Vishwanath Desai

Vishwanath Desai KPCC Communications & Social Media
State Co-Ordinator (Organisation)

01/04/2026

ಹೆಚ್ಚುತ್ತಿದೆ 'ಕೈ' ಬಲ!

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬೆಂಬಲ ಸೂಚಿಸಿ ಕೆರೂರು ಗ್ರಾಮದ ಗಜಾನನ ಯುವಕ ಮಂಡಳಿಯ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

27/03/2026

ಬಂಡಾಯ ಶಮನ, ಗೆಲುವಿನ ಹಾದಿ ಮತ್ತಷ್ಟು ಸುಗಮ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸಾದಿಕ್ ಪೈಲ್ವಾನ್ ಅವರ ಮನವೊಲಿಸುವಲ್ಲಿ ಪಕ್ಷದ ನಾಯಕರು ಯಶಸ್ವಿಯಾಗಿದ್ದು, ಕೆಪಿಸಿಸಿ ಕಚೇರಿಯಲ್ಲಿ ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ Randeep Singh Surjewala , ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ DK Shivakumar ಹಾಗೂ ಸಿಎಂ Siddaramaiah ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು.

24/03/2026
24/03/2026

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಉಮೇಶ್ ಮೇಟಿಯವರಿಗೆ ಮತ ನೀಡಿ, ಆಶೀರ್ವದಿಸಬೇಕಾಗಿ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುತ್ತೇನೆ.

22/03/2026

ದಾವಣಗೆರೆ ದಕ್ಷಿಣ ವಿಧಾ‌ನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಮಲ್ಲಿಕಾರ್ಜುನಗೆ ಟಿಕೆಟ್ ಘೋಷಣೆಯಾಗಿದ್ದು, ಸದಾಶಿವನಗರದ ನಿವಾಸದಲ್ಲಿಂದು ಎಸ್.ಎಸ್ ಮಲ್ಲಿಕಾರ್ಜುನ ಅವರ ಕೈಗೆ ಬಿ.ಫಾರಂ ಹಸ್ತಾಂತರಿಸಿ ಶುಭಹಾರೈಸಿದೆ.

ನಾಳೆ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ನಡೆಯಲಿರುವ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸುತ್ತಿದ್ದೇವೆ. ಒಮ್ಮತದಿಂದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ.

22/03/2026

ಬಾಗಲಕೋಟೆ ವಿಧಾ‌ನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿವಂಗತ ಹೆಚ್.ವೈ ಮೇಟಿ ಅವರ ಪುತ್ರ ಉಮೇಶ್ ಮೇಟಿಗೆ ಟಿಕೆಟ್ ಘೋಷಣೆಯಾಗಿದ್ದು, ಉಮೇಶ್ ಮೇಟಿ ಅವರ ಪರವಾಗಿ ಪಕ್ಷದ ಮುಖಂಡರಾದ ಮಂಜುನಾಥ್ ಅವರ ಕೈಗೆ ಬಿ.ಫಾರಂ ಹಸ್ತಾಂತರಿಸಿ ಶುಭ ಹಾರೈಸಿದೆ.

ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಹೆಸರು.
22/03/2026

ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಹೆಸರು.

10/09/2025

ಸನ್ಮಾನ್ಯ ವಿರೋಧ ಪಕ್ಷದ ನಾಯಕರು ಬಹುಶಃ ಪತ್ರಿಕೆಯ ಹೆಡ್ ಲೈನ್ ಮಾತ್ರ ನೋಡಿದ್ದಾರೆ ಅನ್ನಿಸುತ್ತದೆ. ಆರೋಪಿಗಳ ಹೆಸರು ಮತ್ತು ಅವರ ಮೂಲ ನೋಡಿದ್ದಿದ್ದರೆ ನಾಚಿಕೆಯಿಂದ ನೆಲದೊಳಗೆ ತಲೆ ಹುದುಗಿಸಿ ಅಡಗಿಕೊಳ್ಳುತ್ತಿದ್ದರು. ಇಲ್ಲವೇ ಆರೋಪಿಗಳ ಪರವಹಿಸಿ ಯಾದಗಿರಿ ಚಲೋ ಮಾಡುತ್ತಿದ್ದರು!

