್ರಮಿತ ಭೂಮಿಯನ್ನು ತೆರವುಗೊಳಿಸಿ, ಕೆರೆ ನಿರ್ಮಾಣ ಹಾಗೂ ವಸತಿ ಯೋಜನೆಗಾಗಿ ಬಳಸುವಂತೆ ಆದೇಶಿಸಲಾಯಿತು.

ಶಾಲೆಗಳಲ್ಲಿ ಶೌಚಾಲಯ, ಕಾಂಪೌಂಡ್, ಆಟದ ಮೈದಾನ ಮತ್ತು ಅಡುಗೆ ಕೋಣೆಗಳ ಕೊರತೆ ಇರುವುದರಿಂದ, ನರೇಗಾ ಯೋಜನೆಯಡಿ ಈ ಸೌಲಭ್ಯಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಪಿಡಿಒಗಳಿಗೆ ಸೂಚನೆ ನೀಡಲಾಯಿತು.

ಅಂಜನಾದ್ರಿ ಬೆಟ್ಟದ ಪ್ರದೇಶದಲ್ಲಿ ಟ್ರೀ ಗಾರ್ಡನ್ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಲು ಅರಣ್ಯ ಇಲಾಖೆಗೆ ಆದೇಶಿಸಲಾಯಿತು.

ಹಾಸ್ಟೆಲ್‌ಗಳು ಮತ್ತು ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು, ಹಾಗೂ ನಗರದಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಕೃಷಿ, ಆರೋಗ್ಯ, ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಸಮಾಜ ಕಲ್ಯಾಣ ಸೇರಿದಂತೆ ಇನ್ನೂ ಹಲವು ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಯಿತು. ಬಾಕಿ ಉಳಿದಿರುವ ಕೆಲಸಗಳನ್ನು ಗಡುವಿನೊಳಗೆ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗಳ ಮಟ್ಟವನ್ನು ಸುಧಾರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಸಭೆಯಲ್ಲಿ ನಗರಸಭಾ ಅಧ್ಯಕ್ಷರಾದ ಮೌಲಸಾಬ್, ಗಂಗಾವತಿ ಕೊಪ್ಪಳ ತಹಸೀಲ್ದಾರರಾದ ವಿಠ್ಠಲ್ ಚೌಗುಲೆ, ಗಂಗಾವತಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್, ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಹಾಗೂ ನಗರಸಭೆ ಪೌರಾಯುಕ್ತರಾದ ಆರ್. ವಿರುಪಾಕ್ಷಮೂರ್ತಿ, ಗಂಗಾವತಿ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಹಾಗೂ ತಾ.ಪಂ ಸಹಾಯಕ ನಿರ್ದೇಶಕರು, ಯೋಜನಾಧಿಕಾರಿಗಳು, ವ್ಯವಸ್ಥಾಪಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿಗಳು ಹಾಗೂ ಮಾಧ್ಯಮ ಸ್ನೇಹಿತರು ಉಪಸ್ಥಿತರಿದ್ದರು.

06/04/2025

ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು.

ಏಪ್ರಿಲ್ 6, 1980 – ಈ ದಿನ ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ದೊರೆಯಿತು. ಜನಸಂಗದಿಂದ ಉದ್ಭವಿಸಿದ ಭಾರತೀಯ ಜನತಾ ಪಾರ್ಟಿ (ಬಿಜೆಪಿ), ರಾಷ್ಟ್ರಪ್ರಥಮ ತತ್ತ್ವ, ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಆಧಾರವಾಗಿಟ್ಟುಕೊಂಡು ದೇಶ ಸೇವೆಗೆ ಸಮರ್ಪಿತವಾದ ಪಕ್ಷವಾಗಿ ರೂಪುಗೊಂಡಿತು.

ಡಾ.ಶ್ಯಾಮಪ್ರಸಾದ್ ಮುಖರ್ಜಿಯವರು 1951ರಲ್ಲಿ ಸ್ಥಾಪಿಸಿದ ಜನಸಂಗ, 1977ರಲ್ಲಿ ಜನತಾ ಪಾರ್ಟಿಯಾಗಿ ರೂಪಾಂತರಗೊಂಡಿತು. ಆದರೆ ಭಿನ್ನಾಭಿಪ್ರಾಯಗಳಿಂದಾಗಿ, 1980ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಲಾಲ್ ಕೃಷ್ಣ ಅಡ್ವಾಣಿ ಮತ್ತು ಶ್ರೀ ಮುರಳಿ ಮನೋಹರ್ ಜೋಶಿಯವರ ನೇತೃತ್ವದಲ್ಲಿ ಬಿಜೆಪಿ ಹುಟ್ಟಿಕೊಂಡಿತು.

