ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಚಿಕ್ಕಮಗಳೂರು

  • Home
  • India
  • Chikmagalur
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಚಿಕ್ಕಮಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಚಿಕ್ಕಮಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕುವೆಂಪು ಕಲಾಮಂದಿರ
ಟ್ಯಾಗ್ ಮಾಡಿ

02/12/2024
02/12/2024

ಪುಸ್ತಕ ಪರಿಶೆಗೆ ನೋಂದಣಿ ಈಗ ಪ್ರಾರಂಭವಾಗಿದ ಇದರಲ್ಲಿ ನೀಡಿರುವ QR ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ನೀಡಿ

ನೆನಪಿರಲಿ ಮೊದಲು ನೋಂದಾಯಿಸಿದ 100 ಜನ ಆಸಕ್ತರಿಗೆ ಮಾತ್ರ ಅವಕಾಶ

ನೋಂದಣಿ ಶುಲ್ಕ 500 ಆಗಿರುತ್ತದೆ

20/11/2024

ಓದುಗ - ಲೇಖಕ, ಬರಹಗಾರ - ಅಭಿಮಾನಿಗಳ ಸಮಾಗಮದಿಂದ ತುಸು ಹೊರತಾಗಿ ಸಹ-ಲೇಖಕರ ಮುಖಾಮುಖಿಯ ಪ್ರಯತ್ನ ನಮ್ಮ ಈ ಕಾರ್ಯಕ್ರಮ.

ಶೀರ್ಷಿಕೆ ಊಹಿಸಿ, ನಿಮ್ಮ ಅದೃಷ್ಟದ ಪರೀಕ್ಷೆಯಾಗಲಿ; ಗೆದ್ದರೆ ಖಚಿತವಾಗಿ ಬಂಪರ್ ಆಫರ್.

ದಿನಾಂಕ ನೆನಪಿಡಿ ಡಿಸೆಂಬರ್ 7 ನೇ ತಾರೀಖು, ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದ ಆವರಣದಲ್ಲಿ ಕಾರ್ಯಕ್ರಮ.

ಸೂಚನೆ:
1. ಮೊದಲು ಊಹಿಸಿದವರಿಗೆ ಬಹುಮಾನವಿರುತ್ತದೆ.
2. ಅಧಿಕೃತ ಖಾತೆಯ ಪೋಸ್ಟ್ ಗೆ ಬಂದ ಕಾಮೆಂಟನ್ನು ಮಾತ್ರ ಪರಿಗಣಿಸಲಾಗುತ್ತದೆ.

19/11/2024

ಈಗಷ್ಟೆ ಅದ್ಧೂರಿಯಾಗಿ ಸಂತೆಮಾಡಿ ಸರಕುಗಳನ್ನು ಮನೆಗೆ ತಂದಿದ್ದಾಯ್ತು; ಈಗಲಿಂದಲೇ ಮನಸ್ಸೆಲ್ಲ ಮುಂದಿನ ಸಂತೆಯ ದಿಕ್ಕಿನಲ್ಲಿದೆ ಅನ್ನೋದು ಅಕ್ಷರಶಃ ಸತ್ಯ. ಈ ಹೊತ್ತಿನಲ್ಲಿ ಅನಿಸಿದ್ದು, ಮುಂದಿನ ಸಂತೆಯಲ್ಲಿ ನಮ್ಮ ಸರಕಗಳ ಅಂಗಡಿಯನ್ನು ತೆರೆದಿಟ್ಟುಕೊಳ್ಳೊದು ಹೇಗೆ ಅನ್ನೋದೆ ಈ ೇಖಕರ_ಮುಖಾಮುಖಿ" ಯ ಉದ್ದೇಶ.

#ಲಿಟ್ರರಿ_ನೆಕ್ಸ್ಟ್ 1.0" ಕಾರ್ಯಕ್ರಮದ ಟ್ಯಾಗ್ ಲೈನ್. ಹಾಗಾದರೆ ಶೀರ್ಷಿಕೆ ಏನಿರಬಹುದು ಯೋಚಿಸಿ ಹೇಳಿ. ಉತ್ತರ ಸರಿಯಿದ್ದರೆ ಖಚಿತವಾಗಿ ನಿಮಗೊಂದು ಬಂಪರ್ ಆಫರ್ ಅಲ್ಲಿರುತ್ತೆ.

