Gadag Heritage

Gadag Heritage Exploring the History of Gadag

Siddaramaiah campaigning for Janata Dal in Mallapur village of Ron constituency during the 1994 Karnataka Assembly elect...
28/05/2026

Siddaramaiah campaigning for Janata Dal in Mallapur village of Ron constituency during the 1994 Karnataka Assembly elections, alongside Shrishailappa Bidarur, who later won from Ron. Then part of undivided Dharwad district, now in Gadag district.

ಕಾರ್ಡೋಜ್ ಲೈಬ್ರರಿ: ಗದುಗಿನ ಮರೆತುಹೋದ ಇತಿಹಾಸಅವು 2006-08ರ ದಿನಗಳು. ನಾನು ಗದುಗಿನ ಕೆಎಲ್‌ಇ ಸಂಸ್ಥೆಯ ಜೆ.ಟಿ. ಕಾಲೇಜಿನಲ್ಲಿ ಪಿಯುಸಿ ಓದುತ್...
24/05/2026

ಕಾರ್ಡೋಜ್ ಲೈಬ್ರರಿ: ಗದುಗಿನ ಮರೆತುಹೋದ ಇತಿಹಾಸ

ಅವು 2006-08ರ ದಿನಗಳು. ನಾನು ಗದುಗಿನ ಕೆಎಲ್‌ಇ ಸಂಸ್ಥೆಯ ಜೆ.ಟಿ. ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಕಾಲವದು. ಗದುಗಿನ ಮಹಾತ್ಮಾ ಗಾಂಧಿ ಸರ್ಕಲ್ ಹತ್ತಿರ ಬಂದಾಗಲೆಲ್ಲಾ ‘ಕಾರ್ಡೋಜ್’ ಎನ್ನುವ ಹಳೆಯದೊಂದು ಲೈಬ್ರರಿ ಸದಾ ಕಣ್ಣಿಗೆ ಬೀಳುತ್ತಿತ್ತು. ಬಿಡುವಿನ ಸಮಯದಲ್ಲಿ ನಗರಸಭೆ ಆವರಣದಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಹೋಗಿ, ತದನಂತರ ಈ ಕಾರ್ಡೋಜ್ ಲೈಬ್ರರಿ ಕಡೆಗೂ ಹೆಜ್ಜೆ ಹಾಕುವುದು ನಮಗೊಂದು ರೂಢಿಯಾಗಿತ್ತು. ಅಷ್ಟಕ್ಕೂ ಆಗ ಆ ಲೈಬ್ರರಿ ಕಡೆಗೆ ನಮ್ಮನ್ನು ಸೆಳೆಯಲು ಮತ್ತೊಂದು ಕಾರಣವೂ ಇತ್ತು; ಅದರ ಪಕ್ಕದ ಬಿಲ್ಡಿಂಗ್‌ನಲ್ಲೇ ಇದ್ದ ಬಿಲಿಯರ್ಡ್ಸ್ ಆಟದ ಬೋರ್ಡ್‌ ಅನ್ನು ಕುತೂಹಲದಿಂದ ನೋಡಲು ನಾವು ಅತ್ತ ಹಾಯುತ್ತಿದ್ದವು. ಆದರೆ, ಅಂದಿನಿಂದಲೂ ಆ ಲೈಬ್ರರಿಯ ವಿಶಿಷ್ಟ ಹೆಸರಿನ ಬಗ್ಗೆ ಇದ್ದ ಕುತೂಹಲ ಮಾತ್ರ ಕಮ್ಮಿಯಾಗಿರಲಿಲ್ಲ. ನನ್ನನ್ನೂ ಒಳಗೊಂಡಂತೆ ಬಹುತೇಕ ಗದಗದ ಜನತೆಗೆ ಈ ಹೆಸರಿನ ಹಿನ್ನೆಲೆ ಹಾಗೂ ಇದರ ಇತಿಹಾಸ ಮಾತ್ರ ಸಂಪೂರ್ಣ ಅಪರಿಚಿತವಾಗಿಯೇ ಉಳಿದಿತ್ತು.

