Dharwad Institute Of Mental Health And Neurosciences-Dharwad

  • Home
  • India
  • Dharwad
  • Dharwad Institute Of Mental Health And Neurosciences-Dharwad

Dharwad Institute Of Mental Health And Neurosciences-Dharwad Contact information, map and directions, contact form, opening hours, services, ratings, photos, videos and announcements from Dharwad Institute Of Mental Health And Neurosciences-Dharwad, Government Organization, P. B. Road, DIMHNAS Hospital Campus, Dharwad.

The institute as a multidisciplinary approach with full-fledged teaching faculty in Psychiatry, clinical Psychology, Psychiatric social work and Psychiatric Nursing.

ಡಿಮ್ಹಾನ್ಸ್ ಸಂಸ್ಥೆಯಲ್ಲಿ ವಿಶ್ವ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ...
24/06/2024

ಡಿಮ್ಹಾನ್ಸ್ ಸಂಸ್ಥೆಯಲ್ಲಿ ವಿಶ್ವ ಯೋಗ ದಿನ ಹಾಗೂ ವಿಶ್ವ ಸಂಗೀತ ದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮ

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಇವರ ಸಹಯೋಗದಲ್ಲಿ ಜೂನ್೨೧, ೨೦೨೪ ರಂದು “ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ವಿಶ್ವ ಸಂಗೀತ ದಿನಾಚರಣೆ”ಯ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಯ ಸಭಾಂಗಣದಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಶ್ರೀ ಪತಂಜಲಿ ಮಹರ್ಷಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಇವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಅರುಣಕುಮಾರ ಸಿ ರವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಮಂಜುನಾಥ ಭಜಂತ್ರಿಯವರು ಅಂತರಾಷ್ಟ್ರೀಯ
ಯೋಗದ ದಿನ ಮತ್ತು ಅಂತರಾಷ್ಟ್ರೀಯ ಸಂಗೀತ ದಿನದ ಮಹತ್ವ ಬಗ್ಗೆ ತಿಳಿಸಿಕೊಟ್ಟರು.
ಯೋಗ ಮತ್ತು ಸಂಗೀತದಲ್ಲಿರುವ ಸಾಮ್ಯತೆ ಬಗ್ಗೆ ತಿಳಿಸುತ್ತಾ ಈ ಎರಡು ಪ್ರಕಾರಗಳು ಕ್ರಿಯಾಶೀಲ ರಚನಾತ್ಮಕ ಅಭಿವ್ಯಕ್ತಿಗೆ ಪೂರಕವಾಗಿದ್ದು, ಬೌಧ್ದಿಕ, ಭಾವನಾತ್ಮಕ ಹಾಗೂ ವರ್ತನೆಗಳಲ್ಲಿ ಸಾಮರಸ್ಯವನ್ನು ತರುವಂತಹ ಸಾಮರ್ಥ್ಯವನ್ನು ಹೊಂದಿದ್ದು, ವ್ಯಕ್ತಿಗತ ಹಾಗೂ ಸಮುದಾಯವನ್ನು ಒಟ್ಟುಗೂಡಿಸುವುವಂತಹದ್ದು ಎಂದು ಮಾತನಾಡಿದರು.