ಬಿಜೆಪಿಯ ಹೋರಾಟದ ಇತಿಹಾಸವು ಶ್ರಮ, ನಿಷ್ಠೆ ಮತ್ತು ತ್ಯಾಗದ ಪ್ರತೀಕವಾಗಿದೆ. 1984ರಲ್ಲಿ ಕೇವಲ 2 ಸ್ಥಾನಗಳೊಂದಿಗೆ ಆರಂಭವಾದ ಈ ಪಯಣ, ಸಾವಿರಾರು ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಇಂದು ಬಹುಮತದ ಸರ್ಕಾರದವರೆಗೆ ತಲುಪಿದೆ. ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಅಪರೂಪದ ಸಾಧನೆಯಾಗಿದೆ.

ಅಯೋಧ್ಯೆ ರಾಮಮಂದಿರ ಹೋರಾಟ, ರಾಮರಥ ಯಾತ್ರೆ, ಆರ್ಟಿಕಲ್ 370 ರದ್ದತಿ, ತ್ರಿವಳಿ ತಲಾಕ್ ನಿಷೇಧ, ಉಜ್ವಲಾ ಯೋಜನೆ, ಆಯುಷ್ಮಾನ್ ಭಾರತ, ವಕ್ಫ್ ಕಾಯ್ದೆ ತಿದ್ದುಪಡಿ ಮುಂತಾದ ಮಹತ್ವದ ಕಾರ್ಯಗಳು; ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲ್ವೆಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ನಿಲ್ದಾಣಗಳ ಉನ್ನತೀಕರಣ, ಚಂದ್ರಯಾನ, ಡಿಜಿಟಲ್ ಇಂಡಿಯಾ, ವಿಮಾನ ನಿಲ್ದಾಣಗಳ ನಿರ್ಮಾಣ, ಭ್ರಷ್ಟಾಚಾರ ರಹಿತ ಆಡಳಿತ, ಬಲಿಷ್ಠ ಸೇನೆ ಮತ್ತು ವಿಶ್ವ ಮಟ್ಟದಲ್ಲಿ ಭಾರತದ ಗೌರವವನ್ನು ಉನ್ನತೀಕರಿಸುವ ಕಾರ್ಯಗಳು – ಇವೆಲ್ಲವೂ ಬಿಜೆಪಿಯ ವಿಸ್ತೃತ ದೃಷ್ಟಿಕೋನ ಮತ್ತು ಸಮರ್ಪಣೆಯನ್ನು ಪ್ರತಿಬಿಂಬಿಸುತ್ತವೆ.

ಪಕ್ಷದ ಮೌಲ್ಯಗಳು:
- ರಾಷ್ಟ್ರಪ್ರಥಮ
- ಸಾಂಸ್ಕೃತಿಕ ರಾಷ್ಟ್ರೀಯತೆ
- ಆತ್ಮನಿರ್ಭರ ಭಾರತ
- ಸೇವೆಯ ಮೂಲಕ ಸಂಘಟನೆ (Seva Hi Sangathan)

ಬಿಜೆಪಿ ಎಂದೂ ನಾಯಕರ ಪಕ್ಷವಾಗಿರಲಿಲ್ಲ – ಇದು ಕಾರ್ಯಕರ್ತರ ಪಕ್ಷವಾಗಿದೆ. ಸಾಮಾನ್ಯ ಕಾರ್ಯಕರ್ತನೂ ಪ್ರಧಾನಮಂತ್ರಿಯಾಗಿ ಏರಬಲ್ಲ ಅವಕಾಶವನ್ನು ನೀಡುವ ಏಕೈಕ ಪಕ್ಷವೆಂದರೆ ಬಿಜೆಪಿ. ಇಂದು ನಮ್ಮೆಲ್ಲರಿಗೂ ಪ್ರೇರಣೆಯ ದಿನವಾಗಿದೆ. ಈ ಸಂಸ್ಥಾಪನಾ ದಿನದ ಸ್ಫೂರ್ತಿಯೊಂದಿಗೆ, ದೇಶದ ಅಭಿವೃದ್ಧಿಗಾಗಿ ಕೈಜೋಡಿಸಿ ಭಾರತವನ್ನು ವಿಶ್ವಗುರುವಾಗಿ ಮಾರ್ಪಡಿಸೋಣ.

ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನವಾದ ಇಂದು ಧ್ವಜಾರೋಹಣಕ್ಕೂ ಮುನ್ನ ಬಳ್ಳಾರಿಯ ನನ್ನ ನಿವಾಸದಲ್ಲಿ ಬಿಜೆಪಿ ಧ್ವಜವನ್ನು ಹಾರಿಸಿದೆವು.

ವಂದೇ ಮಾತರಂ...ಭಾರತ ಮಾತಾ ಕೀ ಜಯ್..






ಈ ಟೆಲಿಗ್ರಾಮ್ ಗ್ರೂಪ್‌ಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರೆಲ್ಲರೂ ಸೇರಿಕೊಳ್ಳಿ ಅಥವಾ ಹಂಚಿಕೊಳ್ಳಿ...
21/03/2025

ಈ ಟೆಲಿಗ್ರಾಮ್ ಗ್ರೂಪ್‌ಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರೆಲ್ಲರೂ ಸೇರಿಕೊಳ್ಳಿ ಅಥವಾ ಹಂಚಿಕೊಳ್ಳಿ...

23/01/2025

ಶ್ರೀರಾಮುಲು ಆರೋಪಗಳಿಗೆ ಜನಾರ್ದನ ರೆಡ್ಡಿ ಸ್ಪಷ್ಟನೆ

ಗಂಗಾವತಿಯ ಕಾಮನೂರು ಗ್ರಾಮದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರಾದ ಶ್ರೀ ವೆಂಕಟೇಶ ಎಚ್ ಬೋವಿರವರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿ ಕು...
07/09/2023

ಗಂಗಾವತಿಯ ಕಾಮನೂರು ಗ್ರಾಮದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರಾದ ಶ್ರೀ ವೆಂಕಟೇಶ ಎಚ್ ಬೋವಿರವರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿ ಕುಟುಂಬದವರಿಗೆ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸ್ಥಳೀಯರು ಉಪಸ್ಥಿತರಿದ್ದರು.

- ಗಾಲಿ ಜನಾರ್ಧನ ರೆಡ್ಡಿ

I've just reached 2K followers! Thank you for continuing support. I could never have made it without each and every one ...
02/09/2023

I've just reached 2K followers! Thank you for continuing support. I could never have made it without each and every one of you. 🙏🤗🎉

ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ತಾಯಿ ವರಮಹಾಲಕ್ಷ್ಮಿಯ ಕೃಪಾಶಿರ್ವಾದದೊಂದಿಗೆ ಯಶಸ್ವಿಯಾಗಿ ನಡೆಯಿತು.ಈ ವಿವಾಹ ಕಾರ್ಯಕ್ರಮದಲ್ಲಿ 36 ಜೋಡಿ ನ...
26/08/2023

ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ತಾಯಿ ವರಮಹಾಲಕ್ಷ್ಮಿಯ ಕೃಪಾಶಿರ್ವಾದದೊಂದಿಗೆ ಯಶಸ್ವಿಯಾಗಿ ನಡೆಯಿತು.

