ನಮ್ಮ ಪಿಡಚಲಹಳ್ಳಿ

ನಮ್ಮ ಪಿಡಚಲಹಳ್ಳಿ ಸಮಾಜ ಸೇವೆಯೇ ನನ್ನ ಗುರಿ�

29/12/2025

Celebrating my 6th year on Facebook. Thank you for your continuing support. I could never have made it without you. 🙏🤗🎉

ಅದೇ ಮಾತನ್ನ ಶೂದ್ರರು ಈಗ ದೇವಾಲಯದಲ್ಲಿ ಇರುವುದು ದೇವರಲ್ಲ, ಅದು ಕೇವಲ ಕಲ್ಲು ಬಂಡೆ ಅಂತ ಹೇಳಿದ್ರೆ ಯಾರೂ ಕೇಳೋದೇ ಇಲ್ಲ.! 😒
23/11/2025

ಅದೇ ಮಾತನ್ನ ಶೂದ್ರರು ಈಗ ದೇವಾಲಯದಲ್ಲಿ ಇರುವುದು ದೇವರಲ್ಲ, ಅದು ಕೇವಲ ಕಲ್ಲು ಬಂಡೆ ಅಂತ ಹೇಳಿದ್ರೆ ಯಾರೂ ಕೇಳೋದೇ ಇಲ್ಲ.! 😒

 #ಶೂದ್ರರೇ_ತಪ್ಪದೇ_ಓದಿ_ಅರ್ಥ_ಮಾಡಿಕೊಳ್ಳಿ,,👇ಒಬ್ಬ ಬ್ರಾಹ್ಮಣ ಬೆವರು ಹರಿಸಿ ಕೆಳ ಮಟ್ಟದ ಕೆಲಸ ಮಾಡಲ್ಲ, ಆತ ಬಡವನಾದರೂ ತನ್ನ ಜಾತಿ ಶ್ರೇಷ್ಟತೆ ...
23/11/2025

#ಶೂದ್ರರೇ_ತಪ್ಪದೇ_ಓದಿ_ಅರ್ಥ_ಮಾಡಿಕೊಳ್ಳಿ,,👇
ಒಬ್ಬ ಬ್ರಾಹ್ಮಣ ಬೆವರು ಹರಿಸಿ ಕೆಳ ಮಟ್ಟದ ಕೆಲಸ ಮಾಡಲ್ಲ, ಆತ ಬಡವನಾದರೂ ತನ್ನ ಜಾತಿ ಶ್ರೇಷ್ಟತೆ ಬಿಟ್ಟುಕೊಡಲ್ಲ, ಮಡಿವಂತಿಕೆಯಿಂದ ಮೆರೆಯುತ್ತಾನೆ,

ಅಯ್ಯಪ್ಪ ಮಾಲೆ ದತ್ತ ಮಾಲೆ ಧರಿಸೊಲ್ಲ, ಕೆಂಡದ (ಅಗ್ನಿ) ಮಡಕೆ ಹೊರೋದಿಲ್ಲ, ಬೆಂಕಿ ಕೆಂಡದ ಮೇಲೆ ನಡೆಯೋಲ್ಲ, ದೇವರ ಹರಕೆ ಅಂತ ತಲೆ ಬೋಳಿಸಿಕೊಳ್ಳಲ್ಲ,
ಮಡೆ ಸ್ನಾನ ಮಾಡಲ್ಲ, ದೇವದಾಸಿಯರನ್ನಾಗಿ ತನ್ನ ಜಾತಿಯ ಹೆಣ್ಣು ಮಕ್ಕಳನ್ನು ಮಾಡುವುದಿಲ್ಲ, ಬೇವಿನ ಸೀರೆ ಉಡಲಿಲ್ಲ, ಸಿಂಬೆ ಮೇಲೆ ಕೊಡ ಹೊರುವುದಿಲ್ಲ.
ತನ್ನ ಸ್ವಂತ ಹಣವನ್ನು ದೇವರ ಸೇವೆಗೆ ಎಂದೂ ಖರ್ಚು ಮಾಡೋಲ್ಲ, ಯಾವುದೇ ದೇವರಿಗೂ ಕಾಲ್ನಡಿಗೆ ಯಾತ್ರೆ ಸೇವೆ ಮಾಡೋಲ್ಲ, ಯಾವುದೇ ದೇವರಿಗೂ ಕುರಿ, ಕೋಳಿ ಕೋಣ, ಹಂದಿ, ಹರಕೆ ಅಂತ ಬಲಿ ಕೊಡೋದಿಲ್ಲ.

ಮುಖ್ಯವಾಗಿ ಯಾವುದೇ ದೇವಸ್ಥಾನದ ಹುಂಡಿಗೆ ಹಣ ಹಾಕೋದಿಲ್ಲ, ಕಾಣಿಕೆ ತಟ್ಟೆಗೆ ದಕ್ಷಿಣೆ ಹಾಕೋದಿಲ್ಲ, ದೇವರ ಮೆರವಣಿಗೆ ಉತ್ಸವ ಅಂತ ಒಂದು ದಿನಾನೂ ಉತ್ಸವ ಮೂರ್ತಿಯನ್ನು ಹೊತ್ತು ಮೆರೆಸುವುದಿಲ್ಲ, ದೇವರ ಮೆರವಣಿಗೆ ಉತ್ಸವ ಅಂತ ಒಂದು ದಿನಾನೂ ತಮಟೆ ನಗಾರಿ ಇತರೆ ಬಾರಿಸಲಿಲ್ಲ.

ಓ,, SC, ST, OBC ಶೂದ್ರರೇ ನೀವು ಮಾತ್ರ ಯಾಕೆ ?
ಅವರ ಮೋಸದ ಸಲಹೆ ಪಡೆದು ಅವರ ವಂಚನೆ ಜಾಲಕ್ಕೆ ಸಿಲುಕಿ ದರಿದ್ರ ಮೂಢನಂಬಿಕೆಗೆ ಬಲಿಯಾಗಿ ಆರ್ಥಿಕ ನಷ್ಟ ಹೊಂದುವಿರಿ, ಈ ರೀತಿ ವ್ಯರ್ಥ ಮಾಡುವ ಬದಲು ಅದೇ ಹಣವನ್ನು ಜ್ಞಾನ ಅರ್ಜಿಸಲು ಒಳ್ಳೆಯ ಧಿರಿಸು ಹಾಕಲು ಮತ್ತು ಒಳ್ಳೆಯ ತುಪ್ಪ ಅನ್ನ ಉಣ್ಣಲು ಬಳಸಿಕೊಂಡು ನೆಮ್ಮದಿಯ ಜೀವನ ಮಾಡಿ ಸುಖವಾಗಿರಿ.