ವೈಜ್ಞಾನಿಕ ದೃಷ್ಠಿಕೋನದಲ್ಲಿ ಸಂಗೀತ ಮತ್ತು ಯೋಗದ ಸಂಭವನೀಯ ಚಿಕಿತ್ಸಕ ಪ್ರಯೋಜನಗಳ ಬಗ್ಗೆ ಅಧ್ಯಯನ ನಡೆದೆದ್ದು, ತೀವ್ರತೆರನಾದ ಮಾನಸಿಕ ಕಾಯಿಲೆಗಳಾದಂತರಹ ಖಿನ್ನತೆ, ಆತಂಕ, ಚಿತ್ತವಿಕಲತೆ, ಡಿಮೆನ್ಸಿಯಾ (ಮರೆವಿನ ಕಾಯಿಲೆ), ಘಟನೋತ್ತರ ಒತ್ತಡ ಕಾಯಿಲೆಗಳು, ಮಕ್ಕಳಲ್ಲಿ ಬರುವ ಸ್ವಲೀನತೆ (ಆಟಿಸಂ), ಅಡಿಕ್ಷನ್‌ಗೆ ಸಂಬAಧಿಸಿದ ಕಾಯಿಲೆಗಳಲ್ಲಿ ಯೋಗ ಹಾಗೂ ಸಂಗೀತ ಚಿಕಿತ್ಸೆಯನ್ನು ಪೂರಕ ಚಿಕಿತ್ಸೆಯಾಗಿ ಉಪಯೋಗಿಸಿ ಅತ್ಯಂತ ಸಮಗ್ರವಾಗಿ ಚಿಕಿತ್ಸಾ ಪದ್ದತಿಗಳಲ್ಲಿ ಸಕರಾತ್ಮಕ ಫಲಿತಾಂಶಗಳನ್ನು ಪಡೆಯಲು ಕಂಡುಕೊಳ್ಳಲಾಗಿದೆಯೆಂದು ಮಾತನಾಡಿದರು.

ಪ್ರತಿಯೊಬ್ಬರು ಒಳ್ಳೆಯ ಸಂಗೀತವನ್ನು ಕೇಳುವುದನ್ನು ರೂಢಿ ಮಾಡಿಕೊಳ್ಳಬೇಕು ಇದರಿಂದ ಮಾನಸಿಕ ಒತ್ತಡಗಳು ಕಡಿಮೆಯಾಗಿ ಮನಸ್ಸಿಗೆ ಶಾಂತಿಯನ್ನುಂಟು ಮಾಡುವ ಶಕ್ತಿ ಸಂಗೀತಕ್ಕೆ ಇದೆಯೆಂದು ಮಾತನಾಡಿದರು.

ಡಿಮ್ಹಾನ್ಸ್ ಸಂಸ್ಥೆಯ ಸಂಗೀತಕಾರರಾದ ಡಾ.ಶ್ರೀಧರ್ ಕುಲಕರ್ಣಿ ಇವರು “ಸಂಗೀತ ಪ್ರಾತ್ಯಕ್ಷಿಕತೆ”
ನಡೆಸಿಕೊಟ್ಟರು. ವಿವಿಧ ರಾಗಗಳನ್ನು ಪ್ರಸ್ತುತ ಪಡಿಸಿ ಈ ರಾಗಗಳ ಮಹತ್ವದ ಬಗ್ಗೆ ತಿಳಿಸಿದರು. ಇಂಪಾದ ಸಂಗೀತವನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೇ ದೇಹಕ್ಕೆ ಮತ್ತು ಮನಸ್ಸಿಗೆ ಬರುವ ರೋಗಗಳನ್ನು ವಾಸಿಮಾಡಲು ಸಂಗೀತ ಚಿಕಿತ್ಸೆ ನೆರವಾಗುತ್ತದೆಂದು ತಿಳಿಸಿದರು.

ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಅರುಣಕುಮಾರ ಸಿ ರವರು ಕಾರ್ಯಕ್ರಮದ ಅಧ್ಯಕ್ಷತೆಯ ಸ್ಥಾನವನ್ನು ವಹಿಸಿ ಮಾತನಾಡಿ, ಅಂತರಾಷ್ಟಿಯ ಯೋಗ ದಿನಾಚರಣೆಯನ್ನು ವಿಶ್ವದಲ್ಲಿ ಅತ್ಯಂತ ಖುಷಿಯಿಂದ ಆಚರಣೆ ಮಾಡುತ್ತಾರೆ. ಈ ವರ್ಷ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಾಗಿದ್ದು, ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ.
ಯೋಗಾಭ್ಯಾಸ ಮಾಡುವುದನ್ನು ಕೇವಲ ಒಂದು ದಿವಸಕ್ಕೆ ಮಾತ್ರ ಸಿಮಿತ ಮಾಡದೇ ಪ್ರತಿ ದಿನವು ಯೋಗಾಭ್ಯಾಸ ಮಾಡುವುದನ್ನು ಜನರು ರೂಢಿಸಿಕೊಳ್ಳಬೇಕು. ಇದರಿಂದ ಅನೇಕ ಪ್ರಯೋಜನಗಳುಂಟು. ಜೀವನದಲ್ಲಿ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಯೋಗವು ನೀಡುತ್ತದೆ. ಇದನ್ನು ಜನರು ನಿರ್ಲಕ್ಷ ಮಾಡಬಾರದೆಂದರು.

