Ka26 gadag culture

Ka26 gadag culture Contact information, map and directions, contact form, opening hours, services, ratings, photos, videos and announcements from Ka26 gadag culture, Social service, Gadag.

ಜಿಲ್ಲೆಯಲ್ಲಿಲ್ಲ ಅಭಿವೃದ್ಧಿ ಹೊಂದಿದ ತಾಲೂಕು. ಅಧಿಕಾರಿ ವರ್ಗ, ಜನಪ್ರತಿನಿಧಿಗಳ ವರ್ಗಕ್ಕೆ ಮುಖಭಂಗತಲಾವಾರು ಉತ್ಪನ್ನದಲ್ಲೂ ಗದಗ ಜಿಲ್ಲೆ ತೀವ್ರ...
11/06/2026

ಜಿಲ್ಲೆಯಲ್ಲಿಲ್ಲ ಅಭಿವೃದ್ಧಿ ಹೊಂದಿದ ತಾಲೂಕು.
ಅಧಿಕಾರಿ ವರ್ಗ, ಜನಪ್ರತಿನಿಧಿಗಳ ವರ್ಗಕ್ಕೆ ಮುಖಭಂಗ
ತಲಾವಾರು ಉತ್ಪನ್ನದಲ್ಲೂ ಗದಗ ಜಿಲ್ಲೆ ತೀವ್ರ ಕುಸಿತ

ಶಿವಾನಂದ ಹಿರೇಮಠ ಗದಗ
ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲ ನಿವಾರಣೆಗಾಗಿ ನಂಜುಡಪ್ಪ ವರದಿ ಅನುಸರಿಸುತ್ತಿದ್ದ ರಾಜ್ಯ ಸರ್ಕಾರ ಇನ್ಮುಂದೆ ಗೋವಿಂದರಾವ್​ ವರದಿ ಅನುಸಾರ ಅನುದಾನ ಹಂಚಿಕೆ ಮಾಡಲಿದೆ. ಕಳೆದ ಮಾರ್ಚ ತಿಂಗಳಲ್ಲಿ ನೂತನ (ಪ್ರೊ. ಗೋವಿಂದರಾವ್​) ವರದಿಯನ್ನು ಸ್ವೀಕರಿಸುವ ಸರ್ಕಾರ ಮೂಲಭೂತ ಸೌಕರ್ಯ, ಶಿಕ್ಷಣ, ಸಮಾಜಿಕ, ಆಥಿರ್ಕ ಅಸಮತೋಲನ ನಿವಾರಣೆಗೆ ಹೊಸ ವರದಿ ಅಳವಡಿಸಿಕೊಳ್ಳಲಿದೆ.
ಈ ವರದಿಯಲ್ಲಿ ಗದಗ ಜಿಲ್ಲೆಯನ್ನು ಅತ್ಯಂತ ಹಿಂದೂಳಿದ ಜಿಲ್ಲೆಯಾಗಿ ಪರಿಗಣಿಸಿರುವ ಸಮಿತಿಯು, ಕೈಗಾರಿಕೋದ್ಯಮ, ವರಮಾನ, ಶಿಕ್ಷಣ, ಸಾಮಾಜಿಕ ವಲಯ ಸೇರಿದಂತೆ ಹಲವು ವಲಯಗಳಲ್ಲಿ ಗದಗ ಜಿಲ್ಲೆ ಸಂರ್ಪೂಣ ಹಿಂದೂಳಿದೆ ಎಂದು ಉಲ್ಲೇಖಿಸಿದೆ. ನಂಜುಂಡಪ್ಪ ವರದಿ ಅನುಸಾರ ಈ ಹಿಂದೆ ಜಿಲ್ಲೆಯ ಶಿರಹಟ್ಟಿ, ರೋಣ ತಾಲೂಕುಗಳು ಹಿಂದೂಳಿದ ತಾಲೂಕು ಆಗಿದ್ದವು. ಪ್ರಸ್ತತ ವರದಿಯಲ್ಲಿ ಜಿಲ್ಲೆಯ ಎಲ್ಲ 7 ತಾಲೂಕುಗಳನ್ನು ವಿವಿಧ ಮಾನದಂಡಗಳ ಅನುಸಾರ ಮೌಲ್ಯಮಾಪನ ಮಾಡಿರುವ ಪ್ರೊ. ಗೋವಿಂದರಾವ್​ ಸಮಿತಿಯು ಎಲ್ಲ ತಾಲೂಕುಗಳನ್ನು ಅತ್ಯಂತ ಹಿಂದೂಳಿದ ಮತ್ತು ಅತಿ ಹಿಂದೂಳಿದ ತಾಲೂಕು ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ವರದಿ ಪ್ರಕಾರ ಜಿಲ್ಲೆಯ ಯಾವುದೇ ತಾಲೂಕು ಅಭಿವೃದ್ದಿ ಹೊಂದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಜಿಲ್ಲೆಯ ಅಭಿವೃದ್ಧಿ ಸೂಚ್ಯಂಕಗಳನ್ನು ಗಮನಿಸಿದರೆ ಇಲ್ಲಿಮ ಜನಪ್ರತಿನಿಧಿಗಳ ಮತ್ತು ಅಧಿಕಾರಿ ವರ್ಗವು ಜಿಲ್ಲೆಯ ಅಭಿವೃದ್ಧಿಯ ಕೊಡುಗೆ ಏನೆಂಬುದನ್ನು ಪ್ರಶ್ನೆ ಮಾಡುವಂತಿದೆ. ತಲಾವಾರು ಉತ್ಪನ್ನದಲ್ಲೂ ಜಿಲ್ಲೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದ್ದು, 2005&06ರಲ್ಲಿ ಶೇ. 73.3ರಷ್ಟಿದ್ದ ತಲಾವಾರು ಉತ್ಪನ್ನ ಈಗ ಶೇ. 58.5ಕ್ಕೆ ಕುಸಿದಿದೆ.