_ #ಪೆರಿಯಾರ್

31/12/2024

ನಿಮಗೆ #ಕೇರಳದ_ಸ್ತನ_ತೆರಿಗೆ_ಪದ್ಧತಿ ಗೊತ್ತಾ ?👇
ಕೇರಳದ ರಾಜರಾಗಿದ್ದ #ನಂಬೂದರಿ_ಬ್ರಾಹ್ಮಣರು, ಕೆಳಜಾತಿ ವರ್ಗಗಳ ಮಹಿಳೆಯರು ತಮ್ಮ ಮೈಮುಚ್ಚಿಕೊಳ್ಳಲು ತೆರಿಗೆಯನ್ನು ಕಟ್ಟಬೇಕೆಂದು ಅತಿ ಕ್ರೂರವಾದ ಅಮಾನವೀಯ ಅನಿಷ್ಟ ಕಾನೂನನ್ನು 17, 18, ಮತ್ತು 19 ನೇ ಶತಮಾನಗಳಲ್ಲಿ ಜಾರಿಗೊಳಿಸಿದ್ದರು.
ಈ ಸ್ತನ ತೆರಿಗೆಯು ಇತಿಹಾಸದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು.

ಮೈಸೂರು ಹುಲಿ ಟಿಪ್ಪುಸುಲ್ತಾನ್ ರು ಕೇರಳದ ಮಲಬಾರ್ ಪ್ರಾಂತ್ಯದ ಮೇಲೆ ಅನೇಕ ಬಾರಿ ದಾಳಿ ಮಾಡಿ ಈ ನಂಬೂದರಿ ಬ್ರಾಹ್ಮಣರನ್ನು ಬಗ್ಗುಬಡಿದು, ಈ ಅಮಾನವೀಯ ಪದ್ಧತಿಯನ್ನು ತನ್ನ ಕಾಲದಲ್ಲಿ ನಿಷೇಧಿಸಿದರು.

ಟಿಪ್ಪುಸುಲ್ತಾನನ ಮರಣದ ನಂತರ ಮತ್ತದೇ ಸ್ತನ ತೆರಿಗೆ ಪದ್ಧತಿಯನ್ನ ಬ್ರಾಹ್ಮಣರು ಜಾರಿಗೆ ತಂದರು.

ಕೆಳವರ್ಗದ ಈಳವ (ಈಡಿಗ) ಜಾತಿಗೆ ಸೇರಿದ್ದ ನಂಗೇಲಿ ಎಂಬ ಮಹಿಳೆಯು ತನ್ನ ದೇಹವನ್ನು ಸದಾಕಾಲ ಪೂರ್ತಿಯಾಗಿ ಮುಚ್ಚಿಕೊಂಡಿರುತ್ತಾಳೆ. ಎಂದು ನಂಬೂದರಿ ಬ್ರಾಹ್ಮಣ ರಾಜರುಗಳು ತೆರಿಗೆಯನ್ನು ವಸೂಲಿ ಮಾಡಲು ತಮ್ಮ ಸೈನಿಕರನ್ನು ಅವಳ ಮನೆಯ ಬಳಿ ಕಳುಹಿಸುತ್ತಾರೆ. ಆಗ ಆ ಮಹಾತಾಯಿ ಕುಡುಗೋಲಿನಿಂದ ತನ್ನ ಸ್ತನವನ್ನೇ ಕುಯ್ದು ಒಂದು ಬಾಳೆ ಎಲೆಯ ಮೇಲಿಟ್ಟು ತೋರಿಸುತ್ತಾಳೆ. ನಂತರ ಆಕೆ ಅತಿಯಾದ ರಕ್ತಸ್ರಾವದಿಂದ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ..🥹
ಇದನ್ನ ನೋಡುತ್ತಿದ್ದ ತನ್ನ ಪತಿಯು ಸಹ ನಂಗೇಲಿಯ ಚಿತೆಗೆ ಹಾರಿ ಆಕೆಯ ಜೊತೆಗೇ ಪ್ರಾಣಾರ್ಪಣೆ ಮಾಡುತ್ತಾನೆ.

ನಂಗೇಲಿ ಪ್ರಾಣ ಬಿಟ್ಟ ಜಾಗವನ್ನು ಮುಲ (ಮೊಲೆ) " ಪರಂಬು " ಎಂದು ಬ್ರಾಹ್ಮಣರು ಊರಿಗೆ ಹೆಸರನ್ನ ಇಟ್ಟರು.

(ಇನ್ನೊಂದು ಮೂಲದ ಪ್ರಕಾರ ನಂಗೇಲಿಯ ಮೊಲೆಯನ್ನು ಕತ್ತರಿಸಿಕೊಂಡಿದ್ದನ್ನು ಕಂಡು. ಅದನ್ನು ಪ್ರತಿಭಟಿಸಿದ ತನ್ನ ಪತಿಯನ್ನು ಸಹಾ ಆಕೆಯ ಚಿತೆಗೆ ಬ್ರಾಹ್ಮಣರು ಎಸೆಯಲಾಯಿತು) ಎಂದು ಹೇಳುತ್ತಾರೆ.

ನಂಗೇಲಿಯ ಅದೇ ಈಳವ ಸಮಾಜದಿಂದ ಬಂದಂತಹ ನಾರಾಯಣ ಗುರುಗಳು ಈ ಅಮಾನುಷ ಪದ್ಧತಿಯ ವಿರುದ್ಧ ತೀವ್ರವಾದ ಹೋರಾಟ ಮಾಡುತ್ತಾರೆ. ಇವರ ಹೋರಾಟವನ್ನು ಪರಿಗಣಿಸಿದ ಅಂದಿನ ಬ್ರಿಟಿಷ್ ಸರ್ಕಾರವು ಈ ಸ್ತನ ತೆರಿಗೆ ಪದ್ಧತಿಯನ್ನು 19 ನೇ ಶತಮಾನದ ಅಂತ್ಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಿದರು.

