Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ

Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ Catch the latest updates about Chikkaballapur District at your fingertips. Indeed we here for you as an Voice to the Citizens of Chikkaballapur District.

Please send us if any Photos/Events/articles/ to [email protected]. ಚಿಕ್ಕಬಳ್ಳಾಪುರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿನ ಒಂದು ತಾಲೂಕು ಆಗಿದ್ದ ಇದು ೨೦೦೮ ರಲ್ಲಿ ಜಿಲ್ಲಾ ಅಡಳಿತ ಕೇಂದ್ರವಾಯಿತು. ಈ ಜಿಲ್ಲೆಗೆ ಸರ್. ಎಮ್. ವಿಶ್ವೇಶ್ವರಯ್ಯ ಜಿಲ್ಲೆ ಎಂದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ. ಇಲ್ಲಿಗೆ ಹತ್ತಿರ ಇರುವ ನಂದಿ ದೇವಸ್ಥಾನ ಬಹಳ ಪ್ರಾಚೀನ ದೇವಸ್ಥಾನ. ಇಲ್ಲಿ ಶಿವನ ಲಿಂಗಗಳೆರಡು ಇವೆ. ಗಂಗ, ಕದಂಬರಿಗಿಂತ ಹಳೆಯ ಶಿಲಾಶಾಸನಗಳನ್ನು ಇಲ

್ಲಿ ನಾವು ಕಾಣಬಹುದು. ಅಂಗ್ಲರಲ್ಲಿನ ಪ್ರಮುಖರಾದ ಲಾರ್ಡ ಕಾರ್ನ್ವಾಲಿಸ್ ಸಹ ಇಲ್ಲಿ ಕೆಲವು ದಿನ ಇದ್ದ ಎನ್ನುವ ಶಾಸನಗಳನ್ನು ಕಾಣಬಹುದು. ಇಲ್ಲಿಗೆ ಸಮೀಪ (೨೫ ಕಿ.ಮಿ.) ಇರುವ ಮಾಕಿರೆಡ್ಡಿಪಲ್ಲಿಯಲ್ಲಿ ಮುತರಾಯಸ್ವಾಮಿ ದೇವಸ್ಥಾನವು ಸಹ ಬಹಳ ಪ್ರಾಚೀನವಾದ ದೇವಸ್ಥಾನ. ಇಲ್ಲಿ ಶ್ರೀರಾಮ ನವಮಿಯ ದಿನ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ನಂದಿ ಬೆಟ್ಟ ಇಲ್ಲಿಯ ಪ್ರಮುಖ ಗಿರಿಧಾಮ. ಚಿಕ್ಕಬಳ್ಳಾಪುರ ಮೆಣಸಿನಕಾಯಿ ತುಂಬ ಪ್ರಸಿದ್ಧಿ. ಇಲ್ಲಿನ ರೈತ ಸಮುದಾಯ ಬಹಳ ಪ್ರಗತಿ ಪರ ರೈತರನ್ನು ಹೊಂದಿದೆ.
೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೨,೫೫,೧೦೪. ಇದರಲ್ಲಿ ಪುರುಷರು ೬,೩೬,೪೩೭ ಹಾಗೂ ಮಹಿಳೆಯರು ೬,೧೮,೬೬೭. ಲಿಂಗಾನುಪಾತ ೯೭೨ ಸಾಂದ್ರತೆ ೨೯೬.ಸಾಕ್ಷರತೆ ಪ್ರಮಾಣ ೬೯.೭೬.
೧. ಬಾಗೇಪಲ್ಲಿ ೨. ಚಿಕ್ಕಬಳ್ಳಾಪುರ ೩. ಚಿಂತಾಮಣಿ ೪. ಗೌರಿಬಿದನೂರು ೫. ಗುಡಿಬಂಡೆ. ೬.ಶಿಡ್ಲಘಟ್ಟ.
ಚಿಂತಾಮಣಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಕೈವಾರ, ಮುರುಗಮಲ್ಲ, ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿವೆ. ಪ್ರತಿ ಭಾನುವಾರ ಚಿಂತಾಮಣಿ ಸಂತೆಯಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತದೆ. ಕೃಷಿ ಉತ್ಪನ್ನಗಳಿಂದ ಹಿಡಿದು ಜಾನುವಾರುಗಳವರೆಗೆ ಭಾರೀ ವಹಿವಾಟು ನಡೆಯುತ್ತದೆ. ತಾಲೂಕಿನಲ್ಲಿ ಸಾಹಿತ್ಯಪ್ರೇಮ ಅಷ್ಟಾಗಿ ಕಂಡು ಬರದಿದ್ದರೂ ಖ್ಯಾತ ಕವಿ ಬಿ.ಆರ್. ಲಕ್ಷ್ಮಣರಾವ್ ಚಿಂತಾಮಣಿಯವರಾಗಿರುವುದು ಹೆಮ್ಮೆಯ ಸಂಗತಿ. ಪಟ್ಟಣಕ್ಕೆ ಚಿಂತಾಮಣಿ ಎಂಬ ಆಕರ್ಷಕ ಹೆಸರು ಬಂದಿರುವುದರ ಹಿಂದೆ ಸ್ವಾರಸ್ಯಕರ ಕಥೆಯಿದೆ. ಈ ಪ್ರಾಂತ್ಯ ಹಿಂದೆ ಮರಾಠರ ಆಳ್ವಿಕೆಯಲ್ಲಿತ್ತು. ಆಗಿನ ರಾಜ ಚಿಂತಾಮಣಿರಾವ್ ಪಟ್ಟಣವನ್ನು ನಿರ್ಮಿಸಿದ. ಹಾಗೆಯೇ ಪಟ್ಟಣಕ್ಕೆ ತುಸು ದೂರದಲ್ಲಿರುವ ದೊಡ್ಡ ಬೆಟ್ಟಗಳಿಗೆ ಅಂಬಾಜಿ ದುರ್ಗ ಎಂದು ಹೆಸರಿಡಲಾಗಿದೆ. ಈ ಅಂಬಾಜಿ ರಾವ್ ಸಹ ಮರಾಠ ರಾಜನಾಗಿದ್ದ. ಪಟ್ಟಣದ ಹೃದಯ ಭಾಗದಲ್ಲಿರುವ ವರದಾಂಜನೇಯ ಬೆಟ್ಟ ಊರಿಗೆ ಕಳಶ ಪ್ರಾಯವಾಗಿದೆ. ಚಿಕ್ಕಬಳಾಪುರ ಜಿಲ್ಲೆ ಯ ಬಗ್ಗೆ ಮಾಹಿತಿ ಗಾಗಿ: http://www.chikballapur.nic.in