ಆರೋಗ್ಯ, ಆದಾಯ ಮತ್ತು ಶಿಕ್ಷಣ:
ಜಿಲ್ಲೆಯಲ್ಲಿ ಆರೋಗ್ಯ, ಆದಾಯ ಮತ್ತು ಶಿಕ್ಷಣ ವಲಯವನ್ನು ಮೌಲ್ಯ ಮಾಪನ ಮಾಡಿರುವ ಸಮಿತಿಯು, ಈ ವಲಯದಲ್ಲಿ ರೊಣ ಮತ್ತು ಮುಂಡರಗಿ ತಾಲುಕು ಅತ್ಯಂತ ಹಿಂದೂಳಿದ ತಾಲೂಕು ಹಾಗೂ ಇನ್ನೂಳಿದ ನರಗುಂದ, ಲೆ$್ಮಶ್ವರ, ಶಿರಹಟ್ಟಿ, ಗಜೇಂದ್ರಗಡ ಹಾಗೂ ಗದಗ ತಾಲೂಕುಗಳನ್ನು ಈ ಮೇಲಿನ ಮೂರು ವಲಯಗಳಲ್ಲಿ ಅತಿ ಹಿಂದೂಳಿದ ತಾಲೂಕು ಎಂದು ತಿಳಿಸಿದೆ. ಆರೋಗ್ಯ, ಆದಾಯ ಮತ್ತು ಶಿಕ್ಷಣ ವಲಯದಲ್ಲಿ ಜಿಲ್ಲೆಯ ಯಾವ ತಾಲೂಕುಗಳನ್ನು ಅಭಿವೃದ್ಧಿ ಸಾಧಿಸಿಲ್ಲ ಎಂಬುದು ಬೇಸರದ ವಿಷಯ.
ಸಾಮಾಜಿಕ ಮೂಲ ಸೌಕರ್ಯ ವಲಯದಲ್ಲಿ ಅತ್ಯಂತ ತೀವ್ರ ಕೊರತೆ ಅನುಭವಿಸುತ್ತಿರು ತಾಲೂಕುಗಳಲ್ಲೂ ಜಿಲ್ಲೆಯ ಮೂರು ತಲುಕು ಸ್ಥಾನ ಪಡೆದಿವೆ. ಗಜೇಂದ್ರಗಡ ಹಾಗೂ ಮುಂಡರಗಿ ತಾಲೂಕುಗಳಲ್ಲಿ ಸಾಮಾಜಿಕ ಅಸಮತೋಲ ಅಧಿಕವಾಗಿದೆ. ಹಾಗಾಗಿ, ಸಾಮಾಜಿಕ ಅಸಮತೋಲ ಹೊಂದಿರುವ ಪ್ರತಿ ತಾಲೂಕುಗಳಲ್ಲಿ 12 ಪಬ್ಲಿಕ್​ ಶಾಲೆಗಳನ್ನು ತೆರೆಯಲು ಸಮಿತಿ ಸರ್ಕಾರಕ್ಕೆ ಶಿಾರಸ್ಸು ಮಾಡಿದೆ. ಸಮಗ್ರ ಶಿಕ್ಷಣ ಯೋಜನೆಯಡಿಯಲ್ಲಿ ಶಾಲೆಗಳನ್ನು ಮೇಲ್ದರ್ಜಗೆ ಏರಿಸುವುದು ಮತ್ತು ಶಿಕ್ಷಕರಿಗೆ ತರಬೇತಿ ಹಾಗೂ ಶಿಕ್ಷಕರ ಮೌಲ್ಯ ಮಾಪನ ಮಾಡಿ ಶೈಕ್ಷಣಿಕ ವಲಯ ಅಭಿವೃದ್ಧಿಗೆ ಸರ್ಕಾರ ಮುಂದಾಗಲು ಸೂಚಿಸಿದೆ.
ಜಿಲ್ಲೆಯಲ್ಲಿ ವೈದ್ಯಕಿಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು ಎನ್ನುವ ಶಿಾರಸ್ಸು ಮಾಡಿರುವ ಸಮಿತಿಯುವ ಗದಗ ಜಿಲ್ಲಾ ಆಸ್ಪತ್ರಯಲ್ಲಿ ಸೂಪರ್​ ಸ್ಪೇಷಾಲಿಟಿ ವೈದ್ಯಕಿಯ ಸೌಲಭ್ಯ ನಿರ್ಮಾಣ ಮಾಡಲು ಹೆಚ್ಚುವರಿ 417.67 ಕೋಟಿ ಅನುದಾನ ಅವಶ್ಯ ಇಇರುವುದನ್ನು ತಿಳಿಸಿದೆ. ಇದರಲ್ಲಿ ಮಾನವ ಸಂಪನ್ಮೂಲಕ್ಕೆ 55.36 ಕೋಟಿ ರೂ., ಸಿವಿಲ್​ ಕಾಮಗಾರಿಗೆ 99.09 ಕೋಟಿ ರೂ., ಯಂತ್ರೋಪಕರಣಕ್ಕೆ 263.19 ಕೋಟಿ ರೂ. ಮೊತ್ತ ಒಳಗೊಂಡಿದೆ.

* ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೆಳ ಮಧ್ಯಮ ವರ್ಗದಲ್ಲಿ ಇರುವ ಜಿಲ್ಲೆಗೆ 15ನೇ ಸ್ಥಾನ.
* ಜಿಲ್ಲಾ ಕೇಂದ್ರಗಳ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯದಲ್ಲಿ ಗದಗ ತಾಲೂಕಿಗೆ 16ನೇ ಸ್ಥಾನ.
* ವರಮಾನ ಮತ್ತು ಆರೋಗ್ಯ ವಲಯದಲ್ಲಿ ಜಿಲ್ಲೆಗೆ 10ನೇ ಸ್ಥಾನ
* ರಕ್ತ ಹೀನತೆ, ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ 19 ನೇ ಸ್ಥಾನ
* ಬೆಳೆ ಪದ್ಧತಿ, ತಂತ್ರಜ್ಞಾನ ಅಳವಡಿಕೆ ಮತ್ತು ಸಂಪನ್ಮೂಲಗಳ ಬಳಕೆಯಲ್ಲಿ ಗದಗ ಜಿಲ್ಲೆಯೂ ರಾಜ್ಯದಲ್ಲೇ 31ನೇ ಸ್ಥಾನ ಪಡೆಯುವ ಮೂಲಕ ಕೊನೆಯ ಸ್ಥಾನದಲ್ಲಿದೆ.
* ಬ್ಯಾಂಕಿಂಗ್​ ಕ್ಷೇತ್ರದಿಂದ ಕೈಗಾರಿಕೆ ಹಾಗೂ ವಾಣಿಜ್ಯ ಸಾಲಗಳ ನೀಡುವಿಕೆಯಲ್ಲಿ ಜಿಲ್ಲೆಗೆ 15ನೇ ಸ್ಥಾನ
* ಆಥಿರ್ಕ ಮೂಲ ಸೌಕರ್ಯ(ವಿದ್ಯುತ್​, ರಸ್ತೆ, ವಾಣೀಜ್ಯ ವಾಹನ)ದಲ್ಲಿ ಕೊರತೆ ಅನುಭವಿಸುತ್ತಿರುವ ಜಿಲ್ಲೆ 18 ನೇ ಸ್ಥಾನದಲ್ಲಿ ಇದೆ.