#ಸ್ಥನ_ತೆರಿಗೆ_ಪದ್ಧತಿ

ಗೀತೆಯಲ್ಲಿ ಕೃಷ್ಣನಿಗೆ ಭಗವಂತ ಎಂದು ಹೇಳಲಾಗುತ್ತದೆ ಭಗ ಎಂದರೆ ಯೋನಿ ವಂತ ಎಂದರೆ ಹೊಂದಿರುವವನು ಭಗ+ವಂತ. ಭಗ ಅಥವಾ ಯೋನಿ ಎಂದರೆ ಉತ್ಪತ್ತಿಸ್ಥಾನ...
12/12/2023

ಗೀತೆಯಲ್ಲಿ ಕೃಷ್ಣನಿಗೆ ಭಗವಂತ ಎಂದು ಹೇಳಲಾಗುತ್ತದೆ ಭಗ ಎಂದರೆ ಯೋನಿ
ವಂತ ಎಂದರೆ ಹೊಂದಿರುವವನು ಭಗ+ವಂತ.

ಭಗ ಅಥವಾ ಯೋನಿ ಎಂದರೆ ಉತ್ಪತ್ತಿಸ್ಥಾನ, ಕಾರಣ ಅಥವಾ ಮೂಲ ಎಂದರ್ಥ. ಯೋನಿ ಸೃಷ್ಟಿಯ ಸಂಕೇತ. ಈ ಜಗತ್ತಿನ ಮೂಲದ ಸಂಕೇತ. ಯಾವುದರಿಂದ ಈ ಜಗತ್ತು ಹೊರಬಂತೋ, ಜಗತ್ತಿನ ಉತ್ಪತ್ತಿಕೇಂದ್ರ ಯಾವುದಿದೆಯೋ ಅದು ಭಗ(ಭಜ್) ಯಾವುದು ಈ ಉತ್ಪತ್ತಿಯ ಕೇಂದ್ರ ಸ್ಥಾನವನ್ನು ಹೊಂದಿದೆಯೋ ಅದು ಭಗವಂತ. ಅಂದರೆ ದೇವರು. ದೇವರಿಂದಲೇ ಜಗತ್ತು ವ್ಯಕ್ತವಾಯಿತು ಎಂದರ್ಥ. ಭಗವತಿ, ಆದಿಶಕ್ತಿ, ಜಗನ್ಮಾತೆ ಇವೆಲ್ಲವೂ ಮೂಲ ಭಗವಂತನ ಹೆಸರುಗಳೇ.

ಸನಾತನಿಗಳ ಆಚರಣೆಯಾದ ಯೋನಿ ಪೂಜೆಯ ಹಿಂದಿರುವ ಮೂಲ ಅರ್ಥವೇ ಇದು. ಆದರೆ ವಿವೇಕಪೂರ್ಣವೂ, ವೈಜ್ಞಾನಿಕವೂ ಜ್ಞಾನಪೂರ್ಣವೂ, ಪ್ರಜ್ಞಾಪೂರ್ಣವೂ ಆದ ಈ ತತ್ತ್ವಜ್ಞಾನವನ್ನು ಅರ್ಥೈಸಿಕೊಳ್ಳಲಾಗದ ಪಾತರಗಿತ್ತಿ ಮಕ್ಕಳು ಇದನ್ನು ಅಪಹಾಸ್ಯ ಮಾಡುತ್ತವೆ. ಇವುಗಳು ಬಂದಿರುವುದೂ ಆ ಉಚ್ಚೆಹೊಯ್ಯುವ ಬಚ್ಚಲು ಮನೆಯಿಂದಲೇ ತಾನೇ ? ಹಾಗೆಂದು ಇವುಗಳು ತಮ್ಮನ್ನು ಅಸಹ್ಯಗಳೆಂದು ಎಂದಾದರೂ ಹೇಳಿಕೊಂಡಿದ್ದಾರೆಯೇ ? ಒಂದು ವೇಳೆ ಹಾಗೆ ಹೇಳಿಕೊಳ್ಳುವುದಕ್ಕೆ ಶುರುಮಾಡಿದರೆ ಇಡೀ ವಿಶ್ವವೇ ಅಸಹ್ಯವೆಂದಂತಾಗುವುದು ಏಕೆಂದರೆ ಎಲ್ಲರ ಹುಟ್ಟಿನ ಮೂಲವೇ ಅದು.

ಇದು ಇಡೀ ವಿಶ್ವಕ್ಕೆ ಒಮ್ಮೆಲೇ ಕೃತಜ್ಞತೆಗಳನ್ನು ಸಲ್ಲಿಸುವ ಅಥವಾ ಪೂಜಿಸುವ ಏಕೈಕ ಕಲೆ ಯೋನಿ ಪೂಜೆ. ಇಂಥ ಉನ್ನತ ತತ್ತ್ವಜ್ಞಾನ ಸನಾತನ ಧರ್ಮದಲ್ಲಿ ಮಾತ್ರವೇ ಇದೆ. ಇತರರಿಗೆ ಇದನ್ನ ಗ್ರಹಿಸಿಕೊಳ್ಳುವಷ್ಟು ಸಾಮರ್ಥ್ಯವಾಗಲಿ, ಬುದ್ಧಿಶಕ್ತಿಯಾಗಲಿ ಇಲ್ಲ. ಪಾಶ್ಚಿಮಾತ್ಯರಂತೂ ಇಂತಹ ಆಚರಣೆಯನ್ನು ನೋಡಿ ಬೆಚ್ಚಿಬೀಳುತ್ತಾರೆ.

ಈ ಸಕಲ ವಿಶ್ವಕ್ಕೆ ಮೂಲವಾದ ಆ ಉತ್ಪತ್ತಿಸ್ಥಾನವನ್ನು ಪೂಜಿಸಿದರೆ ಅದರಿಂದ ಉತ್ಪತ್ತಿಯಾದ ಸಕಲ ಜೀವಜಂತು ಪ್ರಾಣಿ ಪಕ್ಷಿ ಗಿಡಮರಗಳೇಲ್ಲವುದನ್ನು ಪೂಜಿಸಿದಂತೆ, ಯಾವುದೂ ತನ್ನ ಪೂಜೆಯಿಂದ ಹೊರಗುಳಿಯುವುದಿಲ್ಲ. ಇದು ನಿಜವಾದ ಏಕದೇವತಾರಾಧನೆ.