ಉತ್ತಮ ಆರೋಗ್ಯಕ್ಕಾಗಿ ಯೋಗ ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಭಾರತವು ಜಗತ್ತಿಗೆ ಅನೇಕ ಒಳ್ಳೆಯ ಕೊಡುಗೆಗಳನ್ನು ನೀಡಿದೆ, ಅದರಲ್ಲಿ ಅತ್ಯುತ್ತಮವಾದ ಒಂದು ಒಳ್ಳೆಯ ಕೊಡುಗೆಯೆಂದರೆ ಅದು ಯೋಗವಾಗಿದೆ. ಹಾಗಾಗಿ ಇಂದು ವಿಶ್ವದಾದ್ಯಂತ ೧೦ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಯೋಗಾಬ್ಯಾಸವು ಮಾನಸಿಕ, ಶಾರೀರಿಕ ಮತ್ತು ಆಧ್ಯಾತ್ಮಿಕವಾದ ಒಳ್ಳೆಯ ಅಭ್ಯಾಸವಾಗಿದೆ. ವಿದೇಶದಲ್ಲಿ ಅಲ್ಲಿನ ಜನರು ಕೂಡ ಯೋಗಾಭ್ಯಾಸದ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿದ್ದಾರೆಂದು ಮಾತನಾಡಿದರು.

ಡಿಮ್ಹಾನ್ಸ್ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ರಾಘವೇಂದ್ರ ನಾಯಕ್, ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕರಾದ ಡಾ.ಮೋಹನಕುಮಾರ ಥಂಬದ, ಡಿಮ್ಹಾನ್ಸ್ ಸಂಸ್ಥೆಯ ಶೂಶ್ರೂಷಕ ಅಧಿಕ್ಷಕರಾದ ಶ್ರೀಮತಿ ಗಾಯತ್ರಿ ಶಿಂಧೆ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಿಮ್ಹಾನ್ಸ್ ಸಂಸ್ಥೆಯ ಯೋಗ ಶಿಕ್ಷಕಿ ಕು.ವಾಣಿ ತುಪ್ಪದ ಇವರು ವಿವಿಧ ಯೋಗಾಸನಗಳನ್ನು ಯೋಗ ಪ್ರಾತ್ಯಾಕ್ಷಿಕತೆ ಮಾಡುವುದರ ಮೂಲಕ ಪ್ರದರ್ಶಿಸಿದರು. ಯೋಗ ನೃತ್ಯವನ್ನು ಪ್ರಸ್ತುತ ಪಡಿಸಿ, ಯೋಗ ಮತ್ತು ಮಹಿಳೆ ಆರೋಗ್ಯದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ನರ್ಸಿಂಗ್ ಪ್ರಶಿಕ್ಷಣಾರ್ಥಿಗಳು ಯೋಗದ ಕುರಿತು ಕಿರು ನಾಟಕವನ್ನು ಪ್ರದರ್ಶಿಸಿದರು.