ಮುಂದೊಂದು ದಿನ, ಮುದ್ರಣಾಲಯಗಳ ಇತಿಹಾಸವನ್ನು ದಾಖಲಿಸುವ ಸಂದರ್ಭದಲ್ಲಿ ನಾನು ಈ ಲೈಬ್ರರಿಗೆ ಭೇಟಿ ನೀಡಿದಾಗ. ಅಲ್ಲಿ ಗೆದ್ದಲು ಹಿಡಿಯುತ್ತಿದ್ದ ಕೆಲವು ಹಳೆಯ ಪುಸ್ತಕಗಳನ್ನು ಪರಿಶೀಲಿಸುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದಿದ್ದು 1939 ರಲ್ಲಿ ಡಾ. ಉಮಚಗಿ ಎನ್ನುವ ವೈದ್ಯರು ಈ ಗ್ರಂಥಾಲಯಕ್ಕೆ ಉಡುಗೊರೆಯಾಗಿ ನೀಡಿದ್ದ ಡಾ. ಡಿಯಾಗೋ ಕಾರ್ಡೋಜ್ ಅವರ ಒಂದು ಹಳೆಯ ಭಾವಚಿತ್ರ, ಇದೇ ವೇಳೆ ಅಲ್ಲಿಯೇ ಇದ್ದ ಗ್ರಂಥಪಾಲಕರಲ್ಲಿ ಈ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ, ಅವರಿಂದಲೂ ಅಷ್ಟಾಗಿ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ.

ಆದರೆ, ನನಗೆ ಅಚ್ಚರಿ ಕಾದಿದ್ದು ಆ ಲೈಬ್ರರಿಯ ಒಳಗಿದ್ದ ನೋಂದಣಿ ಸಂಖ್ಯೆ ಮತ್ತು ಅದರ ಸ್ಥಾಪನೆಯ ವರ್ಷವನ್ನು ನೋಡಿದಾಗ. ಆ ಫಲಕದ ಮೇಲೆ ಸ್ಥಾಪನೆಯ ವರ್ಷ 1880 ಎಂದು ಬರೆಯಲಾಗಿತ್ತು. ಇದಾದ ಮೇಲಂತೂ ಡಾ. ಕಾರ್ಡೋಜ್ ಬಗೆಗಿನ ನನ್ನ ಹುಡುಕಾಟ ನಿಲ್ಲಲೇ ಇಲ್ಲ. ‘ಗ್ಯಾಜೆಟಿಯರ್’ ನಂತಹ ದಾಖಲೆಗಳಲ್ಲಿ ಈ ಲೈಬ್ರರಿಯ ಬಗ್ಗೆ ಉಲ್ಲೇಖವಿದ್ದರೂ, ಕಾರ್ಡೋಜ್ ಯಾರು? ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಕೊನೆಗೆ ವರ್ಷಗಳ ಈ ಹುಡುಕಾಟಕ್ಕೆ ಫಲ ಸಿಕ್ಕಿದ್ದು 1905ರ ಡಿಸೆಂಬರ್ 1 ರ ಜರ್ನಲ್ ಆಫ್ ದಿ ಸೊಸೈಟಿ ಆಫ್ ಆರ್ಟ್ಸ್’ ನಿಯತಕಾಲಿಕೆಯಲ್ಲಿ, ಅದು ಡಾ. ಕಾರ್ಡೋಜ್ ಅವರ ನಿಧನಕ್ಕೆ ಸಂಬಂಧಪಟ್ಟ ಸಣ್ಣ ಟಿಪ್ಪಣಿಯಾಗಿತ್ತು. ಅದರ ಪ್ರಕಾರ, ಕಾರ್ಡೋಜ್ ಅವರು 1900 ರಿಂದ ತಮ್ಮ ಕೊನೆಯ ಉಸಿರಿರುವವರೆಗೂ ಆ ಪ್ರತಿಷ್ಠಿತ ‘ಸೊಸೈಟಿ ಆಫ್ ಆರ್ಟ್ಸ್’ ನ ಸಕ್ರಿಯ ಸದಸ್ಯರಾಗಿದ್ದ ಬಗ್ಗೆ ಉಲ್ಲೇಖ ಇತ್ತು.

ಹಾಗಾದರೆ ಯಾರು ಈ ಡಾ.ಕಾರ್ಡೋಜ್?