ಸನಾತನಿಗಳ ಈ ಆಚರಣಾ ಪದ್ಧತಿ ಹಿಂದೊಮ್ಮೆ ಇಡೀ ಜಗತ್ತಿಗೆ ವಿಸ್ತರಿಸಿತ್ತು, ಪರ್ಷಿಯನ್, ಗ್ರೀಕ್, ಇರಾನಿ, ಲಿಥುವೆನಿಯನ್, ಸ್ಲಾವಿಕ್ ಭಾಷೆಗಳಲ್ಲಿಯೂ ತತ್ಸಮಾನ ದೇವತೆಗಳುಂಟು.
ಜೆಂದ್ ನಲ್ಲಿ = ಬಘ, ಪರ್ಶಿಯಲ್ = ಬಗ, ಗ್ರೀಕ್ = ಜೋವಸ್ ಬಗೈಯೋಸಾ, ಸ್ಲಾವಿಕ್ = ಬೋಗು, ಲಿಥವೆನಿಯನ್ = ಬಹಸ್
ಇವೆಲ್ಲವುಗಳ ಅರ್ಥ ಆಕಾಶ ದೇವತೆ. ಏಕೆಂದರೆ ಅಕಾಶದಿಂದಲೇ ಈ ಜಗತ್ತು ಹುಟ್ಟಿದ್ದರಿಂದ.

ಯಮಿಂ ದ್ವಾ ಸವಯಸಾ ಸಪರ್ಯತಃ ಸಮಾನೇ ಯೋನಾ ಮಿಥುನಾ ಸಮೋಕಸಾ |
ದಿವಾ ನ ನಕ್ತಂ ಪಲಿತೋ ಯುವಾಜನಿ ಪುರೂ ಚರನ್ನಜರೋ ಮಾನುಷಾ ಯುಗ.
||ಋ.ವೇ.1.144.4

Nagaraj P N M

03/12/2023

ಮೂರೂ ರಾಜ್ಯಗಳಲ್ಲಿನ ಜನರ ತಲೇಲಿ ಸಗಣಿ ತುಂಬಿಸಿಕೊಂಡಿರೋ ಅಂಧಭಕ್ತರು ಇನ್ನೂ ಕತ್ತಲಲ್ಲೇ ಇದ್ದಾರೆ ಅನ್ನೋದು ಖಾತರಿ ಆಯ್ತು ಫ್ರೆಂಡ್ಸ್..!

 #ಮನಸ್ಮೃತಿಯನ್ನ_ಮೊಟ್ಟ_ಮೊದಲಿಗೆ_ಸಾರ್ವಜನಿಕವಾಗಿ_ಸುಟ್ಟಿದ್ದು_ಬ್ರಾಹ್ಮಣನೇ..👇ಭಾರತದ ಚರಿತ್ರೆಯಲ್ಲಿ ಡಿಸೆಂಬರ್ 25 ಬಹು ಮುಖ್ಯವಾದ ದಿನ. ಅಸ್ಪ...
29/11/2023

#ಮನಸ್ಮೃತಿಯನ್ನ_ಮೊಟ್ಟ_ಮೊದಲಿಗೆ_ಸಾರ್ವಜನಿಕವಾಗಿ_ಸುಟ್ಟಿದ್ದು_ಬ್ರಾಹ್ಮಣನೇ..👇

ಭಾರತದ ಚರಿತ್ರೆಯಲ್ಲಿ ಡಿಸೆಂಬರ್ 25 ಬಹು ಮುಖ್ಯವಾದ ದಿನ. ಅಸ್ಪೃಶ್ಯತೆ, ಶ್ರೇಣೀಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೇ ಮೌಲ್ಯಗಳನ್ನಾಗಿಸಿ ಭಾರತೀಯ ಸುಪ್ತ ಮನಸ್ಸನ್ನು ಆಳುತ್ತಿರುವ ‘ಮನುಸ್ಮೃತಿ’ ಎಂಬ ‘ಭೂತಕಾಲದ ಸಂವಿಧಾನ’ವನ್ನು ಡಾ‌. ಬಿ.ಆರ್. ಅಂಬೇಡ್ಕರ್ ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸಿದ ದಿನ.

ಭಾರತದ ಹಿಂದೂ ಮನಸ್ಸು ಬದಲಾಗಬಹುದು, ಹಿಂದೂ ಧರ್ಮವನ್ನು ಒಳಗಿದ್ದುಕೊಂಡೇ ಸುಧಾರಿಸಬಹುದೇನೋ ಎನ್ನುವ ನಂಬಿಕೆಯಲ್ಲಿ ಮಹಾಡ್, ಚೌಡಾರ್ ಸತ್ಯಾಗ್ರಹಗಳನ್ನು ನಡೆಸಿದ ಅಂಬೇಡ್ಕರ್ ಅವರಿಗೆ ದೊಡ್ಡ ನಿರಾಶೆ ಕಾದಿತ್ತು. ಆಗಿನ ಸರ್ಕಾರ 1923 ರಲ್ಲೆ The Bole Resolution ಮೂಲಕ ಸಾರ್ವಜನಿಕ ಹಣದಲ್ಲಿ ನಿರ್ಮಾಣವಾಗಿರುವ ಕೆರೆಗೆಳು, ಬಾವಿಗಳು, ಧರ್ಮಶಾಲೆಗಳು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕು ಅನ್ನುವ ಕಾಯ್ದೆ ತಂದಿದ್ದರೂ ಅಸ್ಪೃಶ್ಯರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ತಮಗೆ ಇದ್ದ ಹಕ್ಕನ್ನು ಪಡೆಯುವುದಕ್ಕಾಗಿಯೇ ಅಂಬೇಡ್ಕರ್ ಚೌಡಾರ್ ಕೆರೆ ನೀರನ್ನು ಸಾರ್ವಜನಿಕವಾಗಿ ಕುಡಿಯುವ ಚಳುವಳಿಯನ್ನು ಆಯೋಜಿಸಿದರು. ಆದರೆ ಅಸ್ಪೃಶ್ಯರು ಮುಟ್ಟಿದ್ದಕ್ಕಾಗಿ ಕೆರೆಯೆ ಮಲಿನವಾಯಿತೆಂದು ಗೋಳಾಡಿದ ಮೇಲ್ಜಾತಿಯ ಜನ ಹಸುವಿನ ಸಗಣಿ, ಗಂಜಲ, ಹಾಲು, ತುಪ್ಪ, ಮೊಸರನ್ನು ಸುರಿದು ವೇದಗಳನ್ನು ಪಠಿಸುತ್ತಾ ಕೆರೆಯ ‘ಶುದ್ದೀಕರಣ’ ಮಾಡಿದರು. ದಲಿತರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದರೆ ವಿದ್ಯಾವಂತ, ಪ್ರಗತಿಪರ ಹಿಂದೂಗಳು ಅವರ ಜೊತೆಗೂಡಿ ಹೋರಾಟ ಮಾಡಬಹುದು ಹಿಂದೂ ಧರ್ಮ ಸುಧಾರಣೆಗೆ ಇದು ಕೂಡ ನೆರವಾಗಬಹುದು ಎಂಬ ಅಂಬೇಡ್ಕರ್ ನಿರೀಕ್ಷೆ ಸುಳ್ಳಾಯಿತು. ಮಹಾಡ್, ಚೌಡಾರ್ ಸತ್ಯಾಗ್ರಹಗಳಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಹಿಂಸಾತ್ಮಕವಾದ ದಾಳಿಗಳನ್ನು ಮೇಲ್ಜಾತಿಗಳು ಮಾಡಿದವು.