ಶ್ರೀ R Ashoka ಅವರೇ, ನಿಮ್ಮ ಪಕ್ಷದವರ ಕಳ್ಳತನವನ್ನು ನಮ್ಮ ಸರ್ಕಾರ ಮಟ್ಟ ಹಾಕುತ್ತಿದೆ. ಈ ಬೃಹತ್ ಪ್ರಮಾಣದ ಪಡಿತರ ಅಕ್ಕಿ ಕಳ್ಳತನದ ಆರೋಪಿಗಳು ಯಾರ ಸಂಬಂಧಿಗಳು ತಿಳಿದಿದೆಯೇ?

BJP Karnataka ಪಕ್ಷದ ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿಯ ಕುಟುಂಬದವರೇ ಸೇರಿ ಪಡಿತರ ಅಕ್ಕಿಯ ವಿದೇಶಕ್ಕೆ ಕಳ್ಳಸಾಗಣೆ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎನ್ನುವ ಸತ್ಯದ ಅರಿವು ಅಶೋಕ್ ಅವರಿಗಿಲ್ಲ ಎನಿಸುತ್ತದೆ. ಬಿಜೆಪಿಯವರ ಅಕ್ರಮವನ್ನು ನಮ್ಮ ಸರ್ಕಾರ ತಡೆಗಟ್ಟುತ್ತಿದೆ. ಇದನ್ನು ಅಶೋಕ್ ಅವರು ತಿಳಿದುಕೊಳ್ಳಲಿ.

ಅಕ್ಕಿ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದರೂ ಟಿಕೆಟ್ ನೀಡಿ ಪ್ರೋತ್ಸಾಹ ನೀಡಿದ್ದು ಬಿಜೆಪಿಯೇ ಅಲ್ಲವೇ?
ಅದೇ ಅಕ್ಕಿ ಕಳ್ಳತನದ ಆರೋಪಿಯ ಪರವಹಿಸಿ ಕಲಬುರಗಿಗೆ ಬಂದಿದ್ದು ನೀವೇ ಅಲ್ಲವೇ?
ಅಶೋಕ್ ಅವರೇ ಈಗ ಆ ಕುಟುಂಬದ ಅಕ್ರಮದ ಬಗ್ಗೆಯೂ ನೀವು ಉತ್ತರದಾಯಿಯಾಗಬೇಕು.

ಒಮ್ಮೆ ಈ FIR ಮೇಲೆ ಕಣ್ಣಾಡಿಸಿ, ನಂತರ ನಿಮ್ಮ ಪಕ್ಷದವರು ನಾಡಿನ ಬಡವರ ಅಕ್ಕಿ ಕಸಿಯುತ್ತಿರುವುದರ ಬಗ್ಗೆ ಉತ್ತರ ಹೇಳಿ.

30/01/2025

ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ತೆರಳಿರುವ ನಿಮ್ಮ ಕುಟುಂಬಸ್ಥರು ಸಂಪರ್ಕಕ್ಕೆ ಸಿಗುತ್ತಿಲ್ಲವಾದರೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಆರಂಭಿಸಿರುವ 080-22340676 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಕಾಲ್ತುಳಿತದಲ್ಲಿ ಮೃತಪಟ್ಟ, ಗಾಯಗೊಂಡ ಕನ್ನಡಿಗರ ವಿವರ ಪಡೆಯಲು ಹಾಗೂ ಉತ್ತರ ಪ್ರದೇಶ ಸರ್ಕಾರದ ಜತೆ ಸಂವಹನ ನಡೆಸಲು ಕರ್ನಾಟಕ ಸರ್ಕಾರ ಅಧಿಕಾರಿಗಳನ್ನು ನೇಮಿಸಿದೆ.

30/01/2025

ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ DK Shivakumar ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ತನಿಖೆ ವಾಪಸ್ ಪಡೆದಿದ್ದ ಕರ್ನಾಟಕ ಸರ್ಕಾರದ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಕಪಾಳಮೋಕ್ಷ ಮಾಡಿರುವ ಸುಪ್ರೀಂಕೋರ್ಟ್, ನ್ಯಾಯಾಲಯದ ಸಮಯ ವ್ಯರ್ಥ ಮಾಡದಂತೆ ಎಚ್ಚರಿಕೆ ನೀಡಿದೆ.

Address

Gadag
582102

Website

Alerts

Be the first to know and let us send you an email when Vishwanath Desai posts news and promotions. Your email address will not be used for any other purpose, and you can unsubscribe at any time.

Contact The Organization

Send a message to Vishwanath Desai:

Share