ವೃತ್ತಿಯಲ್ಲಿ ಸರ್ಜನ್ ಆಗಿದ್ದ ಡಾ. ಡಿಯಾಗೋ ಕಾರ್ಡೋಜ್ ಅವರು 1872 ರಲ್ಲಿ ವೈದ್ಯಕೀಯ ವೃತ್ತಿ ಪ್ರವೇಶಿಸಿದರು. ತದನಂತರ 1878 ರಲ್ಲಿ ರಷ್ಯಾ ಮತ್ತು ಟರ್ಕಿ ನಡುವೆ ಬರ್ಲಿನ್‌ನಲ್ಲಿ ಶಾಂತಿ ಒಪ್ಪಂದದ ಚರ್ಚೆ ನಡೆಯುತ್ತಿದ್ದ ಐತಿಹಾಸಿಕ ಸಂದರ್ಭದಲ್ಲಿ, ಭಾರತದಿಂದ ಮಾಲ್ಟಾ ದ್ವೀಪಕ್ಕೆ ನಿಯೋಜನೆಗೊಂಡಿದ್ದ ಸೈನಿಕರ ತುಕುಡಿಯೊಂದಿಗೆ ಇವರನ್ನು ಮುಖ್ಯ ವೈದ್ಯಾಧಿಕಾರಿಯಾಗಿ ಕಳುಹಿಸಲಾಗಿತ್ತು.ಅಲ್ಲಿಂದ ಮರಳಿದ ಅವರು, 1880 ರಿಂದ 1886 ರವರೆಗೆ ಗದಗ ಡಿಸ್ಪೆನ್ಸರಿಯಲ್ಲಿ ಅಸಿಸ್ಟೆಂಟ್ ಸರ್ಜನ್ ಆಗಿ ಕಾರ್ಯನಿರ್ವಹಿಸಿದರು. ಮುಂದೆ ಅವರು ಗದಗ ನಗರಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿ, ನಗರದ ನೈರ್ಮಲ್ಯೀಕರಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದರು.

ಹಲವು ವರ್ಷಗಳ ಕಾಲ ನಗರದ ಜನತೆಯ ದೈಹಿಕ ಜಾಡ್ಯವನ್ನು ತೀರಿಸಿದ್ದ ಈ ಸಹೃದಯಿ ವೈದ್ಯರು, ಜನರ ಮನಸ್ಸಿನ ಜಾಡ್ಯವನ್ನು ಕಳೆಯಲು ವಾಚನಾಭಿರುಚಿಯ ಬೀಜ ಬಿತ್ತಲು ನಿರ್ಧರಿಸಿದರು. ಅದರ ಫಲವಾಗಿ 1880ರಲ್ಲಿ ಆರಂಭದಲ್ಲಿ ತಮ್ಮ ಸ್ವಗೃಹದಲ್ಲಿಯೇ ಒಂದು ಪುಟ್ಟ ಗ್ರಂಥಾಲಯವನ್ನು ಆರಂಭಿಸಿದರು. ನಂತರ ನಗರದ ಮಧ್ಯಭಾಗದಲ್ಲಿ ನಗರಸಭೆಯಿಂದ ಅಧಿಕೃತವಾಗಿ ಜಾಗವನ್ನು ಪಡೆದು, ಸ್ವಪ್ರಯತ್ನದಿಂದ ಕಟ್ಟಡವನ್ನು ನಿರ್ಮಿಸಿದರು. ಅಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಸಂಗ್ರಹದಲ್ಲಿದ್ದ 400ಕ್ಕೂ ಹೆಚ್ಚು ಅಮೂಲ್ಯವಾದ ಪುಸ್ತಕಗಳನ್ನು ಕಬೋರ್ಡ್‌ಗಳ ಸಮೇತ ಈ ಗ್ರಂಥಾಲಯಕ್ಕೆ ದಾನ ಮಾಡಿದರು. ಆ ಮೂಲಕ ಇಡೀ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ಹಳೆಯದಾದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಈ ಲೈಬ್ರರಿ ಪಾತ್ರವಾಯಿತು.

ಡಾ. ಕಾರ್ಡೋಜ್ ಕೇವಲ ಗ್ರಂಥಾಲಯವನ್ನು ಮಾತ್ರ ಕಟ್ಟಲಿಲ್ಲ; ಅದರ ಜೊತೆಗೆ ಒಂದು ಕ್ಲಬ್ ಅನ್ನು ಆರಂಭಿಸಿ, ತಮ್ಮ ಸ್ವಂತ ಹಣದಲ್ಲಿಯೇ ಬಿಲಿಯರ್ಡ್ಸ್ ಟೇಬಲ್ ಅನ್ನು ತರಿಸಿ ಅದಕ್ಕೆ ಉಡುಗೊರೆಯಾಗಿ ನೀಡಿದರು. ಆ ಮೂಲಕ ಗದುಗಿನಂತಹ ಅಂದಿನ ಸಣ್ಣ ನಗರಕ್ಕೆ ‘ಬಿಲಿಯರ್ಡ್ಸ್’ ನಂತಹ ಆಟವನ್ನು ಪರಿಚಯಿಸಿದ ಕೀರ್ತಿಯೂ ಡಾಕ್ಟರ್ ಕಾರ್ಡೋಜ್ ಅವರಿಗೇ ಸಲ್ಲುತ್ತದೆ.