ಇದಾದ ಒಂಬತ್ತು ತಿಂಗಳ ನಂತರ ಚೌಡಾರ್ ಸತ್ಯಾಗ್ರಹವನ್ನು ಅಂಬೇಡ್ಕರ್ ಆಯೋಜಿಸಿದರು. ಆಗ ಮತ್ತೆ ಮೇಲ್ಜಾತಿಯ ಹಿಂದೂಗಳು ಚೌಡಾರ್ ಕೆರೆ ಸಾರ್ವಜನಿಕ ಆಸ್ತಿಯಲ್ಲ ಖಾಸಗಿ ಸ್ವತ್ತು ಎಂದು ಕೋರ್ಟಿಗೆ ಹೋದರು. ಸತ್ಯಾಗ್ರಹ ತಡೆಯಲು ಪ್ರಯತ್ನ ಮಾಡಿದರು. ಇಷ್ಟೆಲ್ಲ ಪ್ರತಿಕೂಲ ಸನ್ನಿವೇಶಗಳ ನಡುವೆಯೂ ಸತ್ಯಾಗ್ರಹ ನಡೆಸಿದ ಅಂಬೇಡ್ಕರ್ ಡಿಸೆಂಬರ್ 25, 1927 ರಂದು ಹಿಂದೂ ಧರ್ಮದ ಆಧಾರವಾಗಿರುವ, ಬ್ರಾಹ್ಮಣ್ಯವನ್ನು ಎತ್ತಿ ಹಿಡಿಯುವ ಸೈದ್ದಾಂತಿಕ ಗ್ರಂಥವಾಗಿರುವ ‘ಮನುಸ್ಮೃತಿ’ಯನ್ನು ಸಾರ್ವಜನಿಕವಾಗಿ ಸುಟ್ಟು ಹಿಂದೂ ಧರ್ಮದ ಕರ್ಮಠತನ, ಅಸಮಾನತೆಯ ವಿರುದ್ಧ ಸಮರ ಸಾರಿದರು.

ವಿಶೇಷವೆಂದರೆ ಈ ಸಮಾವೇಶದಲ್ಲಿ ಮನುಸ್ಮೃತಿಗೆ ಸಾರ್ವಜನಿಕವಾಗಿ ಬೆಂಕಿ ಇಟ್ಟವರು ಬಾಪೂಸಾಹೇಬ ಸಹಸ್ರಬುದ್ಧೆ ಎನ್ನುವ ಪ್ರಗತಿಪರ ಬ್ರಾಹ್ಮಣ. ಇದಾದ ಮೇಲೆ ಹಿಂದೂ ಧರ್ಮದ ಒಳಗಿದ್ದು ಅದನ್ನು ಸುಧಾರಿಸುವುದು ಸಾಧ್ಯವಿಲ್ಲ ಎಂದು ಮನಗಂಡು ಅಂಬೇಡ್ಕರ್ ಹಿಂದೂ ಧರ್ಮ ತ್ಯಜಿಸುವ ನಿರ್ಧಾರ ಮಾಡಿದರು‌. ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದರು.

ಮುಂದೆ ಮನುಸ್ಮೃತಿಗೆ ಪ್ರತಿಯಾಗಿ ಭಾರತಕ್ಕೆ ನಿಜವಾದ‌ ಸಂವಿಧಾನವನ್ನು ಅಂಬೇಡ್ಕರ್ ಅವರೇ ಬರೆದರು. ಆದರೆ ಇವತ್ತು ಅಂಬೇಡ್ಕರ್ ಸಂವಿಧಾನದ ಮೇಲೆ ಮನುಸ್ಮೃತಿ ಸವಾರಿ ಮಾಡಲು ಪ್ರಯತ್ನಿಸುತ್ತಿದೆ. ಭಾರತದ ಮನಸ್ಸಿನಲ್ಲಿರುವ ಈ ಸುಪ್ತ ಸಂವಿಧಾನವನ್ನು ಸುಟ್ಟರೆ ಮಾತ್ರ ಈ ದೇಶಕ್ಕೆ ಬಿಡುಗಡೆ ಸಾಧ್ಯ. ವರ್ತಮಾನದ ಸಂವಿಧಾನದ ಕಾಲೆಳೆಯುತ್ತಿರುವ ಭೂತ ಕಾಲದ ಸಂವಿಧಾನದ ದಾಸರಾಗಿರುವ ದಲಿತರು, ಹಿಂದುಳಿದವರು ಇದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳೊತ್ತಾರೊ ಅಷ್ಟು ಒಳ್ಳೆಯದು.

ನಾಗರಾಜ್ ಪಿ.ಎನ್ ಅಸುರ Nagaraj P N M Akshay Kumar PN

28/11/2023

ಮನಸ್ಮೃತಿಯನ್ನ ಮೊಟ್ಟ ಮೊದಲಿಗೆ ಸಾರ್ವಜನಿಕವಾಗಿ ಸುಟ್ಟಿದ್ದೇ ಒಬ್ಬ ಪ್ರಗತಿಪರ #ಬ್ರಾಹ್ಮಣ.

28/11/2023

ಅನಕ್ಷರಸ್ಥರ ಮೌಢ್ಯವನ್ನು ಸರಿಮಾಡಬಹುದೇ ವಿನಃ ಅಕ್ಷರಸ್ಥರ ಮೌಢ್ಯ ಸರಿಮಾಡಲಾಗದು.!