ಈ ವಿವಾಹ ಕಾರ್ಯಕ್ರಮದಲ್ಲಿ 36 ಜೋಡಿ ನವ ವಧು-ವರರು ದಾಂಪತ್ಯಕ್ಕೆ ಕಾಲಿಟ್ಟರು, ನಿಮ್ಮೆಲ್ಲರ ಬಾಳು,ಸುಖ,ಸಂತೋಷ ಸಮೃದ್ಧಿಯಿಂದ ಕೂಡಿರಲಿ ಎಂದು ದಿವ್ಯ ಸಾನಿಧ್ಯ ವಹಿಸಿದ್ದ ಕಮ್ಮರಚೇಡು ಮಠದ ಶ್ರೀ ಶ್ರೀ ಶ್ರೀ ಕಲ್ಯಾಣ ಸ್ವಾಮೀಜಿಗಳು ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹಿರಿಯರು, ಪದಾಧಿಕಾರಿಗಳು ತುಂಬು ಮನದಿಂದ ಹರಸಿ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಗೋನಾಳ ರಾಜಶೇಖರ ಗೌಡ, ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಮನೋಹರ್ ಗೌಡ, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶ್ರೀ ಭೀಮಾಶಂಕರ್ ಪಾಟೀಲ್, ಶ್ರೀ ಮೆಹಪೂಜ್ ಅಲಿಖಾನ್, ಶ್ರೀ ಸುನಿಲ್ ರೆಡ್ಡಿ, ಶ್ರೀಮತಿ ಹಂಪಿ ರಮಣ, ಶ್ರೀ ಮುನ್ನಾಬಾಯಿ,ಶ್ರೀ ಕೆ.ಎಸ್ ದಿವಾಕರ್, ಶ್ರೀ ಧರಪ್ಪ ನಾಯಕ, ಶ್ರೀ ಉಮಾರಾಜ್, ಶ್ರೀ ಹಗರಿ ಶಿವರೆಡ್ಡಿ, ಶ್ರೀ ಮಲ್ಲಿಕಾರ್ಜುನ್ ಆಚಾರ್, ಶ್ರೀ ಹುಂಡೆಕರ ರಾಜೇಶ್, ಶ್ರೀ ಫಾರೂಕ್, ಶ್ರೀ ನರಸಿಂಹ ಬಾಬು, ಶ್ರೀ ಕೊಳಗಲ್ ಅಂಜಿನಿ, ಶ್ರೀ ಗುರು, ಶ್ರೀ ಪ್ರಕಾಶ್ ರೆಡ್ಡಿ, ಶ್ರೀ ಸಂಜಯ್ ಬೆಟಗೇರಿ, ಶ್ರೀ ಬಿ.ಕೆ.ಬಿ.ಎನ್ ಮೂರ್ತಿ, ಶ್ರೀ ಪ್ರಭುಶೇಖರ್ ಗೌಡ, ಶ್ರೀ ತಿಮ್ಮಪ್ಪ, ಶ್ರೀ ರೋಷ ರೆಡ್ಡಿ, ಶ್ರೀಮತಿ ಪರ್ವೀನ್ ಬಾನು, ಶ್ರೀಮತಿ ಚಾಂದಿನಿ, ಶ್ರೀಮತಿ ಭಾರತಿ, ಶ್ರೀಮತಿ ನಾಗವೇಣಿ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು

ಹಗಲಿರುಳು ಶ್ರಮವಹಿಸಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.

- ಗಾಲಿ ಜನಾರ್ಧನ ರೆಡ್ಡಿ



ಚಂದ್ರನ ದಕ್ಷಿಣ ಧ್ರುವಕ್ಕೆ ಯಶಸ್ವಿಯಾಗಿ ಕಾಲಿಟ್ಟ ಭಾರತ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವೇ "ವಿಶ್ವಗುರು"ಚಂದ್ರನ ಅಂಗಳಕ್ಕೆ ಕಾಲಿಡಲು ಚಂದ್ರಯ...
23/08/2023

ಚಂದ್ರನ ದಕ್ಷಿಣ ಧ್ರುವಕ್ಕೆ ಯಶಸ್ವಿಯಾಗಿ ಕಾಲಿಟ್ಟ ಭಾರತ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವೇ "ವಿಶ್ವಗುರು"

ಚಂದ್ರನ ಅಂಗಳಕ್ಕೆ ಕಾಲಿಡಲು ಚಂದ್ರಯಾನದ- 3 ಯೋಜನೆಯ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆಗಿರುವುದು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳ ಸಾಧನೆಯಾಗಿದೆ.

ಈ ಸಾಧನೆಯನ್ನು ಮಾಡಿರುವ ನಮ್ಮ ದೇಶದ ವಿಜ್ಞಾನಿಗಳ ಈ ಸಾಧನೆಯನ್ನು ವರ್ಣಿಸಲು ಶಬ್ದಗಳು ಬರುತ್ತಿಲ್ಲ. ನಮ್ಮ ಭಾರತ ದೇಶದ ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ.