ಸೈಕಿಯಾಟ್ರಿಕ್ ನರ್ಸಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ.ಆರ್.ಶ್ರೀವಾಣಿ, ಉಪನ್ಯಾಸಕರಾದ ಶ್ರೀ.ಸುಶೀಲಕುಮಾರ ರೋಣದ, ಡಿಮ್ಹಾನ್ಸ್ ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ವಿಜಯಲಕ್ಷ್ಮೀ ತೋರಗಲ್‌ಮಠ, ಅರವಳಿಕೆ ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಡಾ.ಜಸ್ವಿಂದರ ಕೌರ್, ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೇಘಮಾಲಾ ತಾವರಗಿ, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಕೌಜಲಗಿ, ಟೆಲಿಮಾನಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಸುಧೀಂದ್ರ ಹುದ್ದಾರ್, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರಾದ
ಶ್ರೀ ಓಬಾ ನಾಯ್ಕ, ಪ್ರಶಾಂತ ಪಾಟೀಲ್, ನರ್ಸಿಂಗ್ ಅಧಿಕಾರಿ ಶ್ರೀ ಪ್ರಶಾಂತ ಬೇವೂರ, ನರ್ಸಿಂಗ್ ಅಧಿಕಾರಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹನುಂತ ಮುದೆವಗೋಳ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ರೇವತಿ ಭಂಡಾರಿ ಪ್ರಾರ್ಥಿಸಿದರು. ಶ್ರೀ ಆರ್.ಎಮ್.ತಿಮ್ಮಾಪೂರ ಸ್ವಾಗತಿಸಿದರು, ಶ್ರೀ ಅಶೋಕ.ಎಸ್.ಕೋರಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ನರ್ಸಿಂಗ್ ಪ್ರಶೀಕ್ಷಾಣರ್ಥಿಗಳು, ಡಿಮ್ಹಾನ್ಸ್ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಸ್ವಾಮಿ ವಿವೇಕಾನಂದಯೂತ್ ಮೂವಮೆಂಟ್ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು

*ಡಿಮ್ಹಾನ್ಸ್ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ* :ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯಲ್ಲಿ 77ನೇ ಸ್ವಾತಂತ್ರೋತ್ಸವದ ನಿಮಿತ್ತ ಧ್ವಜ...
15/08/2023

*ಡಿಮ್ಹಾನ್ಸ್ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ* :

ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯಲ್ಲಿ 77ನೇ ಸ್ವಾತಂತ್ರೋತ್ಸವದ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಮಹೇಶ ದೇಸಾಯಿ ರವರು ಧ್ವಜಾರೋಹಣವನ್ನು ನೆರವೆರಿಸಿ ಮಾತನಾಡಿದರು.

ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕಾರಣರಾದ ಎಲ್ಲಾ ಮಹಾನ್‌ ವ್ಯಕ್ತಿಗಳನ್ನು ಸದಾ ಸ್ಮರಿಸಬೇಕು, ಇವರ ತ್ಯಾಗ, ಬಲಿದಾನ ಮತ್ತು ದೇಶಾಭಿಮಾನದ ಕಾರಣದಿಂದಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೆಂದು ತಿಳಿಸಿದರು. ನಾವು ನೆಮ್ಮದಿಯಿಂದ ಇರಲು ನಮ್ಮ ದೇಶದ ವೀರ ಸೈನಿಕರು ಕೂಡ ಕಾರಣವಾಗಿದ್ದಾರೆ, ಇವರ ಶೌರ್ಯ, ತ್ಯಾಗ, ಬಲಿದಾನ, ದೇಶಾಭಿಮಾನ ಮತ್ತು ಪ್ರಾಮಾಣಿಕ ಸೇವೆಗೆ ವಿಶೇಷವಾದ ಅಭಿನಂದನೆಗಳು ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.