ಕಾರ್ಡೋಜ್ ಅವರ ಸೇವೆ ಕೇವಲ ಗದುಗಿಗೆ ಮಾತ್ರ ಸೀಮಿತವಾಗಿರಲಿಲ್ಲ. ಮುಂದೆ ಅವರು ಹುಬ್ಬಳ್ಳಿಯಲ್ಲಿ ಸೀನಿಯರ್ ಅಸಿಸ್ಟೆಂಟ್ ಸರ್ಜನ್ ಆಗಿ ಅಧಿಕಾರ ವಹಿಸಿಕೊಂಡು, ಹುಬ್ಬಳ್ಳಿ ನಗರದಲ್ಲಿ ಜಲಮಂಡಳಿ, ಮುನ್ಸಿಪಲ್ ಹಾಲ್, ಸಿವಿಲ್ ಆಸ್ಪತ್ರೆ ಹಾಗೂ ಲ್ಯಾಮಿಂಗ್ಟನ್ ಹೈಸ್ಕೂಲ್ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದರು.

ವಿಶೇಷವಾಗಿ 1897-98 ರ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗವನ್ನು ಪ್ಲೇಗ್ ಸಾಂಕ್ರಾಮಿಕ ರೋಗವು ತತ್ತರಿಸುವಂತೆ ಮಾಡಿದಾಗ, ಮುಂಚೂಣಿಯಲ್ಲಿ ನಿಂತು ಯಶಸ್ವಿಯಾಗಿ ಚುಚ್ಚುಮದ್ದು ಕಾರ್ಯಕ್ರಮವನ್ನು ಜಾರಿಗೆ ತಂದು ಪ್ಲೇಗ್ ನಿಯಂತ್ರಿಸುವಲ್ಲಿ ಅವರು ಯಶಸ್ವಿಯಾದರು. ಅವರ ಈ ಸೇವೆಯನ್ನು ಪರಿಗಣಿಸಿ ಅಂದಿನ ಬ್ರಿಟಿಷ್ ವೈಸರಾಯ್ ಅವರು ಇವರಿಗೆ ಅತ್ಯುನ್ನತ ‘ಕೈಸರ್-ಎ-ಹಿಂದ್’ ಪ್ರಶಸ್ತಿ ನೀಡಿ ಗೌರವಿಸಿದ್ದರು. ಹೀಗೆ ದಶಕಗಳ ಕಾಲ ಗದಗ ಹಾಗೂ ಹುಬ್ಬಳ್ಳಿ ನಗರಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆಸಿದ್ದ ಡಾ. ಕಾರ್ಡೋಜ್ ಅವರು 1905 ರಲ್ಲಿ ಮೇ 13 ರಂದು ಕೇವಲ 54 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

ಕಾಲದ ಒಡಲಿನಲ್ಲಿ ಮಿಂಚಿ ಮರೆಯಾಗಿ ಹೋಗಿರುವ ಡಾ. ಕಾರ್ಡೋಜ್ ಅವರ ನೆನಪು ಮತ್ತು ಸೇವೆಗಳು, ಇಂದು ಗದಗ ನಗರದ ಮಧ್ಯಭಾಗದಲ್ಲಿ ಗಾಂಧಿ ಪ್ರತಿಮೆಯ ಎದುರು ಕಾರ್ಡೋಜ್ ಲೈಬ್ರರಿ ಎನ್ನುವ ಹೆಸರಿನೊಂದಿಗೆ ಇಂದಿಗೂ ನೆಲೆ ನಿಂತಿದೆ. ಸುಮಾರು 146 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಈ ಗ್ರಂಥಾಲಯ, ಸದ್ಯ ಸೂಕ್ತ ನಿರ್ವಹಣೆಯಿಲ್ಲದೆ ಅವಸಾನದ ಅಂಚಿಗೆ ತಲುಪಿರುವ ಪರಂಪರೆಯ ಕಟ್ಟಡವಾಗಿ ಮಾರ್ಪಡುತ್ತಿರುವುದು ವಿಷಾದನೀಯ. ಗದುಗಿನ ಓದುವ ಸಂಸ್ಕೃತಿಗೆ ಭದ್ರ ಅಡಿಪಾಯ ಹಾಕಿದ, ಜಿಲ್ಲೆಯ ಐತಿಹಾಸಿಕ ಪರಂಪರೆಯ ಜೀವಂತ ಪ್ರತೀಕವಾಗಿರುವ ಈ ಕಾರ್ಡೋಜ್ ಗ್ರಂಥಾಲಯಕ್ಕೆ ಇಂದು ತುರ್ತು ಜೀರ್ಣೋದ್ದಾರ ಹಾಗೂ ಸರ್ಕಾರದ ಪ್ರೋತ್ಸಾಹದ ಅಗತ್ಯವಿದೆ.

