29/07/2026
ದಿನಾಂಕ 28/07/2026 ರಂದು ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಧಾರವಾಡ ಇವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು ಘನ ತ್ಯಾಜ್ಯ ನಿರ್ವಹಣೆ ನಿಯಮ 2026 ಮತ್ತು ಘನ ತ್ಯಾಜ್ಯ ನಿರ್ವಹಣೆ ಮೇಲುಸ್ತುವಾರಿ ಸಮಿತಿ ಜವಾಬ್ದಾರಿಗಳು ಹಾಗೂ ಒಕ್ಕೂಟಗಳ ನಡುವೆ ಒಪ್ಪಂದ ಬಳಕೆದಾರರ ಶುಲ್ಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತಾ ಕುಂದು ಕೊರತೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಅಣ್ಣಿಗೇರಿ ನವಲಗುಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಾ. ಪಂ. ಅಣ್ಣಿಗೇರಿ ನವಲಗುಂದ. ಜಿಲ್ಲಾ ಮಟ್ಟದ ಸಮಾಲೋಚಕರು ತಾಲೂಕ ಮಟ್ಟದ ಸಮಾಲೋಚಕರು ಸಂಜೀವಿನಿ ಒಕ್ಕೂಟದ ಸ್ವಚ್ಛತಾ ವಾಹಿನಿಯ ಸಹಾಯಕರು ಸ್ವಚ್ಛ ವಾಹಿನಿಯ ಚಾಲಕರು ಎಂ ಬಿ ಕೆ, ಎಲ್ ಸಿ ಆರ್ ಪಿ,ಭಾಗವಹಿಸಿದ್ದರು