27/09/2025
"ಮೋದಿ ಜೀ ಸರ್ಕಾರದ GST ಸುಧಾರಣೆ
ಭಾರತದ ಪ್ರಗತಿಯ ಯಶೋಗಾಥೆ"
ಬೆಂಗಳೂರಿನಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠವು ಆಯೋಜಿಸಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು. ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರು ಕೈಗೊಂಡ GST ತೆರಿಗೆ ಕಡಿತಗೊಳಿಸುವ ಐತಿಹಾಸಿಕ ನಿರ್ಧಾರದಿಂದ ನಮ್ಮ ದೇಶದ ಬಡವರು, ಮಧ್ಯಮ ವರ್ಗದ ಜನರು, ಯುವಕರು, ರೈತರು, ಮಹಿಳೆಯರು, ವ್ಯಾಪಾರಿಗಳು, ಉದ್ಯಮಿಗಳು ಎಲ್ಲರೂ GST ಉಳಿತಾಯ ಉತ್ಸವದ ಬಹುದೊಡ್ಡ ಪ್ರಯೋಜನ ಪಡೆಯಲಿದ್ದು ನಮ್ಮ ಸಾಮಾಜಿಕ ಜಾಲತಾಣ ಕಾರ್ಯಕರ್ತರು ಹಾಗೂ Influencers ಗಳು ಮತ್ತಷ್ಟು ಪರಿಣಾಮಕಾರಿಯಾಗಿ ಎಲ್ಲೆಡೆ ಪಸರಿಸಿ ಜಾಗೃತಿ ಮೂಡಿಸಬೇಕೆಂಬ ಮನವಿ ಮಾಡಲಾಯಿತು.
ಭಾರತದ ಸ್ವಾತಂತ್ರ್ಯಕ್ಕೆ ಹೇಗೆ ಸ್ವದೇಶಿ ಮಂತ್ರದಿಂದ ಶಕ್ತಿ ದೊರೆಯಿತೋ, ಅದೇ ರೀತಿ ದೇಶದ ಸಮೃದ್ಧಿಗೂ ಸ್ವದೇಶಿ ಮಂತ್ರದಿಂದಲೇ ಶಕ್ತಿ ದೊರೆಯಲಿದ್ದು, ಮನೆ ಮನೆಗಳಲ್ಲೂ ಸ್ವದೇಶಿ, ಮನ ಮನಗಳಲ್ಲೂ ಸ್ವದೇಶಿ ವಸ್ತುಗಳನ್ನು ಬಳಸಿ ಬೆಂಬಲಿಸುವ ಸಂಕಲ್ಪ ಮಾಡಬೇಕೆಂಬ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ Preetham J Gowda , ಪಕ್ಷದ ರಾಜ್ಯ ಸಾಮಾಜಿಕ ಜಾಲತಾಣ ಸಂಚಾಲಕರಾದ ಶ್ರೀ Prashant Makanur ಸೇರಿದಂತೆ ಸಾಮಾಜಿಕ ಜಾಲತಾಣ ಪ್ರಮುಖರು, ಕಾರ್ಯಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಿತಾಯದಉತ್ಸವ