-ಮಂಜುನಾಥ ನರಗುಂದ

18/05/2026

Do you know the story behind one of Karnataka’s oldest libraries?

More than 140 years ago, a doctor named Dr. Diego Cardoz came to Gadag — not just to heal people, but to transform society through knowledge.

In 1880, when reading culture barely existed in the region, he opened a small reading room inside his own house.
Later, he donated land, books, cupboards, and built the famous Cardoz Library in the heart of Gadag.

That library still stands today.

Dr. Cardoz also improved sanitation, fought superstition, promoted plague vaccination, and helped shape modern Gadag and Hubli.

One man.
One vision.
A legacy that still lives on.

Follow for more forgotten stories from Karnataka’s past.



Disclaimer:
This reel is created for educational and historical awareness purposes using publicly available historical records, local references, and archival material. Some visuals may be artistically recreated for cinematic storytelling.

Background Music Copyright: Free Tune Library

https://www.instagram.com/reel/DYeO8nRPI0j/?igsh=bXM2cXl3czByM2lo

13/05/2026

A widow from Gadag once challenged the British Empire… not with weapons, but with Printing press and news paper

Meet Tara Bai Vajpayee — the fearless woman who turned a printing press into a weapon of revolution during India’s freedom struggle.

She exposed corruption, spread nationalist ideas, led women, promoted Swadeshi, and even faced prison for her courage.

Yet today… history barely remembers her.

This is not just Gadag’s story.
This is India’s forgotten revolution.

📍Share this reel so more people know about Tara Bhai Vajpayee and Gadag’s hidden freedom movement history.

🎵 Music Credit: Music used in this video belongs to the respective creator/owner on YouTube. Full credit to the original artist and composer.

Follow this page:
https://www.instagram.com/gadag_heritage?igsh=a3o4cnZkZWh2bGdm

27/04/2026

Did you know?

India’s largest monumental hero stone (Veeragallu) stands at Mallarayanakatte in Gadag-Betageri.

Rising over 12 feet tall, this remarkable stone is carved in old Kannada narrating the heroic sacrifice of a warrior.

Its three sculpted panels tell a powerful story—
the battle where the hero fell, his journey to the heavens, and his eternal honour among the divine.

This site have 15 such hero stones, each revealing lives through symbols like ploughs, oil mills, and tools.

Dating back to the Rashtrakuta period (c. 893 AD), including an inscription of Krishna II, these stones reflect deep cultural and religious traditions of Karnataka.

A legacy of courage, identity, and remembrance
carved forever in stone.

https://www.instagram.com/reel/DXpEdjSjxpl/?igsh=MW1sejN0c2VsbDlhZA==

23/04/2026

On his birthday… here’s a story you didn’t know.”
A man from Gadag changed the destiny of Dr. Rajkumar forever…

“Did you know this story about Dr. Rajkumar? Comment YES or NO 👇”

Every Kannadiga should see this—share this story now ❤️👇”

https://www.instagram.com/reel/DXfzN_1vLcr/?igsh=bGMzNTRzemtwMXU0

Sunil Joshi’s journey began in the small town  , where dreams were nurtured through sacrifice and hard work. For nearly ...
24/02/2026

Sunil Joshi’s journey began in the small town , where dreams were nurtured through sacrifice and hard work. For nearly a decade, from 1983 to 1993, he travelled 60 KM every day from Gadag to Hubballi (Hubli) to pursue his cricketing ambitions.

His routine reflected extraordinary commitment waking up at 3:30 a.m., catching the 4 a.m. train in Gadag, training rigorously in Hubballi, and returning in time for school.

Today, that remarkable journey has come full circle. A pavilion at the KSCA Cricket Stadium Hubballi, now proudly bears his name a lasting tribute to a son of North Karnataka whose dedication transformed early morning train rides into cricketing legacy.

Photo Courtesy: Photos from the personal collection of Ashok Umachagi

Address

Gadag

Website

Alerts

Be the first to know and let us send you an email when Gadag Heritage posts news and promotions. Your email address will not be used for any other purpose, and you can unsubscribe at any time.

Share