25/11/2023

10 ವರ್ಷಗಳ ಹಿಂದಿನ ಪೋಸ್ಟ್ ಹುಡುಕಿ ರಿಪೋರ್ಟ್ ಮಾಡಿದ್ದಾರೆ ಅಂದರೇ ನನ್ನ ಕಂಡರೆ ಮನುವಾದಿಗಳಿಗೆ ಎಷ್ಟೊಂದು ಭಯವಿದೆ ಅನ್ನೋದು ಸ್ಪಷ್ಟವಾಗಿ ಕಾಣುತ್ತದೆ.✌️

26/10/2023

" ಬಾಟಲ್ ನಲ್ಲಿ ಮೊಟ್ಟೆ ಹಾಕುವ ಪ್ರಯೋಗ. " ಅದ್ಭುತ ಅತ್ಯದ್ಭುತ ಈ ಮಗುಮಾಡುವ ಪ್ರಾಯೋಗಿಕ ಚಟುವಟಿಕೆ ನೋಡಿ ಹರಸಿ, ಹಾರೈಸಿ.
ಎಲ್ಲರಿಗೂ ತಲಾಪುವಂತೆ ಶೇರ್ ಮಾಡಿ,
ಸಾಕಷ್ಟು ಲೈಕ್ ಮಾಡಿ, ನಮ್ಮ ಪೇಜ್ ಫಾಲೋ ಮಾಡಿ.

Nagaraj P N

 #ದೇವದಾಸಿ_ಪದ್ಧತಿ..🤮 #ದೇವರಸೇವೆಯ_ಹೆಸರಲ್ಲಿ_ಲೈಂಗಿಕ_ಗುಲಾಮಗಿರಿಯ_ಪದ್ಧತಿ...ಬೆಳಗಾವಿ: ದೇವದಾಸಿ ಪದ್ಧತಿಯನ್ನು ಶತಮಾನಗಳಿಂದಲೂ ದಕ್ಷಿಣ ಭಾರತ...
20/09/2023

#ದೇವದಾಸಿ_ಪದ್ಧತಿ..🤮

#ದೇವರಸೇವೆಯ_ಹೆಸರಲ್ಲಿ_ಲೈಂಗಿಕ_ಗುಲಾಮಗಿರಿಯ_ಪದ್ಧತಿ...

ಬೆಳಗಾವಿ: ದೇವದಾಸಿ ಪದ್ಧತಿಯನ್ನು ಶತಮಾನಗಳಿಂದಲೂ ದಕ್ಷಿಣ ಭಾರತದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಪದ್ಧತಿ. ಹಿಂದೊಮ್ಮೆ ದೇವದಾಸಿಯರು ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದರು. ಅನೇಕರು ಉನ್ನತ ಶಿಕ್ಷಣ ಪಡೆದಿದ್ದರು.

ಆದರೆ ಇನ್ನೂ ಹಲವು ಮಂದಿ ಇದೇ ಪದ್ಧತಿಯಲ್ಲಿ ಮುಂದುವರಿದುಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಹೂವಕ್ಕ ಭೀಮಪ್ಪ ಎಂಬ ಮಹಿಳೆ ದೇವರ ಹೆಸರಲಿನಲ್ಲಿ ಹಲವಾರು ವರ್ಷಗಳಿಂದ ಈ ಲೈಂಗಿಕ ಗುಲಾಮಗಿರಿಯ ಭಾಗವಾಗಿ ಬದುಕುತ್ತಿದ್ದಾರೆ. ಸೀರೆ ಮತ್ತು ಚಿನ್ನಾಭರಣದ ಆಮೀಷ ಒಡ್ಡಿ ಆಕೆಯ ಚಿಕ್ಕಪ್ಪನೇ ಅತ್ಯಾಚಾರ ಮಾಡಿದ. ಇನ್ನೂ 10 ವರ್ಷ ವಯಸ್ಸು ತುಂಬಿರಲಿಲ್ಲ, ಹೂವಕ್ಕ ನನ್ನು ದೇವದಾಸಿಯನ್ನಾಗಿ ಮಾಡಲಾಯಿತು. ಪೋಷಕರು ಬಾಲಕಿಯರನ್ನು ಹಿಂದೂ ದೇವತೆ ಜೊತೆ ವಿವಾಹ ಮಾಡಿ ನಂತರ ದೇವದಾಸಿಯನ್ನಾಗಿಸುತ್ತಾರೆ, ಅದರಲ್ಲಿ ಹಲವರು ಅಕ್ರಮ ವೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ.

ದೇವದಾಸಿಯರು ಧಾರ್ಮಿಕ ಭಕ್ತಿಯ ಜೀವನವನ್ನು ನಿರೀಕ್ಷಿಸುತ್ತಾರೆ, ಈ ಆಚರಣೆಗೆ ಒಳಪಟ್ಟವರು ಮನುಷ್ಯರನ್ನು ಮದುವೆಯಾಗುವುದನ್ನು ನಿಷೇಧಿಸಲಾಗಿದೆ. ಪ್ರೌಢಾವಸ್ಥೆಯಲ್ಲಿ ಹಣ ಅಥವಾ ಉಡುಗೊರೆಗಳಿಗೆ ಪ್ರತಿಯಾಗಿ ತಮ್ಮ ಕನ್ಯತ್ವವನ್ನು ವಯಸ್ಸಾದ ವ್ಯಕ್ತಿಗೆ ತ್ಯಾಗ ಮಾಡುವಂತೆ ಒತ್ತಾಯಿಸಲಾಗುತ್ತದೆ. ಆದರೆ ನನ್ನ ಕನ್ಯತ್ವ ಕಳೆದದ್ದು ನನ್ನ ತಾಯಿಯ ಸಹೋದರ ಎಂದು 40 ವರ್ಷದ ಹೂವಕ್ಕ ಭೀಮಪ್ಪ ಹೇಳಿದ್ದಾರೆ.