ನಮ್ಮ ವಿಜ್ಞಾನಿಗಳ ಈ ಸಾಧನೆಯನ್ನು ವಿಶ್ವವೇ ನೋಡುತ್ತಿರುವ ಈ ಸಂದರ್ಭದಲ್ಲಿ ಚಂದ್ರನ ಅಂಗಳದಲ್ಲಿ ಚಂದ್ರಯಾನ -3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಸಾಪ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ನಮ್ಮ ದೇಶದ ವಿಜ್ಞಾನಿಗಳು ವಿಶ್ವಕ್ಕೆ "ಭಾರತವೇ ವಿಶ್ವಗುರು" ಸಾಧಿಸಿ ತೋರಿಸಿದ್ದಾರೆ.

- ಗಾಲಿ ಜನಾರ್ಧನ ರೆಡ್ಡಿ..


ಇಂದು ಕಾವೇರಿ ಹಾಗೂ ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸರ್ವಪಕ್ಷ ಸಭೆಯಲ್ಲಿ ಭಾಗಿಯಾದೆ.ಉತ್ತರ ಕರ್ನಾಟಕ ಜನತೆಯ ಬಹು ದಿನಗ...
23/08/2023

ಇಂದು ಕಾವೇರಿ ಹಾಗೂ ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸರ್ವಪಕ್ಷ ಸಭೆಯಲ್ಲಿ ಭಾಗಿಯಾದೆ.

ಉತ್ತರ ಕರ್ನಾಟಕ ಜನತೆಯ ಬಹು ದಿನಗಳ ಕನಸಿನ ಮಹದಾಯಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ವನ್ಯಜೀವಿ ಅರಣ್ಯ ಸಂರಕ್ಷಣಾ 1972 ಕಾಯ್ದೆ ಅಡಿಯಲ್ಲಿ ಅನುಮೋದನೆಯನ್ನ ನೀಡಿ ಕಳಸಾ ಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಹಾದಿಯನ್ನು ಸುಗಮ ಮಾಡಿದ್ದಕ್ಕೆ ಧನ್ಯವಾದಗಳು.

ಜೊತೆಗೆ ಕೇಂದ್ರ ಸರ್ಕಾರವು ಕೂಡ ಶೀಘ್ರವೇ ಸ್ಪಂದಿಸಿ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯ ವತಿಯಿಂದ ಕೂಡ ಶೀಘ್ರದಲ್ಲೇ ಕಳಸ ಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕೆ ಅನುಮತಿ ನೀಡುವುದರ ಮೂಲಕ ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರಗಳನ್ನು ಪೂರೈಸಿದಂತಾಗುವುದು ಎಂದು ಭಾವಿಸುತ್ತೇನೆ.

- ಗಾಲಿ ಜನಾರ್ಧನ ರೆಡ್ಡಿ

ಆನೆಗೊಂದಿ ರಾಜಮನೆತನದ ಹಿರಿಯರು, ಹಿರಿಯ ಮುಖಂಡರು ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರದಿಂದ ಐದು ಭಾರಿ ಶಾಸಕರಾಗಿದ್ದ ಮಾಜಿ ಸಚಿವರಾದ ಶ್ರೀರಂಗದೇವ...
22/08/2023

ಆನೆಗೊಂದಿ ರಾಜಮನೆತನದ ಹಿರಿಯರು, ಹಿರಿಯ ಮುಖಂಡರು ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರದಿಂದ ಐದು ಭಾರಿ ಶಾಸಕರಾಗಿದ್ದ ಮಾಜಿ ಸಚಿವರಾದ ಶ್ರೀರಂಗದೇವರಾಯಲು(87) ಇವರು ವಯೋ ಸಹಜವಾಗಿ ನಿಧನರಾಗಿದ್ದು, ಇವರ ನಿಧನದಿಂದ ಅವರ ಕುಟುಂಬ ಮತ್ತು ಗಂಗಾವತಿ, ಕನಕಗಿರಿ ಕ್ಷೇತ್ರದ ಜನರು ದುಕ್ಕಿತರಾಗಿದ್ದು ಇವರ ದುಃಖದಲ್ಲಿ ನಾನು ಭಾಗಿಯಾದ್ದೇನೆ.

Address

Gangavati
583227

Telephone

+916364268354

Website

Alerts

Be the first to know and let us send you an email when A Manohar gouda KRPP President Koppal posts news and promotions. Your email address will not be used for any other purpose, and you can unsubscribe at any time.

Share

Category