------ - - - - --------

ಕಾರ್ಯಕ್ರಮದ ಹೆಸರೇನು?
ಕಾರ್ಯಕ್ರಮದ ಉದ್ದೇಶಗಳು ಏನೇನು?
ಯಾರೆಲ್ಲಾ ಅತಿಥಿಗಳಾಗಿ ಬರಬಹುದು?
ಯಾವಾಗ? ಎಲ್ಲಿ? ಎಷ್ಟೊತ್ತಿಗೆ?

ಎಲ್ಲದಕ್ಕೂ ಪ್ರತಿದಿನ ಉತ್ತರ ಸಿಗುತ್ತ ಹೊಗುತ್ತದೆ ಅಪ್ಡೇಟ್ ಪಡೆಯಲು ನಮ್ಮ kpptrust ಸಾಮಾಜಿಕ ಜಾಲಾತಾಣಗಳನ್ನು ಫಾಲೋ ಮಾಡಿ ಹಾಗೂ ಪ್ರತಿಷ್ಠಾನದ ವಾಟ್ಸಾಪ್ ಚಾನೆಲ್ ಸೇರಿ

ಕಾಮೆಂಟ್ ಬಾಕ್ಸ್ ನಲ್ಲಿ ಲಿಂಕ್ ಇದೆ
https://whatsapp.com/channel/0029VaxHe513bbV9j1syQg3W

ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ *ಕನ್ನಡ ಜ್ಯೋತಿ ರಥಯಾತ್ರೆಯ* ರಥವೂ ಚಿಕ್ಕಮಗಳೂರಿನ ಜಿಲ್ಲೆಯಾದ್ಯಂತ ಸಂಭ್ರಮದಿಂ...
28/09/2024

ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ *ಕನ್ನಡ ಜ್ಯೋತಿ ರಥಯಾತ್ರೆಯ* ರಥವೂ ಚಿಕ್ಕಮಗಳೂರಿನ ಜಿಲ್ಲೆಯಾದ್ಯಂತ ಸಂಭ್ರಮದಿಂದ ಸಂಚರಿಸಿದ ಕ್ಷಣಗಳು... ಸಹಕರಿಸಿದ ಸರ್ವರಿಗೂ ಧನ್ಯವಾದಗಳು ❤️💛

ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ *ಕನ್ನಡ ಜ್ಯೋತಿ ರಥಯಾತ್ರೆಯ* ರಥವೂ ಇಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲ...
22/09/2024

ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ *ಕನ್ನಡ ಜ್ಯೋತಿ ರಥಯಾತ್ರೆಯ* ರಥವೂ ಇಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ತೆರಳಿದ ಕ್ಷಣ

ಕನ್ನಡ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಕನ್ನಡ ಜಾಗೃತಿ ಮೂಡಿಸಲಿಕರ್ನಾಟಕ ಸಂಭ್ರಮ-೫೦ ರ ಸಂಭ್ರಮದ  ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆಮೈಸೂರು ...
21/09/2024

ಕನ್ನಡ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಕನ್ನಡ ಜಾಗೃತಿ ಮೂಡಿಸಲಿ
ಕರ್ನಾಟಕ ಸಂಭ್ರಮ-೫೦ ರ ಸಂಭ್ರಮದ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ

ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ ಕರ್ನಾಟಕ ಎಂಬ ಹೆಸರು ಘೋಷಣೆಯಾದ ೫೦ ವರ್ಷದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕನ್ನಡದ ಹಿರಿಮೆ, ಕನ್ನಡದ ಗರಿಮೆ, ಕನ್ನಡ ಶಕ್ತಿ, ಕನ್ನಡದ ಮಣ್ಣಿನ ವಾಸನೆಯ ಪರಿಕಲ್ಪನೆಯನ್ನು ಈ ರಥಯಾತ್ರೆ ಸಾರುತ್ತದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳಿರುವ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಕನ್ನಡದ ರಥ ಸಂಚರಿಸಿದಲ್ಲೆಲ್ಲಾ ಕನ್ನಡದ ವಾತಾವರಣ ಸೃಷ್ಟಿಯಾಗಲಿ. ಕನ್ನಡದ ಶಕ್ತಿ ಸಾಮರ್ಥ್ಯಗಳು ವೃದ್ದಿಸಲಿ. ಕನ್ನಡ ಭಾಷೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದೆಲ್ಲಡೆ ಪ್ರಜ್ವಲಿಸುವಂತಹ ಸಂಭ್ರಮದ ಕ್ಷಣ ಮೂಡಿ ಬರಲಿ ಎಂದರು.
ವಿಧಾನ ಸಭಾ ಶಾಸಕರಾದ ಹೆಚ್.ಡಿ ತಮ್ಮಯ್ಯ ಮಾತನಾಡಿ, ಕನ್ನಡ ನಾಡು ನುಡಿಗೆ ತನ್ನದೇ ಆದ ಶ್ರೀಮಂತಿಕೆ ಇದೆ. ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಹಾಗೂ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕಿದೆ. ಕನ್ನಡ ಜ್ಯೋತಿ ರಥಯಾತ್ರೆಯೂ ಕರ್ನಾಟಕ ಎಂದು ನಾಮಕರಣಗೊಂಡ ಐತಿಹಾಸಿಕ ಕ್ಷಣವನ್ನು ಮೆಲುಕು ಹಾಕಲು ಮತ್ತು ಕನ್ನಡ ನಾಡು ನುಡಿಗೆ ದುಡಿದವರ ಸ್ಮರಣೆಗೆ ಕಾರಣವಾಗಲಿ ಎಂದರು.
ವಿಧಾನಸಭೆ ಶಾಸಕರಾದ ಎಸ್.ಎಲ್.ಭೋಜೇಗೌಡ ಮಾತನಾಡಿ, ಕನ್ನಡ ಮಾತನಾಡುವುದಕ್ಕೆ ಮಾತ್ರ ಸೀಮಿತವಾಗಬಾರದು. ರಾಜ್ಯೋತ್ಸವದಂತಹ ಕಾರ್ಯಕ್ರಮದಲ್ಲಿ ಸಂಭ್ರಮಾಚರಣೆಗೆ ಸೀಮಿತವಾಗಬಾರದು. ಕವಿಗಳು ಕೊಟ್ಟ ಕವಿವಾಣ ಯಂತೇ ನಡೆದರೇ ಕನ್ನಡ ಏಳಿಗೆ ಸಾಧ್ಯವಾಗುತ್ತದೆ. ಕನ್ನಡದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದ ಅಗತ್ಯವಿದೆ. ಕನ್ನಡ ಶಾಲೆಗಳು ಮುಚ್ಚುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಹಲವು ಕ್ಷೇತ್ರದಲ್ಲಿ ಸಾಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಬಗ್ಗೆ ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಎಂದರು.
ವಿಧಾನ ಪರಿಷತ್ ಶಾಸಕರಾದ ಸಿ.ಟಿ ರವಿ ಮಾತನಾಡಿ, ಕರ್ನಾಟಕ ಎಂದು ಮರುನಾಮಕರಣವಾದ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕವಿವಾಣ ಮೂಡಿತು. ಕರ್ನಾಟಕ ಮರುನಾಮಕರಣದ ವರ್ಷಗಳ ಅವಲೋಕನ ನಡೆಸಿದರೇ ನಾವು ಎಲ್ಲಿಗೆ ಬಂದು ನಿಂತಿದ್ದೇವೆ. ಎಲ್ಲಿಗೆ ಬಂದು ನಿಂತಿದ್ದೇವೆ ಎನ್ನುವುದನ್ನು ಗಂಭೀರವಾಗಿ ಆಲೋಚಿಸಬೇಕಿದೆ. ಹೆಸರೇನೋ ಕರ್ನಾಟಕವಾಯ್ತು. ಆದರೆ ಕನ್ನಡ ಯಾವ ಪ್ರಮಾಣದಲ್ಲಿ ಕನಸು ಕಟ್ಟಿ ಉಸಿರಾಗಬೇಕೆಂದು ಬಯಸಿದ್ದೇವೋ ರೀತಿ ಉಸಿರಾಗಲಿಲ್ಲ ಎಂದರು.
ಈ ಸಂದರ್ಭದಲ್ಲಿ ಸಗರಸಭೆ ಅಧ್ಯಕ್ಷರಾದ ಸುಜಾತ ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕ ರಡ್ಡಿ, ಅಡಿಷನಲ್ ಎಸ್‌ಪಿ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಂಜುಳಾ ಹುಲ್ಲಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹಾಗೂ ಕನ್ನಡ ಪರ ಸಂಘಟನೆಗಳ ಸದಸ್ಯರು, ಸಾಂಸ್ಕೃತಿಕ ವಲಯದ ಕಲಾವಿದರು, ಆಟೋ, ಟ್ಯಾಕ್ಸಿ ಸಂಘದ ಸದಸ್ಯರು ಇದ್ದರು.

Address

Kuvempu Kalamandira
Chikmagalur
577101

Alerts

Be the first to know and let us send you an email when ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಚಿಕ್ಕಮಗಳೂರು posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಚಿಕ್ಕಮಗಳೂರು:

Share