ಹಿಂದೂ ದೇವತೆ ಯೆಲ್ಲಮ್ಮ ದೇವಿಯ ಅಲಂಕೃತ ಮುಖವಾಡ | AFP
ವರ್ಷಗಳ ಲೈಂಗಿಕ ಗುಲಾಮಗಿರಿ, ದೇವಿಯ ಸೇವೆಯ ಹೆಸರಿನಲ್ಲಿ ಇತರ ಪುರುಷರೊಂದಿಗೆ ಮಲಗಿ ಅದರ ಮೂಲಕ ಹಣ ಸಂಪಾದಿಸಿ ಕುಟುಂಬ ಸಾಕಬೇಕಾಗುತ್ತದೆ. ಕೆಲವು ದಿನಗಳ ನಂತರ ನಾನು ಈ ಪದ್ದತಿಯಿಂದ ಬಚಾವಾಗಿ ಬಂದೆ, ಆದರೆ ನನಗೆ ಶಿಕ್ಷಣವಿರಲಿಲ್ಲ, ಹೀಗಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡಿ ಜೀವನ ನಡೆಸಿದೆ. ಹಿಂದೂ ದೇವತೆ ಯಲ್ಲಮ್ಮನ ಭಕ್ತಳಾಗಿರುವ ಆಕೆಯನ್ನು ಸಮುದಾಯ ಬಹಿಷ್ಕರಿಸಿದೆ.

ನಾನು ಒಮ್ಮೆ ಒಬ್ಬ ವ್ಯಕ್ತಿಯನ್ನು ಪ್ರೀತಿಸಿದ್ದೆ, ಆದರೆ ಅವನನ್ನು ಮದುವೆಯಾಗಲು ಕೇಳುವ ಬಗ್ಗೆ ನನಗೆ ಯೋಚನೆ ಮಾಡಲಾಗಲಿಲ್ಲ, ನಾನು ದೇವದಾಸಿ ಅಲ್ಲದಿದ್ದರೆ, ನನಗೆ ಕುಟುಂಬ ಮತ್ತು ಮಕ್ಕಳು ಇರುತ್ತಿತ್ತು, ನನ್ನ ಬಳಿಯೂ ಸ್ವಲ್ಪ ಹಣವಿದ್ದು, ನಾನು ಚೆನ್ನಾಗಿ ಬದುಕುತ್ತಿದ್ದೆ ಎಂದು ಅವರು ಹೇಳಿದರು.

ದೇವದಾಸಿಯರು ಶತಮಾನಗಳಿಂದ ದಕ್ಷಿಣ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಒಮ್ಮೆ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದರು. ಅನೇಕರು ಉನ್ನತ ಶಿಕ್ಷಣ ಪಡೆದರು, ಶಾಸ್ತ್ರೀಯ ನೃತ್ಯ ಮತ್ತು ಸಂಗೀತದಲ್ಲಿ ತರಬೇತಿ ಪಡೆದರು, ಆರಾಮದಾಯಕ ಜೀವನವನ್ನು ನಡೆಸಿದರು. ಮತ್ತೆ ಕೆಲವರು ತಮ್ಮದೇ ಆದ ಲೈಂಗಿಕ ಪಾಲುದಾರರನ್ನು ಆರಿಸಿಕೊಂಡರು.

ಧಾರ್ಮಿಕವಾಗಿ ಅನುಮೋದಿಸಲಾದ ಲೈಂಗಿಕ ಗುಲಾಮಗಿರಿಯ ಈ ಕಲ್ಪನೆಯು ಮೂಲ ವ್ಯವಸ್ಥೆಯ ಭಾಗವಾಗಿರಲಿಲ್ಲ ಎಂದು ಇತಿಹಾಸಕಾರ ಗಾಯತ್ರಿ ಅಯ್ಯರ್ ಹೇಳಿದ್ದಾರೆ. 19 ನೇ ಶತಮಾನದಲ್ಲಿ, ಬ್ರಿಟಿಷ್ ವಸಾಹತುಶಾಹಿ ಯುಗದಲ್ಲಿ, ದೇವದಾಸಿ ಮತ್ತು ದೇವಿಯ ನಡುವಿನ ದೈವಿಕ ಒಪ್ಪಂದವು ಲೈಂಗಿಕ ಶೋಷಣೆಯ ಸಂಸ್ಥೆಯಾಗಿ ವಿಕಸನಗೊಂಡಿತು ಎಂದು ಅಯ್ಯರ್ ಹೇಳಿದರು. ಇದು ಈಗ ಭಾರತದ ಕಟ್ಟುನಿಟ್ಟಿನ ಜಾತಿ ಶ್ರೇಣಿಯ, ತಳಭಾಗದಿಂದ ಬಡತನದಿಂದ ಬಳಲುತ್ತಿರುವ ಕುಟುಂಬಗಳಿಗೆ ತಮ್ಮ ಹೆಣ್ಣುಮಕ್ಕಳ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಲು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.

1982 ರಲ್ಲಿ ಭೀಮಪ್ಪ ಅವರ ತವರು ರಾಜ್ಯವಾದ ಕರ್ನಾಟಕದಲ್ಲಿ ಈ ಅಭ್ಯಾಸವನ್ನು ಕಾನೂನುಬಾಹಿರಗೊಳಿಸಲಾಯಿತು. ಸರ್ವೋಚ್ಚ ನ್ಯಾಯಾಲಯವು ದೇವಸ್ಥಾನಗಳಿಗೆ ಯುವತಿಯರನ್ನು ದೇವದಾಯನ್ನಾಗಿ ಮಾಡಿ ಬಿಡುವುದನ್ನು "ದುಷ್ಟ ಪದ್ಧತಿ ಎಂದು ವಿವರಿಸಿತು. ಯುವತಿಯರನ್ನು ಇನ್ನೂ ಕೆಲವು ಕಡೆ ರಹಸ್ಯವಾಗಿ ದೇವದಾಸಿ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಈ ಪದ್ಧತಿ ನಿಷೇಧದ ನಂತರ ನಾಲ್ಕು ದಶಕಗಳ ನಂತರ, ಕರ್ನಾಟಕದಲ್ಲಿ ಇನ್ನೂ 70,000 ಕ್ಕೂ ಹೆಚ್ಚು ದೇವದಾಸಿಯರಿದ್ದಾರೆ ಎಂದು ಭಾರತದ ಮಾನವ ಹಕ್ಕುಗಳ ಆಯೋಗವು ಕಳೆದ ವರ್ಷ ಬರೆದಿದೆ.