01/06/2026
ಸೋಮವಾರ ಕೊಡಗಿನ ದುಬಾರೆ ಆನೆಯ ಶಿಬಿರದ ನದಿಯಲ್ಲಿ 2 ಆನೆಗಳು ಸ್ನಾನ ಮಾಡುವಾಗ ಏಕಾಏಕಿ ಮದವೇರಿ ಎರಡು ಆನೆಗಳು ಪರಸ್ಪರ ಕಾಡಾಟ ಮಾಡಿ ಕಂಜನ ಆನೆ ಕ್...
19/05/2026

ಸೋಮವಾರ ಕೊಡಗಿನ ದುಬಾರೆ ಆನೆಯ ಶಿಬಿರದ ನದಿಯಲ್ಲಿ 2 ಆನೆಗಳು ಸ್ನಾನ ಮಾಡುವಾಗ ಏಕಾಏಕಿ ಮದವೇರಿ ಎರಡು ಆನೆಗಳು ಪರಸ್ಪರ ಕಾಡಾಟ ಮಾಡಿ ಕಂಜನ ಆನೆ ಕ್ವಾರಿಗಳಿಂದ ಜಯ ಮಾರ್ತಾಂಡ ಆನೆಯ ಹಿಂಬದಿಗೆ ಬಲಾವಾಗಿ ತಿವಿದ ಪರಿಣಾಮ ಪ್ರತಿಷ್ಠಿತ ಜಯ ಮಾರ್ತಂಡ ಆನೆ ನಿಧನ ಆಗಿದೆ.

ಮತ್ತೆ ಹುಟ್ಟಿ ಬಾ ಜಯ

18/05/2026

ಕೃತಿಕಾ ಮಳೆಯ‌ ರೌದ್ರಾವತಾರಕ್ಕೆ‌ ಗದಗ-ಬೆಟಗೇರಿ ಅವಳಿ ನಗರದಲ್ಲಿ 25 ನಿಮಿಷ ಮಳೆಗೆ ರಸ್ತಗೆಳು ಗಟಾರಗಳು ತುಂಬಿ ನಂದಿಗಳಾದವು.
ಗದಗನಲ್ಲಿ 25 ನಿಮಿಷ ಮಳೆ ಆಗಿದೆ ಆದರೆ 6 ಗಂಟೆಗಳಿಂದ ವಿದ್ಯುತ್ ಸಂಪರ್ಕ ಕರೆಂಟ್ ಕಡಿತವಾಗಿದೆ.

ಗದಗ ನಗರದಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ ಏನಾದರೂ ತೊಂದರೆ ಆದರೆ ಕೆಳೋರು ಯಾರು ಇಲ್ಲಾ, ನಮ್ಮ ಗದಗ ಜಿಲ್ಲಾ ಕೇಂದ್ರದ ಪರಿಸ್ಥಿತಿ ಯಾವಾಗ ಸರಿಹೋಗುತ್ತದೆ.

Address

Gadag
GADAG

Website

Alerts

Be the first to know and let us send you an email when Ka26 gadag culture posts news and promotions. Your email address will not be used for any other purpose, and you can unsubscribe at any time.

Share

Category