18/03/2026

ಈ ವರ್ಷದ ಕೊನೆ ಮಳೆ...! ಚಿಕ್ಕಬಳ್ಳಾಪುರದಲ್ಲಿ ಭೋರ್ಗರೆಯುತ್ತಿರುವ ಮಳೆರಾಯ..!

ನಮ್ಮೂರ ರೋಡ್ ಗಳು... !
17/03/2026

ನಮ್ಮೂರ ರೋಡ್ ಗಳು... !

ಅವರಿದ್ದಾಗ ಇವರು ಮಾಡ್ಲಿಲ್ಲ, ಇವರು ಬಂದಾಗ ಅವರು ಮಾಡ್ಲಿಲ್ಲ....! ಫುಲ್ ಫೋಟೋ ನೋಡಿ.ಅಲ್ಲಿಗೆ ಉದಯವಾಯಿತು ನಮ್ಮ ಚಿಕ್ಕಬಳ್ಳಾಪುರ....! #ಚಿಕ್ಕ...
16/03/2026

ಅವರಿದ್ದಾಗ ಇವರು ಮಾಡ್ಲಿಲ್ಲ, ಇವರು ಬಂದಾಗ ಅವರು ಮಾಡ್ಲಿಲ್ಲ....! ಫುಲ್ ಫೋಟೋ ನೋಡಿ.

ಅಲ್ಲಿಗೆ ಉದಯವಾಯಿತು ನಮ್ಮ ಚಿಕ್ಕಬಳ್ಳಾಪುರ....!

#ಚಿಕ್ಕಬಳ್ಳಾಪುರ

15/03/2026

ಚಿಕ್ಕಬಳ್ಳಾಪುರ ಬಂದ್ ಕೂಡ ಸೈಲೆಂಟಾಗಿ ಬಂದ್ ಆಗಿದೆ.. ಇಲ್ಲಿ ಹೋರಾಟಗಳೆಲ್ಲ ಓಲಾಟಗಳೇ!
ಜನತೆಯ ನಿದ್ರಾವಸ್ಥೆ ಮತ್ತೋಮ್ಮೆ ಮುಂದುವರೆದಿದೆ. ..!