ವಿವಾಹದ ವರದಕ್ಷಿಣೆಯ ಸಂಪ್ರದಾಯದಿಂದಾಗಿ ಹೆಣ್ಣುಮಕ್ಕಳನ್ನು ಸಾಮಾನ್ಯವಾಗಿ ಭಾರತದಲ್ಲಿ ಹೊರೆ ಎಂದು ಭಾವಿಸಲಾಗುತ್ತದೆ . ಹೆಣ್ಣು ಮಕ್ಕಳನ್ನು ದೇವದಾಸಿಯರನ್ನಾಗಿಸುವ ಮೂಲಕ ಬಡ ಕುಟುಂಬಗಳು ಆದಾಯದ ಮೂಲವನ್ನು ಗಳಿಸುತ್ತವೆ ಮತ್ತು ಅವರಿಗೆ ಮದುವೆ ಮಾಡುವ ವೆಚ್ಚವನ್ನು ತಪ್ಪಿಸುತ್ತವೆ.

ಸೀತವ್ವ ಡಿ.ಜೋಡಟ್ಟಿ, ಮಹಿಳಾ ಅಭಿವೃದ್ಧಿ ಮಟ್ಟು ಸಂರಕ್ಷಣಾ ಸಂಸ್ಥೆ (MASS) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ | AFP
ಸೌಂದತ್ತಿಯ ಸುತ್ತಲಿನ ಅನೇಕ ಮನೆಗಳಲ್ಲಿ ಯಲ್ಲಮ್ಮ ದೇವರನ್ವು ಪೂಜಿಸಲಾಗುತ್ತದೆ. ಈ ದೇವಸ್ಥಾನದಲ್ಲಿ ಸೀತವ್ವ ಡಿ.ಜೋಡಟ್ಟಿ ಅವರು ಎಂಟು ವರ್ಷದವಳಿದ್ದಾಗ ದೇವಿಯನ್ನು ವಿವಾಹವಾಗಲು ನಿಶ್ಚಯಿಸಿದ್ದರು. ಆದರೆ ಆಕೆಯ ಸಹೋದರಿಯರು ಬೇರೆ ಪುರುಷರನ್ನು ವಿವಾಹವಾದರು, ಆಕೆಯ ಪೋಷಕರನ್ನು ಸಾಕುವ ಉದ್ದೇಶದಿಂದ ಅವಳನ್ನು ಯಲ್ಲಮ್ಮನಿಗೆ ಅರ್ಪಿಸಲು ನಿರ್ಧರಿಸಿದರು.

ಬೇರೆಯವರು ಮದುವೆಯಾಗುವಾಗ ಅಲ್ಲಿ ವಧು-ವರರು ಇದ್ದರು ಆದರೆ ನಾನು ವಿವಾಹವಾದದ್ದು ಒಂಟಿಯಾಗಿ, ಇದೆಲ್ಲಾ ನನಗೆ ತಿಳಿದ ಮೇಲೆ ಅಳಲು ಆರಂಭಿಸಿದೆ ಎಂದು 49 ವರ್ಷದ ಜೋಡಟ್ಟಿ ತಿಳಿಸಿದ್ದಾರೆ.

ಅಸುರಕ್ಷಿತ ಲೈಂಗಿಕತೆಯಿಂದಾಗಿ ಅನೇಕ ದೇವದಾಸಿಯರು ಎಚ್ ಒ ವಿಗೆ ತುತ್ತಾದರು. ಲೈಂಗಿಕವಾಗಿ ಹರಡುವ ಸೋಂಕುಗಳಿಗೆ ಒಳಗಾದರು. ಸೋಂಕಿಗೆ ಒಳಗಾದ ಮಹಿಳೆಯರ ಬಗ್ಗೆ ನನಗೆ ತಿಳಿದಿದೆ ಈಗ ಅದು ಅವರ ಮಕ್ಕಳಿಗೆ ಹರಡಿದೆ" ಎಂದು ದೇವದಾಸಿಯರೊಂದಿಗೆ ಕೆಲಸ ಮಾಡುವ ಕಾರ್ಯಕರ್ತರೊಬ್ಬರು ಹೇಳಿದರು.

ಸೋಂಕು ಹರಡಿರುವುದನ್ನು ಮರೆಮಾಡುತ್ತಾರೆ ಮತ್ತು ಅದರೊಂದಿಗೆ ರಹಸ್ಯವಾಗಿ ಬದುಕುತ್ತಾರೆ, ಅನೇಕ ಮಹಿಳೆಯರು ಸಾವನ್ನಪ್ಪಿದ್ದಾರೆ.

ತಮ್ಮ ಹೆಣ್ಣುಮಕ್ಕಳನ್ನು ದೇವದಾಸಿಗಳಾಗಿ ಸೇರಿಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಪಾಲಕರು ಕಾನೂನು ಕ್ರಮ ಜರುಗಿಸುತ್ತಾರೆ. ದೇವದಾಸಿ ಪದ್ಧತಿ ಆಚರಣೆ ಆದೇಶವನ್ನು ತೊರೆಯುವ ಮಹಿಳೆಯರಿಗೆ ತಿಂಗಳಿಗೆ 1,500 ರೂಪಾಯಿಗಳ ಅತ್ಯಲ್ಪ ಸರ್ಕಾರಿ ಪಿಂಚಣಿಗಳನ್ನು ನೀಡಲಾಗುತ್ತದೆ.

ಇತ್ತೀಚೆಗೆ ದೇವಸ್ಥಾನಗಳಿಗೆ ಮಹಿಳೆಯರನ್ನು ಅರ್ಪಿಸಿದ ಉದಾಹರಣೆಗಳಿಲ್ಲ ಎಂದು ಸೌಂದತ್ತಿ ಆಡಳಿತ ನಡೆಸುವ ಪೌರಕಾರ್ಮಿಕ ನಿತೇಶ್ ಪಾಟೀಲ್ ಹೇಳಿದ್ದಾರೆ.

ಭಾರತದ ಹಕ್ಕುಗಳ ಆಯೋಗವು ಕಳೆದ ವರ್ಷ ಕರ್ನಾಟಕ ಮತ್ತು ಇತರ ಹಲವಾರು ಭಾರತೀಯ ರಾಜ್ಯಗಳಿಗೆ ಈ ಆಚರಣೆಯನ್ನು ತಡೆಯಲು ಏನು ಮಾಡುತ್ತಿದೆ ಎಂಬುದನ್ನು ವಿವರಿಸಲು ಆದೇಶಿಸಿದೆ.

Nagaraj P N Akshay Kumar ನಾಗರಾಜ್ ಪಿ.ಎನ್

Address

Chik Ballapur
561211

Alerts

Be the first to know and let us send you an email when ನಮ್ಮ ಪಿಡಚಲಹಳ್ಳಿ posts news and promotions. Your email address will not be used for any other purpose, and you can unsubscribe at any time.

Share

Category