ವಿಶ್ವದಲ್ಲಿ ಹಲವು ಕ್ಷೇತ್ರಗಳಲ್ಲಿ ಭಾರತವು ಪ್ರಗತಿಯನ್ನು ಸಾಧಿಸುತ್ತಿದೆ, ಜಿ-೨೦ ಶೃಂಗ ಸಭೆಯ ಆತಿಥ್ಯವನ್ನು ಭಾರತವು ವಹಿಸಿದ್ದು ಹೆಮ್ಮೆಯ ವಿಷಯವೆಂದು ತಿಳಿಸಿದರು. ಇತ್ತೀಚೆಗೆ ಚಂದ್ರಯಾನ-3 ರ ಬಗ್ಗೆ ಪ್ರಸ್ತಾಪಿಸಿ ಮಾತನಾಡಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ‌ ದೇಶಕ್ಕೆ ವಿಶ್ವದಲ್ಲಿ ಹೆಚ್ಚು ಗೌರವವನ್ನು ಕೊಡುವಲ್ಲಿ ಪ್ರಮುಖಪಾತ್ರ ವಹಿಸಿಲಿದೆ ಮತ್ತು ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಶುಭಕೋರಿದರು.

ಡಿಮ್ಹಾನ್ಸ್ ಸಂಸ್ಥೆಯ ಪ್ರಗತಿಪರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ‌ನೀಡಿದರು.

ಸಮುದಾಯ ಮಾನಸಿಕ ಆರೋಗ್ಯ ಸೇವೆಗಳ ವಿಸ್ತರಣೆ ಯಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಗಳು, ವಿವಿಧ ಇಲಾಖೆಗಳು ಇತ್ಯಾದಿ ಕಡೆ ಮಾನಸಿಕ‌ ಆರೋಗ್ಯ ಅರಿವು ಕಾರ್ಯಕ್ರಮಗಳನ್ನು ವಿಸ್ತರಿಸುತ್ತಿರುವುದರ ಬಗ್ಗೆ ಮಾಹಿತಿ ನೀಡಿದರು. ಡಿಮ್ಹಾನ್ಸ್ ಸಂಸ್ಥೆಯ ಅಭಿವೃದ್ಧಿಯಲ್ಲಿ ಎಲ್ಲಾ ಸಿಬ್ಬಂದಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಅಭಿನಂದಿಸಿದರು.

ಡಿಮ್ಹಾನ್ಸ್ ಸಂಸ್ಥೆಯಲ್ಲಿ ಶೈಕ್ಷಣಿಕ ಕೋರ್ಸಗಳಾದ ಎಂ.ಡಿ ಇನ್ ಸೈಕಿಯಾಟ್ರಿ, ಎಂ.ಫೀಲ್ ಇನ್ ಕ್ಲಿನಿಕಲ್ ಸೈಕಾಲಜಿ, ಎಂ.ಫೀಲ್ ಇನ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ ಕೋರ್ಸಗಳ ಸೀಟುಗಳ ಸಂಖ್ಯೆ ಗಳನ್ನು ಹೆಚ್ಚಳ ಮಾಡುವುದಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಡಿಮ್ಹಾನ್ಸ್ ಸಂಸ್ಥೆಯಲ್ಲಿ ಪ್ರಾರಂಭಿಸಿದ ಎಂ.ಆರ್.ಆಯ್ ಸ್ಕ್ಯಾನ್ ಮತ್ತು ಸಿ.ಟಿ ಸ್ಕ್ಯಾನ್, ಪ್ರಯೋಗಾಲಯದ ಸೌಲಭ್ಯಗಳು ಸಾರ್ವಜನಿಕರಿಗೆ ಉಪಯೋಗವಾಗುತ್ತಿವೆ ಎಂದು ತಿಳಿಸಿದರು. ಇನ್ನು ಹಲವಾರು ಪ್ರಗತಿಪರ ಯೋಜನೆಗಳನ್ನು ಸಂಸ್ಥೆಯ ಅಭಿವೃದ್ಧಿಗೋಸ್ಕರ ಹಾಕಿಕೊಂಡಿದೆಯೆಂದು ಮಾಹಿತಿ ನೀಡಿದರು.

ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ದ ನರ್ಸಿಂಗ್ ಪರೀಕ್ಷೆಯಲ್ಲಿ ರಾಜ್ಯ ಕ್ಕೆ ರ್ಯಾಂಕ್ ಪಡೆದ ಡಿಮ್ಹಾನ್ಸ್ ಸಂಸ್ಥೆಯ ಸೈಕಿಯಾಟ್ರಿಕ್ ನಸಿಂಗ್ ವಿದ್ಯಾರ್ಥಿಯಾದ ಶ್ರೀ ಪ್ರಶಾಂತ ಬೇವೂರ್ ರವರಿಗೆ

DIMHANS associated with the Postgraduate Department of Yoga Studies, Karnataka University Dharwad, to conduct a 7-day fr...
07/06/2022

DIMHANS associated with the Postgraduate Department of Yoga Studies, Karnataka University Dharwad, to conduct a 7-day free yoga camp from 24.05.2022 to 30.05.2022 for psychiatric patients, their caregivers and staff of DIMHANS. The closing ceremony of of the week long yoga camp was held on 06.06.2022. The guest of the honor was Mrs. Geeta Gorpade, Assistant Professor, Department of YOGA Studies, KUD. The program was chaired by Dr. Mahesh Desai, Director of DIMHANS, who inaugurated the program by lighting a lamp. Shri Rajasekhara Adikenwar, chief guest of the event gave insights into pyramid meditation. Nursing students and staff also participated in the program. The welcome and Vote of thanks of the event was delivered by Shri. Lakshman Makanam and the program anchored by Kumari Vani Tuppad, Yoga Studies Department, Karnataka University Dharwad.

ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ದಿನದಂದು ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ ಮೇಡಂ ಮತ್ತು...
07/06/2022

ಧಾರವಾಡದ ಡಿಮ್ಹಾನ್ಸ್ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ದಿನದಂದು ನಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರತಿಮಾ ಮೂರ್ತಿ ಮೇಡಂ ಮತ್ತು ಧಾರವಾಡದ ಡಿಮ್ಹಾನ್ಸ್ ನಿರ್ದೇಶಕರಾದ ಡಾ.ಮಹೇಶ ದೇಸಾಯಿ ಅವರು ಡಿಮ್ಹಾನ್ಸ್ ಸಂಸ್ಥೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರನ್ನು ಹಾಕುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು. ಈ ಕಾರ್ಯಕ್ರಮವನ್ನು ಜೂನ್ 5, 2022 ರಂದು ಆಯೋಜಿಸಲಾಗಿತ್ತು. ಡಿಮ್ಹಾನ್ಸ್ ಸಂಸ್ಥೆಯ ವಿವಿಧ ವಿಭಾಗಗಳ ಸಿಬ್ಬಂದಿಗಳು ಭಾಗವಹಿಸಿದ್ದರು.

Dr. Pratima Murthy, Director of NIMHANS and Dr. Mahesh Desai, Director of DIMHANS, Dharwad, celebrated the World Environment Day at Dimhans Institute of Mental Health and Neurosciences, Dharwad. The event was hosted on June 5, 2022 by the Department of Psychiatric Social Work, Dimhans. Staff from various departments of the Dimhans were present.

07/04/2022

ಲೇಖನ: ಶ್ರೀದೇವಿ ಬಿರಾದಾರ

Autism awareness day.
02/04/2022

Autism awareness day.

ಲೇಖನ: ಶ್ರೀದೇವಿ ಬಿರಾದಾರ

26/03/2022

ಲೇಖನ: ಶ್ರೀದೇವಿ ಬಿರಾದಾರ

Music Therapy unit conducted a program at DIMHANS, Dharwad to celebrate Women's day 2022.
11/03/2022

Music Therapy unit conducted a program at DIMHANS, Dharwad to celebrate Women's day 2022.

Women's day celebrations at DIMHANS, Dharwad 2022.
11/03/2022

Women's day celebrations at DIMHANS, Dharwad 2022.

Program on Palliative care in DIMHANS, Dharwad.
23/02/2022

Program on Palliative care in DIMHANS, Dharwad.

Address

P. B. Road, DIMHNAS Hospital Campus
Dharwad
580008

Alerts

Be the first to know and let us send you an email when Dharwad Institute Of Mental Health And Neurosciences-Dharwad posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dharwad Institute Of Mental Health And Neurosciences-Dharwad:

Share