15/03/2026

ಎಂತ ವಿಪರ್ಯಾಸ ಅಲ್ವಾ ಕೇವಲ 120-150ಕಿಮೀ ದೂರದಲ್ಲಿ ಕಾವೇರಿ ನೀರು ಹರಿದರೂ ಪರಿಶುದ್ಧ 'ನೀರಿ'ಗಾಗಿ ಹೋರಾಡುವ ಪರಿಸ್ಥಿತಿ ನಮ್ಮದು.
#ಚಿಕ್ಕಬಳ್ಳಾಪುರಬಂದ್

14/03/2026

ಅಕ್ರಮ ಗ್ಯಾಸ್ ಸಿಲಿಂಡರ್ ಶೇಖರಣೆ...ನಂದಿಬೆಟ್ಟದ ತಪ್ಪಲಿನಲ್ಲಿರುವ ಕುಡುವತಿ ಗ್ರಾಮದಲ್ಲಿ ನಡೆದಿರುವ ಘಟನೆ.

ಚಿಕ್ಕಬಳ್ಳಾಪುರದಲ್ಲಿ ಗೃಹಬಳಕೆ ಸಿಲಿಂಡರ್ ಗಳ ವ್ಯತ್ಯಯ ಇಲ್ಲ..!
13/03/2026

ಚಿಕ್ಕಬಳ್ಳಾಪುರದಲ್ಲಿ ಗೃಹಬಳಕೆ ಸಿಲಿಂಡರ್ ಗಳ ವ್ಯತ್ಯಯ ಇಲ್ಲ..!

13/03/2026

ಚಿಕ್ಕಬಳ್ಳಾಪುರ ನೆಲ ಜಲದ ಬಗ್ಗೆ ನಮ್ಮ ಶಾಸಕರು ಹಾಗೂ ಸಂಸದರು ಎಷ್ಟು ಬಾರಿ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಾರೆ??
#ಚಿಕ್ಕಬಳ್ಳಾಪುರ

ಇದೇ ಭಾನುವಾರ ಮಾರ್ಚ್ 15ಕ್ಕೆ 'ಚಿಕ್ಕಬಳ್ಳಾಪುರ ಬಂದ್' ಗೆ ವಿವಿಧ ಸಂಘಟನೆಗಳ ಕರೆ..!     #ಚಿಕ್ಕಬಳ್ಳಾಪುರ
13/03/2026

ಇದೇ ಭಾನುವಾರ ಮಾರ್ಚ್ 15ಕ್ಕೆ 'ಚಿಕ್ಕಬಳ್ಳಾಪುರ ಬಂದ್' ಗೆ ವಿವಿಧ ಸಂಘಟನೆಗಳ ಕರೆ..!

#ಚಿಕ್ಕಬಳ್ಳಾಪುರ

12/03/2026

ನಮ್ಮೂರಿನ ರಸ್ತೆಗಳ ಬಗ್ಗೆ ಒಂದೆರಡು ಮಾತು ಗುರೂ...? ಹಾಗೆ ಫೋಟೋಗಳು ಇದ್ರೇ ಕಾಮೆಂಟ್ ಮಾಡಿ.

💧 ನೀರಿನ ಸತ್ಯ (Water Truth)"Lead, Arsenic, Mercury — ಇದು ನೀರಲ್ಲ, ಇದು ನಮ್ಮ ಮಕ್ಕಳಿಗೆ ನೀಡುತ್ತಿರುವ ನಿಧಾನ ವಿಷ!""Tertiary Treat...
12/03/2026

💧 ನೀರಿನ ಸತ್ಯ (Water Truth)
"Lead, Arsenic, Mercury — ಇದು ನೀರಲ್ಲ, ಇದು ನಮ್ಮ ಮಕ್ಕಳಿಗೆ ನೀಡುತ್ತಿರುವ ನಿಧಾನ ವಿಷ!"
"Tertiary Treatment ಇಲ್ಲದ ನೀರನ್ನು ನಮ್ಮ ಕೆರೆಗೆ ಬಿಡುವುದು ಅಪರಾಧ.

Address

Chik Ballapur
562101

Alerts

Be the first to know and let us send you an email when Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nammadu Chikkaballapura/ನಮ್ಮದು ಚಿಕ್ಕಬಳ್ಳಾಪುರ:

Share